ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಮಲಯಾಳಂ ಚಿತ್ರರಂಗದ ಖ್ಯಾತ ನಟ ಇಂದ್ರಜಿತ್ ಸುಕುಮಾರನ್ ಅವರು ಇತ್ತೀಚೆಗೆ ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕನ್ನು ಖರೀದಿಸಿದ್ದಾರೆ. ಈ ಟ್ರಯಂಫ್ ಟೈಗರ್ 900 ಬೈಕ್ ಅಡ್ವೆಂಚರ್ ಟೂರರ್ ಮಾದರಿಯಾಗಿದೆ.

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಇತರ ಸಿನಿ ಸೆಲಬ್ರಿಟಿಗಳಂತೆ ಇಂದ್ರಜಿತ್ ಸುಕುಮಾರನ್ ಕೂಡ ಐಷಾರಾಮಿ ಕಾರು ಮತ್ತು ಬೈಕ್ ಕ್ರೇಜ್ ಅನ್ನು ಹೆಚ್ಚು ಹೊಂದಿದ್ದಾರೆ. ಇವರ ಬಳಿ ಹಲವಾರು ದುಬಾರಿ ಮತ್ತು ಐಷಾರಾಮಿ ವಾಹನಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಇನ್ನು ಇವರು ಖರೀದಿಸಿದ ಟ್ರಯಂಫ್ ಟೈಗರ್ 900 ಬೈಕ್ ಜೊತೆಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ನಟ ಇಂದ್ರಜಿತ್ ಸುಕುಮಾರನ್ ಅವರು ಟ್ರಯಂಫ್ ಟೈಗರ್ 900 ಮಾದರಿಯ ಜಿಟಿ ರೂಪಂತರವನ್ನು ಖರೀದಿಸಿದ್ದಾರೆ. ಇದಲ್ಲದೇ ಇಂದ್ರಜಿತ್ ಸುಕುಮಾರನ್ ಅವರು ಬಳಿ ಐಷಾರಾಮಿ ಹಾರ್ಲೆ - ಡೇವಿಡ್ಸನ್ ಫ್ಯಾಟ್ ಬಾಯ್ ಬೈಕ್, ಬಿಎಂಡಬ್ಲ್ಯು 5 ಸೀರಿಸ್ ಮತ್ತು ವೊಲ್ವೊ 90ಆರ್ ಕಾರುಗಳನ್ನು ಹೊಂದಿದ್ದಾರೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಟ್ರಯಂಫ್ ಟೈಗರ್ 900 ಬೈಕ್ ಜಿಟಿ (ರಸ್ತೆ-ಕೇಂದ್ರಿತ), ರ‌್ಯಾಲಿ (ಆಫ್-ರೋಡ್) ಮತ್ತು ರೇಂಜ್-ಟಾಪಿಂಗ್ ರ‌್ಯಾಲಿ ಪ್ರೊ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ನಟ ಇಂದ್ರಜಿತ್ ಖರೀದಿಸಿದ ಟೈಗರ್ 900 ಬೈಕ್ ಜಿಟಿ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.70 ಲಕ್ಷಗಳಾಗಿದೆ.

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಮಲಯಾಳಂ ಚಿತ್ರರಂಗದ ಇನ್ನೊಬ್ಬ ಖ್ಯಾತ ನಟ ಜೊಜು ಜಾರ್ಜ್ ಅವರು ಕೂಡ ಇತ್ತೀಚೆಗೆ ಐಷಾರಾಮಿ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕನ್ನು ಖರೀದಿಸಿದ್ದಾರೆ. ಇವರು ಖರೀದಿಸಿದ ಐಷಾರಾಮಿ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.84 ಲಕ್ಷಗಳಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಇನ್ನು ಟ್ರಯಂಫ್ ಟೈಗರ್ 900 ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟ್ರಯಂಫ್ ಟೈಗರ್ 900 ಬಹುಬೇಡಿಕೆಯ ಮಾದರಿಯಾಗಿದೆ.

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಈ ಟೈಗರ್ 900 ಬೈಕ್ ಹೆಚ್ಚು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ. ಹೊಸ ಟೈಗರ್ 900 ಬೈಕಿನಲ್ಲಿ ಬೋಲ್ಡ್ - ಆನ್ ಸಬ್ ಫ್ರೇಮ್, ಹೊಸ ಅಲ್ಯೂಮಿನಿಯಂ ಸ್ವಿಂಗಾರ್ಮ್, ಹೊಸ ಎಲ್‍ಇ‍ಡಿ ಹೆಡ್‍‍ಲ್ಯಾಂಪ್, ಡಿ‍ಆರ್‍ಎಲ್ ಮತ್ತು ಟಿಎಫ್‍ಟಿ ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಈ ಹೊಸ ಬೈಕ್ ಟೈಗರ್ 800 ಮಾದರಿಗೆ ಹೋಲಿಸಿದರೆ ಹಗುರವಾಗಿದೆ. ಟೈಗರ್ 900 ಬೈಕ್ ಟೈಟರ್ ಫ್ಯೂಯಲ್ ಟ್ಯಾಂಕ್ ಹೊಂದಿರುವುದರಿಂದ ರೈಡಿಂಗ್ ವೇಳೆ ಇದು ಹೆಚ್ಚು ಸಹಕಾರಿಯಾಗಿದೆ.

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಇನ್ನು ಈ ಹೊಸ ಬೈಕ್ ಅಲ್ಯೂಮಿನಿಯಂ ಫಿನಿಶ್‍‍ಗೆ ಹೋಲಿಸಿದರೆ ಪ್ಲಾಸ್ಟಿಕ್‍‍ನಿಂದ ಮಾಡಲ್ಪಟ್ಟ ನವೀಕರಿಸಿದ ಫ್ರಂಟ್ ಫೆಂಡರ್, ವಿಂಡ್‍‍ಸ್ಕ್ರೀನ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿದೆ. ಟ್ರಯಂಫ್ ಟೈಗರ್ 800 ಬೈಕಿನ ಎಕ್ಸ್‌ಆರ್ ಮತ್ತು ಎಕ್ಸ್‌ಸಿ ರೂಪಾಂತರಗಳನ್ನು ಟ್ರೈಗರ್ 900ನಲ್ಲಿ ಜಿಟಿ ಮತ್ತು ರ್‍ಯಾಲಿ ಮಾದರಿಗಳೊಂದಿಗೆ ಬದಲಾಯಿಸಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಇನ್ನು ಈ ಜನಪ್ರಿಯ ಟ್ರಯಂಫ್ ಟೈಗರ್ 900 ಬೈಕಿನಲ್ಲಿ 888 ಸಿಸಿ ಇನ್ ಲೈನ್ 3 ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಬಿಎಸ್-6 ಮಾಲಿನ್ಯ ನಿಯಮದ ಅನುಸಾರವಾಗಿದೆ. ಇನ್ನು ಈ ಎಂಜಿನ್ 94 ಬಿ‍‍ಹೆಚ್‍‍ಪಿ ಪವರ್ ಮತ್ತು 87 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಜಿಟಿ ರೂಪಾಂತರದಲ್ಲಿ ಸಸ್ಪೆಂಷನ್ ಮತ್ತು ಬ್ರೇಕಿಂಗ್ ಅನ್ನು 180 ಎಂಎಂ ಫ್ರಂಟ್ ಮತ್ತು 170 ರೇರ್ ಬ್ರೇಕ್‍ನೊಂದಿಗೆ ಅಡ್ಜೆಂಸ್ಟ್ ಮಾಡಬಹುದಾದ ಮೊನೊಶಾಕ್ ಅನ್ನು ಹೊಂದಿದೆ. ಪ್ರೊ ಟ್ರೀಮ್ 9 ಹಂತದ ಡ್ಯಾಂಪಿಂಗ್ ಮತ್ತು 4 ಫ್ರೀಪಿಕ್ಸ್ ಪ್ರೀ ಲೋಡ್ ಸೆಟ್ಟಿಂಗ್‍‍ಗಳೊಂದಿಗೆ ಎಲೆಕ್ಟ್ರಾನಿಕ್ ಅಡ್ಜೆಂಸ್ಟ್ ಬಲ್ ಹೊಂದಿರುವ ಮೊನೊಶಾಕ್ ಹೊಂದಿದೆ.

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಈ ಬೈಕಿನಲ್ಲಿ ಮೆಟ್ಜೆಲರ್ ಟೂರನ್ಸ್ ನೆಕ್ಸ್ಟ್ ಟಯರ್‍‍ಗಳೊಂದಿಗೆ 19/17 ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಸ್ಟೈಲ್ಮಾ ಕ್ಯಾಲಿಪರ್‍‍ಗಳ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಈ ದುಬಾರಿ ಬೈಕಿನ ಬ್ರೇಕಿಂಗ್ ಸಿಸ್ಟಂ ಅತ್ಯುತ್ತಮವಗಿದೆ.

ಐಷಾರಾಮಿ ಟ್ರಯಂಫ್ ಟೈಗರ್ 900 ಬೈಕ್ ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಈ ಟ್ರಯಂಫ್ ಟೈಗರ್ 900 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಫ್ 850 ಜಿಎಸ್, ಹೊಸ ಹೋಂಡಾ ಆಫ್ರಿಕಾ ಟ್ವಿನ್ ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, February 3, 2021, 17:36 [IST]
English summary
Malayalam Actor Indrajith Sukumaran Bought New Triumph Tiger 900. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+