ತೀರಾ ಕಡಿಮೆ ಬೆಲೆಗೆ ಹರಾಜಾಗುತ್ತಿದೆ ಜನಪ್ರಿಯ ಕ್ರೀಡಾಪಟುವಿನ ಕಾರು

ಆನ್‌ಲೈನ್ ಹರಾಜಿನಲ್ಲಿ ಯಾವುದೇ ಉತ್ಪನ್ನಗಳನ್ನಾಗಲಿ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಸಾಮಾನ್ಯ. ಆದರೆ ಜನಪ್ರಿಯ ಕ್ರೀಡಾಪಟುವೊಬ್ಬರ ಐಷಾರಾಮಿ ಕಾರು ಅತ್ಯಂತ ಕಡಿಮೆ ಬೆಲೆಗೆ ಹರಾಜಿಗೆ ಬಂದಿದೆ.

ತೀರಾ ಕಡಿಮೆ ಬೆಲೆಗೆ ಹರಾಜಾಗುತ್ತಿದೆ ಜನಪ್ರಿಯ ಕ್ರೀಡಾಪಟುವಿನ ಕಾರು

1996ರ ಮಾದರಿಯ ಮರ್ಸಿಡಿಸ್ ಬೆಂಝ್ ಎಸ್ 600 ಕಾರನ್ನು ಹರಾಜು ಹಾಕಲಾಗುತ್ತಿದೆ. ಈ ಕಾರಿನ ಆರಂಭಿಕ ಬಿಡ್ ಅನ್ನು 23 ಡಾಲರ್ ಗಳಿಗೆ ನಿಗದಿಪಡಿಸಲಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.1,700ಗಳಾಗಿದೆ. ಈ ಕಾರು ಜನಪ್ರಿಯ ಬ್ಯಾಸ್ಕೆಟ್‌ಬಾಲ್ ಆಟಗಾರ ಮೈಕೆಲ್ ಜೋರ್ಡಾನ್ ರವರಿಗೆ ಸೇರಿದ್ದು. ತಮ್ಮ ವೇಗದ ಆಟಕ್ಕೆ ಹೆಸರುವಾಸಿಯಾದ ಮೈಕೆಲ್ ಜೋರ್ಡಾನ್ ಕಾರು ಪ್ರೇಮಿ ಕೂಡ ಹೌದು.

ತೀರಾ ಕಡಿಮೆ ಬೆಲೆಗೆ ಹರಾಜಾಗುತ್ತಿದೆ ಜನಪ್ರಿಯ ಕ್ರೀಡಾಪಟುವಿನ ಕಾರು

ಮೈಕೆಲ್ ಜೋರ್ಡಾನ್ ದುಬಾರಿ ಬೆಲೆಯ ಹಲವಾರು ಐಷಾರಾಮಿ ಹಾಗೂ ಸೂಪರ್ ಕಾರುಗಳನ್ನು ಹೊಂದಿದ್ದಾರೆ. ಈ ಕಾರಣಕ್ಕೆ ಮೈಕೆಲ್ ಜೋರ್ಡಾನ್‌ ತಾವು ಬಳಸಿದ್ದ ಕಾರನ್ನು ಹರಾಜು ಹಾಕುತ್ತಿದ್ದಾರೆ. ಸುದೀರ್ಘ ಅವಧಿಯಿಂದ ಈ ಕಾರನ್ನು ಬಳಸದೇ ಇರುವುದೇ ಈ ಕಾರಿಗೆ ಕಡಿಮೆ ಮೊತ್ತ ನಿಗದಿಪಡಿಸಲು ಪ್ರಮುಖ ಕಾರಣ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ತೀರಾ ಕಡಿಮೆ ಬೆಲೆಗೆ ಹರಾಜಾಗುತ್ತಿದೆ ಜನಪ್ರಿಯ ಕ್ರೀಡಾಪಟುವಿನ ಕಾರು

ಆದರೆ ಈ ಕಾರನ್ನು ಹರಾಜು ಹಾಕುತ್ತಿರುವ ಬೆವರ್ಲಿ ಹಿಲ್ಸ್ ಕಾರ್ ಕ್ಲಬ್, ಈ ಕಾರಿನ ಹರಾಜಿನ ಮೂಲಕ ರೂ.75 ಲಕ್ಷ ಸಂಗ್ರಹವಾಗಬಹುದೆಂಬ ನಿರೀಕ್ಷೆಯನ್ನು ಹೊಂದಿದೆ. ಇತ್ತೀಚೆಗೆ ಕಂಪನಿಯು ಈ ಕಾರನ್ನು ಖರೀದಿಸಿತ್ತು.

ತೀರಾ ಕಡಿಮೆ ಬೆಲೆಗೆ ಹರಾಜಾಗುತ್ತಿದೆ ಜನಪ್ರಿಯ ಕ್ರೀಡಾಪಟುವಿನ ಕಾರು

ಈ ಕಾರಿನ ಹರಾಜು ಪ್ರಕ್ರಿಯೆಯು ಆಗಸ್ಟ್ 23ರವರೆಗೆ ನಡೆಯಲಿದೆ ಎಂದು ಕಂಪನಿ ತಿಳಿಸಿದೆ. ಜೋರ್ಡಾನ್‌ರವರ ಈ ಮರ್ಸಿಡಿಸ್ ಬೆಂಝ್ ಎಸ್ 600 ಕಾರನ್ನು ಜನಪ್ರಿಯ ಆನ್‌ಲೈನ್ ವಾಣಿಜ್ಯ ತಾಣ ಇ-ಬೇನಲ್ಲಿ ಮಾರಾಟಕ್ಕೀಡಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ತೀರಾ ಕಡಿಮೆ ಬೆಲೆಗೆ ಹರಾಜಾಗುತ್ತಿದೆ ಜನಪ್ರಿಯ ಕ್ರೀಡಾಪಟುವಿನ ಕಾರು

ಜೋರ್ಡಾನ್ ರವರು ಈ ಕಾರನ್ನು ಇತರ ಕಾರುಗಳಿಗಿಂತ ಹೆಚ್ಚು ಬಳಸುತ್ತಿದ್ದರು. ಈ ಕಾರು ಸುಮಾರು 1,57,000 ಕಿ.ಮೀಗಳಷ್ಟು ಸಂಚರಿಸಿದೆ. ಮೈಕೆಲ್ ಜೋರ್ಡಾನ್ ಈ ಕಾರನ್ನು ಹೆಚ್ಚು ಬಳಸುತ್ತಿದ್ದರು ಎಂಬುದಕ್ಕೆ ಇದು ಪುರಾವೆಯಾಗಿದೆ.

ತೀರಾ ಕಡಿಮೆ ಬೆಲೆಗೆ ಹರಾಜಾಗುತ್ತಿದೆ ಜನಪ್ರಿಯ ಕ್ರೀಡಾಪಟುವಿನ ಕಾರು

1996ರ ಮಾದರಿಯಾಗಿದ್ದರೂ ಈ ಕಾರು ಹೊಸದರಂತೆಯೇ ಕಾಣುತ್ತದೆ. ಈ ಕಾರಿನಲ್ಲಿ 6.0 ಲೀಟರಿನ ವಿ12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 389 ಬಿಹೆಚ್ ಪಿ ಪವರ್ ಉತ್ಪಾದಿಸುತ್ತದೆ. ಈ ಕಾರು ಎಲೆಕ್ಟ್ರಾನಿಕ್ ಅಡ್ಜಸ್ಟಬಲ್ ಟ್ಯಾಂಪರ್ ಸೌಲಭ್ಯವನ್ನು ಹೊಂದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ತೀರಾ ಕಡಿಮೆ ಬೆಲೆಗೆ ಹರಾಜಾಗುತ್ತಿದೆ ಜನಪ್ರಿಯ ಕ್ರೀಡಾಪಟುವಿನ ಕಾರು

ಈ ಕಾರಿಗೆ ಆಕರ್ಷಕ ಲುಕ್ ನೀಡಲು ಈ ಕಾರಿನಲ್ಲಿ 18 ಇಂಚಿನ ಮೊನೊ ಬ್ಲಾಕ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಕಸ್ಟಮೈಸ್ ಮಾಡಲಾದ ಎಕ್ಸಾಸ್ಟ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ. ಕಾರು ಹರಾಜು ಸುದ್ದಿಯನ್ನು ಟಿಎಂಝಡ್ ಸ್ಪೋರ್ಟ್ಸ್ ಬಹಿರಂಗಪಡಿಸಿದೆ.

ತೀರಾ ಕಡಿಮೆ ಬೆಲೆಗೆ ಹರಾಜಾಗುತ್ತಿದೆ ಜನಪ್ರಿಯ ಕ್ರೀಡಾಪಟುವಿನ ಕಾರು

ಬೆವರ್ಲಿ ಹಿಲ್ಸ್ ಕಾರ್ ಕ್ಲಬ್, ಮರ್ಸಿಡಿಸ್ ಬೆಂಝ್ ನ ಈ ಅಪರೂಪದ ಮಾದರಿಯು ಹೆಚ್ಚು ಲಾಭವನ್ನು ತಂದುಕೊಡಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಈ ರೀತಿಯ ವಿಂಟೇಜ್ ಕಾರುಗಳನ್ನು ಕಾರು ಉತ್ಸಾಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ತೀರಾ ಕಡಿಮೆ ಬೆಲೆಗೆ ಹರಾಜಾಗುತ್ತಿದೆ ಜನಪ್ರಿಯ ಕ್ರೀಡಾಪಟುವಿನ ಕಾರು

ವಿಂಟೇಜ್ ಹಾಗೂ ಮೈಕೆಲ್ ಜೋರ್ಡಾನ್ ಬಳಸಿದ ಕಾರು ಎಂಬ ಕಾರಣಕ್ಕೆ ಹೆಚ್ಚು ಮೊತ್ತ ಸಂಗ್ರಹವಾಗಬಹುದೆಂಬುದು ಬೆವರ್ಲಿ ಹಿಲ್ಸ್ ಕಾರ್ ಕ್ಲಬ್ ನಿರೀಕ್ಷೆ.ಈ ಕಾರು ಮಾತ್ರವಲ್ಲದೇ ಇತ್ತೀಚಿಗೆ ಮೈಕೆಲ್ ಜೋರ್ಡಾನ್ ರವರ ಶೂಗಳನ್ನು ಸಹ ಹರಾಜು ಹಾಕಲಾಗಿತ್ತು. ಈ ಶೂಗಳನ್ನು ಜೋರ್ಡಾನ್ ರವರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು.

Most Read Articles

Kannada
English summary
Michael Jordans Mercedes Benz S600 for sale through auction. Read in Kannada.
Story first published: Tuesday, August 18, 2020, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X