ಬಲದ ಜೊತೆಗೆ ಭದ್ರತೆ: ಟಾಟಾದ ಸಾಮಾನ್ಯ ಕಾರಿಗೆ ಮನಸೋತ ಸುಂದರ ನಟಿ!
ಮಳಯಾಲಂ ಟಿವಿ ನಿರೂಪಕಿಯಾಗಿ ಪ್ರೇಕ್ಷಕರ ಹೃದಯವನ್ನು ಗೆದ್ದ 'ಜ್ಯುವೆಲ್ ಮೇರಿ', 2015 ರಲ್ಲಿ ಮಾಲಿವುಡ್ ಟಾಪ್ ಹೀರೋ ಮಮ್ಮುಟ್ಟಿ ಅವರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು. ಸದ್ಯ ಇವರು ಮಳಯಾಲಂನಲ್ಲಿ ಉತ್ತಮ ನಟಿಯಗಿ ಗುರ್ತಿಸಿಕೊಂಡಿದ್ದಾರೆ. ಇವರ ರೇಂಜ್‌ಗೆ ದುಬಾರಿ ಕಾರುಗಳನ್ನು ಖರೀದಿಸುವ ಸಾಮರ್ಥ್ಯವಿದ್ದರು ಸಾಮಾನ್ಯ ಟಾಟಾ ನೆಕ್ಸಾನ್ ಖರೀದಿಸಿದ್ದಾರೆ.
ನಟಿ ಜ್ಯುವೆಲ್ ಮೇರಿ ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್‌ನ ಕ್ರಿಯೇಟಿವ್ ಪ್ಲಸ್ ಆಟೋಮ್ಯಾಟಿಕ್ ವೇರಿಯೆಂಟ್ ಅನ್ನು ಖರೀದಿಸಿದ್ದಾರೆ. ಇದರ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.13 ಲಕ್ಷಗಳಾಗಿದೆ. ಇನ್ನು ಸುರಕ್ಷತೆಯ ವಿಷಯದಲ್ಲಿ ಉತ್ತಮ 5-ಸ್ಟಾರ್ ರೇಟಿಂಗ್ ಪಡೆದಿದೆ. ನೆಕ್ಸಾನ್ ಡಾರ್ಕ್ ಎಡಿಷನ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳೊಂದಿಗೆ ಕ್ರಿಯೇಟಿವ್ ಟ್ರಿಮ್ ಮಟ್ಟದಿಂದ ಒಟ್ಟು 14 ರೂಪಾಂತರಗಳಲ್ಲಿ ನೀಡುತ್ತಿದೆ. ಈ 'ಡಾರ್ಕ್ ಎಡಿಷನ್' ಒಳಭಾಗ ಮತ್ತು ಹೊರಭಾಗದಲ್ಲಿ ಸಂಪೂರ್ಣ ಬ್ಲಾಕ್ ಥೀಮ್‌ನಲ್ಲಿ ಬರುವುದರಿಂದ ಟಾಟಾ ಶ್ರೇಣಿಯಲ್ಲೇ ಈ ವಿಶೇಷ ಆವೃತ್ತಿಯು ವಿಶೇಷ ಅಭಿಮಾನಿ ಬಳಗವನ್ನು ಹೊಂದಿದೆ.

ಇಂಟೀರಿಯರ್‌ನಲ್ಲಿ ಸಂಪೂರ್ಣ ಬ್ಲಾಕ್ ಕ್ಯಾಬಿನ್‌ನೊಂದಿಗೆ ಬಾಹ್ಯ ಥೀಮ್ ಅನ್ನು ಪ್ರತಿಬಿಂಬಿಸುತ್ತದೆ. ಬ್ಲಾಕ್ ಡ್ಯಾಶ್‌ಬೋರ್ಡ್, ಶೈನಿಂಗ್ ಬ್ಲಾಕ್ ಸೆಂಟರ್ ಕನ್ಸೋಲ್ ಮತ್ತು ಬ್ಲಾಕ್ ಲೆಥೆರೆಟ್ ಅಪ್ಹೋಲ್ಸ್ಟರಿಯನ್ನು ಒಳಗೊಂಡಿದೆ. ಸ್ಟೀರಿಂಗ್ ವೀಲ್, ಗೇರ್ ನಾಬ್ ಮತ್ತು ಒಳಗಿನ ಬಾಗಿಲಿನ ಹ್ಯಾಂಡಲ್‌ಗಳು ಕಪ್ಪು ಬಣ್ಣವನ್ನು ಪಡೆದಿವೆ. ಹೆಡ್‌ರೆಸ್ಟ್‌ಗಳಲ್ಲಿ "#ಡಾರ್ಕ್" ಬ್ರ್ಯಾಂಡಿಂಗ್ ಅನ್ನು ನೀಡಲಾಗಿದೆ.
ಸುರಕ್ಷತೆ & ಫೀಚರ್ಸ್: ನೆಕ್ಸಾನ್, ಆರು ಏರ್‌ಬ್ಯಾಗ್‌ಗಳೊಂದಿಗೆ ಉನ್ನತ ಮಟ್ಟದ ಸುರಕ್ಷತಾ ಸಾಧನಗಳನ್ನು ಹೊಂದಿದೆ. EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಒಳಗೊಂಡಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಇದರ 14 ರೂಪಾಂತರಗಳಲ್ಲಿ ಎಂಟು ಪೆಟ್ರೋಲ್ ಡಾರ್ಕ್ ಎಡಿಷನ್ ಆಯ್ಕೆಗಳು ಮತ್ತು ಆರು ಡೀಸೆಲ್ ಡಾರ್ಕ್ ಎಡಿಷನ್ ಆಯ್ಕೆಗಳಿವೆ. ಇದರಲ್ಲಿ ಪೆಟ್ರೋಲ್ ಮ್ಯಾನುವಲ್, ಪೆಟ್ರೋಲ್ ಎಎಂಟಿ, ಪೆಟ್ರೋಲ್ ಡಿಸಿಎ, ಡೀಸೆಲ್ ಮ್ಯಾನುವಲ್, ಡೀಸೆಲ್ ಎಎಂಟಿ ಡಾರ್ಕ್ ಎಡಿಷನ್ ಮುಂತಾದ ಹಲವಾರು ಕಾನ್ಫಿಗರೇಶನ್ ಗಳನ್ನು ಒಳಗೊಂಡಿದೆ. ಪವರ್ ಟ್ರೇನ್ ವಿಷಯಕ್ಕೆ ಬಂದರೆ, 1.2 - ಲೀಟರ್ 3 - ಸಿಲಿಂಡರ್ ಟರ್ಬೊ ಪೆಟ್ರೋಲ್ ಅಥವಾ 1.5 - ಲೀಟರ್ 4 - ಸಿಲಿಂಡರ್ ಟರ್ಬೊ ಡೀಸೆಲ್ ನಲ್ಲಿ ಸಿಗಲಿದೆ. ಈ ಕಾರು ಬಿಡುಗಡೆಯಾದಾಗಿನಿಂದ ಟಾಟಾಗೆ ಬೆಸ್ಟ್ ಸೆಲ್ಲರ್ ಆಗಿ ಉಳಿದಿದೆ.
ಸಾಮಾನ್ಯ ಟಾಟಾ ನೆಕ್ಸಾನ್ ಅದ್ಬುತ ಎಸ್‌ಯುವಿ ಆದ್ರೆ, ನಮಗೆ ಇನ್ನೂ ಹೊಸತನ ಹಾಗೂ ರಸ್ತೆಯಲ್ಲಿ ಎಲ್ಲರ ಗಮನ ಸೆಳೆಯುವಂತಹ ನೆಕ್ಸಾನ್ ಬೇಕು ಎನ್ನುವವರಿಗೆ ಈ ಡಾರ್ಕ್ ಎಡಿಷನ್ ಆವೃತ್ತಿ ಉತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ಅದರ ಸಂಪೂರ್ಣ ಡಾರ್ಕ್ ಬ್ಲಾಕ್ ಬಾಡಿ ಮತ್ತು ಕ್ಯಾಬಿನ್ ಥೀಮ್‌ಗಳೊಂದಿಗೆ ಹೊಸ ಟಾಟಾ ನೆಕ್ಸಾನ್ ಇವಿ ಪ್ರೀಮಿಯಂ ಆಗಿ ಕಾಣುತ್ತದೆ.
ಟಾಟಾ ಮೋಟಾರ್ಸ್ ಈ ಡಾರ್ಕ್ ಎಡಿಷನ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲೂ ನೀಡುತ್ತಿದ್ದು, 40.5kWh ಬ್ಯಾಟರಿ ಪ್ಯಾಕ್‌ನೊಂದಿಗೆ ಒಮ್ಮೆ ಚಾರ್ಜ್ ಮಾಡಿದರೆ 465km ರೇಂಜ್ ನೀಡುತ್ತದೆ. ಇದರ ಮೋಟಾರ್ 143bhp ಪವರ್ ಮತ್ತು 214Nm ಟಾರ್ಕ್ ಅನ್ನು ಹೊರಹಾಕುತ್ತದೆ. ಒಟ್ಟಾರೆ ನೆಕ್ಸಾನ್‌ನಲ್ಲಿ ಹೊಸತನ ಬಯಸುವವರಿಗೆ ಈ ಡಾರ್ಕ್ ಎಡಿಷನ್ ಉತ್ತಮ ಆಯ್ಕೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications