ಎಲೆಕ್ಟ್ರಿಕ್ ಕಾರಿಗೆ ಪೆಟ್ರೋಲ್ ತುಂಬಿಸಲು ಹೋದ ಬೆಪ್ಪು ತಕ್ಕಡಿ

ಭಾರತವೂ ಸೇರಿದಂತೆ ವಿಶ್ವಾದ್ಯಂತ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೂ ಹೆಚ್ಚಿನ ಸಂಖ್ಯೆಯ ಜನರು ಪೆಟ್ರೋಲ್, ಡೀಸೆಲ್ ಕಾರುಗಳನ್ನೇ ಬಳಸುತ್ತಿದ್ದಾರೆ. ಅನೇಕ ವರ್ಷಗಳಿಂದ ಬಳಸುತ್ತಿರುವ ಕಾರಣಕ್ಕೋ ಏನೋ ಎಲೆಕ್ಟ್ರಿಕ್ ಕಾರುಗಳಲ್ಲೂ ಹಳೆಯ ಅಭ್ಯಾಸವನ್ನೇ ಮುಂದುವರೆಸಿ ನಗೆ ಪಟಾಲಿಗೇ ಈಡಾಗುತ್ತಾರೆ.

ಎಲೆಕ್ಟ್ರಿಕ್ ಕಾರಿಗೆ ಪೆಟ್ರೋಲ್ ತುಂಬಿಸಲು ಹೋದ ಬೆಪ್ಪು ತಕ್ಕಡಿ

ಅಮೆರಿಕಾದಂತಹ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಟೆಸ್ಲಾ ಕಂಪನಿ ಕಾರುಗಳು ಅಮೆರಿಕಾದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಇತ್ತೀಚಿಗೆ ನಗು ಉಕ್ಕಿಸುವಂತಹ ವೀಡಿಯೊವೊಂದು ಹೊರಬಂದಿದೆ. ಈ ವೀಡಿಯೊದಲ್ಲಿ ಎಲೆಕ್ಟ್ರಿಕ್ ಕಾರು ಚಾಲಕನೊಬ್ಬ ಪೆಟ್ರೋಲ್ ಬಂಕಿಗೆ ಹೋಗಿ ಕಾರಿಗೆ ಪೆಟ್ರೋಲ್ ತುಂಬಿಸುವ ಪ್ರಯತ್ನ ಮಾಡಿದ್ದಾನೆ.

ಎಲೆಕ್ಟ್ರಿಕ್ ಕಾರಿಗೆ ಪೆಟ್ರೋಲ್ ತುಂಬಿಸಲು ಹೋದ ಬೆಪ್ಪು ತಕ್ಕಡಿ

ಲಾಸ್ ವೇಗಾಸ್ ನಗರದ ಟೆಸ್ಲಾ 3 ಕಾರು ಚಾಲಕನ ಈ ಫಜೀತಿ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿರುವ ಈ ಚಾಲಕ ತನ್ನ ಟೆಸ್ಲಾ ಕಾರಿನಿಂದ ಹೊರಬಂದು ಕಾರಿನಲ್ಲಿ ಪೆಟ್ರೋಲ್ ತುಂಬಿಸುವ ಟ್ಯಾಂಕ್ ಎಲ್ಲಿದೆ ಎಂದು ಹುಡುಕುತ್ತಾನೆ. ಸ್ವಲ್ಪ ಸಮಯದ ನಂತರ ಆತನಿಗೆ ಅದು ಎಲೆಕ್ಟ್ರಿಕ್ ಕಾರು ಎಂಬ ಅರಿವಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಎಲೆಕ್ಟ್ರಿಕ್ ಕಾರಿಗೆ ಪೆಟ್ರೋಲ್ ತುಂಬಿಸಲು ಹೋದ ಬೆಪ್ಪು ತಕ್ಕಡಿ

ಈ ವೀಡಿಯೊವನ್ನು ಜಸ್ಟಿನ್ ಫ್ಲೂಮ್ ಎಂಬುವವರು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ. ಪೆಟ್ರೋಲ್ ಬಂಕ್ ನಲ್ಲಿ ಈ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಕಾರಿನಿಂದ ಇಳಿಯುವ ವ್ಯಕ್ತಿ ಪೆಟ್ರೋಲ್ ಪಂಪ್ ಹಿಡಿದು ಫ್ಯೂಯಲ್ ಟ್ಯಾಂಕ್ ಅನ್ನು ಹುಡುಕುತ್ತಾನೆ.

ಎಲೆಕ್ಟ್ರಿಕ್ ಕಾರಿಗೆ ಪೆಟ್ರೋಲ್ ತುಂಬಿಸಲು ಹೋದ ಬೆಪ್ಪು ತಕ್ಕಡಿ

ಸಾಮಾನ್ಯವಾಗಿ ಫ್ಯೂಯಲ್ ಟ್ಯಾಂಕ್ ಗಳು ಕಾರಿನ ಒಂದು ಬದಿಯಲ್ಲಿರುತ್ತವೆ. ಈ ಕಾರಣಕ್ಕೆ ಆತನು ಸಹ ಕಾರಿನ ಬದಿಗೆ ಬಂದು ಫ್ಯೂಯಲ್ ಟ್ಯಾಂಕ್ ನೋಡಿದ್ದಾನೆ. ಅಲ್ಲಿ ಕಾಣದೇ ಇದ್ದಾಗ ಕಾರಿನ ಹಿಂಭಾಗಕ್ಕೆ ಬರುತ್ತಾನೆ. ಅಲ್ಲಿಯೂ ಫ್ಯೂಯಲ್ ಟ್ಯಾಂಕ್ ಕಾಣದೇ ಇದ್ದಾಗ ಅದು ಎಲೆಕ್ಟ್ರಿಕ್ ಕಾರ್ ಎಂಬ ಅರಿವಾಗುತ್ತದೆ. ನಂತರ ಪೆಟ್ರೋಲ್ ಪಂಪ್ ಅನ್ನು ಪಕ್ಕಕ್ಕಿಟ್ಟು ಕಾರಿನಲ್ಲಿ ಕುಳಿತುಕೊಳ್ಳುತ್ತಾನೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಎಲೆಕ್ಟ್ರಿಕ್ ಕಾರಿಗೆ ಪೆಟ್ರೋಲ್ ತುಂಬಿಸಲು ಹೋದ ಬೆಪ್ಪು ತಕ್ಕಡಿ

ಟೆಸ್ಲಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಉತ್ಪಾದಿಸುತ್ತದೆ. ಟೆಸ್ಲಾ 3, ಕಂಪನಿಯ ನಾಲ್ಕು ಮಾದರಿಗಳ ಪೈಕಿ ಒಂದಾಗಿದೆ. ಕಂಪನಿಯ ಈ ಕಾರಿಗೆ ಪೆಟ್ರೋಲ್ ನ ಅಗತ್ಯವಿಲ್ಲ. ಈ ಎಲೆಕ್ಟ್ರಿಕ್ ಕಾರು ಚಾರ್ಜಿಂಗ್ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತದೆ.

ಟೆಸ್ಲಾ ಎಲೆಕ್ಟ್ರಿಕ್ ಕಾರುಗಳು ಒಂದು ಬಾರಿಯಾಗಿ ಪೂರ್ತಿ ಚಾರ್ಜ್ ಆದರೆ ಹೆಚ್ಚು ದೂರ ಚಲಿಸುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿರುವ ವ್ಯಕ್ತಿಯು ಚಾಲನೆ ಮಾಡುತ್ತಿದ್ದಿದ್ದು ತನ್ನ ಕಾರನ್ನಲ್ಲ. ಬದಲಿಗೆ ತನ್ನ ಸ್ನೇಹಿತನ ಕಾರನ್ನು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಎಲೆಕ್ಟ್ರಿಕ್ ಕಾರಿಗೆ ಪೆಟ್ರೋಲ್ ತುಂಬಿಸಲು ಹೋದ ಬೆಪ್ಪು ತಕ್ಕಡಿ

ಈ ಕಾರಣದಿಂದಾಗಿ, ಎಲೆಕ್ಟ್ರಿಕ್ ಕಾರು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಅರಿವು ಆತನಿಗಿರಲಿಲ್ಲ. ಮುಂಬರುವ ದಿನಗಳಲ್ಲಿ ಜನರು ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ ಎಂದು ಆಶಿಸೋಣ.

Most Read Articles

Kannada
English summary
Man tries to fill petrol to electric car. Read in Kannada.
Story first published: Friday, July 24, 2020, 19:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X