ಉಕ್ರೇನ್-ರಷ್ಯಾ ಬಿಕ್ಕಟ್ಟು: ಕಾರ್ಖಾನೆ ಮುಚ್ಚಲು ಆಟೋಮೊಬೈಲ್ ಕಂಪನಿಗಳ ಚಿಂತನೆ!
ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ಪ್ರಭಾವ ಎಲ್ಲಾ ವಲಯದ ಮೇಲೂ ಪ್ರಭಾವ ಬೀರುತ್ತಿದ್ದು, ಆಟೋಮೊಬೈಲ್ ಕ್ಷೇತ್ರ ಕೂಡಾ ಇದಕ್ಕೆ ಹೊರತಾಗಿಲ್ಲ. ಆಗಬಹುದಾದ ಅನಾಹುತವನ್ನು ಮನಗಂಡು ಪ್ರಮುಖ ಆಟೋಮೊಬೈಲ್ ಕಂಪನಿಗಳು ರಷ್ಯಾದಲ್ಲಿನ ತಮ್ಮ ಕಾರ್ಖಾನೆಗಳನ್ನು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಚಿಂತನೆ ನಡೆಸಿವೆ.

ಉಕ್ರೇನ್ ಮೇಲಿನ ರಷ್ಯಾದ ಯುದ್ಧಯು ತನ್ನ ದೀರ್ಘಕಾಲೀನ ಯೋಜನೆ ಮಾಜಿ ಸೋವಿಯತ್ ಒಕ್ಕೂಟದ ದೇಶವಾದ ಉಕ್ರೇನ್ ಅನ್ನು ವಶಪಡಿಸಿಕೊಳ್ಳುವುದಾಗಿದೆ. ಇದರ ಭಾಗವಾಗಿಯೇ ರಷ್ಯಾ 2014 ರಲ್ಲಿ ಉಕ್ರೇನ್‌ನ ಪಶ್ಚಿಮ ಭಾಗದ ಕ್ರಿಮಿಯಾ ಪರ್ಯಾಯ ದ್ವೀಪವನ್ನು ವಶಪಡಿಸಿಕೊಂಡಿತ್ತು.

ಇದರಿಂದ ಕೋಪಗೊಂಡ ಉಕ್ರೇನ್ ಪೂರ್ವ ಪ್ರದೇಶಗಳಲ್ಲಿನ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿದೆ. ಅಲ್ಲದೆ ರಷ್ಯಾ ಒಡ್ಡಿರುವ ಬೆದರಿಕೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಯುಎಸ್ಎ, ಕೆನಡಾ ಮತ್ತು 27 ಯುರೋಪಿಯನ್ ರಾಷ್ಟ್ರಗಳ ಮಿಲಿಟರಿ ಒಕ್ಕೂಟವಾದ ನ್ಯಾಟೋಗೆ ಸೇರಲು ಬಯಸಿತ್ತು.

ಇದು ರಷ್ಯಾಗೆ ಭೀತಿಯನ್ನು ತಂದೊಡ್ಡಿದೆ. ಏಕೆಂದರೆ ಉಕ್ರೆನ್ ನ್ಯಾಟೋಗೆ ಸೇರುವುದರಿಂದ ಇತರ ಸದಸ್ಯ ರಾಷ್ಟ್ರಗಳಲ್ಲಿ ದ್ವೇಷವನ್ನು ಹುಟ್ಟು ಹಾಕುತ್ತದೆ ಎಂದು ರಷ್ಯಾ ಆತಂಕ ವ್ಯಕ್ತಪಡಿಸಿತ್ತು. ಹೀಗಾಗಿ ನ್ಯಾಟೋಗೆ ಸೇರುವ ಮೊದಲೇ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ರಷ್ಯಾ ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಉಕ್ರೇನ್ ಮೇಲೆ ತನ್ನ ಮಿಲಿಟರಿ ಆಕ್ರಮಣವನ್ನು ಪ್ರಾರಂಭಿಸಿದ್ದು, ಕಳೆದ ಕೆಲವು ದಿನಗಳಿಂದ ಉಕ್ರೇನ್‌ನಲ್ಲಿ ಬಾಂಬ್‌ಗಳ ಮಳೆ ಸುರಿಯುತ್ತಿದೆ. ಈ ದಾಳಿಯಲ್ಲಿ ನೂರಾರು ಮುಗ್ಧ ಜನರು ಬಲಿಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾದ್ಯಗಳು ವರದಿ ಮಾಡಿದ್ದು, ಈ ಸುದ್ದಿ ಜಗತ್ತನ್ನು ಚಿಂತೆಗೀಡು ಮಾಡಿದೆ.

ರಷ್ಯಾದ ಆಕ್ರಮಣದಿಂದ ಉಕ್ರೇನಿಯನ್ನರು ಆತಂಕದಲ್ಲಿ ದಿನ ದೂಡುತ್ತಿದ್ದರೆ, ಇತ್ತ ಮಿಲಿಟರಿ ಕಾರ್ಯಾಚರಣೆಗಳು ಉಕ್ರೇನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಕಂಪನಿಗಳಿಗೂ ತಲೆನೋವಾಗಿ ಪರಿಣಮಿಸಿದೆ. ಇತ್ತ ರಷ್ಯಾದಲ್ಲೂ ಇದೇ ಆತಂಕವಿದ್ದು, ಪ್ರಮುಖ ಆಟೋಮೊಬೈಲ್ ಕಂಪನಿಗಳಾದ ಫೋಕ್ಸ್‌ವ್ಯಾಗನ್, ರೆನಾಲ್ಟ್ ಮತ್ತು ಪ್ರಮುಖ ಟೈರ್ ತಯಾರಿಕಾ ಕಂಪನಿಗಳಾದ ಕೋನಿಯನ್ ಟೈರ್ಸ್ ಫೆಬ್ರವರಿ 25 ರಂದು ರಷ್ಯಾದಲ್ಲಿನ ತಮ್ಮ ಕಾರ್ಖಾನೆಗಳನ್ನು ಮುಚ್ಚಲು ಯೋಜಿಸುತ್ತಿರುವುದಾಗಿ ಘೋಷಿಸಿದ್ದು, ಇದರಿಂದ ರಷ್ಯಾದಲ್ಲಿನ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ.

ರಷ್ಯಾ ವಿರುದ್ಧದ ಇತ್ತೀಚಿನ ಅಮೆರಿಕಾ ಆಮದು ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. ಅದರಂತೆ, ಯುಎಸ್‌ನಿಂದ ರಷ್ಯಾಗೆ ರಫ್ತು ಮಾಡಲಾದ ವಾಣಿಜ್ಯ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್‌ಗಳಿಂದ ಹಿಡಿದು ವಾಹನ ತಯಾರಿಕೆ, ವಿಮಾನದ ಭಾಗಗಳವರೆಗೆ ಎಲ್ಲವನ್ನೂ ಆಮದು ಮಾಡಿಕೊಳ್ಳುವುದನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ.

ಇದರ ಪರಿಣಾಮ ರಷ್ಯಾದ ಮಿಲಿಟರಿಯ ಆಧುನೀಕರಣ ಹಡಗುಗಳು ಮತ್ತು ವಿಮಾನಗಳ ತಯಾರಿ ಮತ್ತು ಬಾಹ್ಯಾಕಾಶ ಅನ್ವೇಷಣೆಯಲ್ಲಿ ರಷ್ಯಾದ ಮುನ್ನಡೆಯನ್ನು ತಡೆಯುವಂತಾಗಿದೆ. ಅಲ್ಲದೆ ರಷ್ಯಾದ ಆಟೋಮೊಬೈಲ್ ಕಂಪನಿಗಳ ಭವಿಷ್ಯದ ಯೋಜನೆಗಳ ಮೇಲೂ ಪರಿಣಾಮ ಬೀರುತ್ತದೆ.

ಏಕೆಂದರೆ ಉತ್ಪನ್ನದ ಭಾಗಗಳು ವಿದೇಶದಿಂದ ಲಭ್ಯವಿಲ್ಲದಿದ್ದರೆ, ಅಲ್ಲಿನ ಕಂಪನಿಗಳು ವ್ಯವಹಾರವನ್ನು ಮುಂದುವರಿಸಲು ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಲ್ಲದೆ, ಅನೇಕ ಆಟೋಮೊಬೈಲ್ ವಾಹನಗಳನ್ನು ರಷ್ಯಾದಲ್ಲಿ ತಯಾರಿಸಲಾಗುತ್ತಿದ್ದು, ಇಲ್ಲಿಂದಲೇ ಪ್ರಮುಖ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಹೀಗಾಗಿ ಬಿಡಿಭಾಗಗಳ ಪೂರೈಕೆ ಸರಪಳಿಯನ್ನು ಸಹ ಕಡಿತಗೊಳಿಸುವ ಸಾಧ್ಯತೆಯಿದೆ. ಇದರಿಂದ ರಷ್ಯಾ ವಿರುದ್ಧ ಅಮೆರಿಕ ಪರೋಕ್ಷವಾಗಿ ನಾನಾ ರೀತಿಯಲ್ಲಿ ದಾಳಿ ನಡೆಸಿದೆ. ಅಮೆರಿಕ ಮಾತ್ರವಲ್ಲ, ನ್ಯಾಟೋದ ಇತರೆ ಸದಸ್ಯ ರಾಷ್ಟ್ರಗಳು ರಷ್ಯಾದ ಮೇಲೆ ವಿವಿಧ ರೀತಿಯ ನಿರ್ಬಂಧಗಳನ್ನು ಹೇರುತ್ತಿವೆ.

ಜಾಗತಿಕ ಅರೆವಾಹಕಗಳ ಕೊರತೆಯಿಂದಾಗಿ ಹೊಸ ಕಾರು ಮಾರಾಟವು ಈಗಾಗಲೇ ಕಳೆದ ಒಂದು ವರ್ಷದಿಂದ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಟೋ ಸದಸ್ಯ ರಾಷ್ಟ್ರಗಳು ರಷ್ಯಾ ಮೇಲೆ ಆಮದು ನಿರ್ಬಂಧಗಳನ್ನು ವಿಧಿಸುವ ಮೂಲಕ ಪರೋಕ್ಷವಾಗಿ ವಿಶ್ವಾದ್ಯಂತ ಕಾರುಗಳ ಮಾರಾಟದ ಮೇಲೆ ಪರಿಣಾಮ ಬೀರಲಿದೆ.ಇದಲ್ಲದೆ, ಈ ಸಂಘರ್ಷದಿಂದ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹೊರೆಯು ಅಂತಿಮವಾಗಿ ಮುಗ್ಧ ಜನರ ಮೇಲೆ ಬೀಳುತ್ತದೆ. ಉಕ್ರೇನ್‌ನಲ್ಲಿ ವಾಹನ ಭಾಗಗಳ ತಯಾರಿಕೆ ವಿಳಂಬದಿಂದಾಗಿ ಜರ್ಮನಿಯಲ್ಲಿರುವ ಎರಡು ಕಾರ್ಖಾನೆಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಾಗಿ ವೋಕ್ಸ್ ವ್ಯಾಗನ್ ಕಂಪನಿ ತಿಳಿಸಿದೆ.


Click it and Unblock the Notifications