ಒದ್ದಾಡುತ್ತಿದ್ದ ಫಾರ್ಚ್ಯೂನರ್‌ ಅನ್ನು ಹೂವಿನಂತೆ ಎಳೆತಂದ ಜಿಮ್ನಿ: ಇದಪ್ಪಾ ತಾಖತ್‌ ಅಂದ್ರೆ!

ನಿಮ್ಮ ಬಳಿ ಎಷ್ಟೇ ದೊಡ್ಡ ಕಾರಿರಬಹುದು, ಅಥವಾ ನೀವು ಎಷ್ಟೇ ನಿಪುಣ ಡ್ರೈವರ್ ಆಗಿರಲೂಬಹದು. ಆದರೆ ಯಾವತ್ತಾದರೂ ಒಂದು ದಿನ, ನೀವು ಎಲ್ಲಾದರೂ ಸಿಕ್ಕಿ ಹಾಕಿಕೊಂಡಾಗ ಇನ್ನೊಂದು ಕಾರಿನ ಸಹಾಯ ಬೇಕೇ ಬೇಕಾಗುತ್ತದೆ. ಇಲ್ಲೊಂದು ಕಡೆ ಆಫ್‌ರೋಡ್‌ ಕಿಂಗ್‌ ಎಂದೇ ಹೆಸರಾಗಿರುವ ಫಾರ್ಚ್ಯೂನರ್ ಕಥೆಯೂ ಅದೇ ಆಗಿದೆ.

ಸಾಧಾರಣವಾಘಿ ಎಲ್ಲಾದರೊಂದು ಕಡೆ ಕಾರೇನಾದರು ಸಿಕ್ಕಿ ಹಾಕೊಕೊಂಡರೆ ಅದನ್ನು ಎಳೆತರಲು ಅದಕ್ಕಿಂತ ದೊಡ್ಡದಾದ ವಾಹನವನ್ನು ಕರೆಸುತ್ತಾರೆ. ಆದರೆ ಈ ಘಟನೆಯಲ್ಲಿ ಘಟಾನುಘಟಿ ಟೊಯೋಟಾ ಫಾರ್ಚ್ಯೂನರ್‌ ಅನ್ನು ಸಿಕ್ಕಿ ಹಾಕಿಕೊಂಡ ಜಾಗದಿಂದ ಎಳೆ ತರಲು ಕರೆಸಿದ ವಾಹನ ಅದಕ್ಕಿಂತಲೂ ಕಡಿಮೆ ಗಾತ್ರದ ಮಾರುತಿ ಸುಜುಕಿ ಜಿಮ್ನಿ. ಈ ವಿಲಕ್ಷಣ ಘಟನೆಯ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.

Maruti Suzuki Jimny Tows Toyota Fortuner Easily, Video Went Viral

ಈ ಘಟನೆ ನಿರ್ದಿಷ್ಟವಾಗಿ ಎಲ್ಲಿ ನಡೆದಿದೆ ಎಂದು ತಿಳಿದು ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋ ಪ್ರಕಾರ ಮಂಜು ತುಂಬಿದ ಜಾಗದಲ್ಲಿ ಟೊಯೋಟಾ ಫಾರ್ಚ್ಯೂನರ್ ಅನ್ನು ಮಾರುತಿ ಸುಜುಕಿ ಜಿಮ್ನಿ, ಎಳೆಯುತ್ತಿರುವುದನ್ನು ಕಾಣಬಹುದು. ಮಾಹಿತಿಗಳ ಪ್ರಕಾರ ಟೊಯೋಟಾ ಫಾರ್ಚ್ಯೂನರ್‌ ಮಂಜಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅದರಿಂದ ಹೊರಬರಲು ಜಿಮ್ನಿಯ ಸಹಾಯ ಕೋರಿದೆ ಎಂದು ತಿಳಿದುಬಂದಿದೆ. ಫಾರ್ಚ್ಯೂನರ್‌ಗಿಂತಲೂ ಕಡಿಮೆ ಪವರ್‌ ಉಳ್ಳ ಜಿಮ್ನಿ ಅದನ್ನು ಎಳೆ ತಂದಿರುವುದು ಎಲ್ಲರ ಕಣ್ಣರಳಿಸಿದೆ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಜಿಮ್ನಿ ಕಾರಿನ ಬಗ್ಗೆ ನೊಡುವುದಾದರೆ ಇದು 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ . ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದ್ದು, ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ. 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.

Maruti Suzuki Jimny Tows Toyota Fortuner Easily, Video Went Viral

ಜಿಮ್ನಿ 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಟೊಯೋಟಾ ಫಾರ್ಚ್ಯೂನರ್‌ ಬಗ್ಗೆ ನೊಡುವುದಾದರೆ, ಟೊಯೊಟಾ ಫಾರ್ಚುನರ್ ಎಸ್‌ಯುವಿ, ಪೆಟ್ರೋಲ್ ಹಾಗೂ ಡೀಸೆಲ್ ಪವರ್ ಟ್ರೇನ್ ಆಯ್ಕೆಯಲ್ಲಿ ಸಿಗಲಿದ್ದು, ಇದರ 2.7 - ಲೀಟರ್ ಪೆಟ್ರೋಲ್ ಎಂಜಿನ್ 166 ಪಿಎಸ್ ಗರಿಷ್ಠ ಪವರ್ (ಶಕ್ತಿ) 245 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ.

Maruti Suzuki Jimny Tows Toyota Fortuner Easily, Video Went Viral

ಮತ್ತೊಂದು, 2.8 - ಲೀಟರ್ ಟರ್ಬೊ ಡೀಸೆಲ್ ಎಂಜಿನ್ 204 ಪಿಎಸ್ ಪವರ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, 10.0 ಕೆಎಂಪಿಎಲ್ ಇಂಧನ ದಕ್ಷತೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 28, 2024, 11:12 [IST]
English summary
Maruti suzuki jimny tows toyota fortuner easily video went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+