2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ಭಾರತದ ರಸ್ತೆಗಳಲ್ಲಿ ಬರೊಬ್ಬರಿ 34 ವರ್ಷಗಳ ಕಾಲ ರಾಜನಾಗಿ ಮೆರೆದಿದ್ದ ಮಾರುತಿ ಸುಜುಕಿ ಜಿಪ್ಸಿಯನ್ನು 2019ರ ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿಯ ಈ ಜಿಪ್ಸಿ ಮಾದರಿಯು ಆಫ್ ರೋಡ್ ಪ್ರಿಯರ ಮೆಚ್ಚಿನ ಮಿನಿ ಎಸ್‍ಯುವಿಯಾಗಿತ್ತು.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ಮಾರುತಿ ಸುಜುಕಿ ಜಿಪ್ಸಿ ಭಾರತದ ಇತಿಹಾಸದಲ್ಲಿ ಅತ್ಯಂತ ಐಕಾನಿಕ್ ಕಾರುಗಳಲ್ಲಿ ಒಂದಾಗಿದೆ. ಒರಟಾದ ಮೆಕ್ಯಾನಿಕಲ್‌ ಅಂಶಗಳು ಮತ್ತು ಭಾರಿ ಸಾಮರ್ಥ್ಯದ ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿರುವ ಮಾದರಿಯಾಗಿದೆ. ಜಿಪ್ಸಿಯು ದೀರ್ಘಕಾಲದಿಂದಲೂ ಸಶಸ್ತ್ರ ಪಡೆಗಳ ಮೆಚ್ಚಿನ ಆಯ್ಕೆಯಾಗಿದೆ, ಎಂತಹ ಕಠಿಣ ಭೂಪ್ರದೇಶ ಮತ್ತು ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿಯು ಈ ಆಫ್-ರೋಡರ್ ಮುನ್ನುಗುತ್ತದೆ. ದೀರ್ಘಕಾಲದಿಂದ ಸೇನೆಯು ಬಳಸುತ್ತಿರುವುದರಿಂದ ಇದರ ಯಾಂತ್ರಿಕ ಜ್ಞಾನವನ್ನು ಈಗ ಬಹಳ ತಿಳಿದಿರುತ್ತಾರೆ.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಇತ್ತೀಚೆಗೆ ಸಮರಾಭ್ಯಾಸದ ಭಾಗವಾಗಿ, ಎಂಟು ಸೈನಿಕರ ಗುಂಪು ಬೆಟಾಲಿಯನ್‌ಗೆ ಸೇರಿದ ಮಾರುತಿ ಜಿಪ್ಸಿಯನ್ನು ಸಂಪೂರ್ಣ ಬೇರ್ಪಡಿಸಿ ಮತ್ತು ಅದನ್ನು ಎರಡು ನಿಮಿಷಗಳಲ್ಲಿ ಮರು ಜೋಡಿಸಿದರು. ಸಂಪೂರ್ಣ ಡ್ರಿಲ್ ಅನ್ನು ಯಾವುದೇ ಯಾಂತ್ರಗಳನ್ನು ಬಳಸದೇ ಕೈಗಳಿಂದ ಮರು ಜೋಡಣೆ ಮಾಡಿದರು.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ಇದು ಜಿಪ್ಸಿಯ ಯಾಂತ್ರಿಕ ನಿರ್ಮಾಣದ ಸೂಕ್ಷ್ಮತೆ ಮತ್ತು ಸರಳತೆ ಮತ್ತು ಬಿಎಸ್‌ಎಫ್ ಯೋಧರ ಅಪಾರ ಸಾಮರ್ಥ್ಯಗಳನ್ನು ತೋರಿಸುತ್ತದೆ. ಇನ್ನು ರಾಜಸ್ಥಾನದ ಮೇವಾರ್ ರಾಜವಂಶದ ಮಹಾರಾಣಾ ಪ್ರತಾಪ್‌ನ ವೀರ ಯುದ್ಧ ಕುದುರೆಗೆ ಗೌರವ ಸೂಚಕವಾಗಿ ಬೆಟಾಲಿಯನ್‌ನಿಂದ ಈ ಜಿಪ್ಸಿಗೆ 'ಚೇತಕ್' ಎಂಬ ಹೆಸರನ್ನು ಇಡಲಾಗಿದೆ.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ಜಿಪ್ಸಿಯನ್ನು ಬೇರ್ಪಡಿಸಲು ಮೊದಲು ಬಾಡಿ ಪ್ಯಾನೆಲ್ ಗಳನ್ನು ತೆಗೆದುಹಾಕಲು ಪ್ರಾರಂಭಿಸಿದರು, ಬಾನೆಟ್, ಡೋರ್ ಪ್ಯಾನೆಲ್‌ಗಳು ಮತ್ತು ಇಡೀ ಬಾಡಿಯ ಫ್ರೇಮ್‌ ಅನ್ನು ಒಂದೊಂದಾಗಿ ತೆಗೆದುಹಾಕಿದರು. ನಂತರ ಸೈನಿಕರು ಒಟ್ಟಾಗಿ ಫ್ರೇಮ್‌ನ ಮೇಲೆ ಅಳವಡಿಸಲಾದ ಸ್ಟೀರಿಂಗ್, ಎಂಜಿನ್ ಮತ್ತು ಗೇರ್ ಬಾಕ್ಸ್ ಯುನಿಟ್ ಅನ್ನು ತೆಗೆದುಹಾಕಿದರು ಮತ್ತು ಬಾಡಿಯ ಪ್ಯಾನೆಲ್ ಗಳನ್ನು ಪಕ್ಕದಲ್ಲಿ ಪ್ರತ್ಯೇಕವಾಗಿ ಇರಿಸಿದರು.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ಕೊನೆಯದಾಗಿ, ಎರಡೂ ಬದಿಗಳಲ್ಲಿ ಅಳವಡಿಸಲಾದ ಟೈರ್‌ಗಳೊಂದಿಗೆ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳನ್ನು ಜಿಪ್ಸಿಯ ಸಂಪೂರ್ಣ ಲ್ಯಾಡರ್ ಫ್ರೇಮ್‌ನಿಂದ ಬೇರ್ಪಡಿಸಲಾಯಿತು ಮತ್ತು ಪ್ರತ್ಯೇಕವಾಗಿ ಇರಿಸಲಾಯಿತು.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ನಂತರ ಇಡೀ ವಾಹನದ ಮರು-ಜೋಡಣೆ ಪ್ರಕ್ರಿಯೆಯು ಪ್ರಾರಂಭವಾಯಿತು, ಇದು ಲ್ಯಾಂಡರ್ ಫ್ರೇಮ್‌ನ ಮೇಲೆ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳ ಮರುಹೊಂದಿಸುವಿಕೆಯೊಂದಿಗೆ ಪ್ರಾರಂಭವಾಯಿತು. ಬೇರ್ಪಟ್ಟ ಸ್ಟೀರಿಂಗ್ ಸೆಟಪ್‌ನೊಂದಿಗೆ ಸಂಪೂರ್ಣ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಯುನಿಟ್ ಗಳನ್ನು ಫ್ರೇಮ್‌ನಲ್ಲಿ ಮತ್ತೆ ಜೋಡಿಸಲಾಗಿದೆ.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ನಂತರ ಇಡೀ ತ್ವರಿತವಾಗಿ ಫ್ರೇಮ್ ಮೇಲೆ ಬೋಲ್ಟ್ ಮಾಡಲಾಯಿತು. ಮತ್ತು ಕೊನೆಯದಾಗಿ, ಡೋರ್ ಪ್ಯಾನೆಲ್‌ಗಳು ಮತ್ತು ಜಿಪ್ಸಿಯ ಮುಂಭಾಗದ ಬಾನೆಟ್ ಅನ್ನು ವಾಹನದ ಮೇಲೆ ಹಿಂದಕ್ಕೆ ಬೋಲ್ಟ್ ಮಾಡಲಾಯಿತು, ಹೀಗಾಗಿ ಸಂಪೂರ್ಣ ವಾಹನದ ಮರು-ಜೋಡಣೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ನಂತರ ವಾಹನವನ್ನು ಟ್ರ್ಯಾಕ್‌ನಲ್ಲಿ ಸೈನಿಕರು ಹಿಂದಕ್ಕೆ ಓಡಿಸಿದರು, ನಡೆಸಿದ ಸಂಪೂರ್ಣ ಕೆಲಸವು ದೋಷರಹಿತವಾಗಿದೆ ಎಂದು ತೋರಿಸುತ್ತದೆ. ವಾಹನವನ್ನು ಬೇರ್ಪಡಿಸಿದ ಮತ್ತು ಮರು-ಜೋಡಿಸುವ ಸಂಪೂರ್ಣ ಪ್ರಕ್ರಿಯೆಯು ಕೇವಲ 1 ನಿಮಿಷ ಮತ್ತು 47 ಸೆಕೆಂಡುಗಳಲ್ಲಿ ಪೂರ್ಣಗೊಂಡಿತು. ಈ ಕಾರ್ಯಕ್ರಮದಲ್ಲಿ ಭಾರತದ ಗೃಹ ಸಚಿವ ಶ್ರೀ ಅಮಿತ್ ಶಾ ಮತ್ತು ಭಾರತದ ಗಡಿ ಭದ್ರತಾ ಪಡೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ಮಾರುತಿ ಸುಜುಕಿ ಜಿಪ್ಸಿ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು 1985ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿ ಬಿಡುಗಡೆಯಾಗಿತ್ತು. ಬಿಡುಗಡೆಯಾದಾಗಿನಿಂದಲೂ ಮಾರುತಿ ಸುಜುಕಿ ಜಿಪ್ಸಿ ತನ್ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ 34 ವರ್ಷಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿತ್ತು. ನಂತರ 2019ರ ಮಾರ್ಚ್ ತಿಂಗಳಲ್ಲಿ ಸ್ಥಗಿತವಾಯ್ತು.

ಕೇಂದ್ರ ಸರ್ಕಾರ ಎಲ್ಲಾ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿತು. ಕಳೆದ 2019ರಲ್ಲಿ ಹೊಸ ಸುರಕ್ಷತಾ ಮಾನದಂಡವನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿತು. ಕನಿಷ್ಠ ಸುರಕ್ಷತಾ ಮಾನದಂಡ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಜಿಪ್ಸಿ ಮಿನಿ ಎಸ್‍ಯುವಿಯನ್ನು ಮಾರುತಿ ಸುಜುಕಿ ಕಂಪನಿ ಕೆಲವೊಂದು ಬದಲಾವಣೆ ಮಾಡಿ ರಸ್ತೆಗೆ ಇಳಿಸಲು ಪ್ರಯತ್ನ ನಡೆಸಿದ್ದರು. ಆದರೆ ಹೊಸ ರಕ್ಷಣೆ ಮತ್ತು ಕ್ರ್ಯಾಶ್ ಟೆಸ್ಟ್ ನಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಜಿಪ್ಸಿ ಕಾರಿನ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತು.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ಆದರೆ ಈ ಐಕಾನಿಕ್ ಆಫ್ ರೋಡರ್ ಜಿಪ್ಸಿ ಕೇವಲ ಭಾರತೀಯ ಸೇನೆಗೆ ಮಾತ್ರ ಸಿಮೀತವಾಗಿ ತಯಾರಿಸಿ ನೀಡಲಾಗುತ್ತಿದೆ. ಅದನ್ನು ಇತರ ಗ್ರಾಹಕರಿಗೆ ಮಾರಾಟ ಮಾಡಲಾಗುವುದಿಲ್ಲ. ಮಾರುತಿ ಜಿಪ್ಸಿ ಸುರಕ್ಷತಾ ನಿಯಮಕ್ಕೆ ಅನುಸರವಾಗಿಲ್ಲ ಮತ್ತು ಜಿಪ್ಸಿ ಜಿ13, 1.3 ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸರವಾಗಿ ನವೀಕರಿಸುವಲ್ಲಿ ವಿಫಲವಾಗಿದೆ.

2 ನಿಮಿಷಗಳಲ್ಲಿ ಮಾರುತಿ ಜಿಪ್ಸಿಯನ್ನು ಬೇರ್ಪಡಿಸಿ ಮರು ಜೋಡಣೆ ಮಾಡಿದ ಬಿಎಸ್ಎಫ್ ಯೋಧರು

ಆದರೆ ಈ ನಿಯಮಗಳು ಸೈನ್ಯಕ್ಕೆ ನೀಡುವ ವಾಹನದಲ್ಲಿ ಅನುಸರಿಸುವುದಿಲ್ಲ. ಯಾಕೆಂದರೆ ಈ ನಿಯಮಗಳು ಸೈನ್ಯದ ವಾಹನಗಳಿಗೆ ಅನ್ವಯವಾಗುವುದಿಲ್ಲ. ಮಾರುತಿ ಸುಜುಕಿ ಜಿಪ್ಸಿ ಬದಲಾಗಿ ತನ್ನ ಉತ್ತರಾಧಿಕಾರಿ ಎಂದು ಕರೆಯಬಹುದಾದ ಮಾರುತಿ ಸುಜುಕಿ ಜಿಮ್ನಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಯೋಜಿಸಿದೆ. ಮಾರುತಿ ಸುಜುಕಿ ಕಂಪನಿಯು ಜಿಮ್ನಿ ಮಿನಿ-ಎಸ್‌ಯುವಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್​ಪೋದಲ್ಲಿ ಅನಾವಣಗೊಳಿಸಿದ್ದರು. ಈ ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

Most Read Articles

Kannada
English summary
Maruti gypsy dismantle re assemble with in 2 minutes by bsf personnel details
Story first published: Friday, December 10, 2021, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X