ಭಾರತದಲ್ಲಿ ಹಾರಾಡಲಿರುವ ಮಹೀಂದ್ರ ವಿಮಾನಗಳು

By Nagaraja

ಕಾರು, ಬೈಕ್, ವಾಣಿಜ್ಯ ವಾಹನ, ಎಲೆಕ್ಟ್ರಿಕ್ ವಾಹನ ಸೇರಿದಂತೆ ಆಟೋಮೊಬೈಲ್ ಕ್ಷೇತ್ರದ ಎಲ್ಲ ವಿಭಾಗಕ್ಕೂ ಕಾಲಿರಿಸಿರುವ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಈಗ ವಿಮಾನಯಾನದಲ್ಲೂ ತನ್ನ ಛಾಪು ಮೂಡಿಸಲು ಸಿದ್ಧತೆ ನಡೆಸುತ್ತಿದೆ.

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ನಿಕಟ ಭವಿಷ್ಯದಲ್ಲೇ ಮಹೀಂದ್ರ ವಿಮಾನಗಳು ಆಕಾಶದಲ್ಲಿ ಹಾರಾಟವನ್ನು ಆರಂಭಿಸಲಿದೆ. ಈ ಸಂಬಂಧ ಹೇಳಿಕೆ ಕೊಟ್ಟಿರುವ ಮಹೀಂದ್ರ, ಆಸ್ಟ್ರೇಲಿಯಾದ ಘಟಕದಲ್ಲಿ ನಿರ್ಮಿಸಿರುವ ಸಂಸ್ಥೆಯ ವಿಮಾನಗಳ ಮಾರಾಟವನ್ನು ಭಾರತದಲ್ಲೇ ಸದ್ಯದಲ್ಲೇ ಆರಂಭಿಸಲಿದೆ ಎಂದಿದೆ.

ಭಾರತದಲ್ಲಿ ಹಾರಾಡಲಿರುವ ಮಹೀಂದ್ರ ವಿಮಾನಗಳು

ಪ್ರಸಕ್ತ ಸಾಲಿನಲ್ಲೇ ವ್ಯೋಮಯಾನ ನಿಯಂತ್ರಣ ಮಂಡಳಿಯಿಂದ ಅನುಮೋದನೆ ಗಿಟ್ಟಿಸಿಕೊಳ್ಳಲಿರುವ ಸಂಸ್ಥೆಯು ತದಾ ಬಳಿಕ ಹಗುರ ಭಾರದ ವಿಮಾನ ಸೇವೆಯನ್ನು ಆರಂಭಿಸಲಿದೆ.

ಭಾರತದಲ್ಲಿ ಹಾರಾಡಲಿರುವ ಮಹೀಂದ್ರ ವಿಮಾನಗಳು

ನಿಮ್ಮ ಮಾಹಿತಿಗಾಗಿ, 2008ರಲ್ಲಿ ಆಸ್ಟ್ರೇಲಿಯಾದ ಗಿಪ್ಸ್ ಏರೋ ವಿಮಾನಯಾನ ಸಂಸ್ಥೆಯನ್ನು ಮಹೀಂದ್ರ ಖರೀದಿಸಿತ್ತು. ಮೆಲ್ಪರ್ನ್ ತಳಹದಿಯ ಈ ಸಂಸ್ಥೆಯು ಎಂಟು ಸೀಟುಗಳ ಜಿಎ8 ಏರ್ ವ್ಯಾನ್ ವಿಮಾನವನ್ನು ನಿರ್ಮಿಸುತ್ತದೆ.

ಭಾರತದಲ್ಲಿ ಹಾರಾಡಲಿರುವ ಮಹೀಂದ್ರ ವಿಮಾನಗಳು

ಸದ್ಯ 220ರಷ್ಟು ಇಂತಹ ವಿಮಾನಗಳು 30 ರಾಷ್ಟ್ರಗಳಲ್ಲಾಗಿ ಸೇವೆಯಲ್ಲಿದೆ. ಸದ್ಯಕ್ಕಂತೂ ಮೆಲ್ಪರ್ನ್ ಘಟಕದಲ್ಲೇ ವಿಮಾನ ನಿರ್ಮಾಣವಾಗಲಿದೆ. ಮುಂದಿನ ಹಂತದ ಭಾಗವಾಗಿ ಭಾರತದಲ್ಲೂ ನಿರ್ಮಿಸುವ ಯೋಜನೆಯಿದೆ.

ಭಾರತದಲ್ಲಿ ಹಾರಾಡಲಿರುವ ಮಹೀಂದ್ರ ವಿಮಾನಗಳು

ಒಮ್ಮೆ ಭಾರತದಲ್ಲಿ ಮಾರಾಟ ಆರಂಭಿಸಿದ ಬಳಿಕ 'ಮೇಕ್ ಇನ್ ಇಂಡಿಯಾ' ಯೋಜನೆಯ ಭಾಗವಾಗಿ ಭಾರತದಲ್ಲಿ ವಿಮಾನ ನಿರ್ಮಿಸುವ ಸಾಧಕ ಬಾಧಕಗಳ ಕುರಿತಾಗಿ ಯೋಚಿಸಲಿದ್ದೇವೆ ಎಂದು ಮಹೀಂದ್ರ ತಿಳಿಸಿದೆ.

ಭಾರತದಲ್ಲಿ ಹಾರಾಡಲಿರುವ ಮಹೀಂದ್ರ ವಿಮಾನಗಳು

ಈಗಲೇ ಬೆಂಗಳೂರಿನ ಘಟಕದಲ್ಲಿ ಬಿಡಿಭಾಗಗಳನ್ನು ನಿರ್ಮಿಸುತ್ತಿರುವ ಮಹೀಂದ್ರ ಇಲ್ಲಿಂದ ಬಳಿಕ ಮೆಲ್ಪರ್ನ್ ಘಟಕಕ್ಕೆ ರವಾನಿಸುತ್ತಿದೆ.

ಭಾರತದಲ್ಲಿ ಹಾರಾಡಲಿರುವ ಮಹೀಂದ್ರ ವಿಮಾನಗಳು

ಗಿಪ್ಸ್ ಏರೋ ನಿರ್ಮಿಸುತ್ತಿರುವ ಏರ್ ವ್ಯಾನ್ ಓರ್ವ ಪೈಲಟ್ ನಿಂದ ನಿಯಂತ್ರಿಸಬಹುದಾಗಿದೆ. ನಾಗರಿಕ ವಿಮಾನಯಾನ ಜನರಲ್ ನಿರ್ದೇಶನಾಲಯದ (ಡಿಜಿಸಿ) ನಿಯಮಗಳ ಪ್ರಕಾರ 1,500 ಕೆ.ಜಿಗೂ ಹೆಚ್ಚು ಭಾರವುಳ್ಳ ವಾಣಿಜ್ಯ ವಿಮಾನಗಳು ಎರಡು ಪೈಲಟ್ ಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ಭಾರತದಲ್ಲಿ ಹಾರಾಡಲಿರುವ ಮಹೀಂದ್ರ ವಿಮಾನಗಳು

ಇದರಿಂದಾಗಿ ಭಾರತದಲ್ಲಿ ಮಾರಾಟ ಮಾಡುವ ಮಹೀಂದ್ರ ವಿಮಾನಗಳ ಕಾಕ್ ಪೀಟ್ ಗಳನ್ನು (ಚಾಲಕ ಕೋಣೆ) ಮಾರ್ಪಾಡುಗೊಳಿಸಬೇಕಾದ ಅವಶ್ಯಕತೆಯಿದೆ. ಈ ನಡುವೆ 10 ಸೀಟುಗಳ ಇನ್ನು ಸ್ವಲ್ಪ ದೊಡ್ಡದಾದ ವಿಮಾನ ನಿರ್ಮಿಸುವ ಯೋಜನೆಯು ಮಹೀಂದ್ರ ಬಳಿಯಿದೆ.

More from DriveSpark

Article Published On: Saturday, September 3, 2016, 10:24 [IST]
English summary
Mahindra To Fly High In India, Plans To Begin Sales Of Aircrafts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+