ಬದುಕಿನ ಬಂಡಿ ಎಳೆಯಲು ನಾನಾ ವೇಷ: ನೆಟ್ಟಿಗರಿಂದ ಪ್ರಶಂಸೆ... ವಿಡಿಯೋ ನೋಡಿ

ಬದುಕಿನ ಬಂಡಿ ಎಳೆಯಲು ಪ್ರತಿಯೊಬ್ಬರು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇಲ್ಲೊಬ್ಬ ವ್ಯಕ್ತಿ ತನ್ನ ಕಾಯಕದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಇದು ನಡೆದಿರುವುದು ಭಾರತದಲ್ಲಿ ಅಲ್ಲ. ದೂರದ ಈಜಿಪ್ಟ್‌ನಲ್ಲಿ.

ಆ ದೇಶದಲ್ಲಿ ಬ್ರೆಡ್ ಜನರ ದಿನನಿತ್ಯದ ಆಹಾರವಾಗಿದ್ದು, ಸೂಪರ್ ಮಾರ್ಕೆಟ್, ಸ್ಥಳೀಯ ಕಿರಾಣಿ ಅಂಗಡಿಗಳಲ್ಲಿ ದೊರೆಯುತ್ತದೆ. ಸಾಮಾನ್ಯವಾಗಿ, ಅಲ್ಲಿಗೆ ಸಣ್ಣ ಆಟೋ ಅಥವಾ ಟ್ರಕ್ ಗಳನ್ನು ಉಪಯೋಗಿಸಿ, ಬ್ರೆಡ್, ಹಾಲು ಮತ್ತು ಮೊಸರು ಸೇರಿದಂತೆ ನಿತ್ಯದ ಅಗತ್ಯ ಆಹಾರ ಪದಾರ್ಥಗಳನ್ನು ತಲುಪಿಸಲಾಗುತ್ತದೆ. ಅದೇ ಸಣ್ಣ ಅಂಗಡಿಗಳಿಗೆ ಬೈಕ್ ಅಥವಾ ಸೈಕಲ್ ಬಳಸಿ ವಿತರಣೆ (ಡಿಲೆವರಿ) ಮಾಡಲಾಗುತ್ತದೆ.

ಬದುಕಿನ ಬಂಡಿ ಎಳೆಯಲು ನಾನಾ ವೇಷ: ನೆಟ್ಟಿಗರಿಂದ ಪ್ರಶಂಸೆ... ವಿಡಿಯೋ ನೋಡಿ

ಸದ್ಯ, ಈಜಿಪ್ಟ್‌ ವ್ಯಕ್ತಿಯ ವಿಡಿಯೋ ಸಖತ್ ವೈರಲ್ ಆಗಿದೆ. ವಾಹನ ಸಂಚಾರವಿರುವ ರಸ್ತೆಯಲ್ಲಿಯೇ ಆತ ತಲೆಯ ಮೇಲೆ ಬ್ರೆಡ್ ತುಂಬಿದ್ದ ಮರದ ರ‍್ಯಾಕ್ ಇಟ್ಟುಕೊಂಡು ಅದನ್ನು ಕೈಯಲ್ಲಿ ಹಿಡಿದುಕೊಂಡು, ಸೈಕಲ್ ಪೆಡಲ್ ತುಳಿಯುತ್ತ, ಹ್ಯಾಂಡಲ್ ಅನ್ನು ಹಿಡಿಯದೇ ಸಮತೋಲನ (ಬ್ಯಾಲೆನ್ಸ್) ಕಾಯ್ದುಕೊಂಡು ಹೋಗುತ್ತಿದ್ದಾರೆ. ಈ ದೃಶ್ಯಗಳನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಲದಲ್ಲಿ ಪೋಸ್ಟ್ ಮಾಡಿದ ಬಳಿಕ, ಎಲ್ಲೆಡೆ ಹರಿದಾಡುತ್ತಿದ್ದು, 50 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. 29,883 ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 700ಕ್ಕೂ ಹೆಚ್ಚಿನ ಮಂದಿ ಕಾಮೆಂಟ್ ಮಾಡಿದ್ದಾರೆ. ಹಲವು ನೆಟ್ಟಿಗರು ಈ ವಿಡಿಯೋಯನ್ನು ಮೆಚ್ಚಿ, ಭಾರೀ ಪ್ರಶಂಸೆ ವ್ಯಕ್ತಪಡಿದ್ದಾರೆ.

ನೆಟ್ಟಿಗರೊಬ್ಬ, 'ಯಾವುದೇ ರೀತಿಯಲ್ಲಿ ಹ್ಯಾಂಡಲ್ ಹಿಡಿದುಕೊಳ್ಳದೆ ತಲೆಯ ಮೇಲೆ ಬ್ರೆಡ್ ತುಂಬಿದ ರ‍್ಯಾಕ್ ಅನ್ನು ಟ್ರಾಫಿಕ್ ಇರುವ ರಸ್ತೆಯಲ್ಲಿಯೂ ಈ ವ್ಯಕ್ತಿ, ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಆತ ನಿಜವಾಗಿಯೂ ಪ್ರತಿಭಾವಂತ. ಅವಕಾಶ ಸಿಕ್ಕರೇ ಬೈಸಿಕಲ್‌ ಕ್ರೀಡೆಯಲ್ಲಿ ಖಂಡಿತ ಮಿಂಚುತ್ತಾರೆ' ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ 'ಈಜಿಪ್ಟ್ ಪ್ರತಿಭಾವಂತರನ್ನು ಹೊಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು, ಈಜಿಪ್ಟ್‌ನ ಕೈರೋದಲ್ಲಿನ ಅದ್ಭುತ ದೃಶ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ನೆಟ್ಟಿಗ, ಟ್ರು ಬ್ಯಾಲೆನ್ಸ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕ ನೆಟ್ಟಿಗರು, ಆತನ ಬದುಕಿನ ಬಂಡಿ ಎಳೆಯುವ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ರೀತಿಯಾಗಿ ಸೈಕಲ್ ನಲ್ಲಿ ಹೋಗಬೇಕಾದರೆ, ಕೊಂಚ ಸಮತೋಲನ ಕಳೆದುಕೊಂಡಿದ್ದರೂ ಬಿದ್ದು ಗಾಯಗಳನ್ನು ಮಾಡಿಕೊಳ್ಳಬೇಕಾಗಿಬರಹುದು. ಕೆಲವು ಸಂದರ್ಭದಲ್ಲಿ ಜೀವಕ್ಕೂ ಎರವಾಗಬಹುದು.

ಇನ್ನು, ಕಳೆದ ಕೆಲವು ತಿಂಗಳ ಹಿಂದೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಮಡಿಲಿನಲ್ಲಿ ಮಗುವಿಟ್ಟುಕೊಂಡು ಜೀವನ ಸಾಗಿಸಲು ಮಹಾತಾಯಿಯೊಬ್ಬಳು ಆಟೋ ಓಡಿಸುತ್ತಿರುವ ವಿಡಿಯೋ ಇದಾಗಿತ್ತು. 'ವೈರಲ್ ಭಯಾನಿ' ಎಂಬ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಈ ಪೋಸ್ಟ್ ಮಾಡಲಾಗಿತ್ತು. ಇದಕ್ಕೆ 'ಯಾವುದೇ ಕ್ಯಾಪ್ಷನ್ ಅಗತ್ಯವಿಲ್ಲ.. ತಾಯಿ' ಎಂದು ಶೀರ್ಷೆಕೆ ಬರೆಯಾಗಿತ್ತು. ಆದರೆ, ಇದು ಯಾವ ರಾಜ್ಯದ್ದು ಎಂದು ತಿಳಿದು ಬಂದಿರಲಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 10, 2023, 14:37 [IST]
English summary
Man balances large rack of bread on head while bicycling video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+