ಲಕ್ಷಾಂತರ ರೂಪಾಯಿ ದಂಡ ಕಟ್ಟಿಸಿದ ಬಟರ್ ಚಿಕನ್ ಮೇಲಿನ ಪ್ರೀತಿ

ಕರೋನಾ ವೈರಸ್ ನಿಂದಾಗಿ ಭಾರತ ಮಾತ್ರವಲ್ಲದೇ ಪ್ರಪಂಚದ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಕೆಲವೆಡೆ ಈ ಲಾಕ್‌ಡೌನ್ ನಿಂದ ವಿನಾಯಿತಿ ನೀಡಲಾಗಿದ್ದರೆ, ಇನ್ನೂ ಕೆಲವೆಡೆ ಲಾಕ್‌ಡೌನ್ ಮುಂದುವರೆದಿದೆ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ದಂಡ ಕಟ್ಟಿಸಿದ ಬಟರ್ ಚಿಕನ್ ಮೇಲಿನ ಪ್ರೀತಿ

ಇತ್ತೀಚಿಗೆ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿಗಳ ದಂಡ ಪಾವತಿಸಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ನಿವಾಸಿಯೊಬ್ಬನಿಗೆ ಬಟರ್ ಚಿಕನ್ ತಿನ್ನಬೇಕೆಂಬ ಆಸೆಯುಂಟಾಗಿದೆ. ಈ ಕಾರಣಕ್ಕೆ ತನ್ನ ಮನೆಯಿಂದ ಸುಮಾರು 32 ಕಿ.ಮೀ ದೂರದಲ್ಲಿರುವ ಸಿಟಿ ಸೆಂಟರ್ ಕಡೆಗೆ ಹೊರಟಿದ್ದಾನೆ. ಹೀಗೆ ಹೊರಟ ಆತನನ್ನು ತಡೆದ ಪೊಲೀಸರು ಆತನಿಗೆ 1652 ಡಾಲರ್ ದಂಡ ವಿಧಿಸಿದ್ದಾರೆ.

ಲಕ್ಷಾಂತರ ರೂಪಾಯಿ ದಂಡ ಕಟ್ಟಿಸಿದ ಬಟರ್ ಚಿಕನ್ ಮೇಲಿನ ಪ್ರೀತಿ

ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಈ ಕಾರಣಕ್ಕೆ ಅಗತ್ಯ ಸರಕುಗಳ ಅಂಗಡಿಗಳನ್ನು ಮಾತ್ರ ತೆರೆಯಲಾಗುತ್ತಿದೆ. ಆದರೆ ಒಂದೇ ಸ್ಥಳದಲ್ಲಿ ಜನ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಲಕ್ಷಾಂತರ ರೂಪಾಯಿ ದಂಡ ಕಟ್ಟಿಸಿದ ಬಟರ್ ಚಿಕನ್ ಮೇಲಿನ ಪ್ರೀತಿ

ಅಧಿಕಾರಿಗಳು ನಗರದ ಜನರಿಗೆ ಯಾವಾಗಲೂ ಮನೆಯಲ್ಲಿಯೇ ಇರುವಂತೆ ಹಾಗೂ ಜನದಟ್ಟಣೆಯ ಸ್ಥಳದಿಂದ ದೂರವಿರುವಂತೆ ಸೂಚನೆ ನೀಡಿದ್ದಾರೆ. ಲಾಕ್‌ಡೌನ್ ಸೇವೆಯಲ್ಲಿ ತೊಡಗಿರುವವರಿಗೂ ಸಹ ಮನೆಗಳಿಂದ ಹೊರ ಬರುವ ಸಾರ್ವಜನಿಕರನ್ನು ತಡೆಯುವುದಕ್ಕೆ ಕಷ್ಟವಾಗುತ್ತಿದೆ.

ಲಕ್ಷಾಂತರ ರೂಪಾಯಿ ದಂಡ ಕಟ್ಟಿಸಿದ ಬಟರ್ ಚಿಕನ್ ಮೇಲಿನ ಪ್ರೀತಿ

ಆದರೂ ಇದಕ್ಕೆ ತಲೆಕೆಡಿಸಿಕೊಳ್ಳದ ಕೆಲವರು ನಿಯಮಗಳನ್ನು ಪಾಲಿಸುತ್ತಿಲ್ಲ. ಜೊತೆಗೆ ವಿನಾಕಾರಣ ಮನೆಯಿಂದ ಹೊರಬರುತ್ತಿದ್ದಾರೆ. ಇದರಿಂದಾಗಿ ಕರೋನಾ ವೈರಸ್ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ಕಾರಣಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಲಕ್ಷಾಂತರ ರೂಪಾಯಿ ದಂಡ ಕಟ್ಟಿಸಿದ ಬಟರ್ ಚಿಕನ್ ಮೇಲಿನ ಪ್ರೀತಿ

ಇಂತಹ ಜನರಲ್ಲಿ ಈಗ ಸಿಕ್ಕಿಬಿದ್ದಿರುವ ವ್ಯಕ್ತಿ ಸಹ ಸೇರಿದ್ದಾನೆ. ಬಟರ್ ಚಿಕನ್ ಹುಡುಕುತ್ತಾ 32 ಕಿ.ಮೀ ದೂರ ಹೋಗಿದ್ದವನು ಇನ್ನೇನೂ ಬಟರ್ ಚಿಕನ್ ತಿಂದೆ ಬಿಡುವೆ ಎಂಬ ಖುಷಿಯಲ್ಲಿದ್ದ. ಆದರೆ ಆತನ ಆಸೆಗೆ ತಣ್ಣೀರೆರಚಿದ ಪೊಲೀಸರು 1652 ಡಾಲರ್ ದಂಡ ವಿಧಿಸಿದ್ದಾರೆ. ಇವನು ಮಾತ್ರ ಹೀಗೆ ಸಿಕ್ಕು ಬಿದ್ದು ದಂಡ ತೆತ್ತಿಲ್ಲ.

ಲಕ್ಷಾಂತರ ರೂಪಾಯಿ ದಂಡ ಕಟ್ಟಿಸಿದ ಬಟರ್ ಚಿಕನ್ ಮೇಲಿನ ಪ್ರೀತಿ

ಬದಲಿಗೆ ಲಾಕ್‌ಡೌನ್ ಜಾರಿಯಾದ 2 ಗಂಟೆಗಳಲ್ಲಿ, ಅನಗತ್ಯವಾಗಿ ಓಡಾಡುತ್ತಿದ್ದ 24 ಜನರು ಸಿಕ್ಕಿಬಿದ್ದಿದ್ದಾರೆ. ಮೂಲಗಳ ಪ್ರಕಾರ, 24 ಗಂಟೆಗಳಲ್ಲಿ ಒಟ್ಟು 13,000ಕ್ಕೂ ಹೆಚ್ಚು ವಾಹನಗಳನ್ನು ಪರಿಶೀಲಿಸಲಾಗಿದೆ. ಇಷ್ಟೊಂದು ಪ್ರಮಾಣದ ದಂಡ ತೆತ್ತ ಈ ವ್ಯಕ್ತಿಯ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಲಕ್ಷಾಂತರ ರೂಪಾಯಿ ದಂಡ ಕಟ್ಟಿಸಿದ ಬಟರ್ ಚಿಕನ್ ಮೇಲಿನ ಪ್ರೀತಿ

ಇದು ಪ್ರಪಂಚದ ಅತ್ಯಂತ ದುಬಾರಿ ಬೆಲೆಯ ಬಟರ್ ಚಿಕನ್ ಎಂದು ಟ್ರೋಲ್ ಮಾಡಲಾಗುತ್ತಿದೆ. ಕರೋನಾ ವೈರಸ್ ಕಾರಣಕ್ಕೆ ವಿಧಿಸಲಾಗಿರುವ ಲಾಕ್‌ಡೌನ್ ನಿಂದ ಜನರು ಅಸಮಾಧಾನಗೊಂಡಿದ್ದರೂ ಸುರಕ್ಷತೆಗಾಗಿ ಮನೆಯಲ್ಲಿರುವುದು ಒಳ್ಳೆಯದು.

ಮೂಲ: ಟೈಮ್ಸ್ ನೌ

ಸೂಚನೆ: ಇಲ್ಲಿರುವ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Man traveled 32 kms to have butter chicken pays hefty fine. Read in Kannada.
Story first published: Monday, July 20, 2020, 15:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more