ಹೊಸ ಥಾರ್ ಎಸ್‌ಯುವಿ ಚಾಲನೆ ಮಾಡಿದ ನಟ ಪೃಥ್ವಿರಾಜ್

ಆಗಸ್ಟ್ 15ರಂದು ಮಹೀಂದ್ರಾ ಕಂಪನಿಯು ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಈ ಎಸ್‌ಯುವಿ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಹೊಸ ಮಹೀಂದ್ರಾ ಥಾರ್ ಅನಾವರಣಗೊಂಡ ನಂತರ ಜನ ಸಾಮಾನ್ಯರು ಮಾತ್ರವಲ್ಲದೆ ಪ್ರಸಿದ್ಧ ವ್ಯಕ್ತಿಗಳು ಸಹ ಈ ಎಸ್‌ಯುವಿ ಬಗ್ಗೆ ಮಾತನಾಡುತ್ತಿದ್ದಾರೆ.

ಹೊಸ ಥಾರ್ ಎಸ್‌ಯುವಿ ಚಾಲನೆ ಮಾಡಿದ ನಟ ಪೃಥ್ವಿರಾಜ್

ಕೆಲವು ದಿನಗಳ ಹಿಂದೆ ನಟಿ ಗುಲ್ ಪನಾಗ್ ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಚಾಲನೆ ಮಾಡುವುದಾಗಿ ಹೇಳಿದ್ದರು. ಈಗ ಮಲಯಾಳಂ ನಟ ಪೃಥ್ವಿರಾಜ್ ಈ ಎಸ್‌ಯುವಿಯನ್ನು ಚಾಲನೆ ಮಾಡಿದ್ದು, ಅದರ ಮಾಹಿತಿಯನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ಎಸ್‌ಯುವಿಯನ್ನು ಅತ್ಯಂತ ಐಷಾರಾಮಿ ಎಂದು ಬಣ್ಣಿಸಿರುವ ಅವರು ಬೆಲೆಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.

ಹೊಸ ಥಾರ್ ಎಸ್‌ಯುವಿ ಚಾಲನೆ ಮಾಡಿದ ನಟ ಪೃಥ್ವಿರಾಜ್

ಈ ಬಗ್ಗೆ ಮಾತನಾಡಿರುವ ಪೃಥ್ವಿರಾಜ್ ನಾನು ಇತ್ತೀಚಿಗೆ ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಚಾಲನೆ ಮಾಡಿದೆ. ಅದರ ವಿನ್ಯಾಸವು ಉತ್ತಮವಾಗಿದ್ದು, ಈ ಎಸ್‌ಯುವಿಯನ್ನು ದೊಡ್ಡ ಉತ್ಪನ್ನವೆಂದು ಹೇಳದೇ ಇರುವಂತಿಲ್ಲ. ಈ ಎಸ್‌ಯುವಿ ಕೈಗೆಟಕುವ ದರವನ್ನು ಹೊಂದುವ ವಿಶ್ವಾಸವಿದೆ ಎಂದು ಹೇಳಿದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹೊಸ ಥಾರ್ ಎಸ್‌ಯುವಿ ಚಾಲನೆ ಮಾಡಿದ ನಟ ಪೃಥ್ವಿರಾಜ್

ಅವರು ತಮ್ಮ ಟ್ವೀಟ್ ನಲ್ಲಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾರವರನ್ನು ಟ್ಯಾಗ್ ಮಾಡಿದ್ದಾರೆ. ನಟ ಪೃಥ್ವಿರಾಜ್ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಈ ಕಾರಣಕ್ಕೆ ಅವರು ಈ ಎಸ್‌ಯುವಿಯ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ.

ಹೊಸ ಥಾರ್ ಎಸ್‌ಯುವಿ ಚಾಲನೆ ಮಾಡಿದ ನಟ ಪೃಥ್ವಿರಾಜ್

ನಟ ಪೃಥ್ವಿರಾಜ್ ಹಲವಾರು ಕಾರುಗಳನ್ನು ಹೊಂದಿದ್ದಾರೆ. ಅವರು ಪೋರ್ಷೆ 911 ಕ್ಯಾಬ್ರಿಯೊ, ಬಿಎಂಡಬ್ಲ್ಯು ಝಡ್ 4, ಆಡಿ ಕ್ಯೂ 7 ಹಾಗೂ ಬ್ಲ್ಯಾಕ್ ಲ್ಯಾಂಬೊರ್ಗಿನಿ ಅವೆಂಟಡಾರ್ ಕಾರುಗಳನ್ನು ಹೊಂದಿದ್ದಾರೆ. ಪೃಥ್ವಿರಾಜ್ ತಮ್ಮ ಸೂಪರ್‌ಕಾರ್‌ಗಾಗಿ ರೂ.25 ಲಕ್ಷ ನೀಡಿ ತಮ್ಮಿಷ್ಟದ ನಂಬರ್ ಖರೀದಿಸಿದ್ದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೊಸ ಥಾರ್ ಎಸ್‌ಯುವಿ ಚಾಲನೆ ಮಾಡಿದ ನಟ ಪೃಥ್ವಿರಾಜ್

ನಟ ಪೃಥ್ವಿರಾಜ್ ಅವರ ಉತ್ಸಾಹವನ್ನು ನೋಡಿದರೆ ಅವರು ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಕೂಡ ಖರೀದಿಸಬಹುದು. ಥಾರ್ ಎಸ್‌ಯುವಿ ಬಿಡುಗಡೆಯಾದ ತಕ್ಷಣವೇ ಖರೀದಿಸುತ್ತಾರೆಯೇ ಎಂಬುದು ತಿಳಿದು ಬಂದಿಲ್ಲ.

ಹೊಸ ಥಾರ್ ಎಸ್‌ಯುವಿ ಚಾಲನೆ ಮಾಡಿದ ನಟ ಪೃಥ್ವಿರಾಜ್

ಹೊಸ ಮಹೀಂದ್ರಾ ಥಾರ್‌ನ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ. ಅಂದೇ ಈ ಎಸ್‌ಯುವಿಯ ಬುಕ್ಕಿಂಗ್ ಗಳನ್ನು ಆರಂಭಿಸಲಾಗುವುದು. ಹೊಸ ಥಾರ್ ಎಸ್‌ಯುವಿ ಎರಡು ಎಂಜಿನ್ ಹಾಗೂ ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ. ಈ ಎಸ್‌ಯುವಿಯಲ್ಲಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ನೀಡಲಾಗುವುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಹೊಸ ಥಾರ್ ಎಸ್‌ಯುವಿ ಚಾಲನೆ ಮಾಡಿದ ನಟ ಪೃಥ್ವಿರಾಜ್

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಸ್ವಾವಲಂಬಿ ಭಾರತದ ಅಡಿಯಲ್ಲಿ ಭಾರತದಲ್ಲಿಯೇ ಅಭಿವೃದ್ಧಿಪಡಿಸಿ ವಿನ್ಯಾಸಗೊಳಿಸಲಾಗಿದೆ. ಹೊಸ ಎಸ್‌ಯುವಿಯಲ್ಲಿ 2.0 ಲೀಟರಿನ ಪೆಟ್ರೋಲ್ ಹಾಗೂ 2.2 ಲೀಟರಿನ ಡೀಸೆಲ್ ಎಂಜಿನ್ ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
Malayalam actor Prithviraj drives new Mahindra Thar SUV. Read in Kannada.
Story first published: Friday, August 21, 2020, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X