ವಿಡಿಯೋ.. ಬಿರು ಬಿಸಿಲಿಗೆ ಕಾದ ಬೈಕ್ ಸೀಟ್, ಹೀಗೋ Cool ಮಾಡಬಹುದಂತೆ..!

ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಡುತ್ತಿದ್ದು, ಅಲ್ಲಿ ಪ್ರತಿದಿನ ಒಂದಿಲ್ಲೊಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ವಾಹನಗಳಿಗೆ ಸಂಬಂಧಿಸಿದ ವಿಡಿಯೋ, ಫೋಟೋಗಳನ್ನು ಜನರು ಆಸಕ್ತಿಯಿಂದಲೇ ವೀಕ್ಷಿಸುತ್ತಾರೆ. ಇಲ್ಲೊಬ್ಬ ವ್ಯಕ್ತಿ, ವೈರಲ್ ಆಗಲು ಮಾಡಿರುವ ಕೆಲಸವನ್ನು ನೋಡಿದರೆ ನಗು ಬರುವುದು ಗ್ಯಾರಂಟಿ.

ಸದ್ಯ ಬೇಸಿಗೆ ಆರಂಭವಾಗಿದ್ದು, ಇದು ದ್ವಿಚಕ್ರ ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ಪಾರ್ಕಿಂಗ್ ಗೆ ಸೂಕ್ತ ಸ್ಥಳ ಇರುವುದಿಲ್ಲ. ಅಂತಹ ಸಂಧರ್ಭದಲ್ಲಿ ರಸ್ತೆ ಬದಿ ಸೇರಿದಂತೆ ಇನ್ನಿತರೇ ಕಡೆ ವಾಹನಗಳನ್ನು ನಿಲ್ಲಿಸಿರುತ್ತಾರೆ. ಬಿಸಿಲಿನ ಝಳಕ್ಕೆ ಸೀಟ್ ಬಿಸಿಯಾಗುತ್ತವೆ. ಹಾಗೇನಾದರೂ ಬೈಕ್, ಅಥವಾ ಸ್ಕೂಟರ್ ಓಡಿಸಲು ಹೋದರೆ ದೇವರೇ ಗತಿ. ನಿಮಗೂ ಹಲವು ಬಾರಿ ಈ ರೀತಿಯ ಅನುಭವ ಆಗಿರಬಹುದು.

ವಿಡಿಯೋ.. ಬಿರು ಬಿಸಿಲಿಗೆ ಕಾದ ಬೈಕ್ ಸೀಟ್, ಹೀಗೋ Cool ಮಾಡಬಹುದಂತೆ..!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು 'ನಾಟಿ ವರ್ಲ್ಡ್' ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನೋಂದಣಿ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗುಜರಾತ್‌ ರಾಜ್ಯದ ಯುವನೊಬ್ಬ ಈ ವಿಡಿಯೋ ಮಾಡಿದಂತೆ ತೋರುತ್ತದೆ. ಬಹುತೇಕ ಮನರಂಜನಾ ದೃಷ್ಟಿಯಿಂದಲೇ ಇದನ್ನು ಮಾಡಿರುವ ಆ ಯುವಕ ಬೇಸಿಗೆಯಲ್ಲಿ ಬೈಕ್ ಸವಾರರು ಪಡುವ ಕಷ್ಟವನ್ನು ತಮಾಷೆಯಾಗಿ ತೋರಿಸಿದ್ದಾನೆ.

ಮೊದಲಿಗೆ ಕಾದ ಬೈಕ್ ಸೀಟನ್ನು ತಂಪುಗೊಳಿಸಲು ಐಸ್ ಕ್ಯೂಬ್‌ ಹಾಕುತ್ತಾನೆ. ಬಳಿಕ ಮಸಾಜ್ ಎಣ್ಣೆ ಸುರಿಯುತ್ತನೆ. ಅಷ್ಟಕ್ಕೆ ಸಮಾಧಾನಗೊಳ್ಳದ ಆ ಯುವಕ, ಮತ್ತೆ ಪೌಡರ್ ಹಾಕುತ್ತಾನೆ. ಇಷ್ಟಾದ ಮೇಲೂ ಸೋಪ್, ಶಾಪ್ ಹಾಕಿ, ಬೈಕ್ ರೈಡ್ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಯುವಕನ ಈ ಇನ್‌ಸ್ಟಾಗ್ರಾಮ್ ವಿಡಿಯೋಗೆ 1.5 ಲಕ್ಷ ಮಂದಿ ಲೈಕ್ ಮಾಡಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ಬೇಸಿಗೆ ದ್ವಿಚಕ್ರ ವಾಹನ ಸವಾರರು ಮಾತ್ರವಲ್ಲದೆ ಸಾಮಾನ್ಯ ಜನರಿಗೆ ಕಡು ಕಷ್ಟದ ಸಮಯವಾಗಿದ್ದು, ದೇಶದ ಕೆಲವೊಂದು ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಕ್ಕಿಂತ ಹೆಚ್ಚಿನ ತಾಪಮಾನ ವರದಿಯಾಗುತ್ತದೆ. ಅಂತಹ ಸನ್ನಿವೇಶದಲ್ಲಿ ಕೆಲವರು ಮನೆಯಿಂದ ಹೊರಬರಲು ಇಚ್ಚಿಸುವುದಿಲ್ಲ. ಆದರೆ, ಕೆಲಸದ ನಿಮಿತ್ತ ಹಲವು ಮಂದಿ ಸಂಚರಿಸುವುದು ಅನಿವಾರ್ಯವಾಗಿದ್ದು, ಎಲ್ಲರ ಬಳಿ ಕಾರಿರುವುದಿಲ್ಲ. ಜೊತೆಗೆ ಕಚೇರಿಗಳಿಗೆ ಸೂಕ್ತ ಸಾರಿಗೆ ಸಂಪರ್ಕ ಇರುವುದಿಲ್ಲ. ಆಗ ದ್ವಿಚಕ್ರ ವಾಹನಗಳು ಅನಿವಾರ್ಯ.

ನಾವು ನೀಡುವ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಬಿಸಿಲಿನ ಶಾಖವನ್ನು ದ್ವಿಚಕ್ರ ವಾಹನ ಸವಾರರು ತಪ್ಪಿಕೊಳ್ಳಬಹುದು. ಫುಲ್ ಶರ್ಟ್ ಧರಿಸಿರಿ, ಸನ್ ಗ್ಲಾಸ್ ಬಳಕೆ ಮಾಡಿ, ಹೆಲ್ಮೆಟ್ ಧರಿಸಿ, ಹ್ಯಾಂಡ್ ಗ್ಲೋಸ್ ಹಾಕಿಕೊಳ್ಳುವುದನ್ನು ಮರೆಯಬೇಡಿ. ಅಲ್ಲದೆ, ಸ್ವಲ್ಪ ನೆರಳಿರುವ ಸ್ಥಳದಲ್ಲಿ ನಿಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ, ಆಗ ಸೀಟ್ ಅಷ್ಟಾಗಿ ಬಿಸಿಯಾಗುವುದಿಲ್ಲ.

ಬಿರು-ಬೇಸಿಗೆ ಕೇವಲ ದ್ವಿಚಕ್ರ ವಾಹನ ಸವಾರರಿಗೆ ಮಾತ್ರವಲ್ಲ ಕಾರುಗಳಲ್ಲಿ ಸಂಚರಿಸುವವರಿಗೂ ಸಮಸ್ಯೆ ತಂದೊಡ್ಡುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಕಾರಿನಲ್ಲಿ ಎಸಿ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಸನ್‌ಬ್ಲೈಂಡ್‌ ಮತ್ತು ವಿಂಡ್‌ಶೀಲ್ಡ್‌ಗಳನ್ನು ಬಳಕೆ ಮಾಡಿ, ಅಲ್ಲದೆ, ದ್ವಿಚಕ್ರ ವಾಹನದಂತೆ ಕಾರುಗಳನ್ನು ಕೊಂಚ ನೆರಳಿನ ಸ್ಥಳದಲ್ಲಿ ನಿಲ್ಲಿಸರುವುದರಿಂದ ಬಿಸಿಲಿನಿಂದ ಕ್ಯಾಬಿನ್ ಬಿಸಿಯಾಗುವುದನ್ನು ತಪ್ಪಿಸಿಕೊಳ್ಳಬಹುದು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಯುವಕ ತಮಾಷೆ ಮಾಡಿರುವ ವಿಡಿಯೋ, ಬೇಸಿಗೆಯಲ್ಲಿ ದ್ವಿಚಕ್ರ ವಾಹನ ಸವಾರರು ಅನುಭವಿಸುವ ಸಮಸ್ಯೆಗಳ ತೋರಿಸುತ್ತದೆ. ಆದರೆ, ಯಾರಾದರೂ ಈತ ಮಾಡಿದ ರೀತಿಯಲ್ಲಿ ಪ್ರಯತ್ನಿಸಿದರೆ, ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಸಾಧ್ಯವಾಗುವುದೇ ಇಲ್ಲ. ನಾವು ಮೇಲೆ ತಿಳಿದ ಕೆಲವೊಂದು ಉಪಯುಕ್ತ ಸಲಹೆ ಪಾಲಿಸುವ ಮೂಲಕ ಬಿರು-ಬೇಸಿಗೆಯಲ್ಲಿ ಒಂದಷ್ಟು ಮಟ್ಟಿಗೆ ರಕ್ಷಣೆ ಪಡೆಯಬಹುದು.

Article Published On: Saturday, April 15, 2023, 16:27 [IST]
English summary
Man puts powder bike seat cool
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+