ಐಷಾರಾಮಿ ಬಿಎಂಡಬ್ಲ್ಯು ಕಾರು ಖರೀದಿಸಿದ ಸೂಪರ್‌ಹೀರೋ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಟೊವಿನೋ ಥಾಮಸ್ ( Tovino Thomas) ಮಲಯಾಳಂ ಚಿತ್ರರಂಗದ ಜನಪ್ರಿಯ ನಟ. ಇವರು ಹಲವಾರು ಮಲಯಾಳಂ ಚಿತ್ರಗಳ ಜೊತೆಗೆ ತಮಿಳು ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ. ಟೊವಿನೋ ಪ್ರಮುಖ ಪಾತ್ರದಲ್ಲಿ ನಟಿಸಿದ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ಒಂದಾದ 'ಮಿನ್ನಲ್ ಮುರಳಿ' ಯಲ್ಲಿ ಸೂಪರ್ ಹೀರೋ ಪಾತ್ರದ ಮೂಲಕ ಮಿಂಚಿದ್ದರು. ಇನ್ನು ಜೂಡ್ ಆಂಥನಿ ಜೋಸೆಫ್ ನಿರ್ದೇಶನದ ಟೊವಿನೋ ಥಾಮಸ್ ನಟನೆಯ 2018 ಚಿತ್ರವು ಕಳೆದ ವರ್ಷ ಅತಿದೊಡ್ಡ ಪ್ಯಾನ್-ಇಂಡಿಯಾ ಹಿಟ್‌ಗಳಲ್ಲಿ ಒಂದಾಗಿದೆ. 2018 ಚಿತ್ರ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ರೂ 200 ಕೋಟಿ ಗಳಿಸಿತು.
2012ರಲ್ಲಿ ತೆರೆಕಂಡ 'ಪ್ರಭುವಿಂಟೆ ಮಕ್ಕಳ್' ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಟೊವಿನೋ ಥಾಮಸ್, ಆನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಟೊವಿನೋ ಥಾಮಸ್ ಅವರು ಜೂನಿಯರ್ ಕಲಾವಿದರಾಗಿ ಚಿತ್ರರಂಗದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಅವರ ಕಠಿಣ ಪರಿಶ್ರಮದಿಂದಾಗಿ, ಅವರು ಈಗ ಉದ್ಯಮದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಈ ನಟನಿಗೆ ಹೆಚ್ಚು ಕಾರುಗಳ ಕ್ರೇಜ್ ಅನ್ನು ಹೊಂದಿದೆ.

ಇತ್ತೀಚಿಗೆ ಟೊವಿನೋ ಕೂಡ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇದೀಗ ನಟ ಟೊವಿನೋ ಥಾಮಸ್ ಅವರು ಹೊಸ ಬಿಎಂಡಬ್ಲ್ಯು ಎಕ್ಸ್‌ಎಂ (BMW XM) ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್‌ಎಂ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.60 ಕೋಟಿಯಾಗಿದ್ದು, ಇದರ ಆನ್ ರೋಡ್ ಬೆಲೆಯು ರೂ.3.26 ಕೋಟಿಯಾಗಿದೆ.
ನಟ ಟೊವಿನೋ ಥಾಮಸ್ 8 ವರ್ಷಗಳಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಇನ್ನು ಇತರ ಜನಪ್ರಿಯ ನಟರಂತೆ ಟೊವಿನೋ ಕೂಡ ತಮ್ಮ ಗ್ಯಾರೇಜ್‌ನಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್‌ಎಂ ಜೊತೆ ಆಡಿ ಕ್ಯೂ7, ಬಿಎಂಡಬ್ಲ್ಯು 7-ಸೀರಿಸ್ ಮತ್ತು ಮಿನಿ ಕೂಪರ್ ಸೈಡ್‌ವಾಕ್ ಎಡಿಷನ್ ಎಂಬ ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ.

ನಟ ಟೊವಿನೋ ಥಾಮಸ್ ಖರೀದಿಸಿದ ಹೊಸ ಬಿಎಂಡಬ್ಲ್ಯು ಎಕ್ಸ್‌ಎಂ ಕಾರಿನ ಬಗ್ಗೆ ಹೇಳುವುದಾದರೆ, ಬಿಎಂಡಬ್ಲ್ಯು ಎಕ್ಸ್ಎಂ 1970ರ ದಶಕದ ಕೊನೆಯಲ್ಲಿ ಮತ್ತು 80ರ ದಶಕದ ಆರಂಭದಲ್ಲಿ ನಿರ್ಮಿಸಲಾದ M1 ಸೂಪರ್‌ಕಾರ್‌ನ ನಂತರ ಜರ್ಮನ್ ಐಷಾರಾಮಿ ಕಾರು ತಯಾರಕರ ಮೋಟಾರ್‌ಸ್ಪೋರ್ಟ್ಸ್ (M) ವಿಭಾಗದ ಮೊದಲ ಬೆಸ್ಪೋಕ್ ಕಾರ್ ಆಗಿದೆ.
ಈ ಬಿಎಂಡಬ್ಲ್ಯು ಎಕ್ಸ್ಎಂ ಅನ್ನು ಪ್ರಸ್ತುತ 50e ಟ್ರಿಮ್ ಮಟ್ಟದಲ್ಲಿ ಮಾತ್ರ ನೀಡಲಾಗುತ್ತದೆ ಮತ್ತು ಬಿಎಂಡಬ್ಲ್ಯು ಪ್ರಸ್ತುತ ಎಸ್‍ಯುವಿಯ ಹೆಚ್ಚು ಶಕ್ತಿಯುತ ಆವೃತ್ತಿಯನ್ನು 'ಲೇಬಲ್ ರೆಡ್' ಎಂದು ಕರೆಯಲಾಗುತ್ತಿದ್ದು ಅದನ್ನು ಮುಂದಿನ ದಿನಗಳಲ್ಲಿ ಜಗತ್ತಿಗೆ ಸರಿಯಾಗಿ ಪರಿಚಯಿಸಲಾಗುವುದು. ಈ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಕಾರಿನಲ್ಲಿ S68 ಟ್ವಿನ್ ಟರ್ಬೋಚಾರ್ಜ್ಡ್ 4.4-ಲೀಟರ್ V8 ಇಂಜಿನ್ ಮತ್ತು ಸಿಂಗಲ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ.
ಈ S68 ಟ್ವಿನ್ ಟರ್ಬೋಚಾರ್ಜ್ಡ್ ಎಂಜಿನ್ ಸಂಯೋಜಿತವಾಗಿ 644 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಸಹಾಯದಿಂದ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಈ ಬಿಎಂಡಬ್ಲ್ಯು ಎಕ್ಸ್ಎಂ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್ಎಂ ಹೈಬ್ರಿಡ್ ಎಸ್‍ಯುವಿಯಲ್ಲಿ 4.3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.
ಈ ಕಾರು 2,750 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಐಷಾರಾಮಿ ಕಾರು 250 ಕಿ.ಮೀ ಟಾಪ್ ಸ್ಪೀಡ್'ಗೆ ಸೀಮಿತವಾಗಿದೆ. ಇದನ್ನು M ಡ್ರೈವರ್ಸ್ ಪ್ಯಾಕೇಜ್‌ನೊಂದಿಗೆ 270 ಕಿ.ಮೀ.ಗೆ ಹೆಚ್ಚಿಸಬಹುದು. ಇದು ಹೈಬ್ರಿಡ್ ಆಗಿರುವುದರಿಂದ, 9.5kWh ಬ್ಯಾಟರಿ ಪ್ಯಾಕ್‌ನಿಂದ ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ 88 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಈ ಐಷಾರಾಮಿ ಕಾರು 7.4kW ಚಾರ್ಜರ್‌ನೊಂದಿಗೆ ಬ್ಯಾಟರಿ ಪ್ಯಾಕ್‌ಗೆ ಚಾರ್ಜ್ ಮಾಡುವ ಸಮಯ 4.25 ಗಂಟೆಗಳಾಗಿದೆ.
ಈ ಬಿಎಂಡಬ್ಲ್ಯು ಎಕ್ಸ್ಎಂ ಕೇವಲ ಎಲೆಕ್ಟ್ರಿಕ್ ಮೋಡ್‌ನಲ್ಲಿ ಗರಿಷ್ಠ ವೇಗವು ಕೇವಲ 140 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ. ಈ ಬಿಎಂಡಬ್ಲ್ಯು ಎಕ್ಸ್ಎಂ ಕಾರು 5,110 ಎಂಎಂ ಉದ್ದ, 2,210 ಎಂಎಂ ಅಗಲ ಮತ್ತು 1,755 ಎಂಎಂ ಎತ್ತರವನ್ನು ಹೊಂದಿದೆ. ಈ ಕಾರಿನ ವೀಲ್‌ಬೇಸ್ 3,105 ಎಂಎಂ ಅನ್ನು ಹೊಂದಿದೆ. ಇನ್ನು ಈ ಕಾರಿನ ಬೂಟ್ ಸ್ಪೇಸ್ 527-ಲೀಟರ್ ಆಗಿದೆ.


Click it and Unblock the Notifications








