ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಐಷಾರಾಮಿ Audi Q3 ಕಾರೊಂದು ಫುಟ್ ಪಾತ್ ಮೇಲಿನ ಕಂಬಕ್ಕೆ ಡಿಕ್ಕಿಯಾಗಿ 7 ಜನರು ದುರ್ಮರಣಕ್ಕೀಡಾಗಿರುವ ಭೀಕರ ಅಪಘಾತ ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ಸಂಭವಿಸಿದೆ. ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಈ ಭೀಕರ ದುರಂತ ನಡೆದಿದೆ.

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಐಷಾರಾಮಿ Audi ಕಾರು ಡಿಕ್ಕಿ ಹೊಡೆದಿದೆ. ಘಟನೆ ವೇಳೆ ಕಾರಿನಲ್ಲಿದ್ದ ಮೂವರು ಮಹಿಳೆಯರು ನಾಲ್ಕು ಪುರುಷರು ಸೇರಿ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದಾರೆ. ಒಬ್ಬರು ಆಸ್ಪತ್ರೆಗೆ ದಾಖಲಿಸಿದ ವೇಳೆ ಮೃತಪಟ್ಟಿದ್ದಾರೆ. KA 03 MY 6666 ಈ ನಂಬರಿನ ಐಷಾರಾಮಿ ಕಾರು ಅಪಘಾತದ ರಭಸಕ್ಕೆ ಸಂಪೂರ್ಣವಾಗ್ಗಿ ನಜ್ಜುಗುಜ್ಜಾಗಿದೆ. ಕಾರಿನ ಮುಂದಿನ ಸೀಟ್‌ ತುಂಬಾ ರಕ್ತದ ಕಲೆಗಳಿದೆ. ಈ ಅಪಘಾತಕ್ಕೆ ಮತ್ತು ಅತೀ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಈ ಕಾರು ಫುಟ್‌ಪಾತ್‌ ಹತ್ತಿ 2 ಬೊಲ್ಲಾರ್ಡ್ಸ್‌ಗೆ ಕಾರು ಡಿಕ್ಕಿಯಾಗಿದೆ. ಬಳಿಕ ಪಕ್ಕದ ಕಟ್ಟಡದ ಗೋಡೆಗೂ ಗುದ್ದಿದೆ. ನಂತರ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಮೃತರೆಲ್ಲರೂ 25ರಿಂದ 30 ವರ್ಷ ವಯಸ್ಸಿನವರು. ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಸಂಚಾರಿ ಆಯುಕ್ತ ರವಿಕಾಂತೇಗೌಡ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬೀಕರ ಅಪಾಘತದ ರಭಸಕ್ಕೆ ಕಾರಿನಲ್ಲಿದ್ದ 7 ಜನರೂ ಮೃತಪಟ್ಟಿದ್ದಾರೆ. 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಗೆ ದಾಖಲಿಸಿದ ವೇಳೆ ಮೃತಪಟ್ಟಿದ್ದಾರೆ, ಅಪಘಾತಕ್ಕೆ ಅತಿ ವೇಗವೆ ಕಾರಣ, ನಿರ್ಲಕ್ಷ, ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ. ಪುಟಪಾತ್ ಹತ್ತಿ 2 ಬೊಲ್ಲಾರ್ಡ್ಸ್‌ಗೆ ಕಾರು ಡಿಕ್ಕಿಯಾಗಿದೆ ನಂತರ ಪಕ್ಕದ ಕಟ್ಟಡ ಗೋಡೆಗೆ ಗುದ್ದಿದೆ ಎಂದು ಹೇಳುದ್ದಾರೆ.

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಈ ಬಗ್ಗೆ ತನಿಖೆ ನಡೆಯುತ್ತಿದೆ. ಮಧ್ಯ ಸೇವಿಸಿದ್ದರಾ ಎಂಬ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ. ನಿರ್ಜನ ರಸ್ತೆಯಲ್ಲಿ ಓವರ್ ಸ್ಪೀಡ್ ಆಗಿ ಓಡಿಸಿದ್ದಾರೆ. ಕಾರಿನ ಮುಂದಿನ ಸೀಟ್ ನಲ್ಲಿ ಮೂವರು ಕುಳಿತಿದ್ದರು ಹಾಗೂ ಹಿಂಬದಿ ಸೀಟ್ ನಲ್ಲಿ ನಾಲ್ವಾರು ಕುಳುತಿದ್ದರು. ಕಾರಿನಲ್ಲಿದ್ದ 7 ಜನರಲ್ಲಿ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದರಿಂದ ಕಾರಿನಲ್ಲಿದ್ದ ಏರ್‌ಬ್ಯಾಗ್ ಸಹ ಓಪನ್ ಆಗಿಲ್ಲ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಮೃತರೆಲ್ಲರೂ 25ರಿಂದ 30 ವರ್ಷ ವಯಸ್ಸಿನವರು, ಮೃತರೆಲ್ಲರೂ ಕೂಡ ಸ್ನೇಹಿತರಗಿದ್ದಾರೆ. ಹೊಸೂರು ಮೂಲದ ಕರುಣಾಸಾಗರ್, ಪತ್ನಿ ಬಿಂದು(28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ(21), ಧನುಷಾ(21), ಹುಬ್ಬಳ್ಳಿಯ ರೋಹಿತ್, ಹರಿಯಾಣ ಮೂಲದ ಉತ್ಸವ್ ಮೃತ ದುರ್ದೈವಿಗಳಾಗಿದ್ದಾರೆ.

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಮೃತರಲ್ಲಿ ಕೆಲವರು ಕೋರಮಂಗಲದ ಬಳಿ ಇರುವ ಪಿಜಿಯಲ್ಲಿ ವಾಸವಿದ್ದರು. ಈ ಅಪಘಾತ ಪ್ರಕರಣ ಅಡುಗೋಡಿ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಇವರೆಲ್ಲ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು. ಪಿಜಿ ಹಾಗೂ ಮನೆಗಳನ್ನು ಬಾಡಿಗೆ ಪಡೆದು ವಾಸ್ತವ್ಯ ಹೂಡಿದ್ದರು. ವಿಕೇಂಡ್‌ ಹಿನ್ನೆಲೆ ಸುತ್ತಾಟಕ್ಕೆ ಹೋಗಿರುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಅಪಘಾತದಲ್ಲಿ ತಮಿಳುನಾಡಿನ ಹೊಸೂರು ಶಾಸಕ ವೈ.ಪ್ರಕಾಶ್​ ಮಗ ಕರುಣಾ ಸಾಗರ್ ಕೂಡ ಸಾವನ್ನಪ್ಪಿದ್ದಾನೆ. ರಾತ್ರಿ ಪಾರ್ಟಿ ಮುಗಿಸಿ ಬರುವಾಗ ಅಪಘಾತ ಸಂಭವಿಸಿರಬಹುದು ಎಂದು ಕೂಡ ಹೇಳಲಾಗುತ್ತಿದೆ

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್ ಅವರ ಏಕೈಕ ಪುತ್ರ ಕರುಣಾ ಸಾಗರ ಅವರು ಆಗಿದ್ದಾರೆ. ಈ ಕರುಣಾ ಸಾಗರ್ 28ರ ಹರೆಯದ ಯುವಕನಾಗಿದ್ದಾನೆ. ಇನ್ನು ಕೆಲ ತಿಂಗಳ ಹಿಂದೆಯಷ್ಟೇ ಹೊಸೂರು ಡಿಎಂಕೆ ಶಾಸಕ ವೈ.ಪ್ರಕಾಶ್ ಪತ್ನಿ ಮೃತಪಟ್ಟಿದ್ದರು. ಇದೀಗ ಅವರ ಏಕೈಕ ಮಗ ಕರುಣಾಸಾಗರ್ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಇನ್ನು ಅಪಘಾತದಲ್ಲಿ ಮೃತಪಟ್ಟ ಬಿಂದು, ಕುರಣಾಸಾಗರ್ ಮದುವೆಯಾಗಬೇಕಿದ್ದ ಅತ್ತೆ ಮಗಳು. ಕರುಣಾಸಾಗರ್ ಜೊತೆ ಬಿಂದು ಮದುವೆ ಮಾಡಲು ಚರ್ಚೆ ನಡೆದಿತ್ತು. ಬಿಂದು ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಪಘಾತದಲ್ಲಿ ಇಬ್ಬರು ಕೂಡ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ವರದಿಗಳ ಪ್ರಕಾರ, ಪ್ರೇಯಸಿ ಜೊತೆ ಬೆಂಗಳೂರು ಸುತ್ತಾಡುತ್ತಿದ್ದ ಕರುಣಾಸಾಗರ್ ಐಷಾರಾಮಿ ಕಾರನ್ನು ಸುಮಾರು 11.50ಕ್ಕೆ ಆಡುಗೋಡಿ ಪೊಲೀಸರು ತಪಾಸಣೆ ನಡೆಸಿದ್ದರು. ಈ ವೇಳೆ ಪೊಲೀಸರು ಕರುಣಾಸಾಗರ್ ಅವರಿಗೆ ವಾರ್ನಿಂಗ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಇದಾದ ಎರಡೇ ಎರಡು ಗಂಟೆಗಳ ಬಳಿಕ ಕೋರಮಂಗಲದ ಬಳಿ ಅಪಘಾತ ಸಂಭವಿಸಿದೆ.

ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಪಘಾತ: ಕಾರಿನಲ್ಲಿದ್ದ ಶಾಸಕನ ಪುತ್ರನ ಸಾವಿಗೆ ಕಾರಣವೇನು?

ಸೀಟ್ ಬೆಲ್ಟ್ ಧರಿಸಿರಲಿಲ್ಲ

ಕಾರಿನಲ್ಲಿದ್ದ 7 ಜನರಲ್ಲಿ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದರಿಂದ ಕಾರಿನಲ್ಲಿದ್ದ ಏರ್‌ಬ್ಯಾಗ್ ಸಹ ಓಪನ್ ಆಗಿಲ್ಲ. ಇದು ಅವರ ಸಾವಿಗೆ ಪ್ರಮುಖ ಕಾರಣವಾಗಿದೆ. ಸೀಟ್ ಬೆಲ್ಟ್ ಧರಿಸಿದರೆ ಮಾತ್ರ ಸೆನ್ಸರ್ ಮೂಲಕ ಏರ್‌ಬ್ಯಾಗ್ ಓಪನ್ ಆಗುತ್ತದೆ. ಆದರೆ ಅವರ ನಿರ್ಲಕ್ಷವೇ ಸಾವಿಗೆ ಪ್ರಮುಖ ಕಾರಣವಾಗಿದೆ. ಇನ್ನು ಈ ಅಪಘಾತ ಪ್ರಕರಣ ತನಿಖೆ ಹಂತದಲ್ಲಿದೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.

Most Read Articles

Kannada
English summary
Major road accident in bengaluru seven people dead details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X