ಬರೋಬ್ಬರಿ 6 ಕೋಟಿಯ ಮೆಕ್‌ಲಾರೆನ್ ಭಾರತದಲ್ಲಿ ಲಾಂಚ್: 20 ಪೀಸ್ ಅಷ್ಟೇ, ನಿಮಗೆ ಬೇಕೆಂದರೂ ಸಿಗಲ್ಲ!
ಮೆಕ್‌ಲಾರೆನ್ ಎಂಬ ಹೆಸರು ಭಾರತದಲ್ಲಿ ವಿರಳವಾದರೂ, ವಿದೇಶದಲ್ಲಿ ಈ ಹೆಸರು ಕೇಳದವರ ಸಂಖ್ಯೆ ಅತೀ ವಿರಳ ಎಂದರೆ ತಪ್ಪಾಗಲಾರದು. ಐಷಾರಾಮಿ ಸ್ಪೋರ್ಟ್ಸ್ ಕಾರುಗಳಲ್ಲಿ ಅತಿ ಹೆಚ್ಚು ಹೆಸರು ಮಾಡಿರುವ ಕಾರುಗಳಲ್ಲಿ ಈ ಕಾರು ಸಹ ಸೇರುತ್ತದೆ. ಈ ಕಾರಿನ ಡಿಸೈನ್, ಫೀಚರ್‌ಗಳೇ ಅತಿ ದೊಡ್ಡ ಹೈಲೈಟ್ ಎಂದರೆ ತಪ್ಪಾಗಲಾರದು.
ಇನ್ನು ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಮೆಕ್‌ಲಾರೆನ್ ಕಾರುಗಳು ಅಪರೂಪಕ್ಕೆ ಕಂಡು ಬರುತ್ತದೆ. ಬ್ಯೂಟಿ ಆಂಡ್ ದಿ ಬೀಸ್ಟ್ ಎಂಬ ಹೆಸರು ಈ ಕಾರಿಗೆ ಹೇಳಿ ಮಾಡಿಸಿದ ಗಾದೆಯಾಗಿರಬಹುದು ಎಂಬುದು ಈಗ ನಮ್ಮಲ್ಲಿ ಮೂಡುತ್ತಿರುವ ಸಂಶಯ. ಇಂದಿನ ಈ ಲೇಖನದಲ್ಲಿ ನಾವು ಹೊಸದಾಗಿ ಭಾರತದಲ್ಲಿ ಲಾಂಚ್ ಆಗಿರುವ ಮೆಕ್‌ಲಾರೆನ್ ೭೫೦ ಎಸ್ ಕಾರಿನ ಕುರಿತಾಗಿ ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಭಾರತದಲ್ಲಿ ಲಾಂಚ್ ಆಗಿರುವ ಹೊಸ ಮೆಕ್ಲಾರೆನ್ 750ಎಸ್ (McLaren 750S) ಕಾರಿನ ಆರಂಭಿಕ ಬೆಲೆ ಸುಮಾರು 5.91 ಕೋಟಿ ರೂಪಾಯಿಗಳು. ಹೌದು, ಎಕ್ಸ್ ಶೋ ರೂಮ್ ದರ ಇದಾಗಿದ್ದು ಆಯಾ ಪ್ರದೇಶದ ಟ್ಯಾಕ್ಸ್‌ನ ಅನುಗುಣವಾಗಿ ಈ ಕಾರಿನ ಬೆಲೆ ಬದಲಾಗುತ್ತದೆ. ಆಕರ್ಷಕ ಅಗ್ರೆಸಿವ್ ಲುಕ್ ಹೊಂದಿರುವ ಈ ಕಾರು ನೋಡುಗರನ್ನು ಒಂದೇ ನೋಟದಲ್ಲಿ ಸೆಳೆತಯತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇನ್ನು ಈ ಕಾರು ಭಾರತಕ್ಕೆ ಲಿಮಿಟೆಡ್ ಆಗಿದ್ದು ಕೆಲವೇ ಕೆಲವು ಸಂಖ್ಯೆಯಲ್ಲಿ ಮಾತ್ರ ಈ ಕಾರನ್ನು ನಿರ್ಮಾಣ ಮಾಡಲಾಗುತ್ತಿದೆ. ಹೌದು, ಕೇವಲ ಇಪ್ಪತ್ತೇ ಇಪ್ಪತ್ತು ಸಂಖ್ಯೆಯಲ್ಲಿ ಈ ಹೊಸ ಮೆಕ್‌ಲಾರೆನ್ ೭೫೦ ಎಸ್ ಕಾರನ್ನು ಕಂಪನಿ ಹೊರಬಿಡುತ್ತಿದ್ದು, ಈ ಕಾರು ಬೇಕಾದವರು ಆದಷ್ಟು ಬೇಗ ಶೋ ರೂಮ್ ಕಡೆ ಧಾವಿಸಬೇಕಾಗಿದೆ. ಮಾಹಿತಿಗಳ ಪ್ರಕಾರ ಈಗಾಗಲೇ ಈ ಕಾರನ್ನು ಭಾರತದಲ್ಲಿ ಕೊಳ್ಳಲು ಕಂಪನಿಗಳೊಂದಿಗೆ ಮಾತುಕತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಕಾರಿನ ಎಂಜಿನ್ ಬಗ್ಗೆ ಮಾತನಾಡುವುದಾದರೆ ಮೆಕ್‌ಲಾರೆನ್ 750ಎಸ್, M840T ಎಂಜಿನ್ ಹೊಂದಿದ್ದು ಈ ಎಂಜಿನ್ ಸಹಾಯದಿಂದ ಈ ಕಾರು ಬರೋಬ್ಬರಿ 750 hp ಪವರ್ ಮತ್ತು 800 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂದು ತಿಳಿದು ಬಂದಿದೆ. ಇನ್ನು ಇಷ್ಟೊಂದು ಪವರ್ ಅನ್ನು ಯಾವುದೇ ಎಲೆಕ್ಟ್ರಿಕ್ ಅಸಿಸ್ಟ್ ಸಹಾಯವಿಲ್ಲದೆ ಈ ಕಾರು ಉತ್ಪಾದಿಸುತ್ತದೆ ಎಂದರೆ ನೀವು ನಂಬಲೇ ಬೇಕು.
ಈ ಬ್ರ್ಯಾಂಡ್ ಈ ಹಿಂದೆ ಕೆಲವು ಅದ್ಭುತ ಸೂಪರ್‌ಕಾರ್‌ಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಮೆಕ್ಲಾರೆನ್ ಕಳೆದ ವರ್ಷ ಭಾರತದಲ್ಲಿ ಅಧಿಕೃತವಾಗಿ ಕಾರುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು. ಜನಪ್ರಿಯ ಫ್ಯೂಷನ್ ಜಿಮ್‌ನ ಮಾಲೀಕ ಅಮಿತ್ ಸಿಂಗ್ ಇತ್ತೀಚೆಗೆ ಹೊಸ ಮೆಕ್ಲಾರೆನ್ 720S (McLaren 720S) ಸೂಪರ್‌ಕಾರ್ ಅನ್ನು ಖರೀದಿಸಿದ್ದಾರೆ. ಜನಪ್ರಿಯ ಫ್ಯೂಷನ್ ಜಿಮ್ ಮಾಲೀಕ ಅಮಿತ್ ಸಿಂಗ್ ಖರೀದಿಸಿದ McLaren 720S ಸಿಗ್ನೇಚರ್ ಆರೆಂಜ್ ಶೇಡ್‌ನಲ್ಲಿ ಬರುತ್ತದೆ.
ಇನ್ನು ಹಳೆಯ ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು 2.8 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಗಂಟೆಗೆ 341 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹೊಸ ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು ಲೆದರ್ ಮತ್ತು ಅಲ್ಕಾಂಟರಾ ವಸ್ತುಗಳ ಸಂಯೋಜನೆಯನ್ನು ನೀಡುತ್ತದೆ. ಈ ಕಾರಿನಲ್ಲಿ ಕಾರ್ಬನ್ ಫೈಬರ್ ಅಂಶಗಳನ್ನು ಒಳಗೊಂಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications