MG Comet EV: ಭಾರತದಲ್ಲಿ ಎಂಜಿ ಕಾಮೆಟ್‌ನ ಮೊದಲ ಅಪಘಾತ ದಾಖಲು: ಬಯಲಾಯಿತು ಇದರ ಬಿಲ್ಡ್‌ ಕ್ವಾಲಿಟಿ!

ಕಳೆದ ಕೆಲವಾರು ತಿಂಗಳುಗಳ ಹಿಂದೆಯಷ್ಟೇ ಜನಪ್ರಿಯ ಕಾರು ತಯಾರಿಕಾ ಸಂಸ್ಥೆಯಾದ ಎಂಜಿ ಒಂದು ಹೊಸ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿತ್ತು. ಅದು ಬೇರೆ ಯಾವುದೂ ಅಲ್ಲ, ಎಂಜಿ ಕಾಮೆಟ್‌. ಬಿಡುಗಡೆಗೊಂಡ ಕೆಲವೇ ಸಮಯದಲ್ಲಿ ಇದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನುವುದನ್ನು ನಾವು ಇಲ್ಲಿ ಮರೆಯುವಂತಿಲ್ಲ.

ಆಕರ್ಷಕ ಸೈಜ್ ಮತ್ತು ಮನಮೋಹಕ ಡಿಸೈನ್‌ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾದ ಈ ಎಂಜಿ ಕಾಮೆಟ್ (MG Comet EV) ಒಂದು ಎಲೆಕ್ಟ್ರಿಕ್‌ ಕಾರು. ಇದರ ಡಿಸೈನ್‌ ನಿಂದಲೇ ಈ ಕಾರು ರಸ್ತೆಯಲ್ಲಿ ಚಲಿಸುವಾಗ ಜನರ ಗಮನವನ್ನು ಸುಲಭವಾಗಿ ತನ್ನತ್ತ ಸೆಳೆಯುತ್ತಿದ್ದು, ಸಿಟಿ ಡ್ರೈವ್‌ಗಳಿಗೆ ಇದು ಹೇಳಿ ಮಾಡಿಸಿದ ಕಾರು ಎಂಬುದರಲ್ಲಿ ಎರಡು ಮಾತಿಲ್ಲ.

MG Comet Registered First Crash In India

ಇದೀಗ ಈ ಎಂಜಿ ಕಾಮೆಟ್‌ ಕಾರೊಂದು ಭಾರತದಲ್ಲಿ ಲಾಂಚ್‌ ಆದ ಮೇಲೆ ಮೊದಲ ಬಾರಿಗೆ ಅಪಘಾತಕ್ಕೆ ಒಳಗಾಗಿದೆ. ಹ್ಯುಂಡೈ ಕಂಪನಿಯ ಮತ್ತೊಂದು ಜನಪ್ರಿಯ ಕಾರ್‌ ಆದ i10 sportz ಮತ್ತು ಎಂಜಿ ಕಾಮೆಟ್‌ ನಡುವೆ ನಡೆದ ಅಪಘಾತದಲ್ಲಿ ಎಂಜಿ ಕಾಮೆಟ್‌ ಹಾನಿಗೆ ಒಳಗಾಗಿದೆ.

ಇನ್ನು ಈ ಎರಡೂ ಕಾರುಗಳ ನಡುವೆ ನಡೆದ ಅಪಘಾತಗಳ ಲೈವ್‌ ವಿಡಿಯೋ ಲಭ್ಯವಾಗಿಲ್ಲವಾದರೂ ತದ ನಂತರದಲ್ಲಿ ನಡೆದ ಸಂಗತಿಗಳ ಕುರಿತಾಗಿನ ವಿಡಿಯೋ ರೆಕಾರ್ಡ್‌ ಆಗಿದ್ದು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಮಾಹಿತಿಗಳ ಪ್ರಕಾರ ಎಂಜಿ ಕಾಂಎಟ್‌ ಇವಿ ಚಾಲಕನದ್ದೇ ತಪ್ಪು ಎಂದು ತಿಳಿದು ಬಂದಿದೆ.

 MG Comet Registered First Crash In India

ಜಂಕ್ಷನ್‌ ಒಂದರ ಬಳಿ, ಅತಿ ವೇಗದಲ್ಲಿ ಮುನ್ನುಗ್ಗಿ ಬರುತ್ತಿದ್ದ ಎಂಜಿ ಕಾಮೆಟ್‌ ಇವಿ ನೇರವಾಗಿ ಅಲ್ಲಿದ್ದ ಹ್ಯುಂಡೈ i10 sportz ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದ್ದು, ಅಪಘಾತದಲ್ಲಿ ಎರಡೂ ಕಾರುಗಳು ಸಹ ಹಾನಿಗೆ ಒಳಗಾಗಿದ್ದಿದ್ದು, ಯಾರಿಗೂ ಸಹ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಅಪಘಾತವಾದ ಸಂಧರ್ಭದಲ್ಲಿ ಎಂಜಿ ಕಾಮೆಟ್‌ನ ಏರ್‌ ಬ್ಯಾಗ್‌ಗಳು ತೆರೆದುಕೊಂಡಿದ್ದು, ಇದರಿಂದ ಅದರೊಳಗಿದ್ದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಎಂಜಿಯು ಹ್ಯುಂಡೈ i10 sportz ಕಾರಿನ ಡ್ರೈವರ್‌ ಭಾಗದ ಡೋರ್‌ಗೆ ಡಿಕ್ಕಿ ಹೊಡೆದು ಕಾರಿನ ಡೋರ್‌ ನುಜ್ಜುಗುಜ್ಜಾಗಿದೆ. ಜೊತೆಗೆ ಹ್ಯುಂಡೈ i10 sportz ಕಾರಿನ ರೇರ್‌ ವ್ಯೂವ್‌ ಮಿರ್‌ ಸಹ ಒಡೆದು ಹೋಗಿದೆ.

ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಪೂರ್ಣ-ಅಗಲ LED ಲೈಟ್ ಬಾರ್‌ನಂತಹ ಆಸಕ್ತಿದಾಯವಾದ ಬಾಕ್ಸ್ ವಿನ್ಯಾಸ ಭಾಷೆಯನ್ನು ಹೊಂದಿದೆ, ಜೊತೆಗೆ, ಎರಡೂ ವಿಂಗ್ ಮೀರರ್ಸ್ ಕ್ರೋಮ್ ಮತ್ತು ಪಿಯಾನೋ ಬ್ಲ್ಯಾಕ್ ಪಟ್ಟಿ ಇದೆ. ಇನ್ನು ಈ ಕಾಮೆಟ್ ಎಲೆಕ್ಟ್ರಿಕ್ ಕಾರಿನ ಚಾರ್ಜರ್ ಅನ್ನು ಲೈಟ್ ಬಾರ್ ಅಡಿಯಲ್ಲಿ ಮುಂಭಾಗದಲ್ಲಿ ಇರಿಸಲಾಗುತ್ತದೆ ಮತ್ತು ಅದರ ಫ್ಲಾಪ್ ಪ್ರಕಾಶಿತ MG ಲೋಗೋವನ್ನು ಹೊಂದಿದೆ.

ಈ ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಒಳಭಾಗದಲ್ಲಿ, ಎರಡು 10.25-ಇಂಚಿನ ಸ್ಕ್ರೀನ್‌ಗಳಿಂದ ಹೈಲೈಟ್ ಮಾಡಲಾದ ಬಿಳಿ ಮತ್ತು ಬೂದು ಬಣ್ಣದ ಒಳಾಂಗಣವನ್ನು ಹೊಂದಿದೆ.ಇನ್ನು ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಮತ್ತು ಇನ್ನೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ. ಮುಂಭಾಗದ ಪ್ರಯಾಣಿಕರ ಸೀಟ್ ಒನ್-ಟಚ್ ಟಂಬಲ್ ಮತ್ತು ಫೋಲ್ಡ್ ಫೀಚರ್ಸ್ ಅನ್ನು ಹೊಂದಿದೆ.

ಈ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು 12-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ವಾಹನದ ಚಿಕ್ಕ ಚಕ್ರದ ಗಾತ್ರವಾಗಿದೆ. ಇದು ಆಕರ್ಷಕವಾದ ವಿಂಡೋ ವಿನ್ಯಾಸವನ್ನು ಸಹ ಪಡೆಯುತ್ತದೆ, ಹಿಂಭಾಗದ ವಿಂಡೋಗಳನ್ನು ಲಂಬವಾಗಿ ಜೋಡಿಸಲಾಗಿದೆ. ಹಿಂಭಾಗದಲ್ಲಿ, ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ವಿಸ್ತೃತ ಹಾರಿಜಾನ್ ಸಂಪರ್ಕಿಸುವ ಲ್ಯಾಂಪ್ ಗಳನ್ನು ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, July 28, 2023, 11:50 [IST]
English summary
Mg comet ev registered first crash in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+