Maruti: ಆಲ್ಟೋ ಮುಂದೆ ಮಹೀಂದ್ರಾ ಥಾರ್, ಜಿಮ್ನಿ ಡಮ್ಮಿ... ಹೇಗೆ ಮುನ್ನುಗಿದೆ ನೋಡಿ ವಿಡಿಯೋ!
ಮಾರುತಿ ಸುಜುಕಿ ನೀಡುತ್ತಿದ್ದ ಬೆಸ್ಟ್ ಕಾರುಗಳಲ್ಲಿ ಆಲ್ಟೋ ಕೂಡ ಒಂದು. ಈ ಸಣ್ಣ ಹ್ಯಾಚ್‌ಬ್ಯಾಕ್ ನೋಡಲು ಪುಟಾಣಿ ಕಾರಿನಂತಿದ್ದರೂ ಐದು ಮಂದಿ ಪ್ರಯಾಣಕ್ಕೆ ಬೆಸ್ಟ್ ಕಾರಾಗಿ ಮಧ್ಯಮ ವರ್ಗದ ಅದೇಷ್ಟೋ ಜನರ ಕಾರು ಖರೀದಿಸುವ ಕನಸನ್ನು ನನಸಾಗಿದೆ. ಇದನ್ನು ದೇಶದಲ್ಲಿ 'ಲಾರ್ಡ್ ಆಲ್ಟೋ' ಎಂದು ಸಹ ಕರೆಯಲಾಗುತ್ತದೆ. ಹೀಗೆ ಏಕೆ ಕರೆಯಲಾಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿ ಇತ್ತೀಚಿನ ವಿಡಿಯೋ ಸಾಭೀತು ಪಡಿಸಿದೆ. ಹಿಮಾಚಲ ಪ್ರದೇಶದಲ್ಲಿ ಮಂಜಿನಿಂದ ಕೂಡಿದ್ದ ರಸ್ತೆಯಲ್ಲಿ ಮಾರುತಿ ಆಲ್ಟೋ ತೋರಿದ ಪರ್ಫಾಮೆನ್ಸ್‌ಗೆ ಎಲ್ಲರು ಮೆಚ್ಚಲೇಬೇಕು.
ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಮಹೀಂದ್ರಾ ಥಾರ್, ಮಾರುತಿ ಜಿಮ್ನಿ, ಜಿಪ್ಸಿಯಂತಹ ಆಫ್‌ರೋಡ್ ವಾಹನಗಳಿಗೆ ಟಾಂಗ್ ಕೊಡುವ ರೀತಿಯಲ್ಲಿ ಆಲ್ಟೋ ಮುನ್ನುಗ್ಗಿದೆ. ಹಿಮಾಚಲದ ಎತ್ತರದ ಪ್ರದೇಶವೊಂದಕ್ಕೆ ದಾರಿಮಾಡಿಕೊಡುವ ರಸ್ತೆಯು ಬಹುತೇಕ ಮಂಜಿನಿಂದ ಕೂಡಿತ್ತು. ಈ ರಸ್ತೆಯಲ್ಲಿ ಮಹೀಂದ್ರಾ ಥಾರ್, ಮಾರುತಿ ಜಿಮ್ನಿ, ಜಿಪ್ಸಿ ವಾಹನಗಳು ಮುಂದಕ್ಕೆ ಸಾಗಲು ಪರದಾಡುವ ದೃಶ್ಯಗಳನ್ನು ಇಲ್ಲಿ ನೋಡಬಹುದು.

ಆದರೆ 'ಲಾರ್ಡ್ ಆಲ್ಟೋ' ಮಾತ್ರ ಇವೆಲ್ಲವನ್ನು ಮೀರಿ ಸಲೀಸಾಗಿ ಅದೇ ರಸ್ತೆಯಲ್ಲಿ ಮುನ್ನುಗ್ಗಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಅದರಲ್ಲೂ ಜಿಮ್ನಿ, ಥಾರ್‌ನಂತಹ ಆಫ್‌ರೋಡ್ ಎಸ್‌ಯುವಿಗಳಲ್ಲಿ ನೀಡಲಾಗುವ ಅತ್ಯಾಧುನಿಕ ಆಫ್‌ರೋಡ್ ತಂತ್ರಜ್ಞಾನಗಳು, ಪವರ್‌ಫುಲ್ ಎಂಜಿನ್ ಆಲ್ಟೋದಲ್ಲಿ ಇಲ್ಲದಿದ್ದರೂ ಸಲೀಸಾಗಿ ಮಂಜಿನಿಂದ ಕೂಡಿದ್ದ ಬೆಟ್ಟದ ರಸ್ತೆಯನ್ನು ನಿಭಾಯಿಸಿದೆ. ಇದು ಹೇಗೆ ಸಾಧ್ಯ ಅಂತೀರಾ? ಬನ್ನಿ ತಿಳಿಯೋಣ.
ಮಾರುತಿ ಆಲ್ಟೋ ಕಾರಿನ ಕಡಿಮೆ ತೂಕದ ಫ್ರೇಮ್ ಹಾಗೂ ಚಾಲಕನ ಚಾಣಾಕ್ಷತನದ ಡ್ರೈವಿಂಗ್ ಕೌಶಲ್ಯವು ಇಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಚಾಲಕ ಜಾರುವ ರಸ್ತೆ ಜಾಗಗಳನ್ನು ಎಚ್ಚರಿಕೆ ವಹಿಸಿ ನಿಭಾಯಿಸಿ ಚಾಲನೆ ಮಾಡಬೇಕಾಗುತ್ತದೆ. ಹಾಗೆಯೇ ಆಲ್ಟೋ ಕಾರಿನ ಮುಂಭಾಗದ ಟೈರ್‌ಗಳಿಗೆ ಚೈನ್ ಹೊಂದಾಣಿಕೆಯಾಗಿದೆ. ಇದು ಮಂಜಿನಿಂದ ಕೂಡಿರುವ ಜಾರುವ ರಸ್ತೆಗಳಲ್ಲಿ ಉತ್ತಮ ಹಿಡಿತವನ್ನು ಒದಗಿಸುತ್ತದೆ. ಇವೆಲ್ಲದರ ನಡುವೆಯೂ ಚಾಲಕನ ಕೌಶಲ್ಯ ತುಂಬಾ ಮುಖ್ಯ.

ಇಂತಹ ಎತ್ತರದ ಮಂಜಿನ ಜಾರುವ ಪ್ರದೇಶಗಳಲ್ಲಿ ಹೈ-ಎಂಡ್ ಕಾರುಗಳಲ್ಲಿನ ಆಲ್ - ವೀಲ್ - ಡ್ರೈವ್ ಸ್ಟಿಸ್ಟಮ್ ಕೆಲಸ ಮಾಡದಿರಬಹುದು. ಇಂತಹ ರಸ್ತೆಗಳಲ್ಲಿ ಕೇವಲ ಆಧುನಿಕ ಫೀಚರ್‌ಗಳು ಮಾತ್ರವಲ್ಲ, ಇನ್ನೂ ಕೆಲ ಪ್ರಮುಖ ಅಂಶಗಳು ನಿರ್ಣಾಯಕವಾಗಿರುತ್ತವೆ. ಅದರಲ್ಲಿ ಮೊದಲನೆಯದು ವಾಹನದ ತೂಕ, ಕಡಿಮೆ ತೂಕವಿರುವ ವಾಹನಗಳು ಸಲೀಸಾಗಿ ಇಂತಹ ರಸ್ತೆಗಳನ್ನು ನಿಭಾಯಿಸಬಲ್ಲವು. ಹಾಗಾಗಿಯೇ ಹೆಚ್ಚು ತೂಕದ ಥಾರ್, ಜಿಮ್ನಿ ರಸ್ತೆಯಲ್ಲಿ ಚಲಿಸಲು ಸಾಧ್ಯವಾಗಿಲ್ಲ.
ಆಲ್ - ವೀಲ್ - ಡ್ರೈವ್ ಇರುವ ವಾಹನಗಳನ್ನು ಕೂಡ ಇಂತಹ ಜಾರುವ ಮಂಜಿನ ರಸ್ತೆಗಳಲ್ಲಿ ಓಡಿಸಲು ವಿಶೇಷ ಕೌಶಲ್ಯವಿರಬೇಕು. ಏಕೆಂದರೆ ಸಾಮಾನ್ಯ ರಸ್ತೆಗಳಲ್ಲಿ ಆಲ್ - ವೀಲ್ - ಡ್ರೈವ್ ಸಿಸ್ಟಮ್ ಬಳಸಿ ಓಡಿಸುವುದೇ ಬೇರೆ, ಇಂತಹ ಮಂಜಿನ ರಸ್ತೆಗಳಲ್ಲಿ ಓಡಿಸುವುದೇ ಬೇರೆ. ಉತ್ತಮ ಡ್ರೈವಿಂಗ್ ಕೌಶಲ್ಯವಿದ್ದರೇ ದೊಡ್ಡ ಭಾರವಾದ ವಾಹನಗಳನ್ನು ಕೂಡ ಓಡಿಸಬಹುದು.
ಅಂದರೆ ಕಡಿಮೆ ಟ್ರೈರ್ ಪ್ರೆಷರ್ ಇಂತಹದ ರಸ್ತೆಗಳಿಗೆ ಉತ್ತಮವಾಗಿರುತ್ತದೆ, ಜೊತೆಗೆ ಟೈರ್‌ಗಳಿಗೆ ಚೈನ್‌ಗಳಿದ್ದರೆ ಗ್ರಿಪ್ ಇನ್ನಷ್ಟು ಹೆಚ್ಚಿಸುತ್ತದೆ. ಹಾಗೆಯೇ ವಿಶೇಷವಾಗಿ ಇಂತಹ ರಸ್ತೆಗಳಿಗಾಗಿಯೇ ತಯಾರಿಸಲಾದ ಟೈರ್‌ಗಳನ್ನು ಬಳಸಿದರೆ ಇನ್ನೂ ಉತ್ತಮ. ನೀವು ಕೂಡ ಇಂತಹ ರಸ್ತೆಗಳಲ್ಲಿ ಕಾರುಗಳನ್ನು ನಿಭಾಯಿಸಿದ್ದರೆ ಕಮೆಂಟ್‌ನಲ್ಲಿ ತಿಳಿಸಿ, ಹಾಗೆಯೇ ಆಲ್ಟೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications