Maruti 800: ವಿದೇಶಿಗರೇ ಹೀಗೆ ಮಾಡಿಫೈ ಮಾಡಿ ನೋಡೋಣ... ದೇಸಿ ಓಪನ್ ಟಾಪ್ ಮಾರುತಿ 800

ವಿದೇಶಗಳಲ್ಲಿ ಕಾರು ಮಾಡಿಫೈಗಳಂದ್ರೆ ಅದಕ್ಕೊಂದು ಪ್ರತ್ಯೇಕ ಅಭಿಮಾನಿಗಳೇ ಇದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಅವರು ಮಾಡುವ ಕಾರು ಮಾರ್ಪಾಡುಗಳನ್ನು ಕಂಡು ಹುಬ್ಬೇರಿಸಿರುವ ಉದಾಹರಣೆಗಳು ಇವೆ. ಆದ್ರೆ ಇದಕ್ಕೆಲ್ಲಾ ಸಾಕಷ್ಟು ಹಣ ವೆಚ್ಚಿಸಬೇಕಾಗಿರುತ್ತದೆ. ನಮ್ಮ ಭಾರತ ಕೂಡ ಯಾವುದೇ ವಿದೇಶಿ ಕಾರು ಮಾರ್ಪಾಡುಗಳಿಗೆ ಕಮ್ಮಿಯಿಲ್ಲ.

ನಮ್ಮಲ್ಲೂ ಪ್ರತಿಭಾನ್ವಿತ ಕಲಾಕಾರರು ಇದ್ದಾರೆ, ಆದ್ರೆ ಇಲ್ಲಿ ಮೂಲ ಸಮಸ್ಯೆಯೆಂದರೆ ಮಾಡಿಫೈಗೊಂಡ ವಾಹನಗಳನ್ನು ಅನುಮತಿಸುವುದಿಲ್ಲ. ಕೇವಲ ಅವನ್ನು ಮಾಡಿಫೈಗೊಳಿಸಿ ತಮ್ಮ ಖಾಸಗಿ ಸ್ಥಳಗಳಲ್ಲಿ ಮಾತ್ರ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕು ಅವನ್ನು ಸಾರ್ವಜನಿಕ ರಸ್ತೆಗಳಿಗೆ ತರುವಂತಿಲ್ಲ. ಕೆಲ ದೇಶಗಳಲ್ಲಿ ಇದೇ ಕಾನೂನು ಇದ್ರೆ ಇನ್ನೂ ಕೆಲ ದೇಶಗಳಲ್ಲಿ ಸಾರ್ವಜನಿಕ ರಸ್ತೆಗಳಿಗೆ ಅನುಮತಿಸಲಾಗುತ್ತದೆ.

maruti-800-modification-open-top-800

ಹಾಗಾಗಿ ಆ ದೇಶಗಳಲ್ಲಿ ಮಾಡಿಫೈ ವಾಹನಗಳನ್ನು ಹೆಚ್ಚಾಗಿ ನೋಡುತ್ತೇವೆ. ಭಾರತದಲ್ಲೂ ಎಲ್ಲಾ ನೀತಿ, ನಿಯಮಗಳ ನಡುವೆಯೂ ಹುಬ್ಬೇರಿಸುವಂತಹ ಮಾಡಿಫಿಕೇಷನ್‌ಗಳನ್ನು ಮಾಡಲಾಗುತ್ತದೆ. ನಮ್ಮ ಡ್ರೈವ್‌ಸ್ಪಾರ್ಕ್ ತಾಣದಲ್ಲೇ ಈ ಹಿಂದೆ ಭಾರತದಲ್ಲಿ ಮಾಡಿಫೈಗೊಳಿಸಿದ ವಾಹನಗಳ ಕುರಿತು ಹಲವು ಸುದ್ದಿಗಳನ್ನು ಬಿತ್ತರಿಸಿದ್ದೇವೆ. ಇದೀಗ ಓಪನ್ ಟಾಪ್ ಮಾರುತಿ 800 ಬಗ್ಗೆ ಹೇಳಲಿದ್ದೇವೆ.

ಟೈಪ್ 2 Maruti 800 ಅನ್ನು ಓಪನ್ ಟಾಪ್‌ನಂತೆ ಮಾರ್ಪಡಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ @adwaitxpilani ಎಂಬಾತ ಈ ವಿಡಿಯೋವನ್ನು ಹಂಚಿಕೊಂಡು ದೆಹಲಿ NCR ನ ಫರಿದಾಬಾದ್ ಪ್ರದೇಶದಲ್ಲಿ ಈ ಕಾರನ್ನು ಗುರುತಿಸಲಾಗಿದೆ ಎಂದು ವಿಡಿಯೋ ಕೆಳಗೆ ತಿಳಿಸಿದ್ದಾನೆ.

maruti-800-modification-open-top-800

ಸಿಲ್ವರ್ ಬಣ್ಣದ 800 ರೂಫ್ ಅದರ ಬಿ-ಪಿಲ್ಲರ್ ಮತ್ತು ಡಿ-ಪಿಲ್ಲರ್ ಸಂಪರ್ಕವನ್ನು ಕತ್ತರಿಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇದು ಆಫ್ಟರ್ ಮಾರ್ಕೆಟ್ ಅಲಾಯ್ ವೀಲ್‌ಗಳನ್ನು ಸಹ ಒಳಗೊಂಡಿದೆ. ವಿಡಿಯೋ ಹಂಚಿಕೊಂಡಿರುವಾತ ಎರಡು ನಗುವ ಇಮೋಜಿಗಳೊಂದಿಗೆ 'ಫರಿದಾಬಾದ್ ಕೆ ಎಂಜಿನಿಯರ್ಸ್' ಎಂದು ಶೀರ್ಷಿಕೆ ನೀಡಿದ್ದಾರೆ.

ಇದನ್ನು ಕಂಡು ನಗುವವರೆ ಹೆಚ್ಚು ಏಕೆಂದರೆ, ಕಂಪನಿಗಳು ನೀಡುವ ಕನ್ವರ್ಟಬಲ್ ಓಪನ್ ಟಾಪ್ ಮಾದರಿಗಳು ತುಂಬಾ ದುಬಾರಿ ಬೆಲೆ ಹೊಂದಿರುತ್ತವೆ. ಈಗ ಟೈಪ್ 2 ಮಾರುತಿ ಸುಜುಕಿ 800 ಅತ್ಯಂತ ಕಡಿಮೆ ಬೆಲೆ ಕಾರಾಗಿದ್ದು, ತಮ್ಮ ಇಚ್ಚೆಯಂತೆ ಈ ರೀತಿ ಮಾಡಿಫೈಗೊಳಿಸಿರುವುದು ಹಲವರಿಗೆ ಹುಬ್ಬೇರಿಸುವುದರ ಜೊತೆಗೆ ತಮಾಷೆಯಾಗಿಯೂ ಅನಿಸಿದೆ.

ಕಾನೂನು ಬಾಹಿರ: ಯಾವುದೇ ಕಾರಿನ ರೂಫ್ ಕತ್ತರಿಸುವುದು ಭಾರತದಲ್ಲಿ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಕಂಪನಿಗಳು ನೀಡಿದ ನಿರ್ದಿಷ್ಟ ವಿನ್ಯಾಸ ಮತ್ತು ವಾಹನದ ರಚನೆಯನ್ನು ಬದಲಾವಣೆ ಮಾಡುವಂತಿಲ್ಲ. ಇದಲ್ಲದೆ, ಕಾರಿನ ಮೇಲ್ಛಾವಣಿಯನ್ನು ಕತ್ತರಿಸುವುದು ವಾಹನದ ರಚನಾತ್ಮಕ ಸಮಗ್ರತೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಇಂತಹ ವಾಹನವು ಆ ವಾಹನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮತ್ತು ರಸ್ತೆಯಲ್ಲಿರುವ ಇತರ ವಾಹನ ಸವಾರರಿಗೆ ಅಪಾಯವನ್ನುಂಟುಮಾಡುತ್ತದೆ. ಟಾಪ್ ಕತ್ತರಿಸಿದ 800 ಖಂಡಿತವಾಗಿಯೂ ವಿನೋದಮಯವಾಗಿದ್ದರೂ, ಕಾನೂನು ಬಾಹಿರವಾಗಿರುವುದರಿಂದ ಇಂತವುಗಳನ್ನು ಪ್ರೋತ್ಸಾಹಿಸಬಾರದು. ಈ ವೀಡಿಯೊದಲ್ಲಿನ್ನ 800 ತುಂಬಾ ಹಳೆಯದಾಗಿರಬಹುದು, ವಾಹನದ ಸ್ಕ್ರ್ಯಾಪ್ ಮಾಡುವ ಮುನ್ನ ಮಾಲೀಕ ಪ್ರಯೋಗ ಮಾಡಿರಬೇಕು ಎಂದೆನಿಸುತ್ತಿದೆ.

More from DriveSpark

Article Published On: Friday, July 21, 2023, 13:47 [IST]
English summary
Maruti 800 modification open top 800
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+