ಲಾಕ್‌ಡೌನ್ ಸಂಕಷ್ಟ- ವಲಸೆ ಕಾರ್ಮಿಕರ ಸಹಾಯಕ್ಕೆ ಧಾವಿಸಿದ ಮಹೀಂದ್ರಾ

ಕರೋನಾ ವೈರಸ್‌ನಿಂದ ಇಡೀ ವಿಶ್ವವೇ ತತ್ತರಿಸಿದ್ದು, ಭಾರತ ಕೂಡಾ ವೈರಸ್ ಅಟ್ಟಹಾಸಕ್ಕೆ ನಲುಗಿಹೋಗಿದೆ. ವೈರಸ್ ತಡೆಯಲು ಹಲವಾರು ಕಠಿಣಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರವು ಆರ್ಥಿಕ ಸಂಕಷ್ಟದ ನಡುವೆಯೂ ವೈರಸ್ ಹತ್ತಿಕ್ಕಲು ಲಾಕ್‌ಡೌನ್ ನಿಯಮವನ್ನು ಮುಂದುವರಿಸಿದೆ.

ಲಾಕ್‌ಡೌನ್ ಸಂಕಷ್ಟ- ವಲಸೆ ಕಾರ್ಮಿಕರ ಸಹಾಯಕ್ಕೆ ಧಾವಿಸಿದ ಮಹೀಂದ್ರಾ

ಲಾಕ್‌ಡೌನ್‌ನಿಂದಾಗಿ ಎಲ್ಲಾ ವರ್ಗದ ಜನರು ಒಂದಿಲ್ಲಾ ಒಂದು ರೀತಿಯ ಸಂಕಷ್ಟಕ್ಕೆ ಸಿಲುಕಿದ್ದು, ದಿನಗೂಲಿ ಕಾರ್ಮಿಕರ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ಕೆಲಸ ಅರಿಸಿ ನಗರಪ್ರದೇಶಗಳನ್ನು ಸೇರಿದ್ದ ಕೂಲಿ ಕಾರ್ಮಿಕರು ಇದೀಗ ಆದಾಯವೂ ಇಲ್ಲದೆ ಇತ್ತ ತುತ್ತಿನ ಚೀಲಕ್ಕಾಗಿ ಪರಿತಪಿಸುವಂತಾಗಿದ್ದು, ವೈರಸ್ ಭೀತಿ ನಡುವೆಯೂ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಲಕ್ಷಾಂತರ ಕಾರ್ಮಿಕರು ನಡೆದುಕೊಂಡೆ ಹಳ್ಳಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಲಾಕ್‌ಡೌನ್ ಸಂಕಷ್ಟ- ವಲಸೆ ಕಾರ್ಮಿಕರ ಸಹಾಯಕ್ಕೆ ಧಾವಿಸಿದ ಮಹೀಂದ್ರಾ

ಆದಾಯವಿಲ್ಲದ ಕಾರಣ ಖಾಸಗಿ ವಾಹನಗಳಲ್ಲೂ ಪ್ರಯಾಣಿಸಲು ಸಾಧ್ಯವಿಲ್ಲ ಕೂಲಿ ಕಾರ್ಮಿಕರು ನಡೆದುಕೊಂಡೆ ಊರು ಸೇರುತ್ತಿದ್ದು, ಮಾರ್ಗಮಧ್ಯದಲ್ಲೇ ಸಾವಿರಾರು ಕಾರ್ಮಿಕರು ಅಸ್ವಸ್ಥಗೊಂಡ ಘಟನೆಗಳು ವರದಿಯಾಗಿವೆ.

ಲಾಕ್‌ಡೌನ್ ಸಂಕಷ್ಟ- ವಲಸೆ ಕಾರ್ಮಿಕರ ಸಹಾಯಕ್ಕೆ ಧಾವಿಸಿದ ಮಹೀಂದ್ರಾ

ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿರುವ ಮಹೀಂದ್ರಾ ಕಂಪನಿಯು ತಮ್ಮ ಅಧೀನದಲ್ಲಿರುವ ಸಂಘ-ಸಂಸ್ಥೆಗಳ ಮೂಲಕ ಸಾಧ್ಯವಿರುವ ಕಡೆಗಳಲ್ಲಿ ಕೂಲಿ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದು, ಊರು ತಲುಪಲು ಪರದಾಡುತ್ತಿರುವ ಕಾರ್ಮಿಕರ ಆಕ್ರಂದನಕ್ಕೆ ಮಹೀಂದ್ರಾ ಕಂಪನಿಯು ಮನಮಿಡಿದಿದೆ.

ಲಾಕ್‌ಡೌನ್ ಸಂಕಷ್ಟ- ವಲಸೆ ಕಾರ್ಮಿಕರ ಸಹಾಯಕ್ಕೆ ಧಾವಿಸಿದ ಮಹೀಂದ್ರಾ

ಇನ್ನು ಮಹಾಮಾರಿ ಕರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸುವ ಮೂಲಕ ತನ್ನದೆ ಆದ ಕೊಡುಗೆ ನೀಡುತ್ತಿರುವ ಮಹೀಂದ್ರಾ ಕಂಪನಿಯು ಲಾಕ್‌ಡೌನ್ ವೇಳೆ ಹಸಿದವರಿಗೆ ಅನ್ನ ನೀಡಿದ್ದಲ್ಲದೆ ಸರ್ಕಾರಕ್ಕೆ ಹಣಕಾಸು ಮತ್ತು ವೈದ್ಯಕೀಯ ಉಪಕರಣಗಳ ಸಹಾಯಹಸ್ತ ಚಾಚಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಲಾಕ್‌ಡೌನ್ ಸಂಕಷ್ಟ- ವಲಸೆ ಕಾರ್ಮಿಕರ ಸಹಾಯಕ್ಕೆ ಧಾವಿಸಿದ ಮಹೀಂದ್ರಾ

ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದು, ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಮಾದರಿಯ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡುತ್ತಿದೆ.

ಲಾಕ್‌ಡೌನ್ ಸಂಕಷ್ಟ- ವಲಸೆ ಕಾರ್ಮಿಕರ ಸಹಾಯಕ್ಕೆ ಧಾವಿಸಿದ ಮಹೀಂದ್ರಾ

ಇದರ ಜೊತೆಗೆ ಮತ್ತೊಂದು ಸಿಹಿಸುದ್ದಿ ನೀಡಿರುವ ಮಹೀಂದ್ರಾ ಕಂಪನಿಯು ಇದೇ ಮೊದಲ ಬಾರಿಗೆ ಕರೋನಾ ವೈರಸ್ ಸೋಂಕು ಪಿಡಿತರ ಪ್ರಾಣ ಉಳಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ವೈದ್ಯರ ಜೀವ ಹಾನಿ ತಡೆಯುವುದಕ್ಕೆ ಹೊಸ ತಂತ್ರಜ್ಞಾನ ಪ್ರೇರಿತ ಉಪಕರಣವೊಂದನ್ನು ನಿರ್ಮಾಣ ಮಾಡಿದೆ.

MOST READ: ಮುಗಿಯದ ಲಾಕ್‌ಡೌನ್ ರಗಳೆ: 15 ವರ್ಷದ ಬಾಲಕಿಯ ಸಾಹಸಕ್ಕೊಂದು ದೊಡ್ಡ ಸಲಾಂ

ಲಾಕ್‌ಡೌನ್ ಸಂಕಷ್ಟ- ವಲಸೆ ಕಾರ್ಮಿಕರ ಸಹಾಯಕ್ಕೆ ಧಾವಿಸಿದ ಮಹೀಂದ್ರಾ

ಉತ್ತರ ಅಮೆರಿಕದಲ್ಲಿರುವ ಮಹೀಂದ್ರಾ ಡೆಟ್ರಾಯಿಟ್ ಡಿಸೈನ್ ತಂಡವು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಯಾವುದೇ ರೀತಿ ಸೋಂಕು ತಗುಲದಂತೆ ತಡೆಯಲು ಏರೋಸೊಲ್ ಬಾಕ್ಸ್ ಅನ್ನು ಸಿದ್ದಪಡಿಸಿ ಉತ್ಪಾದನೆಗೆ ಚಾಲನೆ ನೀಡಿದ್ದು, ಭಾರತದಲ್ಲೂ ಇದೀಗ ಹೊಸ ಮಾದರಿಯ ಉಪಕರಣ ನಿರ್ಮಾಣಕ್ಕೆ ಚಾಲನೆ ನೀಡಿದೆ.

More from DriveSpark

Article Published On: Thursday, May 21, 2020, 21:52 [IST]
English summary
Mahindra will help migrant workers to reach home details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+