ವಿಶ್ವದ ಅತಿ ದುಬಾರಿ ಟ್ರಕ್ ಒಡೆಯ ಮಲೇಷ್ಯಾ ಸುಲ್ತಾನ
ಶ್ರೀಮಂತರಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವ ವಾಹನಗಳನ್ನು ತಮ್ಮದಾಗಿಸಿಕೊಳ್ಳುವ ಹವ್ಯಾಸವಿರುತ್ತದೆ. ಮಲೇಷ್ಯಾ ಸುಲ್ತಾನ ಸಹ ಇದರಿಂದ ಹೊರತಾಗಿಲ್ಲ. ಪ್ರಸ್ತುತ ವಿಶ್ವದ ಅತಿ ದುಬಾರಿ ಟ್ರಕ್ ಒಡೆಯ ಎನಿಸಿಕೊಂಡಿದ್ದಾರೆ.
Also Read: 3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ
ಈ ಐಷಾರಾಮಿ ಟ್ರಕ್ ಅನ್ನು ಮ್ಯಾಕ್ಸ್ ಟ್ರಕ್ಸ್ ನಿರ್ಮಿಸಿ ಕೊಟ್ಟಿದ್ದು, ರಾಜನ ಅಗತ್ಯಗಳಿಗಾನುಸಾರವಾಗಿ ವಿಶೇಷವಾಗಿ ಮಾರ್ಪಾಡುಗೊಳಿಸಲಾಗಿದೆ. ಇನ್ನು ಕುತೂಹಲದಾಯಕ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಮಲೇಷ್ಯಾ ಸುಲ್ತಾನ ಇಬ್ರಾಹೀಂ ಇಸ್ಮೈಲ್ ಎಂಬವರಿಗಾಗಿ ನಿರ್ಮಿಸಿರುವ ಈ ಮ್ಯಾಕ್ ಟ್ರಕ್ ಅಂದಾಜು ಒಂದು ಮಿಲಿಯನ್ ಅಮೆರಿಕನ್ ಡಾಲರ್ ಗಿಂತಲೂ (6,49,65,000) ಹೆಚ್ಚು ಬೆಲೆ ಬಾಳುತ್ತದೆ.

ಮಲೇಷ್ಯಾದ ಜೊಹೊರ್ (Johor) ಪ್ರಾಂತ್ಯದ ರಾಜಕುಮಾರನಾಗಿರುವ ಸಲ್ತಾನನ ಬೇಡಿಕೆಯಂತೆ ಇದಕ್ಕೆ ಜೊಹರ್ ಲಾಂಛನದ ಕೆಂಪು, ಬಿಳಿ ಹಾಗೂ ನೀಲಿ ಬಣ್ಣವನ್ನು ಬಳಿಯಲಾಗಿದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ತಯಾರಿಸಿರುವ ಈ ಟ್ರಕ್ ನಲ್ಲಿ ಡಬಲ್ ಬೆಡ್, ಫ್ರಿಡ್ಜ್, ಕಿಚನ್, ಆರು ಸಿಸಿ ಟಿವಿ ಕ್ಯಾಮೆರಾಗಳು, ಎರಡು ಫ್ಲ್ಯಾಟ್ ಟಿವಿ ಸ್ಕ್ರೀನ್, ಮರದ ಫ್ಲೋರ್ ಹಾಗೂ ಚಿನ್ನ, ರತ್ನಗಳಿಂದ ಆವೃತ್ತವಾಗಿರುವ ಮೇಲ್ಚಾವಣಿ ಇತ್ಯಾದಿ ಐಷಾರಾಮಿ ವ್ಯವಸ್ಥೆಗಳಿವೆ.

ಇನ್ನು ರಾಜನಿಗೆ ದಣಿವಾದಾಗ ಪ್ರಶಾಂತ ವಾತಾವಾರಣದ ಮುದ ಸವಿಯಲು ಕೊಡೆ ಹಾಸಿದ ಮೇಲ್ಚಾವಣಿಯ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗಿದೆ.

ಸುಲ್ತಾನ ಬೇಡಿಕೆಯಂತೆ ಸಿಂಗಾಪುರ ಸಂದರ್ಶಿಸಿದ ಸಂಸ್ಥೆಯ ಉಪಾಧ್ಯಕ್ಷ ಡೀನ್ ಬೆಸ್ಟ್‌ವಿಕ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ರಾಜನ ಜೊತೆ ಮಾತುಕತೆ ನಡೆಸಿದ್ದರು.

ಹಾಗಿದ್ದರೂ ಬೆಲೆಯ ಬಗ್ಗೆ ನಿಖರ ಮಾಹಿತಿಯನ್ನು ಕೊಡಲು ಮ್ಯಾಕ್ ಟ್ರಕ್ಸ್ ನಿರಾಕರಿಸಿದೆ. ಪ್ರಸ್ತುತ ಟ್ರಕ್ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮಲೇಷ್ಯಾ ಸುಲ್ತಾನನ ನೆಚ್ಚಿನ ಸ್ಪೀಡ್ ಬೋಟ್ ರವಾನಿಸುವ ಸಲುವಾಗಿ ಈ ವಿಶಿಷ್ಟ ಟ್ರಕ್ ರಚಿಸಲಾಗಿದೆ ಎಂದು ಮೂಲಗಳು ತಿಳಿಸುತ್ತವೆ.

ಒಟ್ಟಿನಲ್ಲಿ ಈ ಸೂಪರ್ ಲೈನರ್ ಟ್ರಕ್ ಬಗ್ಗೆ ಪ್ರತಿಕ್ರಿಯಿಸಿರುವ ಮಲೇಷ್ಯಾ ಸುಲ್ತಾನ, "ಇದು ನನ್ನ ಕನಸಾಗಿದ್ದು, ನಾನು ನಗುತ್ತಿರುವೆನು" ಎಂದು ಚುಟುಕಾಗಿ ವಿವರಿಸಿದ್ದಾರೆ.

ವಿಶ್ವಪ್ರಸಿದ್ಧ ರಾಜಮನೆತನದ ಕಾರುಗಳು


Click it and Unblock the Notifications








