Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
ವಿಶ್ವ ದೇಶಗಳಲ್ಲಿ ಅಡ್ವಾನ್ಸ್ಡ್ ಸೇಫ್ಟಿ ಫೀಚರ್ ಎಂದು ಜನಪ್ರಿಯತೆ ಪಡೆಯುತ್ತಿರುವ ADAS (Advanced Driver Assistance Systems), ಸದ್ಯ ಭಾರತದಲ್ಲೂ ಬಳಕೆಯಲ್ಲಿದೆ. ಎಂಜಿ ಮೋಟಾರ್ಸ್ ಮೊದಲಿಗೆ ಭಾರತದಲ್ಲಿ ಈ ಫೀಚರ್ ಪರಿಚಯಿಸಿತು. ಈ ಫೀಚರ್ Mahindra XUV700 ಕಾರಿನಲ್ಲೂ ಲಭ್ಯವಿದ್ದು, ಇತ್ತೀಚೆಗೆ ಹೆಚ್ಚಾಗಿ ಜನಪ್ರಿಯತೆ ಪಡೆಯುತ್ತಿದೆ.
ಭಾರತದಲ್ಲಿ ಮಹೀಂದ್ರಾ XUV700 ಎಸ್‌ಯುವಿನಲ್ಲಿ ಲಭ್ಯವಿರುವ ಅತ್ಯಾಧುನಿಕ ADAS ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡವರೇ ಹೆಚ್ಚು, ಆದರೇ ಇದೆ ಮೊದಲ ಬಾರಿಗೆ ಈ ವೈಶಿಷ್ಟ್ಯದ ನಿಜವಾದ ಬಳಕೆಯ ಬಗ್ಗೆ ಹಲವರಿಗೆ ಅರಿವಾಗಿದೆ. ಈ ಅಡಾಸ್ ತಂತ್ರಜ್ಞಾನದಿಂದಾಗಿ ಅಪಘಾತದಿಂದ ಪಾರಾದ ವಿಡಿಯೋವೊಂದು ವೈರಲ್ ಆಗಿದೆ. ಸ್ವಯಂಚಾಲಿತ ತುರ್ತು ಬ್ರೇಕಿಂಗ್ (Automatic emergency braking) ವ್ಯವಸ್ಥೆಯು ಕಾರು ಮಾಲೀಕರಿಗೆ ಹೆದ್ದಾರಿಯಲ್ಲಿ ಅಪಘಾತವನ್ನು ತಪ್ಪಿಸಲು ಸಹಾಯ ಮಾಡಿದೆ. ಒಟ್ಟಾರೆ ಈ ಸಣ್ಣ ವಿಡಿಯೋ ಅತ್ಯಾಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದೆ.

ವೇಗದಲ್ಲಿದ್ದ ಮಹೀಂದ್ರಾ XUV700 ಕಾರಿನ ಮುಂದೆ ಇನ್ನೊಂದು ಕಾರು ಇದ್ದಕ್ಕಿದ್ದಂತೆ ನಿಲ್ಲಿಸಿದ್ದ ವೇಳೆ, ತುರ್ತು ಬ್ರೇಕಿಂಗ್ ಅನ್ನು ಸಕ್ರಿಯಗೊಳಿಸಿ XUV700 ಕಾರು ಅಪಘಾತವನ್ನು ತಪ್ಪಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮಹೀಂದ್ರಾ XUV700 ಒಳಗಿನ ಡ್ಯಾಶ್ ಕ್ಯಾಮ್‌ನಿಂದ ರೆಕಾರ್ಡ್ ಮಾಡಲಾದ ಈ ಸಣ್ಣ ವೀಡಿಯೊ ಕ್ಲಿಪ್‌ನಲ್ಲಿ ADAS ಸಾಮರ್ಥ್ಯಗಳನ್ನು ನೋಡಬಹುದು.
ಆಗಿದ್ದೇನು?: ರಸ್ತೆಯ ಎಡಭಾಗದಲ್ಲಿ ಒಂದು ಸಣ್ಣ ಗೂಡ್ಸ್ ಟ್ರಕ್ ಇರುವುದು ವಿಡಿಯೋದಲ್ಲಿ ಕಾಣುತ್ತಿದೆ. ಇದೇ ವೇಳೆ ಮಹೀಂದ್ರಾ XUV700ನ ಮುಂಭಾಗದಲ್ಲಿ ಹ್ಯುಂಡೈ ಸ್ಯಾಂಟ್ರೊ ಇತ್ತು. ಇದು ಕಾರಾಣಾಂತರಗಳಿಂದ ಸಡನ್ ಬ್ರೇಕ್ ಹೊಡೆದಿದ್ದು, ಅದೃಷ್ಟವಶಾತ್ XUV700ನ ADAS ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವೈಶಿಷ್ಟ್ಯವು ಹಠಾತ್ ಬ್ರೇಕಿಂಗ್‌ನಿಂದಾಗಿ ಅಪಘಾತ ತಪ್ಪಿದೆ.

ಈ ಘಟನೆಯಲ್ಲಿ ಅಜಾಗರೂಕವಾಗಿ ಬ್ರೇಕಿಂಗ್ ಮಾಡಿದ ಸ್ಯಾಂಟ್ರೊ ಚಾಲಕ ಹಾಗೂ ಸ್ಯಾಂಟ್ರೊದ ಮುಂಭಾಗದಲ್ಲಿದ್ದ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಚಾಲಕದ್ದು ತಪ್ಪಾಗಿದೆ. ಒಂದು ವೇಳೆ ಮಹೀಂದ್ರಾ XUV700 ನಲ್ಲಿ ADAS ತಂತ್ರಜ್ಞಾನ ಇಲ್ಲದಿದ್ದರೇ ಅಪಘಾತವಾಗುತಿತ್ತು ಎನ್ನಲಾಗಿದೆ. ಈ ಅಜಾಗರೂಕ ನಡವಳಿಕೆಯು ಕಾರುಗಳ ಸಾಲು ಅಪಘಾತಗಳಿಗೆ ಕಾರಣವಾಗಿರಬಹುದು. ಏಕೆಂದರೆ ವೀಡಿಯೊದಲ್ಲಿ ನೋಡುವಂತೆ, ಹೆದ್ದಾರಿಯು ಹಲವು ವಾಹನಗಳಿಂದ ತುಂಬಿತ್ತು. ವರದಿಗಳ ಪ್ರಕಾರ, ಈ ಘಟನೆಯು ಬೆಂಗಳೂರಿನ ನೈಸ್ ರೋಡ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಈ ಕುರಿತ ಹೆಚ್ಚಿನ ವಿವರಗಳು ಬಹಿರಂಗಗೊಂಡಿಲ್ಲ.
ಮಹೀಂದ್ರಾ XUV700: ಭಾರತದಲ್ಲಿ ಸುಧಾರಿತ ಲೆವೆಲ್-2 ADAS ತಂತ್ರಜ್ಞಾನ ವೈಶಿಷ್ಟ್ಯಗಳ ಸಂಪೂರ್ಣ ಸೂಟ್ ಅನ್ನು ನೀಡುವ ಎಸ್‌ಯುವಿಗಳಲ್ಲಿ ಮಹೀಂದ್ರಾ XUV700 ಎಸ್‌ಯುವಿ ಒಂದಾಗಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರಾಫಿಕ್ ಸೈನ್ ರೆಕಗ್ನಿಷನ್ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಹೈ ಬೀಮ್ ಅಸಿಸ್ಟ್ ಅನ್ನು ಒಳಗೊಂಡಿದೆ.
ಇದು ಲೇನ್ ಕೀಪ್ ಅಸಿಸ್ಟ್, ಸ್ಮಾರ್ಟ್ ಪೈಲಟ್ ಅಸಿಸ್ಟ್, ಲೇನ್ ನಿರ್ಗಮನ ಎಚ್ಚರಿಕೆ, ಮುಂಭಾಗದ ಘರ್ಷಣೆ ಎಚ್ಚರಿಕೆಯಂತಹ ಫೀಚರ್‌ಗಳನ್ನು ಪಡೆದಿದೆ. ಹೆಚ್ಚುವರಿಯಾಗಿ ವಿಶ್ವಾಸಾರ್ಹ ರಾಡಾರ್ ಮತ್ತು ಕ್ಯಾಮೆರಾ ಆಧಾರಿತ ADAS ಅನ್ನು ಒಳಗೊಂಡಿದೆ. ಈ ರೀತಿಯ ADAS ಮಂಜಿನಂತಹ ಕಷ್ಟಕರ ಪರಿಸ್ಥಿತಿಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.


Click it and Unblock the Notifications