Maruti: ಕಲ್ಲುಬಂಡೆಯಂತಹ ನಿರ್ಮಾಣ ಗುಣಮಟ್ಟವನ್ನು ಸಾಭೀತುಪಡಿಸಿದ ಮಾರುತಿ ಕಾರು! ವಿಡಿಯೋ...
ಮಾರುತಿ ಕಾರುಗಳಿಗೆ ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್ ಇದೆಯಾದರೂ ಗುಣಮಟ್ಟದ ವಿಷಯದಲ್ಲಿ ಹಿಂದುಳಿದಿರುವುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ಸ್ವಿಫ್ಟ್ ಬಹಳ ಹಗುರವಾದ ಮತ್ತು ಅಸುರಕ್ಷಿತ ವಾಹನವಾಗಿದ್ದು, ಅಪಘಾತವಾದರೆ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಅಸಮರ್ಥ ಕಾರೆನಿಸಿಕೊಂಡಿದೆ. ಆದರೆ ಇತ್ತೀಚೆಗೆ ನಡೆದ ಭೀಕರ ಅಪಘಾತವೊಂದರಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಎಲ್ಲರನ್ನು ಅಚ್ಚರಿಗೊಳಿಸಿದೆ. ಇತ್ತೀಚಿನ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ಮಾರುತಿ ಸುಜುಕಿ ಕಂಪನಿಯು ಪ್ರಮುಖ ಸುಧಾರಣೆಗಳನ್ನು ಮಾಡಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚಿನ ಘಟನೆ ಸಾಭೀತುಪಡಿಸಿದೆ.
ಇಟ್ಟಿಗೆಗಳಿಂದ ತುಂಬಿದ ಟ್ರಕ್ ಸ್ವಿಫ್ಟ್ ಮೇಲೆ ಬೀಳುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ದೊಡ್ಡ ಅಪಘಾತದ ನಂತರವೂ ಯಾವುದೇ ಗಂಭೀರ ಹಾನಿಯಾಗದಂತೆ ಸ್ವಿಫ್ಟ್ ಹಾಗೇ ಉಳಿದಿದೆ. ಈ ಮೂಲಕ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಎಷ್ಟು ಗಟ್ಟಿಮುಟ್ಟಾಗಿದೆ ಎಂಬುದು ತಿಳಿದುಬಂದಿದೆ. ಅತ್ಯಂತ ದೊಡ್ಡ ಮತ್ತು ಭಾರವಾದ ಇಟ್ಟಿಗೆಗಳಿಂದ ತುಂಬಿದ ಟ್ರಕ್ ಸ್ವಿಫ್ಟ್ ಮೇಲೆ ಬಿದ್ದಿರುವುದನ್ನು ನಾವು ನೋಡಬಹುದು.

ಟ್ರಕ್ ಎಡಭಾಗದಲ್ಲಿದ್ದು ಸ್ವಿಫ್ಟ್ ಅನ್ನು ಗೋಡೆಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಟ್ರಕ್‌ನಿಂದ ಇಟ್ಟಿಗೆಗಳು ಸ್ವಿಫ್ಟ್ ರೂಫ್ ಮತ್ತು ಬಾನೆಟ್ ಮೇಲೆ ಬಿದ್ದಿರುವುದನ್ನು ಗಮನಿಸಬಹುದು. ಕುತೂಹಲಕಾರಿ ಸಂಗತಿಯೆಂದರೆ, ಎಲ್ಲಾ ಇಟ್ಟಿಗೆಗಳು ಕಾರಿನ ಮೇಲ್ಭಾಗದಲ್ಲಿದ್ದರೂ, ಸ್ವಿಫ್ಟ್ ಇನ್ನೂ ಯೋಗ್ಯವಾಗಿ ಕಾಣುತ್ತಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ. ಇದು ಹೊಸ ಸ್ವಿಫ್ಟ್‌ನ ನಿರ್ಮಾಣ ಗುಣಮಟ್ಟವನ್ನು ಎತ್ತಿತೋರಿಸಿದೆ.
ಹೊಸ ಜೆನ್ ಮಾರುತಿ ಸುಜುಕಿ ಸ್ವಿಫ್ಟ್ ಮುಂಭಾಗ ಮತ್ತು ಹಿಂಭಾಗದ ವಿಂಡ್‌ಶೀಲ್ಡ್‌ಗಳು ಒಡೆದಿವೆ. ಹಾಗೆಯೇ ರೂಫ್ ತುಸು ಮಟ್ಟಿಗೆ ನಾಶವಾಗಿದೆ, ಕಾರಿನ ದೇಹದ ಉಳಿದ ಭಾಗವು ಅಷ್ಟೇನು ಹಾನಿಯಾಗಿಲ್ಲ. ಕಾರಿಗಾದ ಹಾನಿಯನ್ನು ನೋಡಿದರೆ, ಒಂದು ವೇಳೆ ಕಾರಿನಲ್ಲಿ ಪ್ರಯಾಣಿಕರಿದ್ದರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗುತ್ತಿದ್ದರು ಎಂದು ಹೇಳಬಹುದು.

5-ಸ್ಟಾರ್ ಸುರಕ್ಷತೆ?: ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಭಾರತ್ ಅಥವಾ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಅಧಿಕೃತವಾಗಿ ಕಳುಹಿಸಿಲ್ಲ. ಆದರೆ ಸ್ವಿಫ್ಟ್‌ನ ಅದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಹೊಸ ತಲೆಮಾರಿನ ಡಿಜೈರ್ ಗ್ಲೋಬಲ್ ಎನ್‌ಸಿಎಪಿಯಲ್ಲಿ ಪರಿಪೂರ್ಣ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ. ಒಂದು ವೇಳೆ ಹೊಸ ತಲೆಮಾರಿನ ಸ್ವಿಫ್ಟ್ ಈ ಸುರಕ್ಷತಾ ಟೆಸ್ಟ್‌ನಲ್ಲಿ ಇದೇ ಸುರಕ್ಷತಾ ರೇಟಿಂಗ್ ಪಡೆಯುವುದೇ ಎಂಬುದರ ಬಗ್ಗೆ ಖಚಿತತೆ ಇಲ್ಲ.
ಒಂದೇ ಪ್ಲಾಟ್‌ಫಾರ್ಮ್ ಹಂಚಿಕೊಂಡಿರುವ ಕಾರಣ ಸ್ವಿಫ್ಟ್ ಕೂಡ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತ್ತ ಹೊಸ ಡಿಜೈರ್ ಸುರಕ್ಷತಾ ರೇಟಿಂಗ್ ಬಗ್ಗೆ ಹೇಳುವುದಾದ್ರೆ, ವಯಸ್ಕ ಪ್ರಯಾಣಿಕರ ಸಂರಕ್ಷಣಾ ಪರೀಕ್ಷೆಯಲ್ಲಿ ಡಿಜೈರ್ ಒಟ್ಟು 34 ಪಾಯಿಂಟ್‌ಗಳಿಗೆ 31.24 ಪಾಯಿಂಟ್‌ಗಳನ್ನು ಪಡೆದು ಅಚ್ಚರಿಗೊಳಿಸಿದೆ.
ಮತ್ತೊಂದೆಡೆ, ಮಕ್ಕಳ ಪ್ರಯಾಣಿಕರ ರಕ್ಷಣೆ ಪರೀಕ್ಷೆಗಳಲ್ಲಿ 42 ಅಂಕಗಳಿಗೆ 39.20 ಅಂಕಗಳನ್ನು ಗಳಿಸಿದೆ. ಹೊಸ ಡಿಜೈರ್ ಸ್ಥಿರವಾದ ಬಾಡಿ ಶೆಲ್ ಮತ್ತು ಸ್ಥಿರವಾದ ಫುಟ್‌ವೆಲ್ ಪ್ರದೇಶವನ್ನು ಹೊಂದಿದೆ. ಬಹುತೇಕ ಇದೇ ಬಾಡಿ ನಿರ್ಮಾಣ ಸ್ವಿಫ್ಟ್‌ನಲ್ಲೂ ಇರುವ ಕಾರಣ ಸುರಕ್ಷಿತ ಕಾರಾಗಿರಬಹುದು. ಆದರೆ ಇದನ್ನು ಭಾರತ್ ಎನ್‌ಸಿಎಪಿ ನಿರ್ಧರಿಸಬೇಕಿದೆ. ಹೊಸ ಮಾರುತಿ ಕಾರುಗಳ ನಿರ್ಮಾಣ ಗುಣಮಟ್ಟದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications