Maruti Jimny: ಮಾರುತಿ ಜಿಮ್ನಿಯಲ್ಲಿ ಈ ಮಟ್ಟದ ಜಾಗವಿದೆಯೇ! ಕನಸಲ್ಲೂ ಊಹಿಸಿರೋಲ್ಲ!

ವಿದೇಶಗಳಲ್ಲಿ ಮಾತ್ರವಲ್ಲ ಭಾರತದಲ್ಲೂ ವಾಹನಗಳನ್ನು ತಮ್ಮಿಷ್ಟದಂತೆ ಸ್ವಂತವಾಗಿ ಮಾಡಿಫೈಗೊಳಿಸುವವರು ಹಲವರು ಇದ್ದಾರೆ. ದಂಪತಿಯೊಂದು ಮಾರುತಿ ಜಿಮ್ನಿಯನ್ನು ಬೆಡ್‌ರೂಂನಂತೆ ಮಾಡಿಫೈಗೊಳಿಸಿ ಅಚ್ಚರಿಗೊಳಿಸಿದ್ದಾರೆ. ಇಲ್ಲಿ ವಿಶೇಷವೆಂದರೆ ವಾಹನವನ್ನು ಮಾಡಿಫೈಗೊಳಿಸಲು ಯಾರಿಗೂ ನೀಡದೇ ಅವರೇ ಸ್ವತಃ ಕ್ಯಾಂಪಿಂಗ್ ಸೆಟಪ್‌ನಂತೆ ಮಾಡಿಫೈಗೊಳಿಸಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ.

ಇತ್ತೀಚೆಗೆ XTREME MOTO ADVENTURE ಎಂಬ ಯೂಟ್ಯೂಬ್ ಚಾನಲ್ ಅಪ್‌ಲೋಡ್ ಮಾಡಿರುವ ವಿಡಿಯೋ ಅಡ್ವೆಂಚರ್ ಉತ್ಸಾಹಿಗಳು ಮತ್ತು ಕಾರು ಪ್ರೇಮಿಗಳ ಗಮನ ಸೆಳೆದಿದೆ. ವೀಡಿಯೊದಲ್ಲಿ Maruti Jimny ಮಾಲೀಕ ತನ್ನ ಪತ್ನಿಯೊಂದಿಗೆ ತಮ್ಮ ಕಾರಿನ ಒಳಭಾಗವನ್ನು ಪೂರ್ಣ-ಗಾತ್ರದ ಹಾಸಿಗೆಗೆ ಸರಿಹೊಂದುವಂತೆ ಪರಿವರ್ತಿಸಿ ಅದನ್ನು ಕ್ಯಾಂಪಿಂಗ್ ಸೆಟಪ್‌ನಂತೆ ಮಾಡಿದ್ದಾರೆ.

maruti-jimny-suv-converted-camping-van

ದಂಪತಿ ತಮ್ಮ ಮಾರುತಿ ಸುಜುಕಿ ಜಿಮ್ನಿಯೊಳಗೆ ಪೂರ್ಣ-ಗಾತ್ರದ ಹಾಸಿಗೆಯನ್ನು ಹೊಂದಿಸುವ ಹಂತ-ಹಂತದ ಪ್ರಕ್ರಿಯೆಯನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಕಾರಿನ ಹಿಂಭಾಗದ ಮೂಲಕ ಮೊದಲು ಅದರ ಕವರ್ ಅನ್ನು ತೆಗೆದುಹಾಕಿ ಬಳಿಕ ಸೀಟ್‌ಗಳನ್ನು ತೆಗೆದು ಪಕ್ಕಕ್ಕೆ ಇಟ್ಟಿದ್ದಾರೆ. ಹಾಸಿಗೆಗೆ ಸ್ಥಳಾವಕಾಶ ಕಲ್ಪಿಸಲು ಮಧ್ಯದ ಆಸನಗಳನ್ನು ಕೂಡ ತೆಗೆದುಹಾಕಿದ್ದಾರೆ. ಹಾಗೆಯೇ ಮಧ್ಯದ ಸೀಟಿನ ಸೀಟ್ ಬೆಲ್ಟ್ ಹೋಲ್ಡರ್‌ಗಳನ್ನು ಕೂಡ ತೆಗೆದುಹಾಕಿದ್ದಾರೆ.

ಬಳಿಕ ಹಾಸಿಗೆಗೆ ಸರಿಹೊಂದಿಸಲು ಸಮತಟ್ಟಾದ ಮತ್ತು ವಿಶಾಲವಾದ ಜಾಗವನ್ನು ಮಾಡಿಕೊಂಡಿದ್ದಾರೆ. ಇನ್ನು ಕೊನೆಯದಾಗಿ ಡ್ರೈವರ್ ಹಾಗೂ ಕೋ ಪ್ಯಾಸಿಂಜರ್ ಫ್ರಂಟ್ ಸೀಟ್‌ಗಳನ್ನು ಮಡಚಿ ಚಪ್ಪಟೆಗೊಳಿಸಿ 6 ಅಡಿ ಉದ್ದದ ಸಿಂಗಲ್ ಬೆಡ್ ಅನ್ನು ಜಿಮ್ನಿಯೊಳಗೆ ಇಟ್ಟಿದ್ದಾರೆ. ಈ ವೇಳೆ ಬದಿಗಳಲ್ಲಿ ಜಾಗ ಉಳಿಯುವುದನ್ನು ವಿಡಿಯೋದಲ್ಲಿ ಕಾಣಬಹುದು, ಇದನ್ನು ತುಂಬಲು ದಿಂಬುಗಳನ್ನು ಅಲ್ಲಿಟ್ಟು ಕವರ್ ಮಾಡಿದ್ದಾರೆ.

maruti-jimny-suv-converted-camping-van

ಅಂತಿಮವಾಗಿ ಅವರು ಬೆಡ್‌ಶೀಟ್‌ನಿಂದ ಹಾಸಿಗೆಯನ್ನು ಮುಚ್ಚಿ ತಮ್ಮ ಕ್ಯಾಂಪಿಂಗ್ ಅಡ್ವೆಂಚರ್ ಕಾರಾಗಿ ಪರಿವರ್ತಿಸಿದ್ದಾರೆ. ಅನೇಕ ವೃತ್ತಿಪರ ಶಿಬಿರಾರ್ಥಿಗಳು ತಮ್ಮ ಕಾರುಗಳಿಗೆ ಬೆಡ್ ಸೆಟಪ್‌ಗಳನ್ನು ಮಾಡಲು ಕಸ್ಟಮ್ ಪ್ಲೈವುಡ್‌ಗಳನ್ನು ಆಶ್ರಯಿಸುತ್ತಾರೆ. ಆದರೆ ಈ ದಂಪತಿ ಪ್ರಾಯೋಗಿಕ ವಿಧಾನವನ್ನು ಆರಿಸಿಕೊಂಡು ಹಲವರಿಗೆ ಮಾದರಿಯಾಗಿದ್ದಾರೆ. ಈ ವಿಡಿಯೋವನ್ನು ನೋಡಲು ಕೂಡ ಆಸಕ್ತಿರವಾಗಿರುತ್ತದೆ.

ಕೊನೆಗೂ ಮಾರುತಿ ಸುಜುಕಿ ಜಿಮ್ನಿಯಂತಹ ಕಾಂಪ್ಯಾಕ್ಟ್ ವಾಹನದಲ್ಲಿ ಕ್ಯಾಂಪಿಂಗ್ ಮಾಡಿ ಆನಂದಿಸಬಹುದು ಎಂದು ಸಾಬೀತುಪಡಿಸಿದ್ದಾರೆ. ಸೆಟಪ್ ಅನ್ನು ಪೂರ್ಣಗೊಳಿಸಿದ ನಂತರ, ದಂಪತಿ ತಮ್ಮ ಹೊಸ ಕ್ಯಾಂಪಿಂಗ್ ವ್ಯವಸ್ಥೆಯನ್ನು ತಮ್ಮ ತಾಯಿಗೆ ಉತ್ಸಾಹದಿಂದ ತೋರಿಸುವುದು ವಿಡಿಯೋ ನೋಡುಗರಿಗೆ ತುಸು ನಿರಾಳದ ಅನುಭವ ನೀಡುತ್ತದೆ. ಆಕೆಯ ಮೆಚ್ಚುಗೆಯು ದಂಪತಿಯನ್ನು ಇನ್ನಷ್ಟು ಆನಂದಿಸುತ್ತದೆ.

maruti-jimny-suv-converted-camping-van

ಮಾರುತಿ ಜಿಮ್ನಿ ಕುರಿತು: ನವದೆಹಲಿಯಲ್ಲಿ ಇದೇ ವರ್ಷಾರಂಭದಲ್ಲಿ (ಜನವರಿ) ನಡೆದ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ (Maruti Suzuki) ಆಫ್-ರೋಡ್ ಎಸ್‌ಯುವಿ 'ಜಿಮ್ನಿ 5 ಡೋರ್' ಅನ್ನು ಪ್ರದರ್ಶಿಸಿ, ಬುಕಿಂಗ್ ಕೂಡ ಪ್ರಾರಂಭಿಸಿತ್ತು. ಅಂದಿನಿಂದಲೇ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಯಾಗಿತ್ತು. ಅಂತಿಮವಾಗಿ ಭಾರತದ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಬಿಡುಗಡೆಗೊಳಿಸಲಾಯಿತು.

ಮಾರುತಿ ಸುಜುಕಿ ಜಿಮ್ನಿ 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ. ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದ್ದು, ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ. 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.

ಮಾರುತಿ ಸುಜುಕಿ ಜಿಮ್ನಿ 5 ಡೋರ್ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಹಾಗೂ ಕಿವಿಗೆ ಕೇಳಲು ಹಿತವಾಗಿರುವ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. ಇದು ಆಫ್-ರೋಡ್ ಪ್ರಿಯರಿಗೆ ಖಂಡಿತ ಇಷ್ಟವಾಗುತ್ತದೆ.

ಜಿಮ್ನಿ 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

More from DriveSpark

Article Published On: Wednesday, July 26, 2023, 8:30 [IST]
English summary
Maruti jimny suv converted camping van
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+