ಕಾಡಿಗೆ ಇಳಿಯಲು ಸಜ್ಜಾದ ರಣಬೇಟಗಾರ ಮಾರುತಿ ಎಸ್‍ಯುವಿ: ಸಫಾರಿ ಅವತಾರದಲ್ಲಿ ಮಿಂಚಿದ ಜಿಮ್ನಿ
ಮಾರುತಿ ಸುಜುಕಿ ಜಿಪ್ಸಿಯು ಕಾಡಿನ ಒರಟು ಭೂಪ್ರದೇಶಗಳಲ್ಲಿಯೂ ಹೋಗಲು, ಹೆಚ್ಚಿನ ರಕ್ಷಣೆ ಮತ್ತು ವನ್ಯಜೀವಿ ಛಾಯಾಗ್ರಾಹಕರಿಗೆ ದಟ್ಟ ಕಾಡಿನ ಮುಕ್ತ ನೋಟವನ್ನು ಒದಗಿಸಲು ಮಾರ್ಪಡಿಸಲಾಗಿದೆ. ಇದು ಕೇವಲ ಜಿಪ್ಸಿ ಅಲ್ಲ, ಏಕೆಂದರೆ ಕೆಲವು ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳು ಮಹೀಂದ್ರ ಬೊಲೆರೊ ಮತ್ತು ಫೋರ್ಸ್ ಟ್ರಾನ್ ಮಾರ್ಪಡಿಸಿದ ಆವೃತ್ತಿಗಳನ್ನು ಒಳಗೊಂಡಿವೆ.
ಇತ್ತೀಚೆಗೆ, NTCA (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಮತ್ತು MoEF&CC (ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ) ಎಲ್ಲಾ ವನ್ಯಜೀವಿ ಅಭಯಾರಣ್ಯಗಳು ರಾಷ್ಟ್ರೀಯ ಉದ್ಯಾನವನಗಳ ಹಳೆಯ ಇಲಾಖೆಯ ವಾಹನಗಳು ಮತ್ತು ಸಫಾರಿ (Safari) ವಾಹನಗಳನ್ನು ತೆಗೆದುಹಾಕಲು ಮತ್ತು ಹೊಸ ಮಾಲಿನ್ಯ ನಿಯಮ ಅನುಸರಿಸುವ ಹೊಸ ವಾಹನಗಳನ್ನು ಆಯ್ಕೆ ಮಾಡಲು ಹೇಳಿದೆ. ಪ್ರಸ್ತುತ, NTCA ಕಾರ್ಯಕ್ಕಾಗಿ ಜಿಮ್ನಿ ಎಸ್‍ಯುವಿಯನ್ನು ಖರೀದಿಸಲು ಮಾರುತಿ ಸುಜುಕಿಯೊಂದಿಗೆ ಮಾತುಕತೆ ನಡೆಸುತ್ತಿದೆ.

ಸಂಸ್ಥೆಯು ಎಲ್ಲಾ ರಾಜ್ಯಗಳಿಗೆ ತಮ್ಮ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡು ಅಗತ್ಯತೆಗಳನ್ನು ಒದಗಿಸುವಂತೆ ಕೇಳಿಕೊಂಡಿದೆ. ಫೇಸ್ಬುಕ್ ಬಳಕೆದಾರರಾದ ಹರ್ವಿಜಯ್ ಸಿಂಗ್ ಅವರು ಮಾರುತಿ ಸುಜುಕಿ ಜಿಮ್ನಿಯನ್ನು (Maruti Suzuki Jimny) ಸಫಾರಿ ಆವೃತ್ತಿಯಲ್ಲಿ ಮಾರ್ಪಡಿಸಿದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್ ಪ್ರಕಾರ, ಅವರು ಹೊಸ ಜಿಮ್ನಿ ಸಫಾರಿಯನ್ನು ಪರೀಕ್ಷಿಸುತ್ತಿದ್ದಾರೆ ಮತ್ತು ಫೋರ್ಸ್ ಟ್ರಾಕ್ಸ್ ಸಫಾರಿ ಆವೃತ್ತಿಯ ಹೊಸ ಆವೃತ್ತಿಯು ಹೆಚ್ಚು ಪ್ರಕಟವಾಗಿದೆ.
ಇದರ ವಿಂಡ್ಸ್ಕ್ರೀನ್ ಅನ್ನು ಸರಿಪಡಿಸಲಾಗಿದೆ. ಮಾರುತಿ ಸುಜುಕಿ ರೂಫ್ ಅನ್ನು ತೆಗೆದುಹಾಕಲಾಗಿದೆ ಮತ್ತು ಕೊನೆಯ ಸಾಲಿನ ಪ್ರಯಾಣಿಕರಿಗೆ ಉತ್ತಮ ನೋಟವನ್ನು ನೀಡಲು ಎತ್ತರದ ಬೆಂಚ್ಯ ಸೀಟುಗಳನ್ನು ಸೇರಿಸಲಾಗಿದೆ ಮತ್ತು ಇದು ಸಫಾರಿ ವಾಹನದ ಪ್ರದರ್ಶನವನ್ನು ನೀಡಿದೆ. ಪ್ರಯಾಣಿಕರ ತಲೆಯ ರಕ್ಷಣೆಗಾಗಿ ಎರಡು ರೋಲ್ ಬಾರ್ಗಳು ವಾಹನದ ಉದ್ದಕ್ಕೂ ಚಲಿಸುತ್ತಿವೆ. ಸ್ಟೀಲ್ ವ್ಹೀಲ್ ಗಳನ್ನು ಒಳಗೊಂಡಿದೆ.

ಮಾರುತಿ ಜಿಮ್ನಿ ಸಫಾರಿ ಆವೃತ್ತಿಯು ಬುಲ್ ಬಾರ್ ಅನ್ನು ಹೊಂದಿದ್ದು ಅದು ಮುಂಭಾಗದ ವ್ಹೀಲ್ ಅರ್ಚಾರ್ ಗಳಾದ್ಯಂತ ವಿಸ್ತರಿಸುತ್ತದೆ ಮತ್ತು ಹಿಂದಿನ ವ್ಹೀಲ್ ಅರ್ಚಾರ್ ವಿಸ್ತರಿಸುತ್ತದೆ. ಫೋಲ್ಡಬಲ್ ವಿಂಡ್‌ಸ್ಕ್ರೀನ್ ಅಥವಾ ಸೈಡ್-ಫೇಸಿಂಗ್ ಬೆಂಚ್ ಸೀಟ್‌ಗಳೊಂದಿಗೆ ಸಾಫ್ಟ್ ಟಾಪ್ ಆವೃತ್ತಿಯನ್ನು ಹೊಂದಿರುವ ಜಿಮ್ನಿ ಸಫಾರಿಯ ಇತರ ಆವೃತ್ತಿಗಳೂ ಇರಬಹುದು.
ಯಾಂತ್ರಿಕವಾಗಿ, ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಲಾಗುತ್ತಿದೆ. ಈ ಮಾರುತಿ ಸುಜುಕಿ ಜಿಮ್ನಿ 5 ಡೋರ್ ಎಸ್‍ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 6000 rpm ನಲ್ಲಿ 104.8 ಪಿಎಸ್ ಗರಿಷ್ಠ ಪವರ್ ಹಾಗೂ 4000 rpm ನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರುತಿ ಸುಜುಕಿ ಜಿಮ್ನಿ 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಮಾರುತಿ ಜಿಮ್ನಿ 5 ಡೋರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಹೊಂದಿದೆ.
ಈ ಮಾರುತಿ ಜಿಮ್ನಿ ಎಸ್‍ಯುವಿಯಲ್ಲಿ ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದ್ದು, ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ. ಇದರೊಂದಿಗೆ ಆಟೋಮ್ಯಾಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಹಾಗೂ ಕಿವಿಗೆ ಕೇಳಲು ಹಿತವಾಗಿರುವ ಸೌಂಡ್ ಸಿಸ್ಟಮ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: GaadiWaadi


Click it and Unblock the Notifications