Maruti Cars: ಪಿಕ್ಅಪ್ ಟ್ರಕ್ ಆಗಿ ಬದಲಾದ ಪುಟ್ಟ ಮಾರುತಿ ಕಾರುಗಳು.. ಜಸ್ಟ್ 55,000ಕ್ಕೆ ಖರೀದಿಗೆ ಲಭ್ಯ!
ಭಾರತದಲ್ಲಿ ಪ್ರತಿಭೆಗಳಿಗೇನು ಕಡಿಮೆಯಿಲ್ಲ.. ತಮ್ಮಲಿರುವ ಅತೀವ ಬುದ್ದಿವಂತಿಕೆಯಿಂದ ಹಳೆಯ ಕಾರುಗಳನ್ನು ಹೊಸ ಕಾರುಗಳಂತೆ ಬದಲಾಯಿಸುವ ಅದೆಷ್ಟೋ ಉದಾಹರಣೆಗಳನ್ನು ನೋಡಿದ್ದೇವೆ. ಅದಕ್ಕೆ ಸಂಬಂಧಿಸಿದ ಹತ್ತಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ, ವ್ಯಕ್ತಿಯೊಬ್ಬರು ದುಡಿಯುವ ವರ್ಗದ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಣ್ಣ ಮಾರುತಿ ಕಾರುಗಳನ್ನು ಪಿಕ್ಅಪ್ ಟ್ರಕ್ ಆಗಿ ಬದಲಾಯಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ನೆಟ್ಟಿಗರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.
ಮಿಸ್ಟರ್ ಕಸ್ವಾನ್ ಎಕ್ಸ್‌ವೈಜಡ್ (Mr. Kaswan XYZ) ಎಂಬ ಹೆಸರಿನ ಯೂಟ್ಯೂಬ್ ಚಾಲನ್‌ನಲ್ಲಿ ಮಾರುತಿ ಕಾರುಗಳನ್ನು ಪಿಕ್ಅಪ್ ಟ್ರಕ್ ಆಗಿ ಪರಿವರ್ತಿಸಿರುವ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಮೊದಲ ವಿಡಿಯೋದಲ್ಲಿ ಗ್ಯಾರೇಜ್ ವೊಂದರಲ್ಲಿ ಮಾರುತಿ 800 (Maruti 800) ಕಾರು ಪಿಕ್ಅಪ್ ಟ್ರಕ್ ಬದಲಾಗಿ ನಿಂತಿರುವುದನ್ನು ನೋಡಬಹುದು. ಅದರ ವಿಶೇಷತೆಗಳ ಕುರಿತಂತೆ 'ಬ್ಲಾಗರ್' ವಿವರಿಸುತ್ತಿರುವುದನ್ನು ಸಹ ಕಾಣಬಹುದು.

ಈ ಪುಟ್ಟ ಗ್ಯಾರೇಜ್ ಮಾಲೀಕ, ರೂ.55,000ಕ್ಕೆ ಸಂಪೂರ್ಣವಾಗಿ ಬದಲಾವಣೆಗೆ ಒಳಪಟ್ಟ 'ಮಿನಿ ಪಿಕ್ಅಪ್ ಟ್ರಕ್'ನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬ್ಲಾಗರ್ ಹೇಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಒಂದೊಮ್ಮೆ ಯಾರಾದರೂ ಹಳೆಯ ಮಾರುತಿ 800 ಕಾರನ್ನು ತಂದುಕೊಟ್ಟು ಪಿಕ್ಅಪ್ ಟ್ರಕ್ ಆಗಿ ಪರಿವರ್ತಿಸಲು ಬಯಸಿದರೆ, ಕೇವಲ ರೂ.22,000ಕ್ಕೆ ಗ್ಯಾರೇಜ್ ಮಾಲೀಕರು ಸಿದ್ದಪಡಿಸುತ್ತಾರೆ ಎಂದು ಬ್ಲಾಗರ್ ವಿವರಿಸುತ್ತಾರೆ.
ಇದೇ ಬ್ಲಾಗರ್ ತನ್ನ ಯೂಟ್ಯೂಬ್ ಚಾಲನ್‌ನಲ್ಲಿ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಅದರಲ್ಲಿ ಮಾರುತಿ ಆಲ್ಟೊ (Maruti Alto) ಕಾರನ್ನು 'ಪಿಕ್ಅಪ್ ಟ್ರಕ್' ಆಗಿ ಮಾರ್ಪಾಡು ಮಾಡಿರುವುದನ್ನು ಕಾಣಬಹುದು. ಇದು ರೂ.85,000ಕ್ಕೆ ಗ್ರಾಹಕರ ಖರೀದಿಗೆ ದೊರೆಯುತ್ತದೆ ಎಂದು ಆ ಬ್ಲಾಗರ್ ತಿಳಿಸುತ್ತಾರೆ. ಹಳೆ ಕಾರನ್ನು ತಂದುಕೊಟ್ಟರೆ, ರೂ.24,000 ರಿಂದ ರೂ.28,000ಕ್ಕೆ 'ಪಿಕ್ಅಪ್ ಟ್ರಕ್'ನ್ನು ತಯಾರಿಸಿ ಕೊಡಲಾಗುತ್ತದೆ ಎಂದು ಬ್ಲಾಗರ್ ಹೇಳುತ್ತಾರೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೊಚ್ಚ ಹೊಸ ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಕಾರು, ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. 1-ಲೀಟರ್ ಡುಯಲ್ಜೆಟ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 24.39 ರಿಂದ 33.85 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ನೂತನ ಕಾರಿನಲ್ಲಿ 5 ಜನರು ಓಡಾಟ ನಡೆಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ, ಕಾರ್‌ಪ್ಲೇ, ಎಂಜಿನ್ ಸ್ಟಾರ್ಟ್/ಸ್ಟಾಪ್ ಟೆಕ್ನಾಲಜಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ನ್ನು ತನ್ನದಾಗಿಸಿಕೊಂಡಿದೆ.

ಮಾರುತಿ 800 (Maruti 800) ಕುರಿತಂತೆ ಹೇಳುವುದಾದರೆ, ಹಲವು ವರ್ಷಗಳ ಹಿಂದೆಯೇ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಇದು ರೂ.2.06 ಲಕ್ಷದಿಂದ ರೂ.2.47 ಲಕ್ಷ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿತ್ತು. ಪೆಟ್ರೋಲ್/ ಎಲ್‌ಪಿಜಿ ಎಂಜಿನ್ ಆಯ್ಕೆಯನ್ನು ಪಡೆದಿತ್ತು. 14 ರಿಂದ 16.1 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತಿತ್ತು.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications