ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಬಹುಮಹಡಿ ಕಟ್ಟಡ

By Nagaraja

ನಿಮಗೆ ನಿಮ್ಮ ಮೆಚ್ಚಿನ ಬೆಂಝ್ ಕಾರುಗಳನ್ನು ಬಿಟ್ಟು ಉಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಚಿಂತೆ ಬೇಡ. ಇನ್ನು ಮುಂದೆ ಇಂತಹ ಸಮಸ್ಯೆ ಕಾಡಲಾರದು. ಯಾಕೆಂದರೆ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಬಹು ಮಹಡಿ ಕಟ್ಟಡವನ್ನು ನಿರ್ಮಿಸಿದೆ.

Also Read: 14 ಕೀ.ಮೀ. ಸಂಚರಿಸಿದ ಡೈಮ್ಲರ್ ಟ್ರಕ್

ಸಕಲ ರೀತಿಯ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಬೆಂಝ್ ಕಟ್ಟಡವು ನಿಮಗೆ ಕಾರಿನಲ್ಲಿರುವಂತೆಯೇ ಭಾಸ ಮಾಡಲಿದೆ. ಆಡಂಬರದ ಮತ್ತೊಂದು ಪ್ರತಿ ರೂಪವಾಗಿರುವ ಬೆಂಝ್ ಐಷಾರಾಮಿ ಕಟ್ಟಡದೊಳಗೆ ಅಂತದ್ದೇನು ವೈಶಿಷ್ಟ್ಯಗಳಿವೆ ಎಂಬುದನ್ನು ತಿಳಿದುಕೊಳ್ಳಲು ಚಿತ್ರಪುಟದತ್ತ ಮುಂದುವರಿಯಿರಿ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಐಷಾರಾಮಿ ಬಹುಮಹಡಿ ಕಟ್ಟಡ

ಪಶ್ಚಿಮ ಲಂಡನ್‌ನ ಕೆನ್ಸಿಂಗ್ಟನ್ ಪ್ರದೇಶದಲ್ಲಿ ಬೆಂಝ್‌ನ ಈ ಆರು ಐಷಾರಾಮಿ ಕಟ್ಟಡಗಳು ತಲೆಯೆತ್ತಿವೆ. ಇದು ಸಣ್ಣ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ಕೊಡುವ ಉದ್ಯಮಿಗಳಿಗೆ ಪರಿಪೂರ್ಣ ವಿಲಾಸಿ ಜೀವನದ ಅನುಭವ ನೀಡಲಿದೆ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಐಷಾರಾಮಿ ಬಹುಮಹಡಿ ಕಟ್ಟಡ

ಮರ್ಸಿಡಿಸ್ ಬೆಂಝ್ ಕ್ಲಾಸಿಕ್ ಕಾರುಗಳಿಂದ ಸ್ಪೂರ್ತಿ ಪಡೆದುಕೊಂಡು ಇದನ್ನು ರಚಿಸಲಾಗಿದೆ. ಅಲ್ಲದೆ ಕೊಠಡಿಗಳನ್ನು ಕಾರಿನಲ್ಲಿರುವಂತೆಯೇ ಭಾಸವಾಗುವಂತಹ ರೀತಿಯಲ್ಲಿ ನಿರ್ಮಿಸಲಾಗಿದೆ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಐಷಾರಾಮಿ ಬಹುಮಹಡಿ ಕಟ್ಟಡ

ಅಲ್ಟ್ರಾ ಐಷಾರಾಮಿ ಕೊಠಡಿಗಳೆಂದು ಮರ್ಸಿಡಿಸ್ ಬೆಂಝ್ ಇದನ್ನು ವಿಶ್ಲೇಷಿಸುತ್ತಿದೆ. ಅಲ್ಲದೆ ಕೊಠಡಿಯ ಮಧ್ಯಭಾಗದಲ್ಲಿ ಅತಿ ದೊಡ್ಡ ಟಿವಿ ಸ್ಕ್ರೀನ್ ಲಗತ್ತಿಸಲಾಗಿದೆ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಐಷಾರಾಮಿ ಬಹುಮಹಡಿ ಕಟ್ಟಡ

ಬಹು ಮಹಡಿ ಕಟ್ಟಡ ಯೋಜನೆಯನ್ನು ಜಾಗತಿಕವಾಗಿ ವಿಸ್ತರಿಸುವ ಯೋಜನೆ ಹೊಂದಿರುವ ಬೆಂಝ್, ಮುಂದಿನ ವರ್ಷ ಇದಕ್ಕೆ ಸಮಾನವಾದ ರೀತಿಯಲ್ಲಿ ಸಿಂಗಾಪುರದಲ್ಲಿ ಒಂಬತ್ತು ಅಪಾರ್ಟ್ ಮೆಂಟ್ ತೆರೆದುಕೊಳ್ಳುವ ಇರಾದೆಯಲ್ಲಿದೆ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಐಷಾರಾಮಿ ಬಹುಮಹಡಿ ಕಟ್ಟಡ

ಕೊಠಡಿಯೊಳಗೆ ಎರಡು ಬೆಡ್ ರೂಂ, ಲಿವಿಂಗ್ ಪ್ರದೇಶ, ಭೋಜನಾಲಯ, ಅಡುಗೆ ಕೋಣೆ ಇತ್ಯಾದಿ ವ್ಯವಸ್ಥೆಗಳಿವೆ. ಅಲ್ಲದೆ ಒಂದು ರಾತ್ರಿ ತಂಗಲು ಸರಿ ಸುಮಾರು 300ರಿಂದ 400 ಪೌಂಡ್ ವೆಚ್ಚ ತಗುಲಲಿದೆ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಐಷಾರಾಮಿ ಬಹುಮಹಡಿ ಕಟ್ಟಡ

ಸಂಸ್ಥೆಯ ಹೇಳುವ ಪ್ರಕಾರ ಇಲ್ಲಿರುವ ಪಿಠೋಪಕರಣಗಳು, ಆಕ್ಸೆಸರಿಗಳು, ಬಣ್ಣಗಳು ಹಾಗೂ ಲೈಟಿಂಗ್ಸ್ ಗಳನ್ನು ಬೆಂಝ್ ವಾಹನಗಳಿಂದ ಪ್ರೇರಣೆ ಪಡೆದು ರಚಿಸಲಾಗಿದ್ದು, ಆತಿಥಿಗಳಿಗೆ ಕಾರಿನ ಒಳಗಡೆ ನಿದ್ರಿಸಿದಂತೆ ಅನುಭವಾಗಲಿದೆ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಐಷಾರಾಮಿ ಬಹುಮಹಡಿ ಕಟ್ಟಡ

ಇನ್ನುಳಿದಂತೆ ಮನರಂಜನೆಗಾಗಿ ಬರ್ಮ್‌ಸ್ಟರ್ ಸೌಂಡ್ ಸಿಸ್ಟಂ, ಬ್ಲ್ಯಾಕ್ ಮ್ಯಾಜಿಕ್ ಗೋಡೆ ಮತ್ತು ಅತ್ಯಂತ ದುಬಾರಿ ಎಸ್ ಆಕಾರದ ಸ್ವರೊವ್‌ಸ್ಕಿ ಸ್ಪಟಿಕ ಹರಳುಗಳು ಇದರಲ್ಲಿರಲಿದೆ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಐಷಾರಾಮಿ ಬಹುಮಹಡಿ ಕಟ್ಟಡ

ಉದ್ಯಮಿಗಳ ಹಬ್ ಎನಿಸಿಕೊಂಡಿರುವ ಲಂಡನ್ ನಲ್ಲಿ ಅಸಂಖ್ಯಾತ ಸಂಖ್ಯೆಯ ವ್ಯಕ್ತಿಗಳು ಬ್ಯುಸಿನೆಸ್ ಟೂರ್ ಗಾಗಿ ಆಗಮಿಸುತ್ತಲೇ ಇರುತ್ತಾರೆ. ಅಂತವರಿಗೆ ಇದೊಂದು ಶ್ರೇಷ್ಠ ಆಯ್ಕೆಯಾಗಿರಲಿದ್ದು, 'ಮನೆಯ ಹೊರಗಿರುವ ಮನೆ' ಆಗಿರಲಿದೆ ಎಂದು ಸಂಸ್ಥೆ ವಿವರಿಸುತ್ತದೆ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಐಷಾರಾಮಿ ಬಹುಮಹಡಿ ಕಟ್ಟಡ

ಕಟ್ಟಡದ ಮುಂಭಾಗವನ್ನು ಕ್ಲಾಸಿಕ್ ಲಂಡನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಬೆಂಝ್ ಡಿಸೈನ್ ನಿರ್ದೇಶಕ ಗಾರ್ಡನ್ ವೆಜೆನರ್ ಹೇಳುವ ಪ್ರಕಾರ, "ಬೆಂಝ್ ನಿಖರ ವಿನ್ಯಾಸ ಹಾಗೂ ಸ್ವಭಾವ ರೇಖೆಗಳಿಗೆ ಹೆಸರು ವಾಸಿಯಾಗಿದ್ದು, ಇದನ್ನಿಲ್ಲಿ ಪ್ರತಿಯೊಂದು ಘಟಕದಲ್ಲಿ ಮೆಲುಕು ಹಾಕಬಹುದಾಗಿದೆ" ಎಂದಿದ್ದಾರೆ.

ಲಂಡನ್‌ನಲ್ಲಿ ತಲೆಯೆತ್ತಿದೆ ಬೆಂಝ್‌ನ ಐಷಾರಾಮಿ ಬಹುಮಹಡಿ ಕಟ್ಟಡ

ವಿಶೇಷವೆಂದರೆ ಜಗತ್ತಿನ ಮಗದೊಂದು ಐಷಾರಾಮಿ ಸಂಸ್ಥೆಯಾಗಿರುವ ಪೋರ್ಷೆ ಸಹ ಇದಕ್ಕೆ ಸಮಾನವಾದ ಅಪಾರ್ಟ್‌ಮೆಂಟ್ ಗಳನ್ನು ಮಿಯಾಮಿ ಹಾಗೂ ಫ್ರಾಂಕ್‌ಫರ್ಟ್ ನಲ್ಲಿ ನಿರ್ಮಿಸುತ್ತಿದೆ.

Article Published On: Monday, October 19, 2015, 9:42 [IST]
English summary
Mercedes-Benz To launch their own luxury apartments In London
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+