ಜೀವ ಉಳಿಸುವಲ್ಲಿ ವಿಫಲವಾದ ಮಾರುತಿ ಕಾರು: ನಾಲ್ವರ ದುರ್ಮರಣ
ಅಮರಾವತಿ-ಚಿಕಲ್ದಾರ ರಸ್ತೆಯ ಮಡ್ಕಿ ಗ್ರಾಮದಲ್ಲಿ ಭಾನುವಾರ ಮಾರುತಿ ಕಾರು 200 ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ ತೆಲಂಗಾಣದ ಬ್ಯಾಂಕ್ ಅಧಿಕಾರಿಗಳು ಎಂದು ಹೇಳಲಾದ ನಾಲ್ವರು ಸಾವನ್ನಪ್ಪಿದ್ದಾರೆ. ತೀವ್ರ ಗಾಯಗಳಾಗಿದ್ದವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಮಾರುತಿ ಎರ್ಟಿಗಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ವರದಿಗಳ ಪ್ರಕಾರ, ತೆಲಂಗಾಣ ಗ್ರಾಮೀಣ ಬ್ಯಾಂಕ್‌ನ ಎಂಟು ಮಂದಿ ಉದ್ಯೋಗಿಗಳು ಇಲ್ಲಿನ ಆದಿಲಾಬಾದ್ ದ್ವಾರಕಾ ನಗರದ ನಿವಾಸಿಗಳಾಗಿದ್ದು, ಜಿಲ್ಲೆಯ ಪ್ರವಾಸಿ ಸ್ಥಳವಾದ ಚಿಕಲ್ದಾರ ಕಡೆಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ದಟ್ಟ ಮಂಜಿನಿಂದಾಗಿ ಅವರ ಮಾರುತಿ ಎರ್ಟಿಗಾ ಕಾರು ಮಡ್ಕಿ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಕಣಿವೆ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮಾಹಿತಿ ಪಡೆದ ಚಿಕಲ್ದಾರ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿ ನಾಲ್ವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಮರಾವತಿಯ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಳಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಶೇಖ್ ಸಲ್ಮಾನ್ ಶೇಖ್ ಚಂದ್ (28), ಶಿವಕೃಷ್ಣ ಆಡಂಕಿ (30), ವೈಭವ್ ಲಕ್ಷ್ಮಣ್ ಗಲ್ಲಿ (29) ಮತ್ತು ವನಪರಾತಿ ಕೋಟೇಶ್ವರ್ ರಾವ್ (27) ಎಂದು ಗುರುತಿಸಲಾಗಿದೆ.
ಮಾರುತಿ ಎರ್ಟಿಗಾ ಎಷ್ಟು ಸುರಕ್ಷಿತ?: ಈ ಹಿಂದೆ ಗ್ಲೋಬಲ್ ಎನ್‌ಸಿಎಪಿಯು 'ಸೇಫರ್ ಕಾರ್ಸ್ ಫಾರ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಕ್ರ್ಯಾಶ್ ಪರೀಕ್ಷೆಗಳಲ್ಲಿ ಬಿಡುಗಡೆ ಮಾಡಿದ ಫಲಿತಾಂಶದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಮೂರು ಸ್ಟಾರ್‌ಗಳ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿತ್ತು. ಈ ಮೂರು-ಸ್ಟಾರ್ ರೇಟಿಂಗ್ ವಯಸ್ಕ ಮತ್ತು ಮಕ್ಕಳ ರಕ್ಷಣೆ ಎರಡಕ್ಕೂ ಅನ್ವಯಿಸುತ್ತದೆ.

ಮಾರುತಿ ಎರ್ಟಿಗಾ ಎರಡು ಮುಂಭಾಗದ ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡುತ್ತದೆ. ಇದರ ರಚನೆಯನ್ನು ಅಸ್ಥಿರ ಎಂದು ರೇಟ್ ಮಾಡಲಾಗಿದೆ. ಹಾಗೆಯೇ ಅದರ ಫುಟ್‌ವೆಲ್ ಪ್ರದೇಶವನ್ನು ಕೂಡ ಅಸ್ಥಿರವೆಂದು ರೇಟ್ ಮಾಡಲಾಗಿದೆ. ಪೆಡಲ್‌ಗಳ ನಡುವಿನ ಅಂತರವು ಚಾಲಕನ ಕಾಲುಗಳಿಗೆ ಅಪಾಯ ಎಂದು ತೋರಿಸಿದೆ. ಉಳಿದಂತೆ ವಯಸ್ಕರ ತಲೆ ಮತ್ತು ಕುತ್ತಿಗೆಯ ರಕ್ಷಣೆ ಉತ್ತಮವಾಗಿದೆ.
ಹಾಗಯೇ ಪ್ರಯಾಣಿಕರಿಗೆ ಎದೆಯ ರಕ್ಷಣೆ ಕೂಡ ಉತ್ತಮವಾಗಿದೆ. ಇನ್ನು ಪ್ಯಾಸೆಂಜರ್ ಪ್ರಿ-ಟೆನ್ಷನರ್ ಸರಿಯಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಮಕ್ಕಳ ರಕ್ಷಣೆಯಲ್ಲಿ ಕಳಪೆ ಫಲಿತಾಂಶಗಳನ್ನು ತೋರಿಸಿದೆ, ಆದರೆ ಹಿಂಬದಿ ಕೂರುವವರ ಮುಖಕ್ಕೆ ಉತ್ತಮ ರಕ್ಷಣೆ ನೀಡುತ್ತದೆ ಎಂದು ಸೂಚಿಸಿದೆ. ಎರ್ಟಿಗಾ ಐಸೊಫಿಕ್ಸ್ ಆಂಕಾರೇಜ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು (SBR) ಮುಂಭಾಗದ ಸೀಟ್‌ಗಳಲ್ಲಿ ಪ್ರಮಾಣಿತವಾಗಿವೆ.
ಒಟ್ಟಾರೆ ಮಾರುತಿ ಸುಜುಕಿ ಎರ್ಟಿಗಾ ವಯಸ್ಕ ಮತ್ತು ಮಕ್ಕಳ ರಕ್ಷಣೆಯಲ್ಲಿ ಕೇವಲ ಮೂರು ಸ್ಟಾರ್‌ಗಳನ್ನು ಸಾಧಿಸಿದೆ. ನಮ್ಮ ಪ್ರಕಾರ ಕಾರುಗಳಿಗೆ ಒಟ್ಟಾರೆ ರಕ್ಷಣೆಯ ಮಟ್ಟವನ್ನು ಸುಧಾರಿಸಬೇಕಿದೆ. ಗ್ರಾಹಕರು ಕೂಡ ಸುರಕ್ಷೆತಗೆ ಆಧ್ಯತೆ ನೀಡಿ ಹಣ ಹೆಚ್ಚಾದ್ರೂ ಚಿಂತಿಸಿದೆ ಉತ್ತಮ ಗುಣಮಟ್ಟದ ಕಾರುಗಳನ್ನು ಖರೀದಿಸಬೇಕಿದೆ. ಈ ಕಾರಿನ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications