ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜಾ

ಪ್ರತಿಯೊಬ್ಬ ಕಾರು ಪ್ರೇಮಿಗೂ ಮಾಡಿಫೈ ಕಾರೆಂದರೆ ಸಖತ್ ಕ್ರೇಜ್ ಇರುತ್ತೆ. ಆದರೆ ಇಲ್ಲಿ ನಾವು ಹೇಳಲು ಹೊರಟಿರುವ ವ್ಯಕ್ತಿ ಮಾತ್ರ ಮಾಡಿಫಿಕೇಷನ್‌ನಲ್ಲಿ ಪಿಹೆಚ್‌ಡಿ ಮಾಡಿದ್ದಾರಾ ಎಂದೆನಿಸುತ್ತದೆ. ಏಕೆಂದರೆ 8 ಲಕ್ಷ ರೂ. ಕಾರನ್ನು 72 ಲಕ್ಷ ರೂ. ಮೌಲ್ಯದ ರೇಂಜ್ ರೋವರ್ ಇವೋಕ್ ಮಾದರಿಯಂತೆ ಮಾಡಿಫೈಗೊಳಿಸಿದ್ದಾನೆ.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ಮಾಡಿಫೈ ಕಾರುಗಳು ಆಟೋ ಉದ್ಯಮದಲ್ಲಿ ತನ್ನದೇ ಪ್ರಭಾವವನ್ನು ಹೊಂದಿದ್ದು, ವಾಹನ ಪ್ರಿಯರು ತಮ್ಮ ನೆಚ್ಚಿನ ವಿನ್ಯಾಸಗಳನ್ನು ಹೊಂದಿರುವ ವಾಹನಗಳನ್ನು ಪಡೆದುಕೊಳ್ಳಲು ಒಂದು ಉತ್ತಮ ಮಾರ್ಗವೆಂದೇ ಹೇಳಬಹುದು. ಹೀಗಾಗಿ ಮಾಡಿಫೈ ವಿನ್ಯಾಸಕಾರರಿಗೆ ಜಗತ್ತಿನಾದ್ಯಂತ ಭಾರೀ ಬೇಡಿಕೆ ಇದೆ.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ನಮ್ಮ ಭಾರತದಲ್ಲೂ ವಾಹನ ಪ್ರೇಮಿಗಳು ಮುಗಿಬಿದ್ದು ತಮ್ಮ ಹೊಸ ವಾಹನಗಳನ್ನು ಕಂಪನಿ ನೀಡುವ ಡಿಸೈನ್‌ ಅನ್ನು ಸಂಪೂರ್ಣವಾಗಿ ಬದಲಿಸುತ್ತಾರೆ. ಬೈಕ್ ಆಗಿರಲಿ, ಕಾರೇ ಆಗಿರಲಿ ಅದನ್ನು ತಮ್ಮಿಷ್ಟದ ರೀತಿಯಲ್ಲಿ ಮಾರ್ಪಾಡು ಮಾಡಿಕೊಳ್ಳುವುದು ಕೆಲವರಿಗೆ ಹೆಮ್ಮೆಯೆನಿಸುತ್ತದೆ. ಅಲ್ಲದೇ ರಸ್ತೆಯಲ್ಲಿ ಸಂಚರಿಸುವಾಗ ಎಲ್ಲರ ಗಮನ ಸೆಳೆಯುತ್ತದೆ.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ಕಾರುಗಳು ಮತ್ತು ಬೈಕ್‌ಗಳ ಇಂತಹ ಅನೇಕ ಮಾರ್ಪಾಡುಗಳು ಅವುಗಳ ಮೂಲ ನೋಟವನ್ನೇ ಸಂಪೂರ್ಣವಾಗಿ ಬದಲಿಸಿಬಿಡುತ್ತವೆ. ಇದೇ ರೀತಿಯ ಕಾರ್ ಮಾಡಿಫಿಕೇಶನ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮಾರುತಿ ಬ್ರೆಝಾವನ್ನು ಮಾಡಿಫೈ ಮಾಡಿ ವಿಭಿನ್ನ ಕಾರನ್ನು ತಯಾರಿಸಲಾಗಿದೆ.

ಇದ್ಯಾವ ಕಾರು ಎಂದು ಜನರು ಒಂದು ಕ್ಷಣ ಗೊಂದಲಕ್ಕೀಡಾಗಿದ್ದಾರೆ. ವಾಸ್ತವವಾಗಿ, ಮಾರುತಿ ಬ್ರೆಜ್ಜಾವನ್ನು ಮಾರ್ಪಡಿಸಿ ರೇಂಜ್ ರೋವರ್‌ನಂತೆ ಮಾಡಲಾಗಿದೆ. ಈ ಮಾರ್ಪಡಿಸಿದ ಕಾರಿನ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿದ್ದು ಸಖತ್ ವೈರಲ್ ಆಗುತ್ತಿದೆ.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ವಾಸ್ತವವಾಗಿ ಈ ಕಾರು ಇತ್ತೀಚೆಗೆ ಬಿಡುಗಡೆಯಾದ ಹೊಸ ತಲೆಮಾರಿನ ಮಾರುತಿ ಬ್ರೆಝಾ ಎಂದು ಹೇಳಲಾಗುತ್ತಿದೆ. ವಾಹನದ ನೋಂದಣಿ ಸಂಖ್ಯೆಯ ಪ್ರಕಾರ ಪಂಜಾಬ್ ಮೂಲದ ಕಾರು ಎಂದು ಗೊತ್ತಾಗಿದೆ. ಕಾರಿನ ಸಂಪೂರ್ಣ ವಿನ್ಯಾಸವನ್ನೇ ಬದಲಾಯಿಸಿರುವ ವಿಡಿಯೋವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ಥೇಟ್ ಅದೇ ಡಿಸೈನ್

ರೇಂಜ್ ರೋವರ್ ಇವೊಕ್ ಕಾರಿನ ಡಿಸೈನ್‌ ಅನ್ನು ಬ್ರೆಜ್ಜಾಗೆ ನೀಡಲಾಗಿದೆ. ಈ ಮೂಲಕ ಬ್ರೆಜ್ಜಾ ಮುಂಭಾಗದಿಂದ ಹಿಂಭಾಗಕ್ಕೆ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ. ಕಾರಿನ ಮುಂಭಾಗದಲ್ಲಿ ರೇಂಜ್ ರೋವರ್ ಎಂಬ ದೊಡ್ಡ ಅಕ್ಷರಗಳನ್ನು ಮೂಲ ಮಾದರತಿಯಂತೆ ಬರೆರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ಕಾರಿನಲ್ಲಿ ದೊಡ್ಡ ಬದಲಾವಣೆಗಳನ್ನು ನೋಡುವುದಾದರೆ, ಅದರ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ಗಳಲ್ಲಿ ರೇಂಜ್ ರೋವರ್ ಡಿಸೈನ್ ನೀಡಲಾಗಿದೆ. ಈ ಕಾರಿನ ಸೈಡ್ ಪ್ರೊಫೈಲ್ ಕುರಿತು ಮಾತನಾಡುವುದಾದರೆ, ಇದರಲ್ಲಿ ಕಂಡುಬರುವ ಸ್ಟಾಕ್ ಅಲಾಯ್ ವೀಲ್‌ಗಳನ್ನು ಬದಲಿಸಿ ಮಲ್ಟಿಸ್ಪೋಕ್ ಅಲಾಯ್ ವೀಲ್‌ಗಳು ಮತ್ತು ಅಗಲವಾದ ಟೈರ್‌ಗಳನ್ನು ನೀಡಲಾಗಿದೆ.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ಅಲ್ಲದೇ ಕಾರಿಗೆ ಸ್ಪೋರ್ಟಿ ಲುಕ್ ನೀಡಲು ಬ್ರೇಕ್ ಕ್ಯಾಲಿಪರ್‌ಗೆ ನಿಯಾನ್ ಬಣ್ಣ ಬಳಿಯಲಾಗಿದೆ. ಇದರಲ್ಲಿ ವೀಲ್ ಆರ್ಚ್ ಗೂ ಕಪ್ಪು ಬಣ್ಣಕ್ಕೆ ಬದಲಾಗಿ ಬಿಳಿ ಬಣ್ಣ ಬಳಿಯಲಾಗಿದೆ. ಕಾರಿನ ದೇಹದ ಬಣ್ಣವನ್ನು ಕೂಡ ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ಬದಲಾಯಿಸಲಾಗಿದೆ. ಈ ಮೂಲಕ ಕಾರು ಥೇಟ್‌ ರೆಂಜ್ ರೋವರ್‌ನಂತೆ ಕಾಣುತ್ತಿದೆ.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ಕಾರಿನ ಎ, ಬಿ ಮತ್ತು ಸಿ ಪಿಲ್ಲರ್‌ಗಳು ಡ್ಯುಯಲ್ ಟೋನ್ ಲುಕ್ ನೀಡುವ ಮೂಲಕ ರೂಫ್ ಅನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿ ಇರಿಸಲಾಗಿದೆ. ಹಿಂಭಾಗದಲ್ಲಿ, ಟೈಲ್‌ಗೇಟ್ ಲ್ಯಾಂಡ್ ರೋವರ್ ಲೋಗೋ ಜೊತೆಗೆ ದೊಡ್ಡ ಅಕ್ಷರಗಳಲ್ಲಿ ರೇಂಜ್ ರೋವರ್ ಇವೊಕ್ ಹೆಸರನ್ನು ಕಾಣಬಹುದು. ಈ ವಿನ್ಯಾಸವು ಹೆಚ್ಚು ಆಕರ್ಷಣೀಯವಾಗಿ ಕಾಣುತ್ತದೆ.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ಕಾರಿನ ಟೈಲ್‌ಲೈಟ್‌ಗಳು ಬದಲಾಗದೆ ಉಳಿದಿವೆ, ಆದರೆ ಹಿಂಭಾಗದ ಬಂಪರ್ ಅನ್ನು ಸಂಪೂರ್ಣವಾಗಿ ರೇಂಜ್ ರೋವರ್ ಇವೊಕ್‌ನಂತೆ ಕಾಣುವಂತೆ ಮಾರ್ಪಡಿಸಲಾಗಿದೆ. ಸ್ಪೋರ್ಟಿ ಲುಕ್‌ಗಾಗಿ ಕೆಳಭಾಗದಲ್ಲಿ ಡ್ಯುಯಲ್ ಎಕ್ಸಾಸ್ಟ್ ಅನ್ನು ಸಹ ನೀಡಲಾಗಿದೆ. ಭಾರತದಲ್ಲಿ ರೇಂಜ್ ರೋವರ್ ಇವೊಕ್ ಬೆಲೆ 72 ಲಕ್ಷ ರೂ. ಇದೆ.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ಇನ್ನು ಮಾರುತಿ ಸುಜುಕಿ ಬ್ರೆಝಾ ಬೆಲೆಯು ರೂ 7.99 ಲಕ್ಷದಿಂದ ಪ್ರಾರಂಭವಾಗಿ ರೂ 13.96 ಲಕ್ಷದವರೆಗೆ (ಎಕ್ಸ್ ಶೋ ರೂಂ) ವರೆಗೆ ಹೋಗುತ್ತದೆ. ಮಾರುತಿ ಬ್ರೆಝಾವನ್ನು ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಇದು 1.5-ಲೀಟರ್ K12C ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಥೇಟ್ ರೇಂಜ್ ರೋವರ್‌ನಂತೆ ಮಾಡಿಫೈಗೊಂಡು ಸಖತ್ ವೈರಲ್ ಆಗ್ತಿದೆ ಮಾರುತಿ ಬ್ರೆಜ್ಜಾ

ಇನ್ನು 103 bhp ಪವರ್ ಮತ್ತು 138 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಕಾರಿನ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಸೆಪ್ಟೆಂಬರ್ 2022 ರಲ್ಲಿ ಬ್ರೆಝಾ ಉತ್ತಮ ಮಾರಾಟವನ್ನು ಸಾಧಿಸಿದೆ. ಇದು ಸೆಪ್ಟೆಂಬರ್‌ನಲ್ಲಿ 15,445 ಯುನಿಟ್‌ಗಳನ್ನು ಮಾರಾಟ ಮಾಡಿದೆ.

More from DriveSpark

Article Published On: Tuesday, October 11, 2022, 13:40 [IST]
English summary
Maruti brezza modified like the range rover is going viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+