ಜುರಾಸಿಕ್ ವರ್ಲ್ಡ್: ಘನ ಘೋರ ವನದಲ್ಲಿ ಘೋರ ಯುದ್ಧ
ಸಣ್ಣ ಮಕ್ಕಳಿಂದ ಹಿಡಿದು ಮುದಿ ಹರೆಯದ ವಯಸ್ಸಿನ ವರೆಗಿನ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ ಜುರಾಸಿಕ್ ಪಾರ್ಕ್ ಅಮೆರಿಕದ ಒಂದು ವೈಜ್ಞಾನಿಕ ಕಾಲ್ಪನಿಕ ಸಾಹಸ ಸಿನಿಮಾವಾಗಿದೆ. ಮೈಕಲ್ ಕ್ರಿಸ್ಟನ್ ಕಾದಂಬರಿ ಆಧಾರಿತ ಜುರಾಸಿಕ್ ಪಾರ್ಕ್ ಸಿನೆಮಾ ಸರಣಿಯ ನಾಲ್ಕನೇ ಚಿತ್ರವು ಇದೇ ಬರುವ 2015 ಜೂನ್ 12ರಂದು ಭರ್ಜರಿ ಬಿಡುಗಡೆ ಕಾಣಲಿದೆ.
ಕಾಲಿನ್ ಟ್ರೆವೆರೊ ನಿರ್ದೇಶನದ ಜುರಾಸಿಕ್ ವರ್ಲ್ಡ್ ಚಿತ್ರದಲ್ಲಿ ಕ್ರಿಸ್ ಪ್ರಾಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1993ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಜುರಾಸಿಕ್ ಪಾರ್ಕ್ ತರಹನೇ ಪ್ರಸ್ತುತ ಚಿತ್ರವು ಭಾರಿ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದೆ.

ಡೈನೋಸಾರ್ ಥೀಮ್ ಪಾರ್ಕ್‌ನ ಕಥೆಯನ್ನಾಧರಿಸಿಕೊಂಡಿರುವ ಜುರಾಸಿಕ್ ವರ್ಲ್ಡ್ ಟ್ರೇಲರ್ ಈಗಾಗಲೇ ಯೂಟ್ಯೂಬ್ ನಲ್ಲಿ ಭಾರಿ ಹಿಟ್ ಆಗಿದ್ದು, ಯೂನಿವರ್ಸಲ್ ಪಿಕ್ಚರ್ಸ್ ವಿತರಣೆ ಹಕ್ಕನ್ನು ಪಡೆದುಕೊಂಡಿದೆ.

ಇಲ್ಲಿ ಜುರಾಸಿಕ್ ವರ್ಲ್ಡ್ ಚಿತ್ರವನ್ನು ಉಲ್ಲೇಖಿಸಲು ಪ್ರಮುಖ ಕಾರಣವೊಂದಿದೆ. ಯಾಕೆಂದರೆ ಜುರಾಸಿಕ್ ಪಾರ್ಕ್ ಸರಣಿ ಸಿನೆಮಕ್ಕೂ ಮರ್ಸಿಡಿಸ್ ಬೆಂಝ್ ವಾಹನಗಳಿಗೂ ಎಲ್ಲಿಲ್ಲದ ನಂಟಿದೆ.

ಜುರಾಸಿಕ್ ವರ್ಲ್ಡ್ ನಲ್ಲಿ ನಡೆಯುವ ಸಾಹಸ ದೃಶ್ಯಗಳಿಗೆ ಬೆಂಝ್ ನ ಪಕ್ಕ ಆಫ್ ರೋಡ್ ವಾಹನಗಳನ್ನು ಬಳಕೆ ಮಾಡಲಾಗಿದೆ. ಇದು ಚಿತ್ರದ ಮೇಕಿಂಗ್ ರೋಚಕತೆಯನ್ನು ಇಮ್ಮಡಿಗೊಳಿಸಿದೆ.

ಜುರಾಸಿಕ್ ವರ್ಲ್ಡ್ ನಲ್ಲಿ ಬಳಕೆಯಾದ ಬೆಂಝ್ ವಾಹನಗಳು ಇಂತಿದೆ: ಜಿಎಲ್ ಇ ಕೂಪೆ, ಜಿ ಕ್ಲಾಸ್ ಎಸ್ ಯುವಿ, ಯುನಿಮೊಗ್ ಹೆವಿ ಡ್ಯೂಟಿ ಟ್ರಕ್, ಸ್ಪ್ರಿಂಟರ್ ವ್ಯಾನ್ ಹಾಗೂ ಜಿ63 ಎಎಂಜಿ 6x6

ಮರ್ಸಿಡಿಸ್‌ನ ಶಕ್ತಿಶಾಲಿ ವಾಹನಗಳನ್ನು ಬಳಕೆ ಮಾಡುವ ಮೂಲಕ ಚಿತ್ರತಂಡವು ಜುರಾಸಿಕ್ ಪಾರ್ಕ್ ನಿರ್ಮಾಣಕ್ಕಾಗಿ ಬರೋಬ್ಬರಿ 180ಕ್ಕೂ ಮಿಲಿಯನ್ ಗೂ ಹೆಚ್ಚು ಅಮೆರಿಕನ್ ಡಾಲರ್ ಗಳನ್ನು ಖರ್ಚು ಮಾಡಿದೆ.

ಕೇವಲ ಬೆಂಝ್ ವಾಹನವನ್ನಷ್ಟೇ ಅಲ್ಲದೆ ಟ್ರಯಂಪ್ ನ ದುಬಾರಿ ಮೋಟಾರ್ ಸೈಕಲ್ ಗಳನ್ನು ಇದರಲ್ಲಿ ಬಳಕೆ ಮಾಡಲಾಗಿದೆ.

ಈ ಸಿನೆಮಾ ಫೆಸಿಫಿಕ್ ತೀರದ ಮಧ್ಯ ಅಮೆರಿಕದ ಕೋಸ್ಟಾರಿಕಾ ಬಳಿಯ ಕಾಲ್ಪನಿಕ ಐಸ್ಲ ನ್ಯುಬ್ಲರ್ ನಲ್ಲಿ ಒಬ್ಬ ಪರೋಪಕಾರಿ ಕೋಟ್ಯಧಿಪತಿ ಮತ್ತು ವಂಶವಾಹಿ ವಿಜ್ಞಾನಿಗಳ ಒಂದು ಸಣ್ಣ ತಂಡ ಸೇರಿ ಕ್ಲೋನ್ ಮಾಡಿದ ಡೈನೋಸಾರ್ ಗಳ ಮನೋರಂಜನಾ ಪಾರ್ಕ್ ಹುಟ್ಟುಹಾಕಿದ ಕಥೆಯ ಮೇಲೆ ಅವಲಂತವಾಗಿದೆ.

2015ನೇ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಜುರಾಸಿಕ್ ವರ್ಲ್ಡ್ ಒಂದಾದಿದೆ. ಇದು ನೋಡುಗರಲ್ಲಿ ಪ್ರತಿ ಕ್ಷಣವೂ ರೋಚಕತೆಯನ್ನುಂಟು ಮಾಡಲಿದೆ.

1993ರಲ್ಲಿ ಜುರಾಸಿಕ್ ಪಾರ್ಕ್ ಸಿನೆಮಾದಲ್ಲಿ ಕಂಪ್ಯೂಟರ್ ನಿಂದ ರೂಪಿಸಿದ ದೃಶ್ಯಗಳು ಮೈಲುಗಲ್ಲನ್ನೇ ಸಾಧಿಸಿತ್ತು. ಈಗ ತ್ರಿಡಿ ರೂಪದಲ್ಲೂ ಜುರಾಸಿಕ್ ವರ್ಲ್ಡ್ ಬಿಡುಗಡೆಯಾಗಲಿದ್ದು, ಮತ್ತಷ್ಟು ಮೋಡಿ ಮಾಡುವ ಸಾಧ್ಯತೆಯಿದೆ.

ತನ್ನ ಗಲ್ಲಾಪೆಟ್ಟಿಗೆಯನ್ನು ತುಂಬಿಸುವ ಮೂಲಕ ವಿಶ್ವದ್ಯಾಂತ ಭಾರಿ ಯಶಸ್ಸು ಸಾಧಿಸಿರುವ ಜುರಾಸಿಕ್ ಪಾರ್ಕ್ ಸಿನೆಮಾಕ್ಕೆ ಅತ್ಯುತ್ತಮ ವಿಮರ್ಶೆಯು ದೊರಕ್ಕಿತ್ತು.

ಒಟ್ಟಿನಲ್ಲಿ ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನು ಬಾಚಿಕೊಂಡು ಬಂದಿರುವ ಜುರಾಸಿಕ್ ಪಾರ್ಕ್ ಅದೇ ರೋಚಕತೆಯನ್ನು ಜುರಾಸಿಕ್ ವರ್ಲ್ಡ್ ಕಾಯ್ದುಕೊಳ್ಳಲಿದೆಯೇ ಎಂಬುದಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.


Click it and Unblock the Notifications