‘ಮನಿ ಹೈಸ್ಟ್’ ವೆಬ್​ ಸಿರೀಸ್​​ ಪ್ರೇರಣೆ: ಜನರ ಮೇಲೆ ಹಣ ಸುರಿದ ಯುವಕ ಬಂಧನ

ಸೋಶಿಯಲ್ ಮೀಡಿಯಾ ಈಗ ನಮ್ಮ ಜೀವನದ ಬಹುಮುಖ್ಯ ಭಾಗವಾಗಿದೆ. ಅನೇಕ ಜನರು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಲು ವಿಭಿನ್ನ ಕಂಟೆಟ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಲವರು ಇತರರಿಗಿಂತ ತುಂಬ ವಿಭಿನ್ನವಾಗಿ ವೀಡಿಯೊ ಮಾಡಲು ಕಾನೂನು ಉಲ್ಲಂಘಿಸಿ ಸಾರ್ವಜನಿಕ ರಸ್ತೆಗಳಲ್ಲಿ ಕಾನೂನು ಉಲ್ಲಂಘಿಸಿ ಕಾರು, ಬೈಕ್ ಗಳಲ್ಲಿ ಸ್ಟಂಟ್ ಮಾಡುವುದನ್ನು ನೋಡಿದ್ದೇವೆ.

ಜನಪ್ರಿಯ ನೆಟ್‌ಫ್ಲಿಕ್ಸ್ ವೆಬ್​ ಸಿರೀಸ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಆಂಗ್ಲ ಭಾಷೆಯ 'ಮನಿ ಹೈಸ್ಟ್' (Money Heist) ಪಾತ್ರವೊಂದರ ಉಡುಗೆಯನ್ನು ತೊಟ್ಟು ಹಣ ಎಸೆದ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆಯು ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಈ ವೀಡಿಯೊ X (ಹಿಂದೆ Twitter) ಆನ್‌ಲೈನ್‌ನಲ್ಲಿ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಣ ಎಸೆದ ವ್ಯಕ್ತಿಯು ದೀಗ ಪೊಲೀಸರ ಅತಿಥಿಯಾಗಿದ್ದಾನೆ.

Money Heist

ಈ ವೀಡಿಯೊದಲ್ಲಿ ಮಾರುತಿ ಆಲ್ಟೊ 800 ಹ್ಯಾಚ್‌ಬ್ಯಾಕ್‌ನ ರೂಫ್ ಮೇಲೆ ನಿಂತಿರುವ ವ್ಯಕ್ತಿಯನ್ನು ನಾವು ನೋಡುತ್ತೇವೆ. ಜೈಪುರದ ಮಾಳವೀಯಾ ನಗರದ ಗೌರವ್ ಟವರ್‌ನ ಹೊರಗೆ ಈ ಘಟನೆ ನಡೆದಿದೆ. ವೈರಲ್ ವೀಡಿಯೊದಲ್ಲಿ, ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕಾರಿನ ರೂಫ್ ಮೇಲೆ ನಿಂತಿರುವುದನ್ನು ಕಾಣಬಹುದು. ಮನಿ ಹೈಸ್ಟ್ ವೆಬ್​ ಸಿರೀಸ್ ಪಾತ್ರವೊಂದರ ಪ್ರೇರಿತವಾದ ಸಾಲ್ವಡಾರ್ ಡಾಲಿ ಮುಖವಾಡವನ್ನು ಧರಿಸಿದ್ದಾನೆ.

ಆತ ಕಾರಿನ ಮೇಲೆ ನಿಂತು ಜನರನ್ನು ಕರೆಯುತ್ತಿರುವುದು ಕಂಡುಬರುತ್ತದೆ. ಅವನ ಬಳಿ ಒಂದು ಚೀಲವಿದೆ, ಮತ್ತು ಅವನು ಅಲ್ಲಿದ್ದ ಜನರ ಮೇಲೆ ಹಣವನ್ನು ಸುರಿಯಲು ಪ್ರಾರಂಭಿಸುತ್ತಾನೆ. ಆರಂಭದಲ್ಲಿ, ಜನರು ನಿಜವಾದ ಕರೆನ್ಸಿಯನ್ನು ಎಸೆಯುತ್ತಿಲ್ಲ ಎಂದು ಜನರು ಭಾವಿಸಿದ್ದರು, ಆದರೆ ಆ ವ್ಯಕ್ತಿ ರೂ. 10 ಮತ್ತು ರೂ. 20 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಸುರಿದಿದ್ದಾರೆ.

Money Heist

ರಸ್ತೆಯಲ್ಲಿ ಹಾದುಹೋಗುವ ಜನರು ನೋಟುಗಳನ್ನು ಸಂಗ್ರಹಿಸಲು ನಿಲ್ಲಿಸಿದರು. ಹಣದ ಹಿಂದೆ ಹೋಗಲು ಜನರು ತಮ್ಮ ಕೆಲಸ ಬಿಟ್ಟು ವ್ಯಕ್ತಿಯು ಆ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಅನ್ನು ಸೃಷ್ಟಿಸಿದನು. ಅದೇ ರಸ್ತೆಯ ಮೂಲಕ ಆದರೆ ಎದುರು ಭಾಗದಲ್ಲಿ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಮುಸುಕುಧಾರಿ ವ್ಯಕ್ತಿ ಜನರು ಬಂದು ಹಣ ವಸೂಲಿ ಮಾಡುವಂತೆ ಕರೆ ನೀಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ವೀಡಿಯೊ ಶೀಘ್ರದಲ್ಲೇ ವೈರಲ್ ಆಗಿದ್ದು, ಪೊಲೀಸರು ಎಂದಿನಂತೆ ವೀಡಿಯೊವನ್ನು ನೋಡಿದರು. ಕೂಡಲೇ ವ್ಯಕ್ತಿಯನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಸಾಹಸ ಪ್ರದರ್ಶಿಸಿದ ವ್ಯಕ್ತಿಯ ಗುರುತು ಬಹಿರಂಗಗೊಂಡಿಲ್ಲ. ಈತನನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, ನಂತರ ಸಾರ್ವಜನಿಕವಾಗಿ ಈ ಸಾಹಸ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಗಳಿಸಲು ಕಾರಣ ಎಂದು ತಿಳಿಸಿದ್ದಾರೆ. ಅವರನ್ನು ಅಕ್ಟೋಬರ್ 3 ರಂದು ಬಂಧಿಸಲಾಯಿತು.

ಈ ರೀತಿಯ ಘಟನೆಯನ್ನು ನಾವು ನೋಡುತ್ತಿರುವುದು ಇದೇ ಮೊದಲಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಜನರು ಗಮನ ಮತ್ತು ಖ್ಯಾತಿಯನ್ನು ಪಡೆಯಲು ಕಾರುಗಳು ಮತ್ತು ಬೈಕ್‌ಗಳನ್ನು ಬಳಸಿಕೊಂಡು ಸಾರ್ವಜನಿಕ ರಸ್ತೆಗಳಲ್ಲಿ ಸಾಹಸಗಳನ್ನು ಮಾಡುತ್ತಾರೆ. ವರದಿಗಳ ಪ್ರಕಾರ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 151 ರ ಅಡಿಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಮತ್ತು ಗುಂಪಿನತ್ತ ನೋಟುಗಳನ್ನು ಎಸೆಯುವಾಗ ನಿಂತಿದ್ದ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರದ ಸಲುವಾಗಿ ವ್ಯಕ್ತಿ ಇತರ ರಸ್ತೆ ಬಳಕೆದಾರರಿಗೆ ಅನಾನುಕೂಲತೆಯನ್ನು ಸೃಷ್ಟಿಸಿದ್ದಾನೆ. ಬಂಧಿತ ಯುವಕ, ಇದು ಕೇವಲ ಮೋಜಿಗಾಗಿ ಮಾಡಿದೆ ಎಂದು ಪೊಲೀಸರಿಗೆ ವಿಚಾರಣೆ ವೇಳೆ ಹೇಳಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದದ್ದೇ, ವ್ಯಾಪಕ ವೈರಲ್​ಗೆ ಕಾರಣವಾಗಿದೆ. ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Article Published On: Friday, October 6, 2023, 8:30 [IST]
English summary
Man showering cash on public in jaipur money heist costume viral video details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+