ಮಾರುತಿ ಸುಜುಕಿ ಎಂಡಿಗೆ ಎರಡನೇ ಬಾರಿ ಕರೋನಾ ಪಾಸಿಟಿವ್

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಕೆನಿಚಿ ಅಯುಕಾವಾ ಮತ್ತೊಮ್ಮೆ ಕೋವಿಡ್ 19 ವೈರಸ್‌ ಸೋಂಕಿಗೆ ತುತ್ತಾಗಿದ್ದಾರೆ. ಅವರಿಗೆ ಕೋವಿಡ್ 19 ವೈರಸ್‌ಗೆ ತುತ್ತಾಗುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.

ಮಾರುತಿ ಸುಜುಕಿ ಎಂಡಿಗೆ ಎರಡನೇ ಬಾರಿ ಕರೋನಾ ಪಾಸಿಟಿವ್

ಆದರೂ ಟೆಸ್ಟ್'ನಲ್ಲಿ ಪಾಸಿಟಿವ್ ಬಂದಿದೆ. ಅವರನ್ನು ಗುರುಗ್ರಾಮದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಕೆನಿಚಿ ಆಯುಕಾವಾ ಭಾರತದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಅವರ ಕುಟುಂಬದವರು ಜಪಾನ್‌ನಲ್ಲಿ ನೆಲೆಸಿದ್ದಾರೆ. ಈ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಲು ಕೆನಿಚಿ ಆಯುಕಾವಾ ನಿರ್ಧರಿಸಿದ್ದಾರೆ.

ಮಾರುತಿ ಸುಜುಕಿ ಎಂಡಿಗೆ ಎರಡನೇ ಬಾರಿ ಕರೋನಾ ಪಾಸಿಟಿವ್

ಈ ಬಗ್ಗೆ ಮಾತನಾಡಿರುವ ಕಂಪನಿಯ ವಕ್ತಾರರು, ಅವರಿಗೆ ಕಳೆದ ಬಾರಿ ಕೋವಿಡ್ 19 ಸೋಂಕು ತಗುಲಿದಾಗ ಯಾವುದೇ ರೋಗ ಲಕ್ಷಣಗಳಿರಲಿಲ್ಲ. ಈ ಬಾರಿಯೂ ಸಹ ಯಾವುದೇ ರೋಗಲಕ್ಷಣಗಳು ಕಂಡು ಬಂದಿಲ್ಲ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮಾರುತಿ ಸುಜುಕಿ ಎಂಡಿಗೆ ಎರಡನೇ ಬಾರಿ ಕರೋನಾ ಪಾಸಿಟಿವ್

ಅವರ ಕುಟುಂಬದವರು ಜಪಾನ್‌ನಲ್ಲಿರುವುದರಿಂದ ಕೆನಿಚಿ ಆಯುಕಾವಾ ಆಸ್ಪತ್ರೆಗೆ ಸೇರಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. ಭಾರತದಲ್ಲಿ ಕರೋನಾ ವೈರಸ್ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ಮಾರುತಿ ಸುಜುಕಿ ಎಂಡಿಗೆ ಎರಡನೇ ಬಾರಿ ಕರೋನಾ ಪಾಸಿಟಿವ್

ಕರೋನಾ ವೈರಸ್ ಎರಡನೇ ಅಲೆ ಮೊದಲ ಅಲೆಗಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತಿದೆ. ಕೋವಿಡ್ 19 ಸೋಂಕಿತರು ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಮಾರುತಿ ಸುಜುಕಿ ಎಂಡಿಗೆ ಎರಡನೇ ಬಾರಿ ಕರೋನಾ ಪಾಸಿಟಿವ್

ಕರೋನಾ ವೈರಸ್‌ ಎರಡನೇ ಅಲೆಗೆ ದೆಹಲಿ ಹಾಗೂ ಉತ್ತರಪ್ರದೇಶ ರಾಜ್ಯಗಳು ಹೆಚ್ಚು ತತ್ತರಿಸಿವೆ. ದೇಶದ ಹಲವು ಭಾಗಗಳಲ್ಲಿ ಸಂಪೂರ್ಣ ಕರ್ಫ್ಯೂ ಹಾಗೂ ಇನ್ನೂ ಹಲವು ಭಾಗಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಮಾರುತಿ ಸುಜುಕಿ ಎಂಡಿಗೆ ಎರಡನೇ ಬಾರಿ ಕರೋನಾ ಪಾಸಿಟಿವ್

ಕರೋನಾ ವೈರಸ್ ಎರಡನೇ ಅಲೆಗೆ ಬೆಚ್ಚಿ ಬಿದ್ದಿರುವ ಆಟೋ ಮೊಬೈಲ್ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸಲು ಮುಂದಾಗಿವೆ.ಎಂಜಿ ಮೋಟಾರ್, ಟೊಯೊಟಾ, ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಸೇರಿದಂತೆ ಹಲವು ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿವೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಮಾರುತಿ ಸುಜುಕಿ ಎಂಡಿಗೆ ಎರಡನೇ ಬಾರಿ ಕರೋನಾ ಪಾಸಿಟಿವ್

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಉತ್ಪಾದನಾ ಘಟಕದ ಶಿಫ್ಟ್‌ಗಳ ಸಂಖ್ಯೆಯನ್ನು ಕೇವಲ ಒಂದು ಶಿಫ್ಟ್‌ಗೆ ಇಳಿಸಿದೆ ಎಂದು ವರದಿಯಾಗಿದೆ. ಆಟೋ ಮೊಬೈಲ್ ಕಂಪನಿಗಳ ಈ ನಿರ್ಧಾರವು ಕಾರು ಹಾಗೂ ದ್ವಿಚಕ್ರ ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದೆ.

ಮಾರುತಿ ಸುಜುಕಿ ಎಂಡಿಗೆ ಎರಡನೇ ಬಾರಿ ಕರೋನಾ ಪಾಸಿಟಿವ್

ಇದರಿಂದ ವಾಹನಗಳ ವಿತರಣೆ ಪಡೆಯಲು ಗ್ರಾಹಕರು ತಿಂಗಳು ಗಟ್ಟಲೇ ಕಾಯಬೇಕಾಗುತ್ತದೆ. ಆಟೋಮೊಬೈಲ್ ವಲಯವು ಈಗಾಗಲೇ ಸೆಮಿ ಕಂಡಕ್ಟರ್'ಗಳ ಕೊರೆತೆಯಿಂದ ತತ್ತರಿಸಿದೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಮಾರುತಿ ಸುಜುಕಿ ಎಂಡಿಗೆ ಎರಡನೇ ಬಾರಿ ಕರೋನಾ ಪಾಸಿಟಿವ್

ಸೆಮಿ ಕಂಡಕ್ಟರ್'ಗಳ ಕೊರತೆಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ವಾಹನ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಈಗ ಭಾರತದಲ್ಲಿ ಕರೋನಾ ವೈರಸ್‌ ಎರಡನೇ ಅಲೆ ಆಟೋಮೊಬೈಲ್ ವಲಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

Most Read Articles

Kannada
English summary
Maruti Suzuki MD Kenichi Ayukawa tests covid positive for second time. Read in Kannada.
Story first published: Friday, April 30, 2021, 13:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X