ಒಂದೇ ಕಾರನ್ನು 14 ಬಾರಿ ಮಾರಾಟ ಮಾಡಿದ್ದ ಖದೀಮ ಕೊನೆಗೂ ಅಂದರ್

ಭಾರತದಲ್ಲಿ ದಿನೇ ದಿನೇ ವಾಹನಗಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಕಾರು ಹಾಗೂ ಬೈಕು ಕಳ್ಳತನವಾಗುತ್ತಿರುವ ಬಗ್ಗೆ ದೇಶಾದ್ಯಂತ ವರದಿಯಾಗುತ್ತಿದೆ. ಕಾರುಗಳನ್ನು ಮಾರಾಟ ಮಾಡುವುದಾಗಿ ಆನ್ ಲೈನ್ ಮೂಲಕವೂ ವಂಚಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಒಂದೇ ಕಾರನ್ನು 14 ಬಾರಿ ಮಾರಾಟ ಮಾಡಿದ್ದ ಖದೀಮ ಕೊನೆಗೂ ಅಂದರ್

ಕಾರು ಖರೀದಿಸಲು ಆನ್ ಲೈನ್ ಮೂಲಕ ಹಣ ಪಾವತಿಸಿದ ನಂತರ ಮಾರಾಟಗಾರನಿಂದ ಮೋಸ ಹೋಗುತ್ತಿರುವ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಆನ್‌ಲೈನ್ ಕಾರು ಮಾರಾಟ ತಾಣವಾದ ಒಎಲ್‌ಎಕ್ಸ್ ಬಳಸಿ ಒಂದೇ ಕಾರನ್ನು ಹಲವರಿಗೆ ಮಾರಾಟ ಮಾಡಿದ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಒಂದೇ ಕಾರನ್ನು 14 ಬಾರಿ ಮಾರಾಟ ಮಾಡಿದ್ದ ಖದೀಮ ಕೊನೆಗೂ ಅಂದರ್

ಉತ್ತರ ಪ್ರದೇಶದ ಮನೋತ್ತಮ್ ತ್ಯಾಗಿ ಅಲಿಯಾಸ್ ಮನು ಬಂಧಿತ ಆರೋಪಿ. ಈತ ತನ್ನ ಕಾರನ್ನು 14 ಬಾರಿ ಹಲವರಿಗೆ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಒಂದೇ ಕಾರನ್ನು 14 ಬಾರಿ ಮಾರಾಟ ಮಾಡಿದ್ದ ಖದೀಮ ಕೊನೆಗೂ ಅಂದರ್

ಮನು ತನ್ನ ವ್ಯಾಗನ್ಆರ್ ಕಾರನ್ನು ಮೊರಾದಾಬಾದ್ ನಲ್ಲಿರುವ ತನ್ನ ಸ್ನೇಹಿತರಿಗೆ ಮಾರಾಟ ಮಾಡಿದ್ದಾನೆ. ಇದರ ಜೊತೆಗೆ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರನ್ನು ಸಹ ಮಾರಾಟ ಮಾಡಿದ್ದಾನೆ.

ಒಂದೇ ಕಾರನ್ನು 14 ಬಾರಿ ಮಾರಾಟ ಮಾಡಿದ್ದ ಖದೀಮ ಕೊನೆಗೂ ಅಂದರ್

ಮನು ನಕಲಿ ನಂಬರ್ ಪ್ಲೇಟ್‌ಗಳನ್ನು ಲಗತ್ತಿಸಿ ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟ ಮಾಡುತ್ತಿರುವುದಾಗಿ ಜಾಹೀರಾತು ನೀಡುತ್ತಿದ್ದ. ಕಾರು ಖರೀದಿಸುವವರು ಅವನ ಬಳಿ ಬಂದಾಗ ಅವರೊಂದಿಗೆ ಮಾತುಕತೆ ನಡೆಸಿ ಕಾರನ್ನು ಮಾರಾಟ ಮಾಡುತ್ತಿದ್ದ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಒಂದೇ ಕಾರನ್ನು 14 ಬಾರಿ ಮಾರಾಟ ಮಾಡಿದ್ದ ಖದೀಮ ಕೊನೆಗೂ ಅಂದರ್

ಮನು ತನ್ನ ಕಾರನ್ನು ಖರೀದಿದಾರರಿಗೆ ಹಸ್ತಾಂತರಿಸುವ ಮೊದಲು ಆ ಕಾರುಗಳಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸುತ್ತಿದ್ದ. ಕಾರು ಖರೀದಿಸುವವರಿಗೆ ಕಾರಿನ ಒಂದು ಕೀಯನ್ನು ಮಾತ್ರ ನೀಡುತ್ತಿದ್ದ.

ಒಂದೇ ಕಾರನ್ನು 14 ಬಾರಿ ಮಾರಾಟ ಮಾಡಿದ್ದ ಖದೀಮ ಕೊನೆಗೂ ಅಂದರ್

ಕಾರನ್ನು ಮಾರಾಟ ಮಾಡಿದ ನಂತರ ಕಾರಿನಲ್ಲಿದ್ದ ಜಿಪಿಎಸ್ ಸಹಾಯದಿಂದ ಕಾರಿರುವ ಸ್ಥಳವನ್ನು ಪತ್ತೆಹಚ್ಚಿ ತನ್ನ ಬಳಿಯಿದ್ದ ಎರಡನೇ ಕೀ ಮೂಲಕ ಮಾರಾಟ ಮಾಡಿದ್ದ ಕಾರನ್ನು ಕದಿಯುತ್ತಿದ್ದ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಒಂದೇ ಕಾರನ್ನು 14 ಬಾರಿ ಮಾರಾಟ ಮಾಡಿದ್ದ ಖದೀಮ ಕೊನೆಗೂ ಅಂದರ್

ಇತ್ತೀಚಿಗೆ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ಜೀತು ಯಾದವ್ ಎಂಬುವವರು ರೂ.2.70 ಲಕ್ಷ ನೀಡಿ ಮಾರುತಿ ವ್ಯಾಗನ್ಆರ್ ಕಾರನ್ನುಆತನಿಂದ ಖರೀದಿಸಿದ್ದರು. ಖರೀದಿಸಿದ ದಿನವೇ ಆ ಕಾರನ್ನು ಜೀತು ಯಾದವ್ ರವರ ಮನೆಯಿಂದ ಕಳುವು ಮಾಡಿ ಕಾರು ಮಾರಾಟಕ್ಕಿರುವುದಾಗಿ ಒಎಲ್ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ.

ಒಂದೇ ಕಾರನ್ನು 14 ಬಾರಿ ಮಾರಾಟ ಮಾಡಿದ್ದ ಖದೀಮ ಕೊನೆಗೂ ಅಂದರ್

ಈ ಕಾರಿನ ಫೋಟೋಗಳನ್ನು ನೋಡಿದ ಜೀತು ಯಾದವ್ ಅವರ ಸ್ನೇಹಿತ ಪ್ರದೀಪ್ ಕಾರನ್ನು ಗುರುತಿಸಿ, ಜೀತು ಯಾದವ್ ರವರ ಗಮನಕ್ಕೆ ತಂದಿದ್ದಾರೆ. ನಂತರ ಜೀತು ಯಾದವ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರದೀಪ್ ಸಹಾಯದಿಂದ ಮನುವನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Most Read Articles

Kannada
English summary
Man sold same car 14 times on OLX finally arrested by UP police. Read in Kannada.
Story first published: Wednesday, November 4, 2020, 17:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X