ಐಷಾರಾಮಿ ಸ್ಪೋರ್ಟ್ಸ್ ಕಾರಿನಂತೆ ಮಾರ್ಪಾಡಾದ ಬಡವರ ಮಾರುತಿ ಆಲ್ಟೋ ಕಾರಿಗೆ ನೆಟ್ಟಿಗರು ಫಿದಾ

ಕಾರು ಮಾಡಿಫೈ (Car Modifi) ಒಂದು ಕಲೆ. ಕಾರು ಪ್ರೇಮಿಗಳು ತಮ್ಮ ಕಾರುಗಳನ್ನು ವಿಭಿನ್ನವಾಗಿ ಮಾಡಿಫೈಗೊಳಿಸಲು ಇಷ್ಟಪಡುತ್ತಾರೆ. ಆದರೆ ಭಾರತೀಯ ಕಾನೂನಿನ ಪ್ರಕಾರ, ಯಾವುದೇ ರೀತಿಯ ಮಾಡಿಫೈಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಕೆಲವು ವಿಭಿನ್ನವಾಗಿ ಮಾಡಿಫೈಗೊಂಡ ವಾಹನಗಳ ಚಿತ್ರಗಳು ಬಹಿರಂಗವಾಗುತ್ತದೆ.

ಇತ್ತೀಚೆಗೆ ಮಾಡಿಫೈಗೊಂಡ ಮಾರುತಿ ಆಲ್ಟೊ 800 ಹ್ಯಾಚ್‌ಬ್ಯಾಕ್ ವೀಡಿಯೋ ವೈರಲ್ ಆಗಿದೆ. ಈ ಕಾರು ಮಾಡಿಫೈ ವೀಡಿಯೊವನ್ನು ಮ್ಯಾಗ್ನೆಟೋ 11 ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಯುರೋಪಿಯನ್ ಮಾರುಕಟ್ಟೆಯಲ್ಲಿ ಲಭ್ಯವಿರುವ 2-ಡೋರ್ ಸ್ಪೋರ್ಟ್ಸ್ ಕಾರ್ ಸ್ಮಾರ್ಟ್ ರೋಡ್‌ಸ್ಟರ್ ಕೂಪ್‌ನಂತೆಯೇ ಮಾರುತಿ ಆಲ್ಟೊ (Maruti Alto) 800 ಕಾರನ್ನು ಮಾಡಿಫೈ ಮಾಡಿದ್ದಾರೆ.

Maruti Alto Modified

ಮಾಡಿಫೈಗೊಂಡ ಕಾರು ಮೂಲ ಮಾರುತಿ ಆಲ್ಟೊದಂತೆ ಕಾಣುತ್ತಿಲ್ಲ ಎಂಬುವುದು ಗಮನಾರ್ಹ ಸಂಗತಿ. ಇದು ಸಂಪೂರ್ಣವಾಗಿ ಸ್ಪೋರ್ಟ್ಸ್ ಕಾರ್ ಲುಕ್ ಅನ್ನ್ನು ಹೊಂದಿದೆ. ಈ ಮಾಡಿಫೈಗೊಂಡ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಾರಿನ ಮುಂಭಾಗದಲ್ಲಿ ನವೀಕರಣವನ್ನು ಮಾಡಿದೆ. ಕಾರಿನ ಮಂಬಾಗದ ಹೆಡ್‌ಲ್ಯಾಂಪ್‌ಗಳೊಂದಿಗೆ ಬದಲಾಯಿಸಿದೆ. ಮುಂಭಾಗದಲ್ಲಿ U- ಆಕಾರದ, ಬೂದು ಬಣ್ಣದ ಸ್ವಿಲರ್ ಸ್ಟ್ರೀಪ್ ಅನ್ನು ನೀಡಿದೆ.

ಇದರೊಂದಿಗೆ ಕಾರಿನ ಮುಂಭಾಗದ ಬಂಪರ್ ಪ್ರತಿ ಬದಿಯಲ್ಲಿ ಫಾಗ್ ಲ್ಯಾಂಪ್ ಗಳು ಮತ್ತು ಎಲ್ಇಡಿ ಟರ್ನ್ ಇಂಡಿಕೇರ್ಗ್ ಗಳೊಂದಿಗೆ ಏರ್ ಡ್ಯಾಮ್ ಅನ್ನು ಒಳಗೊಂಡಿದೆ. ಈ ಮಾಡಿಫೈ ಕಾರಿನಲ್ಲಿ ಇರುವ ಯಾವುದೇ ಲ್ಯಾಂಪ್ ಗಳು ಸ್ಟಾಕ್ ಇಲ್ಲ. ಸೈಡ್ ಪ್ರೊಫೈಲ್‌ಗೆ ಬಂದರೆ ಕಾರಿನ ಲುಕ್ ಅನ್ನು ಸಂಪೂರ್ಣವಾಗಿ ಬದಲಾಯಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ.

Maruti Alto Modified

ಮುಂಭಾಗದಂತೆಯೇ, ಕಾರಿನ ಸೈಡ್ ಪ್ರೊಫೈಲ್ ಕೂಡ ವಿಭಿನ್ನ ನೋಟವನ್ನು ಹೊಂದಿದೆ ಮತ್ತು ಡೋನರ್ ಕಾರನ್ನು ಹೋಲುವುದಿಲ್ಲ. ಮೂಲ 4-ಡೋರ್ ಮಾರುತಿ ಆಲ್ಟೊವನ್ನು 2-ಡೋರಿನ ಕಾರಾಗಿ ಪರಿವರ್ತಿಸಲಾಗಿದೆ. ಕಾರಿನ ಡೋರ್ ಹ್ಯಾಂಡಲ್‌ಗಳು ಆಲ್ಟೊದಿಂದ ಬಂದಿದ್ದು, ಕಾರು ಈಗ 13-ಇಂಚಿನ ಆಫ್ಟರ್‌ಮಾರ್ಕೆಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಈ ಕಾರಿನ ಹಿಂಭಾಗದಲ್ಲಿ, ಸಣ್ಣ ಕ್ವಾರ್ಟರ್ ಪ್ಯಾನೆಲ್, ಸ್ವಲ್ಪ ಓರೆಯಾದ ರೂಫ್ ಆಫ್ಟರ್ ಮಾರ್ಕೆಟ್ ಟೈಲ್ ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು, ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ನಂಬರ್ ಪ್ಲೇಟ್ ಹೊಂದಿದೆ. ಈ ಕಾರಿನಲ್ಲಿ ಲೆದರ್ ಅಂಶಗಳನ್ನು ಬಳಿಸಿ ಡೋರ್ ಪ್ಯಾಡ್‌ಗಳನ್ನು ಮಾಡಲಾಗಿದೆ. ಒಳಭಾಗದಲ್ಲಿ ಬ್ಲು ಮತ್ತು ಬ್ಲ್ಯಾಕ್ ಬಣ್ಣದ ಡ್ಯುಯಲ್-ಟೋನ್ ಶೇಡ್‌ನಲ್ಲಿ ಪೂರ್ಣಗೊಳಿಸಲಾಗಿದೆ.

Maruti Alto Modified

ಆಫ್ಟರ್ ಮಾರ್ಕೆಟ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನೀಡಲಾಗಿದೆ. ಡ್ಯಾಶ್‌ಬೋರ್ಡ್ ಮೂಲ ಆಲ್ಟೊದಿಂದ ಬದಲಾಗದೆ ಉಳಿದಿದೆ. ಕಸ್ಟಮೈಸೇಶನ್‌ಗಳಿಗಾಗಿ ಅನೇಕ ಪೂರ್ವ-ನಿರ್ಮಿತ ಬಾಡಿ ಕಿಟ್‌ಗಳನ್ನು ನೀಡಲಾಗಿದೆ. ಇನ್ನು ಈ ಕಾರಿನಲ್ಲಿ ನೀಡಿವ ಪ್ಯಾನೆಲ್ ಎಲ್ಲಾ ಮನೆಯಲ್ಲೇ ತಯಾರಿಸಲಾಗಿದೆ. ಇನ್ನುಎಂಜಿನ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಮಾರುತಿ ಆಲ್ಟೋ 800 ಕಾರಿನ ವಿಷಯಕ್ಕೆ ಬಂದರೆ, ಈ ಮಾರುತಿ ಸುಜುಕಿ ಆಲ್ಟೋ ಕಾರು ಅದರ ಕೈಗೆಟುಕುವಿಕೆ, ಪ್ರಾಯೋಗಿಕತೆ ಮತ್ತು ಕಡಿಮೆ ನಿರ್ವಹಣೆ ವೆಚ್ಚಗಳಿಗೆ ಹೆಸರುವಾಸಿಯಾಗಿದೆ. ಈ ಮಾರುತಿ ಆಲ್ಟೋ 800 ಕಾರಿನಲ್ಲಿ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಡಬಲ್ ಡೀನ್ ಇನ್ಪೋಟೈನ್‌ಮೆಂಟ್, ಯುಎಸ್‌ಬಿ, ಬ್ಲ್ಯೂಟೂಥ್ ಮತ್ತು ಆಕ್ಸ್ ಇನ್ ಸೌಲಭ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 22, 2024, 16:58 [IST]
English summary
Maruti alto modified into roadster coupe details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+