ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ಲ್ಯಾಂಡ್ ರೋವರ್ ತನ್ನ ಐಷಾರಾಮಿ ಡಿಫೆಂಡರ್ ಎಸ್‍ಯುವಿಯನ್ನು ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಲ್ಯಾಂಡ್ ರೋವರ್ ಡಿಫೆಂಡರ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮತ್ತು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯು ಸೆಲೆಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ. ಇದೀಗ ಈ ಜನಪ್ರಿಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯನ್ನು ರಾಜಕಾರಣಿಯೊಬ್ಬರು ಖರೀದಿಸಿದ್ದಾರೆ. ಸಂಸದ ವಿಜಯ್ ವಸಂತ್ ಅವರು ಲ್ಯಾಂಡ್ ರೋವರ್ ಡಿಫೆಂಡರ್ ಖರೀದಿಸಿದ್ದಾರೆ. ಬಹುಶಃ ಈ ಹೊಸ ಡಿಫೆಂಡರ್ ಎಸ್‍ಯುವಿಯನ್ನು ಖರೀದಿಸಿದ ಮೊದಲ ಭಾರತೀಯ ರಾಜಕಾರಣಿಯಾಗಿರಬಹುದು. ಈ ವರ್ಷದ ಆರಂಭದಲ್ಲಿ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ವಿಜಯ್ ವಸಂತ್ ಸ್ಪರ್ಧಿಸಿ ಗೆದ್ದಿದ್ದರು.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ವಿಜಯ್ ವಸಂತ್ ಕೇವಲ ರಾಜಕಾರಣಿ ಮಾತ್ರವಲ್ಲ, ತಮಿಳು ಚಿತ್ರರಂಗದಲ್ಲಿಯೂ ಕೆಲಸ ಮಾಡಿದ್ದಾರೆ ಮತ್ತು ಉದ್ಯಮಿಯೂ ಕೂಡ ಹೌದು. ವಿಜಯ್ ವಸಂತ್ ಅವರು ಟೊಯೊಟಾ ಫಾರ್ಚುನರ್ ಅನ್ನು ಹೊಂದಿದ್ದರು. ಇದೀಗ ಲ್ಯಾಂಡ್ ರೋವರ್ ಡಿಫೆಂಡರ್‌ನೊಂದಿಗೆ ಬದಲಾಯಿಸಿದರು ಮತ್ತು ಇದು ಸಾಕಷ್ಟು ಅಪ್‌ಗ್ರೇಡ್ ಆಗಿದೆ.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ಅವರು ಹೊಂದಿದ್ದ ಟೊಯೊಟಾ ಫಾರ್ಚುನರ್ ಕೆಂಪು ಬಣ್ಣದಲ್ಲಿತ್ತು ಮತ್ತು ಆಶ್ಚರ್ಯಕರವಾಗಿ ಅವರು ಖರೀದಿಸಿದ ಡಿಫೆಂಡರ್ ಕೂಡ ಇದೇ ಬಣ್ಣವನ್ನು ಹೊಂದಿದೆ. ಕೆಂಪು ಬಣ್ಣವು ಇವರ ಮೆಚ್ಚಿನ ಬಣ್ಣವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ವಿಜಯ್ ವಸಂತ್ ಅವರ ಗ್ಯಾರೇಜ್‌ನಲ್ಲಿ ಐಷಾರಾಮಿ ಕಾರುಗಳಿವೆ ಎಂದು ತಿಳಿದುಬಂದಿದೆ.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ವಿಜಯ್ ವಸಂತ್ ಅವರ ಬಳಿ ಪೋರ್ಷೆ ಕಯೆನ್ ಚಿತ್ರವು ಆನ್‌ಲೈನ್‌ನಲ್ಲಿ ಲಭ್ಯವಿದೆ. ಈಗಲೂ ಆ ಪೋರ್ಷೆ ಅವರ ಬಳಿ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಸಂಸದನ ಕಾರು ಸಂಗ್ರಹದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಲ್ಯಾಂಡ್ ರೋವರ್ ಡಿಫೆಂಡರ್ ಒಂದು ಐಷಾರಾಮಿ ಎಸ್‍ಯುವಿಯಾಗಿದೆ.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಉತ್ತಮ ಆಫ್-ರೋಡಿಂಗ್ ಸಾಮರ್ಥ್ಯವನ್ನು ಹೊಂದಿರುವ ಎಸ್‍ಯುವಿಯಾಗಿದೆ. ಈ ಎಸ್‌ಯುವಿ ಆಫ್ ರೋಡಿಂಗ್‌ನ ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.08 ಕೋಟಿಯಾಗಿದೆ.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ಲ್ಯಾಂಡ್ ರೋವರ್ ಡಿಫೆಂಡರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಐಕಾನಿಕ್ ಆಫ್-ರೋಡ್ ಎಸ್‍ಯುವಿಯಾಗಿದೆ. ಈ ಜನಪ್ರಿಯ ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಡಿ7ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ. ಈ ಲ್ಯಾಂಡ್ ರೋವರ್ ಕಂಪನಿಯು ತನ್ನ ಡಿಫೆಂಡರ್ ಎಸ್‍ಯುವಿ ಆಪ್-ರೋಡ್ ಗಾಗಿ ಅಕ್ಸೆಸರೀಸ್ ಗಳು ಕೂಡ ಲಭ್ಯವಿದೆ.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ಡಿಫೆಂಡರ್ ಎಸ್‍ಯುವಿಗೆ ಎಕ್ಸ್‌ಪೆಡಿಶನ್ ಪ್ಯಾಕ್, ಕಂಟ್ರಿ ಪ್ಯಾಕ್, ಅರ್ಬನ್ ಪ್ಯಾಕ್ ಮತ್ತು ಅಡ್ವೆಂಚರ್ ಪ್ಯಾಕ್ ಎಂಬ ನಾಲ್ಕು ಆಫ್-ರೋಡ್ ಅಕ್ಸೆಸರೀಸ್ ಪ್ಯಾಕೇಜ್‌ಗಳ ಆಯ್ಕೆಯನ್ನು ಹೊಂದಿದೆ. ಹೊಸ ಡಿಫೆಂಡರ್ ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಆಗಿ ತರಲಾಗಿದೆ. ಇದು ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ. 3-ಡೋರಿನ ಮಾದರಿಯನ್ನು ಡಿಫೆಂಡರ್ 90 ಆದರೆ 5-ಡೋರಿನ ಮಾದರಿಯು ಡಿಫೆಂಡರ್ 110 ಎಂದು ಕರೆಯಲಾಗುತ್ತದೆ.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯು 5,018 ಎಂಎಂ ಉದ್ದ, 2,105 ಎಂಎಂ ಅಗಲ ಮತ್ತು 1,967 ಎಂಎಂ ಎತ್ತರವನ್ನು ಹೊಂದಿದೆ. ಈ ಎಸ್‍ಯುವಿಯು 3,022 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಡಿಸಿ 100 ಡಿಫೆಂಡರ್ ಕಾನ್ಸೆಪ್ಟ್ ನಿಂದ ಹೆಚ್ಚು ಪ್ರೇರಿತವಾಗಿದೆ ಮೂಲ ಆವೃತ್ತಿಯಿಂದ ಸಿಲೂಯೆಟ್ ಅನ್ನು ಉಳಿಸಿಕೊಂಡಿದೆ.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ಇಂಡಿಯಾ-ಸ್ಪೆಕ್ ಡಿಫೆಂಡರ್ ಎಸ್‍ಯುವಿ ಮಾದರಿಯಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್, ಬಿಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 292 ಬಿಹೆಚ್‌ಪಿ ಮತ್ತು 400 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಡಿಫೆಂಡರ್ ಲ್ಯಾಂಡ್ ರೋವರ್‌ನ ಟೆರೈನ್ ರೆಸ್ಪಾನ್ಸ್ 2 ಸಿಸ್ಟಂ ಅನ್ನು ಸಹ ಪಡೆಯುತ್ತದೆ.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ಇನ್ನು ಇದರೊಂದಿಗೆ ಡಿಫೆಂಡರ್ ಎಸ್‍ಯುವಿಯ 3.0-ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 296 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದರ ಟ್ಯಾಕ್ಷನ್ ಅತ್ಯುತ್ತಮವಾಗಿಸಲು ಕಾನ್ಫಿಗರ್ ಮಾಡಬಹುದು ಮತ್ತು ಆಫ್-ರೋಡ್ಗೆ ಹೋಗುವಾಗ ಆಟೋಮ್ಯಾಟಿಕ್ 145 ಎಂಎಂ ನ್ಯೂಮ್ಯಾಟಿಕ್ ಸಸ್ಪೆಂಕ್ಷನ್ ಮತ್ತು ಗ್ರೌಂಡ್ ಕ್ಲಿಯರೆನ್ಸ್ 50 ಎಂಎಂ ವರಗೆ ಹೆಚ್ಚಾಗುತ್ತದೆ.

ದುಬಾರಿ ಬೆಲೆಯ Land Rover Defender ಎಸ್‌ಯು‌ವಿ ಖರೀದಿಸಿದ ಸಂಸದ ವಿಜಯ್ ವಸಂತ್

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯಲ್ಲಿ ಟಾರ್ಕ್ ವೆಕ್ಟರಿಂಗ್, ಕ್ರೂಸ್ ಕಂಟ್ರೋಲ್, ಆಲ್ ವ್ಹೀಲ್ ಡ್ರೈವ್, ಹಿಲ್ ಲಾಂಚ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್, ಅಡಾಪ್ಟಿವ್ ಡೈನಾಮಿಕ್ಸ್, ಟ್ವಿನ್-ಸ್ಪೀಡ್ ಟ್ರಾನ್ಸ್ಫರ್ ಬಾಕ್ಸ್ ಮತ್ತು ಹೆಚ್ಚಿನ ಎಲೆಕ್ಟ್ರಾನಿಕ್ ಫೀಚರ್ ಗಳನ್ನು ಒಳಗೊಂಡಿದೆ. ಡಿಫೆಂಡರ್‌ನ ನ್ಯೂಮ್ಯಾಟಿಕ್ ಸಸ್ಪೆಂಕ್ಷನ್ ಹೊಂದಿದ ರೂಪಾಂತರವು ಗರಿಷ್ಠ 291 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆಯುತ್ತದೆ.ಈ ಎಸ್‍ಯುವಿಯನ್ನು ಸಕ್ರಿಯಗೊಳಿಸಲು ಎರಡು ಸಿಮ್ ಕಾರ್ಡ್‌ಗಳನ್ನು ಸಹ ಹೊಂದಿರುತ್ತದೆ. ಓವರ್-ದಿ-ಏರ್ (ಒಟಿಎ) ನವೀಕರಣಗಳು. ವಿಭಿನ್ನ ಡೇಟಾವನ್ನು ಪ್ರದರ್ಶಿಸಲು ಕಾನ್ಫಿಗರ್ ಮಾಡಬಹುದಾದ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.

Article Published On: Wednesday, November 3, 2021, 15:06 [IST]
English summary
Member of parliament vijay vasanth bought brand new land rover defender details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+