ಮಾರುತಿ ವ್ಯಾಗನ್ಆರ್ ಕಾರು ಹೆಲಿಕಾಪ್ಟರ್ ರೀತಿ ಪರಿವರ್ತನೆ: ಪೊಲೀಸರಿಂದ ಸೀಜ್.. ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ (Social media) ಇಂದು ಎಲ್ಲೆಡೆ ತನ್ನ ಭುಜಬಲವನ್ನು ವಿಸ್ತರಿಸಿಕೊಂಡಿದೆ. ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಕೆಲವೊಂದು ವಿಚಾರಗಳು ತೀವ್ರ ಕುತೂಹಲ ಕೆರಳಿಸಿ, ಭಾರೀ ವೈರಲ್ ಆಗುತ್ತವೆ. ಸದ್ಯ ಉತ್ತರಪ್ರದೇಶದಲ್ಲಿ ವಿಡಿಯೋವೊಂದು ಸಖತ್ ಹಲ್-ಚಲ್ ಸೃಷ್ಟಿಸಿದ್ದು, ನೆಟ್ಟಿಗರಿಂದ ಕೂಡ ವ್ಯಾಪಕದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಇತ್ತೀಚೆಗೆ ಉತ್ತರ ಪ್ರದೇಶ (Uttar Pradesh)ದ ಅಂಬೇಡ್ಕರ್ ನಗರದಲ್ಲಿ ಇಬ್ಬರು ಸಹೋದರರು ಹಳೆಯ ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki Wagon R) ಕಾರನ್ನು ಹೆಲಿಕಾಪ್ಟರ್ (Helicopter) ಆಗಿ ಪರಿವರ್ತನೆ ಮಾಡಿದ್ದರು. ಆ ಕಾರಿಗೆ ಹೊಸದಾಗಿ ಬಣ್ಣವನ್ನು ಬಳಿಸಲು ತೆಗೆದುಕೊಂಡು ಹೋಗುವಾಗ ಸ್ಥಳೀಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Maruti Suzuki WagonR Modified Into Helicopter Car Seized By Police Video Viral

ವಿವಿಧ ಮಾಧ್ಯಮಗಳ ವರದಿ ಪ್ರಕಾರ, ಹೆಲಿಕಾಪ್ಟರ್ ರೀತಿಯಲ್ಲಿ ಬದಲಾಯಿಸಲಾದ ವ್ಯಾಗನ್ಆರ್ ಕಾರನ್ನು ಪೇಂಟ್‌ಗಾಗಿ ಸಹೋದರರಿಬ್ಬರು ಅಕ್ಬರ್‌ಪುರಕ್ಕೆ ಕೊಂಡೊಯ್ಯುತ್ತಿದ್ದರು. ಆ ವೇಳೆ, ಕೊಟ್ವಾಲಿ ಎಂಬಲ್ಲಿ ಇತರೆ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಪೊಲೀಸರು, ಮಾರ್ಪಾಡುಗೊಳಿಸಿದ ಕಾರನ್ನು ಮೋಟಾರು ವಾಹನ ನಿಯಮಗಳ ಉಲ್ಲಂಘನೆಯಡಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಸಹೋದರರಿಬ್ಬರು ಮದುವೆ ಸಮಾರಂಭಗಳಿಗೆ ಈ ಕಾರನ್ನು ಬಾಡಿಗೆ ನೀಡುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ.

ಈ ಕಾರಿನ ವಿಡಿಯೋವನ್ನು ಮಾರ್ಚ್ 17ರಂದು ಪತ್ರಕರ್ತೆ ಪ್ರಿಯಾ ಸಿಂಗ್ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಅಂದಿನಿಂದ ಇಲ್ಲೆವಯವರೆಗೆ 71 ಸಾವಿರಕ್ಕೂ ಹೆಚ್ಚಿನ ಮಂದಿ ವೀಕ್ಷಿಸಿದ್ದು, ಹಲವಾರು ಲೈಕ್ ಹಾಗೂ ರೀಟ್ವೀಟ್‌ ಮಾಡಿದ್ದಾರೆ. ಜೊತೆಗೆ ತರಹೇವಾರಿ ಕಾಮೆಂಟ್ ಸಹ ಮಾಡಿದ್ದಾರೆ. ನೆಟ್ಟಿಗರೊಬ್ಬರು, 'ಇದು ಭಾರತದಲ್ಲಿ ಮಾತ್ರ ನಡೆಯುತ್ತದೆ' ಎಂದು ಹೇಳಿದ್ದಾರೆ.

Maruti Suzuki WagonR Modified Into Helicopter Car Seized By Police Video Viral

ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರ 'ನಾವು ಹೊಸತನದ ಆವಿಷ್ಕಾರಗಳನ್ನು ಗೌರವಿಸಬೇಕು. ಇದು ಪ್ರಗತಿಯನ್ನು ಹೆಚ್ಚಿಸುತ್ತದೆ. ಬೆಳವಣಿಗೆಯನ್ನು ಉತ್ತೇಜಿಸಲು, ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಪ್ರತಿಯೊಬ್ಬರ ಜೀವನದ ಗುಣಮಟ್ಟವನ್ನು ಸುಧಾರಿಸಲು ಆವಿಷ್ಕಾರಗಳನ್ನು ಗೌರವಿಸುವುದು ಮತ್ತು ಪ್ರೋತ್ಸಾಹಿಸುವುದು ಬಹಳ ಮುಖ್ಯ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗ 'ಅನುಮತಿಯಿಲ್ಲದೆ ಮಾಡಿದರೆ ಹೀಗಾಗುತ್ತದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ, ಯಾವುದೇ ವಾಹನವನ್ನು ಪರವಾನಗಿ ಇಲ್ಲದೆ ಪರಿವರ್ತನೆ ಮಾಡಬಾರದು. ಈ ಘಟನೆಯಲ್ಲಿ ಪೊಲೀಸರು ದಂಡ ವಿಧಿಸಿ, ಆ ನಂತರ ಕಾರನ್ನು ಹಿಂದಿರುಗಿಸಿದ್ದಾರೆ. ಇದು ಸಹೋದರರ ಸೃಜನಶೀಲ ಆವಿಷ್ಕಾರದ ಬಗ್ಗೆ ಬೆಳಕು ಚೆಲ್ಲುತ್ತದೆ. ಜೊತೆಗೆ ಭಾರತದಲ್ಲಿ ವಾಹನ ಪರಿವರ್ತನೆಗೆ ಇರುವ ಅಡೆತಡೆಗಳ ಕುರಿತಂತೆಯೂ ಚರ್ಚೆಯನ್ನು ಹುಟ್ಟುಹಾಕುತ್ತದೆ.

ಸಾಮಾನ್ಯ ಜನರು ಹಾಗೂ ಪರಿಸರಕ್ಕೆ ತೊಂದರೆಯಾಗದ ರೀತಿಯಲ್ಲಿ ಯಾವೆಲ್ಲ ಅಂಶಗಳನ್ನು ಗಮನದಲ್ಲಿಕೊಂಡು ವಾಹನಗಳನ್ನು ಪರಿವರ್ತನೆಗೆ ಒಳಪಡಿಸಬಹುದು ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕೂಡ ಹೆಚ್ಚಿನ ಅರಿವನ್ನು ಮೂಡಿಸಬೇಕು. ಸಾಧ್ಯವಾದರೆ ಒಂದಷ್ಟು ನಿಯಮಗಳನ್ನು ಸಡಿಲಗೊಳಿಸುವ ಕುರಿತು ಆಲೋಚಿಸುವುದು ಉತ್ತಮ. ಹಾಗೆಯೇ ವಾಹನ ಕ್ಷೇತ್ರದಲ್ಲಿ ಹೊಸತನದ ಆವಿಷ್ಕಾರವನ್ನು ಪ್ರಯತ್ನಿಸುವವರೂ ಅದು ಸೀಮಿತ ವ್ಯಾಪ್ತಿಯಲ್ಲಿ ಇದೆಯೇ ಎಂದು ಖಚಿತಪಡಿಕೊಂಡು, ನಿರ್ದಿಷ್ಟ ಇಲಾಖೆಯ ಒಪ್ಪಿಗೆ ಪಡೆಯುವುದು ಸೂಕ್ತ ಎಂಬುದು ನುರಿತವರ ಅಭಿಪ್ರಾಯವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 20, 2024, 10:36 [IST]
English summary
Maruti suzuki wagonr modified into helicopter car seized by police video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+