ಫಾಸ್ಟ್ ಆಂಡ್ ಫ್ಯೂರಿಯಸ್ ಚಿತ್ರಕ್ಕಾಗಿ 300 ಕಾರುಗಳು ಪುಡಿಪುಡಿ
ಹಾಲಿವುಡ್ ಬಹುನಿರೀಕ್ಷಿತ 'ಫಾಸ್ಟ್ ಆಂಡ್ ಫ್ಯೂರಿಯಸ್' ಚಿತ್ರ ಸರಪಣಿಯ ಆರನೇ ಭಾಗವಾದ 'ಫಾಸ್ಟ್ ಆಂಡ್ ಫ್ಯೂರಿಯಸ್' 6 ಈಗಾಗಲೇ ವಿಶ್ವದ್ಯಾಂತ ತೆರೆಕಂಡಿದೆ. ಜಸ್ಟಿನ್ ಲಿನ್ ನಿರ್ದೇಶನದ ಪ್ರಸ್ತುತ ಚಿತ್ರ ನಿರ್ಮಾಣಕ್ಕಾಗಿ 300 ಕಾರುಗಳನ್ನು ನಜ್ಜುಗುಜ್ಜು ಮಾಡಲಾಗಿದೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ?
ಹೌದು, ಹಾಲಿವುಡ್ ಚಿತ್ರಗಳೆಂದರೆ ಹಾಗೇನೇ, ಅಲ್ಲಿನ ಕಥಾವಸ್ತುಗಳಿಗೆ ಸಮಾನವಾಗಿ ಚಿತ್ರಗಳನ್ನು ಆದಷ್ಟು ನೈಜತೆಯಿಂದ ಚಿತ್ರಿಕರಿಸುವ ಪ್ರಯತ್ನ ನಡೆಯುತ್ತಿರುತ್ತದೆ. ಇದೇ ದೃಷ್ಟಿಕೋನವನ್ನು ಹಾಯಿಸಿರುವ ನಿರ್ಮಾಪಕ ನೀಲ್ ಎಚ್. ಮೊರಿಟ್ಜ್ ತಂಡವು ಇಷ್ಟೊಂದು ದೊಡ್ಡ ಖರ್ಚು ಮಾಡಲು ನಿರ್ಧರಿಸಿದ್ದಾರೆ.
'ಫಾಸ್ಟ್ 6' ಅಥವಾ 'ಫ್ಯೂರಿಯಸ್ 6' ಎಂಬ ಹೆಸರಿನಿಂದಲೂ ಅರಿಯಲ್ಪಡುವ ಈ ಆಕ್ಷನ್ ಸಸ್ಫೆನ್ಸ್ ಚಲನಚಿತ್ರದಲ್ಲಿ ವಿನ್ ಡೀಸೆಲ್, ಪಾಲ್ ವಾಲ್ಕ್‌ನರ್, ಡೇಯ್ನ್ ಜಾನ್ಸನ್, ಜೋರ್ಡನಾ ಬ್ರೆಸ್ಟೆರ್, ಟೈರೆಸ್ ಗಿಬ್ಸನ್, ಮಿಚ್ಚಲ್ ರಾಟ್ರಿಗಸ್, ಸಂಗ್ ಕಾಂಗ್, ಕ್ರಿಸ್ ಬ್ರಿಡ್ಜ್, ಲ್ಯೂಕ್ ಇವಾನ್ಸ್, ಗಿನಾ ಗಾರನೊ ಹಾಗೂ ಜಾನ್ ಒರ್ಟಿಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕೇವಲ ಕಾರುಗಳನ್ನಷ್ಟೇ ಅಲ್ಲ ನಾಲ್ಕು ನೈಜ ಟ್ಯಾಂಕ್‌ಗಳನ್ನು ಸಹ ಚಿತ್ರ ನಿರ್ಮಾಣಕ್ಕಾಗಿ ಪುಡಿಗೈಯಲಾಗಿದೆ. ಸಾಮಾನ್ಯವಾಗಿ ನೈಜ ಟ್ರಕ್‌ಗಳು ಹೆಚ್ಚು ಭಾರವಾಗಿದ್ದರಿಂದ ಸಿನೆಮಾ ನಿರ್ಮಾಣಕ್ಕಾಗಿ ಬಳಸಲಾಗುತ್ತಿಲ್ಲ.

ಬರೋಬ್ಬರಿ 160 ಮಿಲಿಯನ್ ಅಮೆರಿಕನ್ ಡಾಲರ್ ಬಜೆಟ್‌ನಲ್ಲಿ ಫಾಸ್ಟ್ ಆಂಡ್ ಫ್ಯೂರಿಯಸ್ 6 ಚಿತ್ರ ನಿರ್ಮಿಸಲಾಗಿದೆ. ಇದು ಹಾಲಿವುಡ್‌ನ ಮತ್ತೊಂದು ಹೈ ಬಜೆಟ್ ಚಿತ್ರವೆನಿಸಿದೆ.

ಇದೀಗ ಫಾಸ್ಟ್ ಆಂಡ್ ಫ್ಯೂರಿಯಸ್ 6 ಚಿತ್ರ ನಿರ್ಮಾಣದ ವೇಳೆ ಪುಡಿಗೈಯಲಾದ ಕಾರುಗಳ ರೋಚಕ ಚಿತ್ರಣವನ್ನು ಫೋಟೊ ಫೀಚರ್ ಮೂಲಕ ಆನಂದಿಸಿರಿ. ವೀಡಿಯೋ ವೀಕ್ಷಣೆಗಾಗಿ ಅಂತಿಮ ಸ್ಲೈಡರ್ ಕ್ಲಿಕ್ಕಿಸಿರಿ

Fast and Furious 6

Fast and Furious 6

Fast and Furious 6

Fast and Furious 6

Fast and Furious 6

Fast and Furious 6

Fast and Furious 6

Fast and Furious 6

Fast and Furious 6

Fast and Furious 6

Fast and Furious 6
Fast and Furious 6
ವೀಡಿಯೋ ವೀಕ್ಷಿಸಿ
Fast and Furious 6
ವೀಡಿಯೋ ವೀಕ್ಷಿಸಿ


Click it and Unblock the Notifications








