ನ್ಯಾನೋ ಮೀರಿಸಿತೇ ಮಾರುತಿ ಅಗ್ಗದ ಕಾರು?
ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸದ್ಯದಲ್ಲೇ ಅತಿ ನೂತನ ಕಾರೊಂದನ್ನು ಲಾಂಚ್ ಮಾಡಲಿದೆ. ಇದು ಪ್ರಮುಖವಾಗಿಯೂ ವಿಶ್ವದ ಅತಿ ಅಗ್ಗದ ಕಾರು ಎಂದೆನಿಸಿಕೊಂಡಿರುವ ಟಾಟಾ ನ್ಯಾನೋ ಪ್ರತಿಸ್ಪರ್ಧಿಯಾಗಿರಲಿದೆ.
ಅಷ್ಟಕ್ಕೂ ದೇಶದ ಅಗ್ಗದ ಕಾರು ಎಂದೆನಿಸಿಕೊಂಡಿರುವ ನ್ಯಾನೋ ಮೀರಿಸಲು ಮಾರುತಿಯಿಂದ ಸಾಧ್ಯವೇ ಎಂಬುದಕ್ಕೆ ಭವಿಷ್ಯವೇ ಉತ್ತರಿಸಲಿದೆ.
ದರ ಹಾಗೂ ಮೈಲೇಜ್?
ಅಂದ ಹಾಗೆ ಮಾರುತಿ ಸುಜುಕಿ ನೂತನ ಅಗ್ಗದ ಕಾರು 'ಎ ಒನ್' ಎಂದು ಅರಿಯಲ್ಪಡಲಿದ್ದು, ದರ ಒಂದು ಲಕ್ಷ ಅಸುಪಾಸಿನಲ್ಲಿರಿದೆ. ಹಾಗೆಯೇ ಮೈಲೇಜ್ ಪ್ರತಿ ಲೀಟರ್‌ಗೆ 20ರ ಅಸುಪಾಸಿನಲ್ಲಿರಲಿದೆ ಎಂದು ತಿಳಿದು ಬಂದಿದೆ. ಹಾಗಿದ್ದರೆ ಫೋಟೊ ಫೀಚರ್ ನೋಡಲು ಮರೆಯದಿರಿ. (ಡೋಂಟ್ ಮಿಸ್ ಈಟ್)

ಮಾರುತಿಯಿಂದ ಬಿಡುಗಡೆಯಾಗಲಿರುವ ಅತಿ ಅಗ್ಗದ ಕಾರು ಪೆಟ್ರೋಲ್ ಸೇರಿದಂತೆ ಡೀಸೆಲ್ ಆವೃತ್ತಿಯಲ್ಲೂ ಆಗಮನವಾಗುವ ನಿರೀಕ್ಷೆಯಿದೆ.

ಖಂಡಿತವಾಗಿಯೂ ಮಾರುತಿ ಬ್ರಾಂಡ್ ಹೆಸರು ಗ್ರಾಹಕರಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟಿಸಲು ಕಾರಣವಾಗಲಿದೆ.

ಟಾಟಾ ನ್ಯಾನೋ ಸಿಎನ್‌ಜಿ ಸೇರಿದಂತೆ ಪೆಟ್ರೋಲ್ ವರ್ಷನ್ ಇನ್ನಷ್ಟೇ ಆಗಮನವಾಗಲಿರುವಂತೆಯೇ ಮಾರುತಿಯಿಂದ ಇಂತಹದೊಂದು ನಡೆ ಕಂಡುಬಂದಿದೆ.

ಎ ಒನ್ ಮೂಲಕ ಮಾರುತಿ ಮಾರಾಟದಲ್ಲೂ ಉತ್ತಮ ಪ್ರಗತಿ ಸಾಧಿಸುವ ನಿರೀಕ್ಷೆಯಿದೆ.

ಎಪ್ರಿಲ್ ಫೂಲ್
ಕ್ಷಮಿಸಿ...ಇಂದು ಮೂರ್ಖರ ದಿನವಾಗಿದ್ದು, ಹಾಗಾಗಿ ಎಲ್ಲೆಡೆ ಫೂಲ್ ಮಾಡುವ ಪ್ರವೃತ್ತಿ ಜಾರಿಯಲ್ಲಿದೆ. ಇಂದೊಂದು ಸುಳ್ಳಾದ ವರದಿಯಾಗಿದ್ದು, ಹಾಗಿದ್ದರೂ ಮಾರುತಿಯಿಂದ ಇಂತಹದೊಂದು ನಡೆ ಕಂಡುಬರಲಿ ಎಂದು ನಾವೆಲ್ಲರೂ ಆಶಿಸುತ್ತೇವೆ.
ಮೂರ್ಖರ ದಿನಾಚರಣೆಯ ಶುಭಾಶಯಗಳು..!


Click it and Unblock the Notifications








