4 ಸ್ಟಾರ್ ರೇಟಿಂಗ್ ಸೇಫ್ಟಿ ಕಾರಿಗೆ 5 ಸ್ಟಾರ್ ರೇಟಿಂಗ್ ಕಾರು ಡಿಕ್ಕಿ: ಮುಂದೇನಾಯ್ತು.. Live Video

ಭಾರತದ ಕೆಲವು ರಾಜ್ಯಗಳಲ್ಲಿ ಗುಡ್ಡಗಾಡಿನ ರಸ್ತೆಗಳೇ ಹೆಚ್ಚು. ಇಂತಹ ಕಡೆ ಚಾಲನೆ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟಬುತ್ತಿ. ಆದರೂ, ಎಷ್ಟೇ ಅಲರ್ಟ್ ಇದ್ರು ಒಂದಿಲ್ಲೊಂದು ಕಾರಣಗಳಿಗೆ ಆಕ್ಸಿಡೆಂಟ್ ಸಂಭವಿಸುತ್ತಲೇ ಇರುತ್ತದೆ. ಸದ್ಯ, ಅಂತಹದ್ದೇ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿರುವ ದೃಶ್ಯ ಸೆರೆಯಾಗಿದೆ.

ಸುರಕ್ಷತೆಯ ದೃಷ್ಟಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿರುವ ಮಹೀಂದ್ರಾ XUV300, 4 ಸ್ಟಾರ್ ರೇಟಿಂಗ್ ಗಳಿಸಿರುವ ಫೋಕ್ಸ್‌ವ್ಯಾಗನ್ ಪೋಲೋ ಕಾರಿಗೆ ಡಿಕ್ಕಿ ಹೊಡೆದಿದೆ. ಅದರ ವಿಡಿಯೋ ಪೋಲೋ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಈ ವೀಡಿಯೊದಲ್ಲಿ, ಮಹೀಂದ್ರಾ XUV300 ಗುಡ್ಡದ ಮೇಲಿನಿಂದ ಕೆಳಗೆ ಬರುತ್ತಿರುತ್ತಿದ್ದು, ಪೋಲೋ ಕಾರು ಗುಡ್ಡವನ್ನು ಏರುತ್ತಿರುವುದನ್ನು ಕಾಣಬಹುದು.

4 ಸೇಫ್ಟಿ ಸ್ಟಾರ್ ರೇಟಿಂಗ್ ಕಾರಿಗೆ 5 ಸ್ಟಾರ್ ರೇಟಿಂಗ್ ಕಾರು ಡಿಕ್ಕಿ: ಮುಂದೇನಾಯ್ತು.. Live Video

ಆದರೆ, ರಸ್ತೆಯ ತಿರುವುನಲ್ಲಿ ಪೋಲೋ ಕಾರು ಸರಿಯಾದ ಪಥದಲ್ಲಿಯೇ ಹೋಗುತ್ತಿರುತ್ತದೆ. ಆದರೆ, ಮೇಲ್ಭಾಗದಿಂದ ಬರುವ XUV300 ಸೀದಾ ರಸ್ತೆಯ ಮಧ್ಯಭಾಗ ಬಂದ ಹಿನ್ನೆಲೆ ಈ ಅಪಘಾತವಾಗಿದ್ದು, ಎರಡು ಕಾರುಗಳ ಮುಂಭಾಗ ಜಖಂಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಇವೆರೆಡು ಉತ್ತಮ ರೇಟಿಂಗ್ ಪಡೆದ ಕಾರಣ, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯಾವುದೇ ಪ್ರದೇಶದ ಕಣಿವೆ ಅಥವಾ ಗುಡ್ಡಗಾಡು ರಸ್ತೆಯಲ್ಲಿ ಕಾರು ಚಲಾಯಿಸಬೇಕಾದರೆ ಮುನ್ನೆಚ್ಚರಿಕೆ ಅಗತ್ಯ. ಇಂತಹ ರಸ್ತೆಗಳಲ್ಲಿ ಹೆಚ್ಚಿನ ತಿರುವುಗಳು ಇರುತ್ತವೆ. ನೀವು ಕಾರನ್ನು ತೀರಾ ಅಂಚಿನಲ್ಲಿ ಓಡಿಸಬೇಡಿ. ಇಲ್ಲಿ ಕೊಂಚ ಎಚ್ಚರ ತಪಿದ್ರು ಅಪಾಯ ಖಚಿತ. ಈ ರಸ್ತೆಗಳಲ್ಲಿ ನಿರ್ದಿಷ್ಟ ವೇಗಮಿತಿಯಲ್ಲಿ ವಾಹನ ಚಲಾಯಿಸಬೇಕೆಂದು ಸಾರಿಗೆ ಇಲಾಖೆಗಳಿಂದ ಫಲಕಗಳನ್ನು ಹಾಕಲಾಗಿರುತ್ತದೆ. ಅದನ್ನೇ ಅನುಸರಿಸಿ. ಜೊತೆಗೆ ಸರಿಯಾದ ಪಥದಲ್ಲಿ ಕಾರು ಚಲಾಯಿಸಿ,

ಮುಖ್ಯವಾಗಿ ಇಂತಹ ರಸ್ತೆಯಲ್ಲಿ ತಿರುವುಗಳ ಹೆಚ್ಚಿರುವುದರಿಂದ ಮುಂದೆ ಬರುವ ಕಾರು ಸೇರಿದಂತೆ ಇತರೆ ವಾಹನಗಳು ಒಂದೊಮ್ಮೆ ಹಾರ್ನ್ ಮಾಡುವುದಿಲ್ಲ ನೀವು ಹಾರ್ನ್ ಮಾಡುವುದನ್ನು ಮರೆಯಬೇಡಿ. ಇದಿಷ್ಟೇ ಅಲ್ಲದೆ, ಸಾಮಾನ್ಯ ಹೆದ್ದಾರಿಯಲ್ಲಿಯೇ ಕಾರು ಚಲಾಯಿಸುವುದು ಕಷ್ಟ. ಅಂತಹದರಲ್ಲಿ ಈ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಮಧ್ಯಪಾನ, ಫೋನ್ ನಲ್ಲಿ ಮಾತನಾಡಿಕೊಂಡು ವಾಹನ ಓಡಿಸಬೇಡಿ. ತಪ್ಪದೇ ಸೀಟ್ ಬೆಲ್ಟ್ ಧರಿಸಿರಿ.

ಇನ್ನು, ಮಹೀಂದ್ರಾ XUV300 ಬಗ್ಗೆ ಮಾತನಾಡುವುದಾದರೆ, ಇದು ಸೇಫ್ಟಿ ಸಲುವಾಗಿ 5 ಸ್ಟಾರ್ ರೇಟಿಂಗ್ ಪಡೆದಿದ್ದು, ಅಷ್ಟೇ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, ಆರು ಏರ್‌ಬ್ಯಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯುಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಆಲ್ ವೀಲ್ ಡಿಸ್ಕ್ ಬ್ರೇಕ್ಸ್, ಕಾರ್ನರ್ ಬ್ರೇಕಿಂಗ್ ಕಂಟ್ರೋಲ್ ಹಾಗೂ ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ NCAPಯಿಂದ 4 ಸ್ಟಾರ್ ರೇಟಿಂಗ್ ಪಡೆದಿದ್ದ ಫೋಕ್ಸ್‌ವ್ಯಾಗನ್ ಪೋಲೋವನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟದಿಂದ ಸ್ಥಗಿತಗೊಳಿಸಲಾಗಿದೆ. ಈ ಕಾರು, ರೂ.5.87 ಲಕ್ಷ ಆರಂಭಿಕ ಬೆಲೆಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿತ್ತು. ಜೊತೆಗೆ 16.73 ರಿಂದ 20.48 kmpl ಇಂಧನ ದಕ್ಷತೆಯನ್ನು ಹೊಂದಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Thursday, June 1, 2023, 10:34 [IST]
English summary
Mahindra xuv300 crashes into vw polo video details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+