ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅತ್ಯಂತ ಪ್ರೀಮಿಯಂ ಕಾರು ವೆಲ್‌ಫೈರ್ ಆಗಿದೆ. ಈ ಐಷಾರಾಮಿ ಟೊಯೊಟಾ ವೆಲ್‌ಫೈರ್(Toyota Vellfire) ಕಾರನ್ನು ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಅವರು ಇತ್ತೀಚೆಗೆ ಖರೀದಿಸಿದ್ದಾರೆ.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸೇರಿದಂತೆ ನಟ ಸುರೇಶ್ ಗೋಪಿ ಮತ್ತು ಫಹಾದ್ ಫಾಜಿಲ್ ಕೂಡ ಈ ಐಷಾರಾಮಿ ಟೊಯೊಟಾ ವೆಲ್‌ಫೈರ್ ಎಂಪಿವಿ ಮಾದರಿಯನ್ನು ಹೊಂದಿದ್ದಾರೆ. ಇದೇ ಸಾಲಿಗೆ ನಟ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಸೇರಿದ್ದಾರೆ. ಇವರು ಮಲಯಾಳಂ ಭಾಷೆಗೆ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ನನ್ನ ಕುಟುಂಬದಲ್ಲಿ ಹೊಸ ಅತಿಥಿ' ತಮ್ಮ ಹೊಸ ವಾಹನವನ್ನು ಮನೆಗೆ ತರಲು ಸಂತೋಷವಾಗಿದೆ ಎಂಬ ಶೀರ್ಷಿಕೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಕಾರಿನ ಚಿತ್ರದೊಂದಿಗೆ ಹಂಚಿಕೊಂಡಿದ್ದಾರೆ.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಮಲಯಾಳಂ ನಟ ವಿಜಯ್ ಬಾಬು ಖರೀದಿಸಿದ ಐಷಾರಾಮಿ ಟೊಯೊಟಾ ವೆಲ್‌ಫೈರ್ ಎಂಪಿವಿಗಾಗಿ KL 07 CX 2525 ಎಂಬ ಫ್ಯಾನ್ಸಿ ನಂಬರ್ ಅನ್ನು ಸಹ ಪಡೆದುಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಮಹೀಂದ್ರಾದ ಲೈಫ್‌ಸ್ಟೈಲ್ ಎಸ್‌ಯುವಿಯಾದ ಥಾರ್ ಅನ್ನು ನಟ ವಿಜಯ್ ಬಾಬು ಅವರು ಖರೀದಿಸಿದ್ದರು.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಟೊಯೊಟಾ ವೆಲ್‌ಫೈರ್ ಎಂಪಿವಿಯ ಬೆಲೆಯು ಕೇರಳದ ಎಕ್ಸ್ ಶೋರೂಂ ಪ್ರಕಾರ ರೂ.89.90 ಲಕ್ಷಗಳಾಗಿದೆ. ಟೊಯೊಟಾ ವೆಲ್‌ಫೈರ್ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರಿಗೆ ಪೈಪೋಟಿ ನೀಡುತ್ತದೆ. ಟೊಯೊಟಾ ವೆಲ್‌ಫೈರ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನವನ್ನು ಒಳಗೊಂಡಿರುವ ವೆಲ್‌ಫೈರ್ ಯೋಗ್ಯ ದರದಲ್ಲಿ ಆಕರ್ಷಿಸುತ್ತಿದೆ. ಈ ಐಷಾರಾಮಿ ಟೊಯೊಟಾ ವೆಲ್‌ಫೈರ್ ಮಾದರಿಯು ಎಕ್ಸಿಕ್ಯುಟಿವ್ ಲೌಂಜ್ ಎಂಬ ಒಂದೇ ರೂಪಾಂತರದಲ್ಲಿ ಲಭ್ಯವಿದೆ. ವೆಲ್‌ಫೈರ್‌ನ ಒಳಭಾಗದಲ್ಲಿ ಎರಡನೇ ಸಾಲಿನಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡುವ ವಿಐಪಿ ಸೀಟುಗಳನು ಒಳಗೊಂಡಿವೆ.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಇನ್ನು ಇದರಲ್ಲಿ ಕೂಲಿಂಗ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಲೆಗ್ ರೆಸ್ಟ್ ಮತ್ತು ರೆಕ್ಲೈನಬಲ್ ಬ್ಯಾಕ್‌ರೆಸ್ಟ್ ಮತ್ತು ಮೆಮೊರಿ ಫಂಕ್ಷನ್ ಅನ್ನು ಒಳಗೊಂಡಿದೆ. ಈ ಐಷಾರಾಮಿ ಎಂಪಿವಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಮನರಂಜನಾ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಇನ್ನು ಈ ಎಂಪಿವಿ ಮಾದರಿಯಲ್ಲಿ ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, ಎರಡನೇ ಮತ್ತು ಮೂರನೇ ಸಾಲುಗಳಿಗೆ ಸನ್ ಬ್ಲೈಂಡ್ಸ್, 16-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮೂರು ಹಂತಹ ಆಟೋ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಇದರೊಂದಿಗೆ ಎಂಪಿವಿಯಲ್ಲಿ ಚಾಲಿತ ಸ್ಲೈಡಿಂಗ್ ಡೋರುಗಳನ್ನು ಹೊಂದಿವೆ. ಇನ್ನು ಸುರಕ್ಷತೆಗಾಗಿ ಈ ಐಷಾರಾಮಿ ವೆಲ್‌ಫೈರ್‌ ಕಾರಿನಲ್ಲಿ 7 ಏರ್‌ಬ್ಯಾಗ್‌ಗಳು, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿವೆ.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಇದರ ಜೊತೆಗೆ ಎಬಿಎಸ್ ವಿಥ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಹೋಲ್ಡ್, ಎ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹೀಗೆ ಇನ್ನಷ್ಟು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿವೆ.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಈ ಟೊಯೊಟಾ ವೆಲ್‌ಫೈರ್‌ನಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ, ಇದು ಎಂಜಿನ್ ಒಟ್ಟಾಗಿ 198 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) 2021ರ ಅಕ್ಟೋಬರ್ ತಿಂಗಳಿನ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ಈ ವರದಿಗಳ ಪ್ರಕಾರ, ಕಳೆದ ತಿಂಗಳು ಟೊಯೊಟಾ ಕಂಪನಿಯು 12,440 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 12,373 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.1 ರಷ್ಟು ಹೆಚ್ಚಳವಾಗಿದೆ. ಇನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 9,284 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.34 ರಷ್ಟು ಮಾಸಿಕ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಮಾಸಿಕ ಕಾರು ಮಾರಾಟದಲ್ಲಿ ಟೊಯೊಟಾ ಕಂಪನಿಯು ಭರ್ಜರಿ ಯಶಸ್ವಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ತಿಂಗಳು ಟೊಯೊಟಾ ಸರಣಿಯಲ್ಲಿ ಗ್ಲಾಂಝಾ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ನಂತರದ ಸ್ಥಾನಗಳನ್ನು ಇನೋವಾ ಕ್ರಿಸ್ಟಾ ಮತ್ತು ಅರ್ಬಮ್ ಕ್ರೂಸರ್ ಮಾದರಿಗಳು ಪಡೆದುಕೊಂಡಿದೆ.

ದುಬಾರಿ ಬೆಲೆಯ Toyota Vellfire ಕಾರು ಖರೀದಿಸಿದ ನಟ ವಿಜಯ್ ಬಾಬು

2021ರ ಕ್ಯಾಲೆಂಡರ್ ವರ್ಷದಲ್ಲಿ, ಟೊಯೊಟಾ ಒಟ್ಟು 1,06,993 ಯುನಿಟ್‌ಗಳನ್ನು (ಜನವರಿಯಿಂದ ಅಕ್ಟೋಬರ್ 2021 ರ ಅವಧಿ) ಮಾರಾಟ ಗಳಿಸುವಲ್ಲಿ ಯಶಸ್ವಿಯಾಗಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 60,116 ಯುನಿಟ್‌ಗಗಳಿಗೆ ಹೋಲಿಸಿದರೆ ಟೊಯೊಟಾ ಕಂಪನಿಯು ಶೇಕಡಾ 78 ರಷ್ಟು. ಬೆಳವಣಿಗೆಯನ್ನು ಗಳಿಸಿದೆ. ಇನ್ನು ಕಳೆದ ತಿಂಗಳ ಮಾರಾಟದಲ್ಲಿ ಟೊಯೊಟಾ ವೆಲ್‌ಫೈರ್‌ ಎಂಪಿವಿಯು ಕೂಡ ಕೊಡುಗೆಯನ್ನು ನೀಡಿದೆ.

Most Read Articles

Kannada
English summary
Malayalam actor producer vijay babu owned new toyota velfire luxury mpv details
Story first published: Monday, November 8, 2021, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X