ಮಗಳಿಗಾಗಿ ಸಾಮಾಜಿಕ ಅಂತರದ ವಾಹನ ತಯಾರಿಸಿದ ಮೆಕಾನಿಕ್
ಅವಶ್ಯಕತೆಯನ್ನು ಆವಿಷ್ಕಾರದ ತಾಯಿ ಎಂದು ಕರೆಯಲಾಗುತ್ತದೆ. ಜೀವನದಲ್ಲಿ ಯಾವುದಾದರೂ ವಸ್ತುವಿನ ಕೊರತೆಯುಂಟಾದರೆ ಆ ವಸ್ತುವನ್ನು ಹುಡುಕಲು ಮುಂದಾಗುತ್ತೇವೆ. ತ್ರಿಪುರದ 39 ವರ್ಷ ವಯಸ್ಸಿನ ಪಾರ್ಥ ಸಾಹ ಇದೇ ರೀತಿಯ ಕೆಲಸಕ್ಕೆ ಕೈ ಹಾಕಿದ್ದಾರೆ. ಪಾರ್ಥರವರು ಟಿವಿ ಅಂಗಡಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ.

ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಪಾರ್ಥರವರು ಬೈಕ್ ಒಂದನ್ನು ತಯಾರಿಸಿದ್ದಾರೆ. ಈ ಬೈಕಿಗೆ ವ್ಯಾಪಕ ಜನ ಮೆಚ್ಚುಗೆ ವ್ಯಕ್ತವಾಗಿದೆ. ಕರೋನಾ ವೈರಸ್ ಸೋಂಕು ದೇಶಾದ್ಯಂತ ಹರಡಿರುವುದರಿಂದ ಜನ ಭಯಗೊಂಡಿದ್ದಾರೆ. ಸೋಂಕು ಹರಡುವ ಭಯದಿಂದ ಜನದಟ್ಟಣೆ ಇರುವ ಪ್ರದೇಶಗಳಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪಾರ್ಥರವರು ತಮ್ಮ 8 ವರ್ಷದ ಮಗಳನ್ನು ಕಿಕ್ಕಿರಿದು ತುಂಬಿರುವ ಬಸ್ಸಿನಲ್ಲಿ ಕಳುಹಿಸುವುದು ಸರಿಯಲ್ಲವೆಂಬ ನಿರ್ಧಾರಕ್ಕೆ ಬಂದರು.

ವಿಭಿನ್ನವಾದ ಬೈಕ್ ಅನ್ನು ವಿನ್ಯಾಸಗೊಳಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಈ ಬೈಕ್‌ನಲ್ಲಿ ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ತಮ್ಮ ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದಾರೆ. ಈ ಬೈಕಿನಲ್ಲಿ ಇಬ್ಬರು ಕುಳಿತು ಕೊಳ್ಳಬಹುದು. ಎರಡು ಸೀಟುಗಳ ಮಧ್ಯೆ ಒಂದು ಮೀಟರ್ ಅಂತರವನ್ನು ಇಡಲಾಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿದಾಗ, ಲಾಕ್‌ಡೌನ್ ಶೀಘ್ರದಲ್ಲೇ ಕೊನೆಗೊಳ್ಳುವುದಿಲ್ಲವೆಂಬುದನ್ನು ಅವರು ಅರ್ಥಮಾಡಿಕೊಂಡರು. ತಮ್ಮ ಮಗಳನ್ನು ಬಸ್‌ನಲ್ಲಿ ಶಾಲೆಗೆ ಕಳುಹಿಸಬಾರದು ಎಂದು ನಿರ್ಧರಿಸಿದರು.

ವಿಳಂಬ ಮಾಡದೇ ತಮ್ಮ ಆದಾಯದಲ್ಲಿ ಉಳಿಸಿದ್ದ ಹಣದಲ್ಲಿ ಹಳೆಯ ಬೈಕ್ ಭಾಗಗಳನ್ನು ಖರೀದಿಸಿ, ಬೈಕಿನ ವಿನ್ಯಾಸವನ್ನು ಆರಂಭಿಸಿದರು. ಇದು ಬ್ಯಾಟರಿಗಳ ಸಹಾಯದಿಂದ ಚಲಿಸುವ ಎಲೆಕ್ಟ್ರಿಕ್ ಬೈಕ್. ಇದಕ್ಕೆ 1 ಮೀಟರ್ ಅಂದರೆ 3.2 ಅಡಿ ಉದ್ದದ ಕಬ್ಬಿಣದ ರಾಡ್ ಅನ್ನು ಅಳವಡಿಸಲಾಗಿದೆ. ಇದರಿಂದ ಬೈಕ್‌ನ ಉದ್ದವು ಹೆಚ್ಚಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್
ಈ ಎಲೆಕ್ಟ್ರಿಕ್ ಬೈಕ್ ಕೇವಲ 3 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಬೈಕ್ 80 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಬೈಕ್‌ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 40 ಕಿ.ಮೀಗಳಾಗುತ್ತದೆ. ಒಂದು ಬಾರಿ ಚಾರ್ಜ್ ಮಾಡಲು ರೂ.10 ವೆಚ್ಚವಾಗುತ್ತದೆ.

ಈ ಬೈಕ್ ಅನ್ನು ಅವರು ರಸ್ತೆಯಲ್ಲಿ ಚಲಾಯಿಸುತ್ತಿದ್ದಾಗ ಜನರು ಅಚ್ಚರಿಯಿಂದ ನೋಡುತ್ತಿದ್ದರು. ಪಾರ್ಥರವರ ಈ ಸಾಧನೆಯನ್ನು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್‌ರವರೇ ಪ್ರಶಂಸಿಸಿದ್ದಾರೆ. ಇತ್ತೀಚೆಗೆ ಇ-ರಿಕ್ಷಾ ಚಾಲಕನೊಬ್ಬ ತನ್ನ ರಿಕ್ಷಾದಲ್ಲಿ ಪ್ರಯಾಣಿಕರಿಗಾಗಿ ನಾಲ್ಕು ಕ್ಯಾಬಿನ್‌ಗಳನ್ನು ತಯಾರಿಸಿ, ಸಾಮಾಜಿಕ ಅಂತರದ ಮಹತ್ವವನ್ನು ಸಾರಿದ್ದನು.


Click it and Unblock the Notifications