ಎಲೆಕ್ಟ್ರಿಕ್ ಆಟೋ ಖರೀದಿಸಿ ಸೋಲಾರ್ ಆಟೋವನ್ನಾಗಿ ಪರಿವರ್ತಿಸಿದ ಮಹಾನುಭಾವ... ಕಾರಣ ಏನಂತೆ ಗೊತ್ತಾ?

ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ಏರಿಕೆಯಾದ ಪೆಟ್ರೋಲ್, ಡೀಸಲ್ ಬೆಲೆಗಳಿಂದ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಾಗುತ್ತಿದೆ. ಜೊತೆಗೆ ಇಂಧನ ಚಾಲಿತ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಎಲೆಕ್ಟ್ರಿಕ್ ವಾಹನವನ್ನೇ ಸೋಲಾರ್ ಆಟೋವನ್ನಾಗಿ ಪರಿವರ್ತಿಸಿ ಈತ ವೈರಲ್ ಆಗಿದ್ದಾನೆ.

ಬಹುಶಃ ಮೊದಲ ಬಾರಿಗೆ ಯಾರಾದರೂ ವಿದ್ಯುತ್ ವಾಹನವನ್ನು ಸೋಲಾರ್ ಚಾಲಿತ ವಾಹನವನ್ನಾಗಿ ಪರಿವರ್ತಿಸಿದ್ದಾರೆ ಅಂದ್ರೆ ನಮ್ಮ ಪ್ರಕಾರ ಅದು ಇವರೆ ಇರಬೇಕು. ಈ ಮಹಾನುಭಾವನ ಬಗ್ಗೆ ಹೇಳಲೇಬೇಕು, ಈತ ಒಡಿಶಾದ 35 ವರ್ಷದ ಶ್ರೀಕಾಂತ್ ಪಾತ್ರಾ ಪಕ್ಕಾ ಆಟೋ ಚಾಲಕ. ಇಲ್ಲಿನ ರಾಜಧಾನಿ ಭುವನೇಶ್ವರ ಸಮೀಪದ ನಯಾಗರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾನೆ.

electric-auto-converted-into-solar-auto

ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಆಟೋವನ್ನು ಸೋಲಾರ್ ಆಟೋವನ್ನಾಗಿ ಪರಿವರ್ತಿಸಿದ್ದಾನೆ. ಕಳೆದ 15 ವರ್ಷಗಳಿಂದ ಆಟೋ ರಿಕ್ಷಾ ಓಡಿಸುತ್ತಿರುವ ಪಾತ್ರಾ, ಮೊದಲು ಸಾಮಾನ್ಯ ಡೀಸಲ್ ಆಟೋವನ್ನು ಹೊಂದಿದ್ದನಂತೆ. ಡೀಸೆಲ್ ಎಂಜಿನ್‌ನೊಂದಿಗೆ ದಿನಕ್ಕೆ ಇಂಧನಕ್ಕೆ ವ್ಯಯಿಸುವ ಖರ್ಚಿನ ಬಳಿಕ ರೂ. 300 ರಿಂದ 400 ಗಳಿಸುತ್ತಿದ್ದೆ. ಈ ನಡುವೆ ಮಿತಿ ಮೀರಿದ ಇಂಧನ ಬೆಲೆಗಳಿಂದಾಗಿ ಡೀಸಲ್ ಆಟೋವನ್ನು ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.

ಹಣ ಉಳಿಸಬಹುದೆಂದು ಭಾವಿಸಿ ಎಲೆಕ್ಟ್ರಿಕ್ ಆಟೋವನ್ನು ಖರೀದಿಸಿದ್ದೇನೆ. ಸುಮಾರು ಒಂದೂವರೆ ವರ್ಷಗಳ ಹಿಂದೆ, ನಾನು ಎಲೆಕ್ಟ್ರಿಕ್ ಆಟೋ ಖರೀದಿಸಿ ನಗರದಲ್ಲಿ ಓಡಿಸಿದೆ. ಆದ್ರೆ ಕಡಿಮೆ ಬ್ಯಾಟರಿ ಮತ್ತು ಚಾರ್ಜಿಂಗ್ ಸಮಸ್ಯೆಯು ಪ್ರತಿದಿನವೂ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಸಾಮಾನ್ಯ ಇಂಧನ ಚಾಲಿತ ಆಟೋದಂತೆ ಇದನ್ನು ಓಡಿಸಲು ಸಾಧ್ಯವಾಗಲಿಲ್ಲ.

electric-auto-converted-into-solar-auto

ಇದೇ ವೇಳೆ ಖರ್ಚು ವೆಚ್ಚಗಳು ಹಾಗೂ ರೇಂಜ್ ಸಮಸ್ಯೆಯಿಂದ ಪರದಾಡುತ್ತಿದ್ದೆ, ಆಗಲೇ 6 ನೇ ತರಗತಿ ಓದುತ್ತಿರುವ ನನ್ನ ಮಗಳು, ಎಲೆಕ್ಟ್ರಿಕ್ ಆಟೋವನ್ನು ಸೋಲಾರ್ ಆಗಿ ಪರಿವರ್ತಿಸಲು YouTube ವೀಡಿಯೊಗಳ ಸಹಾಯ ಪಡೆಯಲು ಸೂಚಿಸಿದ್ದಳು. ಈ ಐಡಿಯಾಗೆ ನನ್ನ ಮಗಳನ್ನು ಪ್ರಶಂಸಲೇಬೆಕು, ಏಕೆಂದರೆ ಇಂತಹದೊಂದು ಪರಿಹಾರವಿದೆ ಎಂಬುದು ನನಗೆ ಮಾತ್ರವಲ್ಲ ನನ್ನಂತ ಹಲವರಿಗೆ ಗೊತ್ತೇ ಇಲ್ಲ.

ಒಟ್ಟಾರೆ ಆಟೋವನ್ನು ಸೋಲಾರ್ ಆಗಿ ಪರಿವರ್ತಿಸಿಬಿಟ್ಟಿದ್ದೇನೆ. ಈಗ ಇಂಧನ ತುಂಬುವಿಕೆ, ಬ್ಯಾಟರಿ ಕಡಿಮೆ ಅಥವಾ ಚಾರ್ಜಿಂಗ್ ಸಮಸ್ಯೆಗಳಿಂದ ನಾನು ಹೊರಬಿದ್ದಿದ್ದೇನೆ. ಜೊತೆಗೆ ನಮ್ಮ ಪರಿಸರವನ್ನು ಹಸಿರು ಮತ್ತು ಸ್ವಚ್ಛವಾಗಿರಿಸುತ್ತಿದ್ದೇನೆ ಎಂಬ ಹೆಮ್ಮೆಯು ಇದೆ. ಹೇಳಿದ್ದಾನೆ. ಸದ್ಯ ಈ ಸೋಲಾರ್ ಆಟೋ ಸಿಂಗಲ್ ಚಾರ್ಜ್‌ನಲ್ಲಿ 140 ಕಿ.ಮೀ ರೇಂಜ್ ನೀಡುತ್ತದೆ.

ಅಂದರೆ ಇದು ಎಲೆಕ್ಟ್ರಿಕ್ ಆಟೋವಾಗಿಯು ಓಡುತ್ತದೆ, ಅದರ ಜೊತೆಜೊತೆಗೆ ಸೋಲಾರ್ ಪವರ್ ಕೂಡ ಬಳಸಿಕೊಳ್ಳಬಹುದಾಗಿದೆ. ಈಗ ಎಲ್ಲೆಂದರಲ್ಲಿ ವಾಹನ ಕೈಕೊಡುತ್ತದೆ ಎಂಬ ಭಯವಿಲ್ಲ, ಚಾರ್ಜಿಂಗ್ ಹಾಕುವ ಬಗ್ಗೆ ಗೊಂದಲವೂ ಇಲ್ಲ. ನಿತ್ಯ ವಾಹನ ಓಡಿಸಿ ದಿನಕ್ಕೆ ರೂ. 1300 ರಿಂದ ರೂ. 1500 ರವರೆಗೆ ಸಂಪಾದನೆ ಮಾಡುತ್ತೇನೆ ಎಂದು ಶ್ರೀಕಾಂತ್ ಹೇಳಿಕೊಂಡಿದ್ದಾನೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.

Article Published On: Wednesday, July 19, 2023, 16:07 [IST]
English summary
Man bought electric auto converted into solar auto here is why
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+