ಬೀಚ್ ಮರಳಲ್ಲಿ ಸಿಲುಕಿದ ಪವರ್‌ಫುಲ್ ಮಹೀಂದ್ರಾ ಎಸ್‌ಯುವಿ: ತಳ್ಳಿ ಹೊರತರಲು ಒದ್ದಾಡಿದ ಜನ ಸುಸ್ತೋ ಸುಸ್ತು
ಪ್ರತೀ ವರ್ಷವೂ ಭಾರತದ ಪ್ರಖ್ಯಾತ ಪ್ರವಾಸಿ ತಾಣವಾದ ಗೋವಾದ ಬೀಚ್‌ಗಳಲ್ಲಿ ಭಾರೀ ಪ್ರಮಾಣದ ಮರಳು ಸಮುದ್ರದಿಂದ ಬಂದು ಸೇರುತ್ತವೆ. ಇದೇ ಸಂಧರ್ಭದಲ್ಲಿ ಬೀಚ್‌ಗೆ ಮೋಜಿಗೆಂದು ಬರುವ ವಾಹನಗಳು ಹಲವು ಬಾರಿ ಆ ಮರಳಿನಲ್ಲಿ ಹುದುಗಿ ಒದ್ದಾಡುತ್ತಿರುತ್ತವೆ ಮತ್ತು ಇದರ ಬಗ್ಗೆ ಹಲವಾರು ಸುದ್ದಿಗಳೂ ಹರಿದಾಡುತ್ತಿರುತ್ತವೆ.
ಇದೀಗ ಭಾರತದ ಮತ್ತೊಂದು ಪ್ರಸಿದ್ಧ ಕಾರು ತಯಾರಿಕಾ ಕಂಪನಿಯ ಪ್ರಸಿದ್ದವಾದ ಕಾರೊಂದು ಗೋವಾದ ಬೀಚ್‌ನ ಮರಳಿನಲ್ಲಿ ಹುದುಗಿ ಹೊರ ಬರಲಾರದೇ ಒದ್ದಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕಾರನ್ನು ಮರಳಿನಿಂದ ಹೊರತರಲು ಅಲ್ಲಿನ ಸ್ಥಳೀಯರು ಕಾರನ್ನು ತಳ್ಳಿ ಸಹಾಯ ಮಾಡಿದ್ದಾರೆ.

ಅಂದ ಹಾಗೇ ಗೋವಾದ ಬೀಚ್‌ನ ಮರಳಿನಲ್ಲಿ ಹುದುಗಿ ಹೋದ ಕಾರು ಬೇರೆ ಯಾವುದೂ ಅಲ್ಲ. ಭಾರತದ ಪ್ರಸಿದ್ದ ಕಾರು ತಯಾರಿಕಾ ಕಂಪನಿಯಾದ ಮಹೀಂದ್ರಾ ಭಾರತದ ಮಾರುಕಟ್ಟೆಯಲ್ಲಿ ಬಿಟ್ಟಂತಹ ಮಹೀಂದ್ರಾ XUV 700 (Mahindra XUV 700). ಹೌದು, ಮಹೀಂದ್ರಾ XUV 700 ಬೀಚ್‌ನ ಮರಳಿನಲ್ಲಿ ಹುದುಗಿದ್ದ ಸಂಧರ್ಭದಲ್ಲಿ ಸ್ಥಳೀಯರ ಸಹಾಯದಿಂದ ಮೇಲೆದ್ದು ನಿಂತಿದೆ.
ಇನ್ನು ಮಾಹಿತಿಗಳ ಪ್ರಕಾರ ಈ ಮಹೀಂದ್ರಾ XUV 700 ಕಾರಿನ ಮಾಲೀಕರು ತಮ್ಮ ಕಾರನ್ನು ಬೀಚ್‌ನ ಬಳಿ ಪಾರ್ಕ್ ಮಾಡಿ ಬೇರೆ ಕಡೆ ತೆರಳಿದ್ದಾರೆ. ಸುಮಾರು ಸಮಯದ ನಂತರ ತಮ್ಮ ಕಾರಿನ ಬಳಿ ಬಂದು ನೋಡಿದಾಗ ತಮ್ಮ ಕಾರಿನ ಟೈರ್‌ಗಳು ಮರಳಿನಲ್ಲಿ ಹುದುಗಿರುವುದು ಕಂಡು ಬಂದಿದೆ.

ಕೂಡಲೆ ಡ್ರೈವರ್ ಸೀಟ್‌ಗೆ ಏರಿ ಕಾರನ್ನು ಹೊರ ತರಲು ಕಾರು ಮಾಲೀಕ ಪ್ರಯತ್ನಿಸಿದ್ದಾರೆ. ಆದರೆ ಅವರ ಈ ಪ್ರಯತ್ನ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇನ್ನು ಈ ಸಂಧರ್ಭದಲ್ಲಿ ಅಲ್ಲಿದ್ದ ಸ್ಥಳೀಯರು ಇದೆಲ್ಲವನ್ನೂ ಗಮನಿಸುತ್ತಿದ್ದು, ನಂತರದಲ್ಲಿ ಒಂದಷ್ಟು ಮಂದಿ ಇವರ ಸಹಾಯಕ್ಕೆ ಕೂಡಲೇ ಆಗಮಿಸಿದ್ದಾರೆ.
ಮರಳಿನಲ್ಲಿ ಹುದುಗಿದ್ದ ಮಹೀಂದ್ರಾ XUV 700 ಕಾರನ್ನು ಎಲ್ಲರೂ ಸೇರಿ ತಳ್ಳಿ ದಡ ಸೇರಿಸಿದ್ದಾರೆ. ಮಹೀಂದ್ರಾ XUV 700 ಕಾರು ಗಮನಾರ್ಹ ಮಟ್ಟದಲ್ಲಿ ಭಾರವನ್ನು ಹೊಂದಿರುವುದರಿಂದ ಸಾಮಾನ್ಯವಾಗಿ ಮರಳಿರುವಂತಹ ಜಾಗದಲ್ಲಿ ಪಾರ್ಕ್ ಮಾಡಿದರೆ ಅದು ತಾನಾಗಿಯೇ ಅಲ್ಲಿ ಹುದುಗುವ ಸಾಧ್ಯತೆಗಳು ಹೆಚ್ಚು.
ಈ ಕಾರಣದಿಂದ ಇಂತಹ ಜಾಗದಲ್ಲಿ ದೊಡ್ಡ ದೊಡ್ಡ ಎಸ್‌ಯುವಿಗಳನ್ನು ಪಾರ್ಕ್ ಮಾಡುವ ಸಂಧರ್ಭದಲ್ಲಿ ಗಮನಿಸಿ ನಂತರದಲ್ಲಿ ಕಾರನ್ನು ಪಾರ್ಕ್ ಮಾಡಬೇಕು. ಅದರಲ್ಲೂ ಫ್ರಂಟ್ ವ್ಹೀಲ್ ಡ್ರೈವ್ ಇರುವ ಕಾರುಗಳಂತೂ ಇಂತಹ ಸನ್ನಿವೇಶವನ್ನು ಎದುರಿಸಿದರೆ ಅದನ್ನು ಹೊರತೆಗೆಯುವುದು ತೀರಾ ಕಷ್ಟಕರವಾದ ಕೆಲಸ ಎಂಬುದರಲ್ಲಿ ಎರಡು ಮಾತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications