Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಯಾಣಿಕರನ್ನು ಸಾವಿನ ದವಡೆಯಿಂದ ಪಾರು ಮಾಡಿದ ವಿಟಾರಾ ಬ್ರೆಝಾ
ರಸ್ತೆ ಅಪಘಾತಗಳಿಂದಾಗಿ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಸಾವು ನೋವುಗಳು ಸಂಭವಿಸುತ್ತಿವೆ. 2019ರಲ್ಲಿ ಭಾರತದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 1,51,113 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.

ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಸಂಖ್ಯೆಯನ್ನು ಕಡಿಮೆಗೊಳಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತೀಯರು ರಸ್ತೆ ಅಪಘಾತಗಳಿಂದ ಪಾರಾಗಲು ಸುರಕ್ಷಿತವಾದ ವಾಹನಗಳನ್ನು ಖರೀದಿಸುತ್ತಿದ್ದಾರೆ.

ಸುರಕ್ಷಿತವಾದ ಕಾರುಗಳು ಅಪಘಾತ ಸಂಭವಿಸಿದಾಗ ಪ್ರಯಾಣಿಕರ ಪ್ರಾಣ ಉಳಿಸುತ್ತವೆ. ಈ ಕಾರಣಕ್ಕೆ ಭಾರತೀಯ ಗ್ರಾಹಕರು ಕಾರು ಖರೀದಿ ವೇಳೆ ಬೆಲೆ, ಮೈಲೇಜ್ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡುತ್ತಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಹಿಂದೆ ಕಾರುಗಳು ಅಪಘಾತಗಳಲ್ಲಿ ಪ್ರಯಾಣಿಕರ ಪ್ರಾಣವನ್ನು ಉಳಿಸಿದ ಹಲವಾರು ಘಟನೆಗಳು ವರದಿಯಾಗಿದ್ದವು. ಈಗ ಕಾರೊಂದು ಭೀಕರ ಅಪಘಾತದಿಂದ ಪ್ರಯಾಣಿಕರನ್ನು ರಕ್ಷಿಸಿರುವ ಬಗ್ಗೆ ವರದಿಯಾಗಿದೆ.
ಕ್ಲಾಸಿಕ್ ಬೈಕ್ ಪ್ರಿಯರಿಗಾಗಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಹೊಸ ಮಿಟಿಯೊರ್ 350 ಹೇಗಿದೆ? ಈ ವಿಡಿಯೋ ನೋಡಿ..
ಅಂದ ಹಾಗೆ ಈ ಅಪಘಾತದಲ್ಲಿ ಭಾಗಿಯಾಗಿದ್ದ ಕಾರು ಮಾರುತಿ ಸುಜುಕಿ ವಿಟಾರಾ ಬ್ರೆಝಾ. ಅಪಘಾತ ಸಂಭವಿಸಿದಾಗ ಈ ಕಾರಿನಲ್ಲಿ 4 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಕಾರು ರಸ್ತೆಯಿಂದ ಸುಮಾರು 20 ಅಡಿ ಆಳದ ಹಳ್ಳದಲ್ಲಿ ಉರುಳಿಬಿದ್ದಿದೆ ಎಂದು ವರದಿಯಾಗಿದೆ.

ಈ ಕಾರು ಎರಡು ಬಾರಿ ಉರುಳಿದೆ ಎಂದು ವರದಿಯಾಗಿದೆ. ಆದರೆ ಕಾರಿನೊಳಗಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮಹಾರಾಷ್ಟ್ರದ ಸತಾರಾದ ಸುಬಮ್ ಕದಮ್ ಅಪಘಾತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾರು ಎಷ್ಟು ಪ್ರಮಾಣದಲ್ಲಿ ಹಾನಿಗೀಡಾಗಿದೆ ಎಂಬುದನ್ನು ಈ ಫೋಟೋಗಳ ಮೂಲಕ ತಿಳಿದುಕೊಳ್ಳಬಹುದು. ಆದರೂ ಪ್ರಯಾಣಿಕರು ಅದೃಷ್ಟವಶಾತ್ ಬದುಕುಳಿದ್ದಾರೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಬಗ್ಗೆ ಗಾಡಿವಾಡಿ ವರದಿ ಮಾಡಿದೆ. ಈ ಹಿಂದೆ ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್, ಟಿಯಾಗೋ ಹಾಗೂ ಹ್ಯಾರಿಯರ್ ಕಾರುಗಳು ಪ್ರಯಾಣಿಕರನ್ನು ರಸ್ತೆ ಅಪಘಾತಗಳಿಂದ ರಕ್ಷಿಸಿರುವ ಬಗ್ಗೆ ವರದಿಗಳಾಗಿದ್ದವು.

ಆದರೆ ಈ ಘಟನೆಯು ಮಾರುತಿ ಸುಜುಕಿ ಕಾರ್ಪೊರೇಟ್ ಕಾರುಗಳ ಸುರಕ್ಷತೆಯ ಬಗ್ಗೆ ಎದ್ದಿರುವ ಅನುಮಾನಗಳಿಗೆ ಉತ್ತರ ನೀಡಿದೆ. ಭಾರತದ ನಂಬರ್ 1 ಕಾರು ತಯಾರಕ ಕಂಪನಿಯಾಗಿದ್ದರೂ ಮಾರುತಿ ಸುಜುಕಿ ಕಾರುಗಳ ಸುರಕ್ಷತೆಯ ಬಗ್ಗೆ ವಿವಿಧ ಅನುಮಾನಗಳು ಹುಟ್ಟಿಕೊಂಡಿದ್ದವು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆದರೆ ವಿಟಾರಾ ಬ್ರೆಝಾ ಮಾರುತಿ ಸುಜುಕಿ ಕಂಪನಿಯ ಕಾರ್ಪೊರೇಟ್ ಕಾರುಗಳ ಪೈಕಿ ಸುರಕ್ಷಿತವಾಗಿದೆ. ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರಾಶ್ ಟೆಸ್ಟ್ ನಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು ವಯಸ್ಕರ ಸುರಕ್ಷತೆಯಲ್ಲಿ 4 ಸ್ಟಾರ್ ಗಳನ್ನು ಪಡೆದಿದೆ. ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರೆಝಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸಬ್ -4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿದೆ.