ಜಾಹೀರಾತು ನಂಬಿ ಕಾರು ಖರೀದಿ.. ಕಂಪನಿ ವಿರುದ್ಧ ಮಾಲೀಕ ಕೇಸ್.. ರೂ.1 ಲಕ್ಷ ಪರಿಹಾರಕ್ಕೆ ಆದೇಶ!
2004 ರಲ್ಲಿ ಖರೀದಿಸಿದ ಮಾರುತಿ ಝೆನ್ ಕಾರಿನ ಬಗ್ಗೆ ಕಂಪನಿ ಪ್ರಚಾರ ಮಾಡಿದಂತೆ ಕಾರು ಮೈಲೇಜ್ ನೀಡುವಲ್ಲಿ ವಿಫಲವಾಗಿದೆ. ಈ ಸಂಬಂಧ ಕಾರು ಮಾಲೀಕ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ(NCDRC) ಮೊರೆ ಹೋಗಿದ್ದು, ನ್ಯಾಯಾಲಯವು ರೂ.1 ಲಕ್ಷ ಪರಿಹಾರವನ್ನು ನೀಡುವಂತೆ ಕಳೆದ ವಾರ ಮಾರುತಿ ಸುಜುಕಿಗೆ ನಿರ್ದೇಶಿಸಿದೆ.
ಸಾಮಾನ್ಯವಾಗಿ ಕಾರು ಬ್ರಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಜಾಹಿರಾತಿನಲ್ಲಿ ಹೆಚ್ಚಿನ ಮೈಲೇಜ್ ನೀಡುವುದಾಗಿ ಪ್ರಚಾರ ಮಾಡುತ್ತವೆ. ಆದರೆ ಇಲ್ಲಿ ಕೆಲವು ರಿಯಲ್ ವರ್ಲ್ಡ್ ಮೈಲೇಜ್ ವಿಷಯಕ್ಕೆ ಬಂದರೆ ಸಿಟಿ ಡ್ರೈವಿಂಗ್ ಹಾಗೂ ಲಾಂಗ್ ಡ್ರೈವ್‌ನಲ್ಲಿ (ಗೇರ್‌ಗಳ ಕಡಿಮೆ ಬಳಕೆ) ವಿಭಿನ್ನವಾಗಿ ಮೈಲೇಜ್ ನೀಡುತ್ತವೆ. ಏಕೆಂದರೆ ಟ್ರಾಫಿಕ್ ಪರಿಸ್ಥಿತಿಗಳು ಹಾಗೂ ಗೇರ್ ಶಿಫ್ಟಿಂಗ್ ಮೇಲೆ ಆಯಾ ಕಾರುಗಳಲ್ಲಿನ ಇಂಧನವು ಹೆಚ್ಚಾಗಿ ಖರ್ಚಾಗುತ್ತದೆ.

ಸಾಮಾನ್ಯವಾಗಿ ಎಲ್ಲಾ ಬ್ರಾಂಡ್‌ಗಳು ಸಿಟಿ ಮೈಲೇಜ್ ಅನ್ನು ಹೇಳಿಕೊಳ್ಳುವುದಿಲ್ಲ, ಬದಲಾಗಿ ನಾನ್‌ಸ್ಟಾಪ್ ಡ್ರೈವ್‌ನಲ್ಲಿ ಲೀಟರ್‌ಗೆ ಎಷ್ಟು ಮೈಲೇಜ್ ಬರುತ್ತದೆಯೋ ಅದನ್ನೇ ಕ್ಲೈಮ್ ಮಾಡುತ್ತಾರೆ. ಕೆಲವೊಮ್ಮೆ ನಾನ್‌ಸ್ಟಾಪ್ ಡ್ರೈವ್‌ನಲ್ಲೂ ಕಂಪನಿ ಹೇಳಿದ ಮೈಲೇಜ್ ನೀಡುವಲ್ಲಿ ಕಾರುಗಳು ವಿಫಲವಾಗುತ್ತವೆ. ಅಂತೆಯೇ ವಾಹನದ ಪ್ರತಿ ಲೀಟರ್ ಇಂಧನಕ್ಕೆ 16 ರಿಂದ 18 ಕಿ.ಮೀ ಮೈಲೇಜ್ ಅನ್ನು ಆಧರಿಸಿ ಕಾರನ್ನು ಖರೀದಿಸಿದೆ ಎಂದು ದೂರುದಾರರಾದ ರಾಜೀವ್ ಶರ್ಮಾ ಆರೋಪಿಸಿದ್ದಾರೆ.
ಶರ್ಮಾ ಅವರು ಅಕ್ಟೋಬರ್ 2004 ರಲ್ಲಿ ಪತ್ರಿಕೆಯೊಂದರಲ್ಲಿ ಜಾಹೀರಾತನ್ನು ನೋಡಿದ್ದರು, ಅದರಲ್ಲಿ ಮಾರುತಿ ಸುಜುಕಿ ಜೆನ್ 18 ಕಿ.ಮೀ ಮೈಲೇಜ್ ಹೊಂದಿದೆ ಎಂದು ಹೇಳಿಕೆ ನೀಡಿತ್ತು. ಆದರೆ ವಾಸ್ತವದಲ್ಲಿ ಅವರು ಖರೀದಿಸಿದ ಮಾರುತಿ ಜೆನ್ ಒಂದು ಲೀಟರ್‌ಗೆ ಸರಾಸರಿ 10.2 ಕಿ.ಮೀ ಮೈಲೇಜ್ ಅನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಮಾರುತಿ ಸುಜುಕಿ ವಾದ: ಜಾಹೀರಾತನ್ನು ನೋಡುವ ಐದು ತಿಂಗಳ ಮೊದಲು ದೂರುದಾರರು ಕಾರನ್ನು ಖರೀದಿಸಿದ್ದಾರೆ. ಆದ್ದರಿಂದ ಅವರು ಖರೀದಿಸುವ ನಿರ್ಧಾರದಲ್ಲಿ ಇದು ಅಪ್ರಸ್ತುತವಾಗಿದೆ ಎಂದು ಮಾರುತಿಯಿಂದ ವಾದಿಸಲಾಗಿದೆ. ಶರ್ಮಾ ಅವರ ಪ್ರತಿಪಾದನೆಯು ಮುಖ್ಯವಾಗಿ ವಿತರಕರ ಮೌಖಿಕ ಭರವಸೆಯ ಮೇಲೆ ನಿಂತಿದೆಯೇ ಹೊರತು ಜಾಹೀರಾತಿನಲ್ಲಿ ಅಲ್ಲ ಎಂದು ವಾದಿಸಲಾಯಿತು. ಆದರೆ ಕಂಪನಿ, ಮೈಲೇಜ್ "ಅಂತರ್ಗತವಾಗಿ ಬದಲಾಗಬಲ್ಲದು" ವಿವಿಧ ಕಾರಣಗಳಿಂದ ಪ್ರಭಾವಿತವಾಗಿದೆ ಎಂದು ಹೇಳಿದೆ.
ಮೈಲೇಜ್‌ನಲ್ಲಿ ವ್ಯತ್ಯಾಸಗಳನ್ನು ಉಂಟುಮಾಡುವ ಕೆಲವು ಅಂಶಗಳನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಒಪ್ಪಿಕೊಂಡಿದ್ದರೂ, ಈ ಪ್ರಕರಣದಲ್ಲಿನ ವ್ಯತ್ಯಾಸವು ತುಂಬಾ ದೊಡ್ಡದಾಗಿರುವುದರಿಂದ ಗ್ರಾಹಕ ನ್ಯಾಯಾಲಯವು ಗ್ರಾಹಕರ ಪರವಾಗಿ ನಿಂತಿದೆ. ಅಂದರೆ ಇವರ ಆರೋಪದಡಿ ಕಂಪನಿ ಜಾಹಿರಾತಿಗು ಕಾರು ಮಾಲೀಕನಿಗೆ ಮೈಲೇಜ್ ನೀಡುತ್ತಿರುವುದರ ನಡುವೆ ಶೇ 41 ರಷ್ಟು ವ್ಯತ್ಯಾಸವಿದೆ.
"ಸಾಮಾನ್ಯವಾಗಿ ಕಾರಿನ ನಿರೀಕ್ಷಿತ ಖರೀದಿದಾರರು ಕಾರಿನ ಮೈಲೇಜ್ ಅನ್ನು ಪ್ರಮುಖವಾಗಿ ವಿಚಾರಿಸುತ್ತಾರೆ. ಒಂದೇ ವಿಭಾಗದಲ್ಲಿ ವಿವಿಧ ಬ್ರಾಂಡ್‌ಗಳು/ಕಾರುಗಳ ತುಲನಾತ್ಮಕ ಅಧ್ಯಯನವನ್ನು ತಮ್ಮ ಮೈಲೇಜ್‌ಗೆ ಸಂಬಂಧಿಸಿದಂತೆ ಮಾಡುತ್ತಾರೆ. ಹಾಗಾಗಿ ಇಲ್ಲಿ ಅಧಿಕೃತ ಮೈಲೇಜ್‌ನಲ್ಲಿ ಕೆಲವು ವ್ಯತ್ಯಾಸಗಳಿವೆ. ಇದು ಅರ್ಥವಾಗುವಂತಹದ್ದಾಗಿದೆ, ಅಂತಹ ವ್ಯತ್ಯಾಸವು ದೊಡ್ಡದಾದಾಗ, ಅಂತಹ ಕಾರುಗಳನ್ನು ಖರೀದಿಸುವವರು ನೊಂದವರು/ವಂಚನೆಗೊಳಗಾದವರು ಎಂದು ಭಾವಿಸುತ್ತಾರೆ, "ಎಂದು ಜನವರಿ 17 ರ ಆದೇಶದಲ್ಲಿ ಆಯೋಗವು ಉಲ್ಲೇಖಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications