ಇಳಿ ವಯಸ್ಸಿನಲ್ಲೂ ಪತ್ನಿ ಜೊತೆ ಸುತ್ತಾಡಲು ಮಲೇಷ್ಯಾ ಸುಲ್ತಾನನಿಗೆ ಚಿನ್ನದ ವಿಮಾನ
ಆಸ್ಟ್ರೇಲಿಯಾದ ಪರ್ತ್ ವಿಮಾನದ ನಿಲ್ದಾಣದ ಮೇಲ್ಗೆಡೆಯಾಗಿ ಚಿನ್ನದ ವಿಮಾನ ಹಾರಾಡುವುದನ್ನು ನೋಡಿದ ಸ್ಥಳೀಯ ನಿವಾಸಿಗಳಲ್ಲಿ ಅಚ್ಚರಿ ಕಾದಿತ್ತು. ವಿಶೇಷ ಏನೆಂಬುದನ್ನು ಪರೀಶೀಲಿಸಿದಾಗ ಇದು ಮಲೇಷ್ಯಾದ ಸುಲ್ತಾನ ಇಬ್ರಾಹಿಂ ಇಸ್ಮಾಯಿಲ್ ಗೆ ಎಂಬವರಿಗೆ ಸೇರಿದ್ದಾಗಿತ್ತು.
ಮಲೇಷ್ಯಾದ ಜೋಹರ್ ಪ್ರಾಂತ್ಯದ ಸುಲ್ತಾನನಾಗಿರುವ ಇಬ್ರಾಹಿಂ ಇಸ್ಮಾಯಿಲ್, ತಮ್ಮ ಪತ್ನಿ ರಾಜಾ ಝರಿತ್ ಸೋಫಿಯಾ ಜೊತೆ ಪಶ್ಚಿಮ ಆಸ್ಟ್ರೇಲಿಯಾದತ್ತ ಪ್ರಯಾಣ ಬೆಳೆಸಿದ್ದರು. ಇದು ಮಾಧ್ಯಮಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

57ರ ಇಳಿ ವಯಸ್ಸಿನಲ್ಲೂ ಪತ್ನಿ ಜೊತೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲು ಕಾರಣವೊಂದಿದೆ. ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಐಷಾರಾಮಿ ಹಾಲಿಡೇ ಗೃಹವೊಂದನ್ನು ಮಲೇಷ್ಯಾ ಸುಲ್ತಾನ ನಿರ್ಮಿಸುತ್ತಿದ್ದಾರೆ.

ಪಶ್ಚಿಮ ಆಸ್ಟ್ರೇಲಿಯಾದಲ್ಲಿ ತಮ್ಮನ್ನು ಯಾರಿಂದಲೂ ಗುರುತಿಸಲು ಸಾಧ್ಯವಿಲ್ಲ. ಹಾಗಾಗಿ ಪತ್ನಿ ಜೊತೆ ನಿಶ್ಚಿಂತತೆಯಿಂದ ಆನಂದಿಸಬಹುದಾಗಿದೆ ಎಂದು ಮಲೇಷ್ಯಾ ಸುಲ್ತಾನ ವಿವರಿಸುತ್ತಾರೆ.

ಮಲೇಷ್ಯಾ ಸುಲ್ತಾನ ತಮ್ಮ ವೈಯಕ್ತಿಕ ಬಳಕೆಗಾಗಿ ವಿಶ್ವ ಪ್ರಸಿದ್ಧ ಬೋಯಿಂಗ್ 737 ವಿಮಾನವನ್ನು ವಿಶಿಷ್ಟವಾಗಿ ಮಾರ್ಪಾಡುಗೊಳಿಸಿದ್ದಾರೆ. ಚಿನ್ನದ ಲೇಪನವು ಇದರಲ್ಲಿ ಪ್ರಮುಖವಾಗಿದೆ.

ಬಲ್ಲ ಮೂಲಗಳ ಪ್ರಕಾರ ಮಲೇಷ್ಯಾ ಸುಲ್ತಾನನ ವಿಮಾನವು ಸರಿ ಸುಮಾರು 670 ಕೋಟಿ ರುಪಾಯಿಗಳಷ್ಟು ಬೆಲೆ ಬಾಳುತ್ತದೆ.

ಇದರಲ್ಲಿ ಭೋಜನಾಲಯ, ಬೆಡ್ ರೂಂ, ಸ್ನಾನ ಗೃಹ, ಅಡುಗೆ ಕೋಣೆ, ಲಿವಿಂಗ್ ಕೋಣೆ, ವಿಶ್ರಾಂತಿ ಕೊಠಡಿ ಹೀಗೆ ಎಲ್ಲ ವಿವಿಧ ಐಷಾರಾಮಿ ವ್ಯವಸ್ಥೆಗಳನ್ನು ಒದಗಿಸಿಕೊಡಲಾಗಿದೆ.

ಮಲೇಷ್ಯಾ ಸುಲ್ತಾನನ ವಿಮಾನ ಮಾರ್ಪಾಡುಗೊಳಿಸಲು ಎರಡು ವರ್ಷಗಳಷ್ಟು ಸಮಯ ತಗುಲಿದೆ. ಇದನ್ನು ರಾಜಕುಮಾರನ ಬಯಕೆಗಳಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಅಂದ ಹಾಗೆ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚು ಆಸ್ತಿ ಹೊಂದಿರುವ ಮಲೇಷ್ಯಾ ಸುಲ್ತಾನ 6.5 ಮಿಲಿಯನ್ ಡಾಲರ್ ನೀಡಿ ಪರ್ತ್ ನಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ಸರಕಾರದಿಂದ ಜಾಗ ಖರೀದಿ ಮಾಡಿದ್ದರು.


Click it and Unblock the Notifications








