Maruti Suzuki Alto: ಮಾರುತಿ ಆಲ್ಟೋವನ್ನು ಪಿಕಪ್ ಟ್ರಕ್ ಮಾಡಿದ ಭೂಪ! ವಿಡಿಯೋ...

ನೀವೊಬ್ಬರು ಆಟೋಮೊಬೈಲ್ ಉತ್ಸಾಹಿಯಾಗಿದ್ದರೆ ನೀವೆಂದು ಕೇಳಿರದ ಹಾಗೂ ನೋಡಿರದ ವಿಷಯ ಸದ್ಯ ವೈರಲ್ ಆಗುತ್ತಿದೆ. ಮಾರುತಿ ಸುಜುಕಿ ಆಲ್ಟೋ (Maruti Suzuki Alto) ವನ್ನು ವ್ಯಕ್ತಿಯೊಬ್ಬರಿ ಪಿಕಪ್ ಟ್ರಕ್‌ನಂತೆ ಮಾಡಿಫೈಗೊಳಿಸಿ ಅಚ್ಚರಿಗೊಳಿಸಿದ್ದಾರೆ. ಇಂತಹದೊಂದು ವಿಚಿತ್ರ ಮಾಡಿಫೈ ಮಾಡಲು ಮುಂದಾಗಿರುವ ವ್ಯಕ್ತಿಯನ್ನು ಮೆಚ್ಚಲೇಬೇಕು. ಏಕಂದರೆ ನಮಗೆ ತಿಳಿದಂತೆ ಇಂತಹ ಸಣ್ಣ ಹ್ಯಾಚ್‌ಬ್ಯಾಕ್‌ ಅನ್ನು ಈ ರೀತಿ ಮಾಡಿಫೈಗೊಳಿಸಬಹುದು ಎಂದು ಯಾರೂ ಕೂಡ ಊಹಿಸಿರುವುದಿಲ್ಲ. ಸದ್ಯ ಈ ಆಲ್ಟೋ ಪಿಕಪ್ ಟ್ರಕ್ ಕಾರಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾರುತಿ ಆಲ್ಟೋ ಪಿಕಪ್‌ನ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ, ಈ ಕಾರು ಪಂಜಾಬ್‌ನ ಖರಾರ್ ಎಂಬಲ್ಲಿ ಕಾಣಿಸಿಕೊಂಡಿದೆ. ಕಾರನ್ನು ಮುಂಭಾಗದಿಂದ ನೋಡಿದ್ರೆ ಆಲ್ಟೋದಂತೆ ಕಂಡರು ಹಿಂಭಾಗಕ್ಕೆ ಬಂದು ನೋಡಿದವರಿಗೆ ಅಚ್ಚರಿಗೊಳ್ಳುವ ಹಾಗೆ ಮಾಡಿಫೈಗೊಳಿಸಲಾಗಿದೆ. ಸೀಟ್‌, ರೂಫ್ ಮತ್ತು ದೇಹ ಸೇರಿದಂತೆ ಸಂಪೂರ್ಣ ಹಿಂಭಾಗದ ವಿಭಾಗವನ್ನು ತೆಗೆದುಹಾಕಲಾಗಿದೆ. ನೋಡುಗರಿಗೆ ಆಲ್ಟೋವನ್ನು ಹೀಗೂ ಮಾಡಬಹುದೇ ಎಂಬ ಪ್ರಶ್ನೆ ಮುಡುವುದಂತು ಖಚಿತ.

maruti-suzuki-alto-modified-as-a-pickup-truck-viral-video

ಅಲ್ಲದೇ, ಪಿಕಪ್ ಟ್ರಕ್‌ಗಳಲ್ಲಿ ಕಾಣುವ ದೊಡ್ಡ ಹಿಂಭಾಗದ ಸರಕು ವಿಭಾಗವನ್ನು ಇದರಲ್ಲೂ ಕಾಣಬಹುದಾಗಿದೆ. ಮಾಡಿಫೈಗೊಂಡಿರುವ ಈ ಸಣ್ಣ ಹ್ಯಾಚ್‌ಬ್ಯಾಕ್ ಆಲ್ಟೋವನ್ನು ಮಾಲೀಕ ರಸ್ತೆಯಲ್ಲಿ ಓಡಿಸುತ್ತಿದ್ದಾರೆ. ಕುತೂಹಲಕಾರಿಯಾಗಿ ಹಿಂಭಾಗವು ಯಾವುದೇ ಬೂಟ್ ಮುಚ್ಚಳವನ್ನು ಹೊಂದಿಲ್ಲ. ಆದರೆ ಸರಕು ಹೊರಬಾರದಂತೆ ಮುಚ್ಚುವ ಸರಳವಾದ ಬಾಗಿಲನ್ನು ಹೊಂದಿರುವುದು ವಿಶೇಷ.

ಕೆಲ ಕಾರಣಗಳಿಂದಾಗಿ ಹಿಂಭಾಗದ ಟೈಲ್ ಲ್ಯಾಂಪ್‌ಗಳನ್ನು ಹಾಗೆಯೇ ಉಳಿಸಿಕೊಂಡಿದ್ದು, ಒಟ್ಟಾರೆಯಾಗಿ ಇದು ಮಾರುತಿ ಆಲ್ಟೋದ ವಿಲಕ್ಷಣ ಕಾರು ಮಾಡಿಫೈಗಳಲ್ಲಿ ಒಂದೆನಿಸಿಕೊಂಡಿದೆ. ಈ ಆಲ್ಟೋವನ್ನು ಉದ್ದೇಶಪೂರ್ವಕವಾಗಿ ಮಾಡಿಫೈ ಮಾಡಿರುವಂತೆ ಕಾಣುತ್ತಿಲ್ಲ. ಬದಲಾಗಿ ಮಾಲೀಕ ಅದನ್ನು ಸರಕುಗಳನ್ನು ಸಾಗಿಸಲು ಸುಲಭ ರೀತಿಯನ್ನು ಕಂಡುಕೊಳ್ಳಲು ಈ ಕಾರನ್ನು ಮಾಡಿಫೈಗೊಳಿಸಿದಂತೆ ಕಾಣುತ್ತದೆ.

maruti-suzuki-alto-modified-as-a-pickup-truck-viral-video

ಸಾಮಾನ್ಯವಾಗಿ ಜನರು ಯಾವುದೇ ಅವಶ್ಯಕತೆ ಇಲ್ಲದಿದ್ದರೂ ತಮ್ಮ ಕಾರುಗಳಿಗೆ ಎಲ್ಲಾ ರೀತಿಯ ವಿಚಿತ್ರ ಮಾಡಿಫೈಗಳನ್ನು ಮಾಡುತ್ತಾರೆ. ಆದ್ರೆ ಹೀಗೆ ಉಪಯುಕ್ತ ಕೆಲಸಗಳಿಗೆ ಮಾಡಿಫೈಗೊಳಿಸಬಹುದು ಎಂಬುದನ್ನು ಇಂತಹ ವಿಡಿಯೋಗಳನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕಾರನ್ನು ಬಳಸುತ್ತಿದ್ದರೆ ಮಾತ್ರ ಅಂತಹ ಗ್ರಾಹಕೀಕರಣಗಳು ಸಾಧ್ಯ ಎಂದು ಹೇಳಬಹುದು. ನಗರ ಪ್ರದೇಶಗಳಲ್ಲಿ ಇಂತಹ ಮಾಡಿಫೈ ವಾಹನಗಳಿಗೆ ಅನುಮತಿ ಸಿಗುವುದಿಲ್ಲ.

ಹಾಗೆಂದು ಗ್ರಾಮಾಂತರ ಪ್ರದೇಶಗಳಲ್ಲಿ ಅನುಮತಿ ಸಿಗುತ್ತದೆ ಎಂದು ಅರ್ಥವಲ್ಲ. ಭಾರತದ ಎಲ್ಲಾ ಮೂಲೆಗಳಿಗೂ ಈ ಕಾನೂನು ಅನ್ವಯವಾಗುತ್ತದೆ, ಕಾರು ಮಾರ್ಪಾಡುಗಳು ಕಾನೂನುಬಾಹಿರವಾಗಿದೆ. ಸಂಚಾರ ಪೊಲೀಸರು ಹಿಡಿದರೆ, ಭಾರಿ ದಂಡವನ್ನು ವಿಧಿಸುತ್ತಾರೆ. ವೈಯಕ್ತಿಕ ಕಾರುಗಳಲ್ಲಿ ಇಂತಹ ಚಟುವಟಿಕೆಗಳಿಂದ ದೂರವಿರಲು ನಾವು ಸಲಹೆ ನೀಡುತ್ತೇವೆ.

ಭಾರತವು ವಿಶ್ವದ ಅತ್ಯಂತ ಅತಿಯಾದ ಕಾರು ಮಾರ್ಪಾಡುಗಳಿಗೆ ನೆಲೆಯಾಗಿದೆ. ಆದರೂ ಕೆಲವರು ಅವಶ್ಯಕತೆಯನ್ನು ಅವಲಂಬಿಸಿ ತಮ್ಮ ವಾಹನಗಳನ್ನು ಮಾರ್ಪಾಡು ಮಾಡುತ್ತಾರೆ. ಒಬ್ಬ ವ್ಯಕ್ತಿ ಬಜೆಟ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮಾರುತಿ ಸುಜುಕಿ ಆಲ್ಟೋವನ್ನು ಪಿಕಪ್ ಟ್ರಕ್ ಆಗಿ ಪರಿವರ್ತಿಸಿದ್ದಾನೆ ಎಂದರೆ ಅದರಿಂದ ಅವಶ್ಯಕತೆ ಇದ್ದೇ ಇರುತ್ತದೆ ಎಂಬುದು ನಮ್ಮ ಅಭಿಪ್ರಾಯ. ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 9, 2025, 14:53 [IST]
English summary
Maruti suzuki alto modified as a pickup truck viral video
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+