Mahindra: ADAS ತಂತ್ರಜ್ಞಾನ ದುರ್ಬಳಕೆ: 70ರ ವೇಗದಲ್ಲಿ ಕಾರನ್ನು ಬಿಟ್ಟು ಹಿಂಬದಿ ಮಲಗಿದ ಚಾಲಕ
ಇತ್ತೀಚೆಗೆ ಮಹೀಂದ್ರಾ XUV700 ಚಾಲಕನೊಬ್ಬ ADAS (Advanced Driver Assistance Systems) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಐದಾರು ವರ್ಷಗಳಿಂದ ಅಂದರೆ ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡಿರುವ Mahindra XUV700 ಬಿಡುಗಡೆಯಾದಾಗಿನಿಂದ ಇಂತಹ ಘಟನೆಗಳು ಆಗಾಗ ಸುದ್ದಿಯಾಗುತ್ತಲೇ ಇವೆ.
ಇದೀಗ ಇಬ್ಬರು ಇದ್ದ ಕಾರಿನಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಓರ್ವ ವಿಡಿಯೋ ಮಾಡುತ್ತಿದ್ದರೇ ಚಾಲಕ ಹಿಂಬದಿ ಸೀಟಿನಲ್ಲಿ ಮಲಗಿದ್ದು, ಡ್ರೈವರ್ ಸೀಟ್ ಖಾಲಿ ಇರುವುದನ್ನು ಕಾಣಬಹುದು. ಅಲ್ಲದೇ ವಿಡಿಯೋದಲ್ಲಿ ಇದು ಹೆದ್ದಾರಿ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು. ಈ ಕುರಿತ ವಿಡಿಯೋವನ್ನು 'ಆಟೋಜರ್ನಲ್ ಇಂಡಿಯಾ' ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡು, ಇದೇ ಕಾರಣಕ್ಕೆ ಮೊದಲಿನಿಂದಲೂ ಈ ಕಾರು ಸುದ್ದಿಯಾಗುತ್ತಿದೆ ಎಂದು ಶೀರ್ಷಿಕೆ ನೀಡಿದೆ.

ವಿಡಿಯೋದಲ್ಲಿ ಕಾಣುವಂತೆ Mahindra XUV700 ಎಸ್‌ಯುವಿಯಲ್ಲಿ ಪ್ಯಾಸಿಂಜರ್ ಸೀಟಿನಲ್ಲಿ ಕುಳಿತ ವ್ಯಕ್ತಿ ವಿಡಿಯೋ ಮಾಡುತ್ತಿದ್ದು, ಡ್ರೈವರ್ ಸೀಟನ್ನು ತೋರಿಸಿ ಬಳಿಕ ಚಾಲಕ ಹಿಂಬದಿ ಮಲಗಿರುವುದನ್ನು ತೋರಿಸಿದ್ದಾನೆ. ಈ ವೇಳೆ ಕಾರು ಹೆದ್ದಾರಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ 70ರ ಆಸುಪಾಸಿನ ವೇಗದಲ್ಲಿ ಚಲಿಸುತ್ತಿತ್ತು.
ಭಾರತೀಯ ಕಾರು ಉದ್ಯಮ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆಂಬ ಉದ್ದೇಶದಿಂದ ಮಹೀಂದ್ರಾ ಕಂಪನಿ ಅತ್ಯಾಧುನಿಕ ತಂತ್ರಜ್ಞಾನವಾದ ADAS ಅನ್ನು ಕಡಿಮೆ ಬೆಲೆಯಲ್ಲಿ (ಇತರ ದೇಶದ ಕಾರುಗಳಿಗೆ ಹೋಲಿಸಿಕೊಂಡರೆ) ಪರಿಚಯಿಸಿದೆ. ಆದ್ರೆ ಭಾರತದಲ್ಲಿ ಇದನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬುದಕ್ಕೆ ಇದೇ ಉತ್ತಮ ಉದಾಹರಣೆಯಾಗಿದೆ. ಸರ್ಕಾರ ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

ADAS ತಂತ್ರಜ್ಞಾನ ತುಂಬಾ ಅಪಾಯಕಾರಿ?: ಭಾರತದಲ್ಲಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ದುರುಪಯೋಗವು ಅನೇಕ ಅಪಾಯಗಳನ್ನು ಉಂಟುಮಾಡುತ್ತದೆ. ಏಕೆಂದರೆ ಈ ತಂತ್ರಜ್ಞಾನಕ್ಕಾಗಿ ಕಾರಿನಲ್ಲಿ ಅಳವಡಿಸಲಾಗಿರುವ ಸೆನ್ಸಾರ್‌ಗಳು ಕೇವಲ ಟ್ರಾಫಿಕ್ ನಿಯಮಗಳು ಮತ್ತು ಸರಿಯಾದ ರಸ್ತೆ ಸೂಚಗಳನ್ನು ನೋಡಿ ತನ್ನ ಚಾಲನೆಯನ್ನು ಸಕ್ರಿಯಗೊಳಿಸುತ್ತದೆ. ಆದ್ರೆ ಭಾರತದಲ್ಲಿ ಎಲ್ಲಾ ರಸ್ತೆಗಳು ಉತ್ತಮವಾಗಿವೆಯೇ ಹೇಳಿ?
ಸಾಮಾನ್ಯವಾಗಿ ಈ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡರೆ ಅಪಾಯಕಾರಿ ನಡವಳಿಕೆಯ ತಪ್ಪಾದ ಪ್ರಾತಿನಿಧ್ಯ, ಸಂಭಾವ್ಯ ಅಪಘಾತಗಳಿಗೆ ಕಾರಣವಾಗುತ್ತದೆ. ಜೊತೆಗೆ ಇಂತಹ ದುರ್ಬಳಕೆಯು ಚಾಲಕನ ಗಮನವನ್ನು ರಸ್ತೆಯಿಂದ ಬೇರೆಡೆಗೆ ತಿರುಗಿಸಿ ಅಪಘಾತಗಳಿಗೂ ಕಾರಣವಾಗುತ್ತದೆ. ಇದರಿಂದ ನಾವಷ್ಟೇ ಅಲ್ಲದೇ ನಮ್ಮ ಎದುರು ಬರುವ ಪ್ರಯಾಣಿಕರು ಕೂಡ ಅಪಾಯಗಳನ್ನು ಎದುರಿಸಬೇಕಾಗುತ್ತದೆ.

ADAS ತಂತ್ರಜ್ಞಾನ ಮಹತ್ವ: ADAS ತಂತ್ರಜ್ಞಾನದ ಪ್ರಯೋಜನಗಳನ್ನು ಪಡೆಯಲು ಮುಖ್ಯವಾಗಿ ಉದ್ದೇಶಿಸಿರುವುದು ಅಪಘಾತಗಳು ಆಗದಿರಲಿ ಎಂಬ ಕಾರಣಕ್ಕೆ. ಚಾಲಕ ಕೆಲವೊಮ್ಮೆ ನಿಯಂತ್ರಣ ಕಳೆದುಕೊಂಡರು ಕಾರು ತನ್ನಷ್ಟಕ್ಕೆ ತಾನು ನಿಯಂತ್ರಣಗೊಂಡು ಅಪಘಾತಗಳನ್ನು ತಪ್ಪಿಸುತ್ತದೆ. ಇದರಲ್ಲಿ ಚಾಲಕನ ಪ್ರಮೆಯ ಕೂಡ ಖಂಡಿತ ಇರಲಬೆಕು ಎಂದು ಕಾರು ಕಂಪನಿಗಳು ಕೂಡ ಹೇಳುತ್ತವೆ. ಆದ್ರೆ ಇಲ್ಲಿ ಇದಕ್ಕೆ ವಿರುದ್ಧವಾಗಿ ನಡೆಯುತ್ತಿದೆ.
ADAS ವೈಶಿಷ್ಟ್ಯಗಳನ್ನು ಸೂಕ್ತವಾಗಿ ಬಳಸಿದಾಗ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ಓದುವ ಪ್ರತಿಯೊಬ್ಬರಿಗೂ ನಿಮ್ಮ ಕಾರಿನ ADAS ವೈಶಿಷ್ಟ್ಯಗಳನ್ನು ಎಂದಿಗೂ ದುರುಪಯೋಗಪಡಿಸಿಕೊಳ್ಳಬೇಡಿ ಎಂಬುದು ನಮ್ಮ ವಿನಂತಿ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ಹೊಸ ಕಾರು, ಹೊಸ ಬೈಕ್ ಕುರಿತ ನವೀಕೃತ ಸುದ್ದಿಗಳನ್ನು ತ್ವರಿತವಾಗಿ ಓದುಗರಿಗೆ ನೀಡುತ್ತದೆ.
ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications