ಘಾಟ್ ರಸ್ತೆಯಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಪ್ರವಾಸಿಗರ ಹುಚ್ಚಾಟ, ಬಿದ್ರೆ ಡೈರೆಕ್ಟ್‌ ಪಾತಾಳಕ್ಕೆ!

ಭಾರತದಲ್ಲಿ ಹೆಚ್ಚಿನ ಜನರು ಸನ್‌ರೂಫ್ ಸೌಲಭ್ಯ ಹೊಂದಿರುವ ಕಾರುಗಳನ್ನು ಇಷ್ಟಪಡುತ್ತಾರೆ. ಮೊದಲೆಲ್ಲಾ ನಾವು ಕೇವಲ ದುಬಾರಿ ಕಾರುಗಳಲ್ಲಿ ಮಾತ್ರ ಸನ್‌ರೂಫ್‌ಗಳನ್ನು ನೋಡಬಹುದಾಗಿತ್ತು, ಆದರೆ ಇದೀಗ ಹ್ಯಾಚ್‌ಬ್ಯಾಕ್‌ ಮತ್ತು ಎಸ್‌ಯುವಿ ಕಾರುಗಳಲ್ಲಿ ಕೂಡ ಸನ್‌ರೂಫ್ ನೀಡಲಾಗುತ್ತಿದೆ. ಹಲವಾರು ಕಾರುಗಳಲ್ಲಿ ಸಾಮಾನ್ಯವಾಗಿ ನೀಡಲಾಗುವ ವೈಶಿಷ್ಟ್ಯವೆಂದರೆ ಸನ್‌ರೂಫ್.

ಇತ್ತೀಚೆಗೆ ಅತ್ಯಾಧ್ಯುನಿಕ ಫಿಚರ್ಸ್ ಗಳೊಂದಿಗೆ ಕಾರುಗಳು ಬರುತ್ತಿದೆ. ತಮ್ಮ ಮೆಚ್ಚಿನ ಫೀಚರ್ ಹೊಂದಿರುವ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸನ್‌ರೂಫ್ ಹೊಂದಿರುವ ವಾಹನವನ್ನು ಆಯ್ಕೆ ಮಾಡುವ ಹೆಚ್ಚಿನ ಜನರಿಗೆ ಅದರ ನಿಜವಾದ ಉದ್ದೇಶ ತಿಳಿದಿಲ್ಲ ಮತ್ತು ನೀವು ಅವರನ್ನು ಕೇಳಿದರೆ, ಅವರ ಉತ್ತರವು ಬಹುತೇಕ ಒಂದೇ ಆಗಿರುತ್ತದೆ. ವಾಹನ ಚಾಲನೆಯಲ್ಲಿರುವಾಗ ಹೊರಗೆ ನಿಲ್ಲಲು ಭಾರತದಲ್ಲಿ ಜನರು ಹೆಚ್ಚಾಗಿ ಸನ್‌ರೂಫ್ ಅನ್ನು ಬಳಸುತ್ತಾರೆ. ಆದರೆ ಇದು ತುಂಬಾ ಅಪಾಯಕಾರಿಯಾಗಿದೆ.

Mahindra XUV700

ಕಾರಿನಲ್ಲಿ ಸನ್‌ರೂಫ್ ವೈಶಿಷ್ಟ್ಯವನ್ನು ಹಲವು ಜನರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸನ್‌ರೂಫ್ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳುವ ಹಲವಾರು ಚಿತ್ರ ಮತ್ತು ವೀಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇತ್ತೀಚಿಗೆ, ಮಹೀಂದ್ರಾ XUV700 (Mahindra XUV700) ಘಾಟ್ ರಸ್ತೆಯಲ್ಲಿ ಸಂಚರಿಸುವಾಗ ಪನರೊಮಿಕ್ ಸನ್‌ರೂಫ್ ಮತು ವಿಂಡೋಗಳ ಹೊರಗೆ ನಿಂತಿರುವ ವೀಡಿಯೊ ವೈರಲ್ ಆಗಿದೆ.

ಏಷ್ಯಾನೆಟ್ ನ್ಯೂಸ್ ಈ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವಾರವಷ್ಟೇ ಕೇರಳದ ತಾಮರಸ್ಸೆರಿ ಚುರಂ (ಮೌಂಟೇನ್ ಪಾಸ್)ನಲ್ಲಿ ಈ ಘಟನೆ ನಡೆದಿದೆ. ಈ ಸುದ್ದಿ ಚಾನಲ್‌ಗೆ ಸ್ಥಳೀಯ ನಿವಾಸಿಯೊಬ್ಬರು ವೀಡಿಯೊವನ್ನು ರೆಕಾರ್ಡ್ ಮಾಡಿ ಕಳುಹಿಸಿದ್ದಾರೆ. ತಮಿಳುನಾಡು ನೋಂದಣಿಯೊಂದಿಗೆ ಮಹೀಂದ್ರಾ XUV700 ಎಸ್‍ಯುವಿಯು ಮೌಂಟೇನ್ ಪಾಸ್‌ನಲ್ಲಿ ಅಜಾಗರೂಕತೆಯಿಂದ ಓಡಿಸುತ್ತಿರುವುದನ್ನು ಗಮನಿಸಿ ವೀಡಿಯೊ ಮಾಡಿದ್ದಾರೆ.

Mahindra XUV700

ಈ ಮಹೀಂದ್ರಾ XUV700 ಎಸ್‍ಯುವಿಯಲ್ಲಿ ಪನರೊಮಿಕ್ ಸನ್‌ರೂಫ್ ಮೇಲೆ ಇಬ್ಬರು ಮತ್ತು ವಿಂಡೋಗಳ ಮೇಲೆಯೆ ಕುಳಿತಿದ್ದಾರೆ. ಈ ಎಸ್‍ಯುವಿ ಮೌಂಟೇನ್ ಪಾಸ್‌ ರಸ್ತೆಯ ಉದ್ದಕ್ಕೂ ಹೆಚ್ಚಿನ ವೇಗದಲ್ಲಿ ಓಡಿಸಲಾಯಿತು. ಥಾಮರಸ್ಸೆರಿ ಚುರಂ ಪ್ರವಾಸಿ ಆಕರ್ಷಣೆಯಾಗಿದೆ. ವಾರಾಂತ್ಯದಲ್ಲಿ ಪ್ರಾವಸಿಗರಿಉ ಆಗಾಗ್ಗೆ ಭೇಟಿ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಇದು ಕೇರಳ ಮತ್ತು ಕರ್ನಾಟಕದ ನಡುವೆ ಸಂಪರ್ಕ ರಸ್ತೆಯಾಗಿ ಕಾರ್ಯನಿರ್ವಹಿಸುತ್ತದೆ.

ಈ ರಸ್ತೆಯು ಹಲವಾರು ಹೇರ್‌ಪಿನ್ ತಿರುವುಗಳನ್ನು ಹೊಂದಿದೆ ಮತ್ತು ಭಾರೀ ವಾಹನ ದಟ್ಟಣೆ ಇರುತ್ತದೆ. ವಾಹನದ ಸನ್‌ರೂಫ್‌ನಿಂದ ಹೊರಗೆ ನಿಲ್ಲುವ ಅಪಾಯಗಳು ಸ್ಪಷ್ಟವಾಗಿದ್ದರೂ, ವೀಂಡೋಗಳ ಮೇಲೆ ಕುಳಿತುಕೊಳ್ಳುವುದು ಅಷ್ಟೇ ಅಪಾಯಕಾರಿ. ಆಗಾಗ್ಗೆ ಬಿಗಿಯಾದ ತಿರುವುಗಳನ್ನು ಇರುವುದರಿಂದ ವಿಂಡೋ ಮೇಲಿರುವ ವ್ಯಕ್ತಿಯು ತಮ್ಮ ಹಿಡಿತವನ್ನು ಕಳೆದುಕೊಳ್ಳುವ ಮತ್ತು ನೆಲಕ್ಕೆ ಬೀಳುವ ಅಪಾಯ ಹೆಚ್ಚಿದೆ.

ಇಳಿಜಾರಿನಲ್ಲಿ ಇಳಿಯುವ ಕಾರುಗಳು ಮತ್ತು ಬಸ್ಸುಗಳು ಸೇರಿದಂತೆ ವಾಹನಗಳು ಹೆಚ್ಚಾಗಿ ಚಲಿಸುವ ರಸ್ತೆಯಾಗಿರುವುದರಿಂದ ಎಸ್‍ಯುವಿಯಿಂದ ಆ ವ್ಯಕ್ತಿ ಬಿದ್ದರೆ ಹಿಂಬಂದಿಯಿಂದ ಬರುವ ವಾಹನಗಳು ಮೇಲೆರುವ ಸಾಧ್ಯತೆಗಳಿದೆ. ಅದೃಷ್ಟವಶಾತ್, ಈ ಪ್ರಕರಣದಲ್ಲಿ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ. ರಸ್ತೆ ಏಕ ಪಥವಾಗಿದ್ದು, ಅಪಾಯವನ್ನು ಹೆಚ್ಚಿಸಿದೆ. ಎಸ್‍ಯುವಿ ವೇಗವಾಗಿ ಚಲಿಸುತ್ತಿರುವಾಗ ಹೊರಗೆ ಕುಳಿತುಕೊಂಡಿರುವುದು ಹೆಚ್ಚು ಅಪಾಯಕಾರಿಯಾಗಿದೆ.

ಅನೇಕ ಜನರು ಸನ್‌ರೂಫ್‌ಗಳಿಗೆ ಸಂಬಂಧಿಸಿದಂತೆ ಸಂಚಾರ ನಿಯಮಗಳ ಬಗ್ಗೆ ತಿಳಿದಿಲ್ಲ ಮತ್ತು ಚಲಿಸುವ ಕಾರಿನ ಸನ್‌ರೂಫ್ ಮೂಲಕ ನಿಲ್ಲುವುದು ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಉತ್ತರ ಇಲ್ಲಿದೆ.
ಮೋಟಾರ್ ವೆಹಿಕಲ್ಸ್ (ಎಂವಿ) ಕಾಯ್ದೆಯ ಪ್ರಕಾರ (ಚಲಿಸುವ) ಕಾರಿನ ಸನ್‌ರೂಫ್‌ನಿಂದ ತಲೆ ಅಥವಾ ದೇಹವನ್ನು ಹೊರಗೆ ಹಾಕುವುದು ಅಪರಾಧ ಮತ್ತು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ಸನ್‌ರೂಫ್‌ಗಳನ್ನು ಪ್ರಾಥಮಿಕವಾಗಿ ವಾಹನಗಳ ಒಳಗಿನ ಗಾಳಿಯ ಪ್ರಸರಣವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಇನ್ನು ಮತ್ತೂಂದು ಉದ್ದೇಶ ಸೂರ್ಯನ ಬೆಳಕನ್ನು ಕಾರುಗಳಿಗೆ ಬೀಳಲು ಆಗಿದೆ. ಆದರೆ ಜನರು ತಮ್ಮ ತಲೆ ಅಥವಾ ದೇಹವನ್ನು ಹೊರಗೆ ಹಾಕಿದಾಗ, ಅದು ಇತರರ ದೃಷ್ಟಿಯನ್ನು ತಡೆಯುತ್ತದೆ ಆದ್ದರಿಂದ ಯಾವುದೇ ಇತರ ಅಪಘಾತಗಳಿಗೆ ಕಾರಣವಾಗುತ್ತದೆ. ಚಲಿಸುವ ವಾಹನದ ಸನ್‌ರೂಫ್ ಅನ್ನು ಹೊರಗಿಡುವುದು ಕಾನೂನುಬಾಹಿರ ಎಂದು ನೀವು ತಿಳಿದಿರಬೇಕು ಮತ್ತು ಪೊಲೀಸರು ನಿಜವಾಗಿ ನಿಮಗೆ ದಂಡ ವಿಧಿಸಬಹುದು.

Article Published On: Thursday, August 17, 2023, 13:57 [IST]
English summary
Mahindra xuv700 car passenger traveled dangerously in mountain pass viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+