ಸ್ಟಾರ್ ನಟನ ಬೇಜವಾಬ್ದಾರಿ ಕಾರು ಚಾಲನೆ: ಅಭಿಮಾನಿಗಳ ಮೆಚ್ಚುಗೆ, ಆದ್ರೆ ವ್ಯಾಗನ್ಆರ್ ಪರಿಸ್ಥಿತಿ ನೋಡಿ...
ಭಾರತದಲ್ಲಿ ಬಹುತೇಕ ನಟರಿಗೆ ಕಾರುಗಳ ಕ್ರೇಜ್ ಇದೆ. ಅಂಥವರಲ್ಲಿ ಮಳಿಯಾಳಂ ಸಿನಿಮಾ ರಂಗದ ಅಗ್ರ ಸ್ಟಾರ್ ನಟ ಮಮ್ಮೂಟಿ ಕೂಡ ಒಬ್ಬರು. ಇವರು ಈವರೆಗೆ ಯಾವುದೇ ವಿವಾಧಗಳಿಗೂ ಗುರಿಯಾಗಿಲ್ಲ. ಆದ್ರೆ ಇದೇ ಮೊದಲ ಬಾರಿಗೆ ಸಾರ್ವಜನಿಕ ರಸ್ತೆಯಲ್ಲಿ ತಮ್ಮ ಕಾರನಲ್ಲಿ ಓವರ್‌ಟೇಕ್ ಮಾಡಲು ಹೋಗಿ ಟೀಕೆಗೆ ಗುರಿಯಾಗಿದ್ದಾರೆ.
72 ವರ್ಷ ವಯಸ್ಸಿನ ಈ ನಟ ವಿವಿಧ ಭಾರತೀಯ ಭಾಷೆಗಳಲ್ಲಿ 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯನ್ನು ಹೊರತುಪಡಿಸಿ, ಮಮ್ಮುಟ್ಟಿಗೆ ಗ್ಯಾಜೆಟ್‌ಗಳು ಮತ್ತು ಕಾರುಗಳಂದ್ರೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ತಮ್ಮ ಗ್ಯಾರೇಜ್‌ನಲ್ಲಿ ವಿವಿಧ ದುಬಾರಿ ಕಾರುಗಳು ಮತ್ತು ಎಸ್‌ಯುವಿಗಳನ್ನು ಹೊಂದಿದ್ದಾರೆ. ಹೆಚ್ಚಾಗಿ ಡ್ರೈವರ್ ಇಲ್ಲದೇ ಸ್ವತಃ ಅವರೇ ಕಾರುಗಳಲ್ಲಿ ಓಡಾಡುತ್ತಾರೆ.

ಹೀಗೆ ಮಮ್ಮುಟ್ಟಿಯ ಡಿಫೆಂಡರ್‌ನಲ್ಲಿ ಓಡಾಡುತ್ತಾ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ಓವರ್‌ಟೇಕ್ ಮಾಡಿದ ವಿಡಿಯೋ ಒಂದು ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕಿರಿದಾದ ರಸ್ತೆಯಲ್ಲಿ ಅಪಾಯಕಾರಿ ಓವರ್‌ಟೇಕ್ ಮಾಡುವುದಲ್ಲದೇ ವಿರುದ್ಧ ದಿಕ್ಕಿನಿಂದ ಬರುವ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ಸ್ವಲ್ಪಮಟ್ಟಿಗೆ ತಪ್ಪಿಸಿದ್ದಾರೆ. ಆದ್ರೂ ಎದುರು ಬಂದಿದ್ದ ಕಾರು ರಸ್ತೆ ಬಿಟ್ಟು ಹೊರ ಹೋಗಿದೆ.
ಸದ್ಯ ಈ ವೀಡಿಯೋ ಫುಲ್ ವೈರಲ್ ಆಗಿದ್ದು, ಎಂ4 ಮೀಡಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ವಿವರವಾಗಿ ಹೇಳುವುದಾದರೆ ಕೇರಳದ ಕಿರಿದಾದ ದ್ವಿಪಥದ ರಸ್ತೆಯ ಮೂಲಕ ಸರ್ಕಾರಿ ಬಸ್ ಹೋಗುವುದನ್ನು ನಾವು ನೋಡಬಹುದು. ಬಸ್ಸನ್ನು ನಿಧಾನವಾಗಿ ಓಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಲ್ಯಾಂಡ್ ರೋವರ್ ಡಿಫೆಂಡರ್ ಓವರ್‌ಟೇಕ್ ಮಾಡಲು ಮುಂದೆ ಬಂದಿದೆ.

ನಮಗಿರುವ ಮಾಹಿತಿಯ ಪ್ರಕಾರ ಈ ಲ್ಯಾಂಡ್ ರೋವರ್ ಡಿಫೆಂಡರ್ ಮಮ್ಮುಟ್ಟಿಗೆ ಸೇರಿದ್ದು, ಬಹುಶಃ ಅವರೇ ಅದನ್ನು ಓಡಿಸುತ್ತಿರಬಹುದು ಎನ್ನಲಾಗಿದೆ. ಐಷಾರಾಮಿ ಎಸ್‌ಯುವಿ ಬಲಭಾಗದಿಂದ ಕರ್ವ್‌ನಲ್ಲಿ ಬಸ್ ಅನ್ನು ಹಿಂದಿಕ್ಕುತ್ತದೆ. ಮಮ್ಮುಟ್ಟಿಯವರ ಕಾರಿನ ಮುಂದಿದ್ದ ರಸ್ತೆ ಬಳಕೆದಾರರಿಂದ ವೀಡಿಯೊ ರೆಕಾರ್ಡ್ ಮಾಡಲಾಗಿದೆ. SUV ಅನ್ನು ಹಿಂದಿಕ್ಕುತ್ತಿದ್ದಂತೆ, ಎದುರು ಬಂದ ಮಾರುತಿ ವ್ಯಾಗನ್ಆರ್ ರಸ್ತೆ ಬಿಟ್ಟು ಕೆಳಗಿಳಿದಿದೆ.
ಎರಡೂ ವಾಹನಗಳು ಅಪಘಾತಕ್ಕೀಡಾಗುತ್ತಿವೆ ಎಂದು ಭಾವಿಸಿ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಕಿರುಚುವುದನ್ನು ಸಹ ನಾವು ಕೇಳಬಹುದು. ಲ್ಯಾಂಡ್ ರೋವರ್ ಡಿಫೆಂಡರ್ ಮುಂದೆ ಸಾಗುತ್ತಲೇ ಇತ್ತು, ಮಾರುತಿ ವ್ಯಾಗನ್ಆರ್ ಚಾಲಕ ಗಾಬರಿಗೊಂಡು ರಸ್ತೆಯ ಬಲಕ್ಕೆ ತಿರುಗಿದ್ದಾನೆ. ಅದೃಷ್ಟವಶಾತ್, ಕೆಟ್ಟದ್ದೇನೂ ಸಂಭವಿಸಲಿಲ್ಲ. ಲ್ಯಾಂಡ್ ರೋವರ್ ಡಿಫೆಂಡರ್ ಹಿಂದೆ ಒಂದೆರಡು ಬೈಕರ್‌ಗಳಿದ್ದರು.

ಈ ಬೈಕರ್‌ಗಳು ಬಹುಶಃ ವಾಹನವನ್ನು ಗುರುತಿಸಿದ್ದ ಅಭಿಮಾನಿಗಳು ಎಂಬಂತೆ ತೋರುತ್ತಿದೆ. ಡಿಫೆಂಡರ್ ವ್ಯಾಗನಾರ್ ಗೆ ಡಿಕ್ಕಿ ಹೊಡೆದಿದ್ದರೆ ಹಿಂಬದಿ ಬರುತ್ತಿದ್ದ ಬೈಕ್ ಸವಾರರಿಗೂ ಗಾಯಗಳಾಗುತ್ತಿದ್ದವು. ನೀವು ವೀಡಿಯೊವನ್ನು ಎಚ್ಚರಿಕೆಯಿಂದ ನೋಡಿದರೆ, ಲ್ಯಾಂಡ್ ರೋವರ್ ಡಿಫೆಂಡರ್ ವಾಸ್ತವವಾಗಿ ಓವರ್‌ಟೇಕ್ ಮಾಡಲು ಸಾಧ್ಯವಿಲ್ಲದ ಜಾಗದಲ್ಲಿ ಓವರ್‌ಟೇಕ್ ಮಾಡಲಾಗಿದೆ.
ಒಂದು ವೇಳೆ ವಿರುದ್ಧ ದಿಕ್ಕಿನಿಂದ ಬೃಹತ್ ವಾಹನ ಬಂದಿದ್ದರೆ ಪರಿಸ್ಥಿತಿಯೇ ಬೇರೆಯಾಗುತ್ತಿತ್ತು. ಲ್ಯಾಂಡ್ ರೋವರ್ ಡಿಫೆಂಡರ್ ಒಂದು ದೊಡ್ಡ SUV ಆಗಿದ್ದು, ಇತರ ವಾಹನಕ್ಕೆ ದಾರಿ ಮಾಡಿಕೊಡಲು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿರುವುದಿಲ್ಲ. ಬಲ ತಿರುವು ತೆಗೆದುಕೊಂಡ ವ್ಯಾಗನಾರ್ ಚಾಲಕ ಆ ಕಿರಿದಾದ ರಸ್ತೆಯಲ್ಲಿ ಸರ್ಕಾರಿ ಬಸ್ಸನ್ನು ಧಿಡೀರ್ ಎಂದು ಓವರ್‌ಟೇಕ್ ಮಾಡುವ ವಾಹನವನ್ನು ಬಹುಶಃ ನಿರೀಕ್ಷಿಸಿರಲಿಲ್ಲ.
ಒಂದು ವೇಳೆ ಕಾರು ಚಾಲಕ ಮಧ್ಯದಲ್ಲಿ ನಿಲ್ಲಿಸಿದ್ದರೆ ಆಗ ಪರಸ್ಪರ ಡಿಕ್ಕಿ ಹೊಡೆಯುವ ಸಾಧ್ಯತೆಗಳೇ ಹೆಚ್ಚು. ಈ ಸಂದರ್ಭದಲ್ಲಿ ನಟನ ತಪ್ಪಿದೆ. ಆತ ಅವಸರದಲ್ಲಿದ್ದಿರಬಹುದು, ಆದರೆ ಅದಕ್ಕಾಗಿ ಇತರರ ಜೀವವನ್ನು ಅಪಾಯಕ್ಕೆ ದೂಡುವುದು ಸರಿಯಲ್ಲ. SUV ಅನ್ನು ಹೆಚ್ಚಿನ ವೇಗದಲ್ಲಿ ಓಡಿಸಲಾಗುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ, ಆದರೆ ನಟ ಇಲ್ಲಿ ಕೆಲ ನಿಯಮಗಳನ್ನು ಉಲ್ಲಂಘಿಸಿರುವುದಂತೂ ಸತ್ಯ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications