MiG-21 Crash: ಮಿಗ್-21 ಜೆಟ್ ಪತನ: ಹಾರುವ ಶವಪೆಟ್ಟಿಗೆ ಬಿರುದು... ಪೈಲೆಟ್ ಸೇಫ್, ಇಬ್ಬರ ಸಾವು

ಭಾರತೀಯ ವಾಯುಪಡೆಯ ಮಿಗ್ -21 ಜೆಟ್ ರಾಜಸ್ಥಾನದ ಹನುಮಾನ್‌ಗಢದಲ್ಲಿ ಇಂದು ಪತನಗೊಂಡಿದ್ದು, ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಸ್ಸಾರಾಮ್ ಬೋಸ್ ತಿಳಿಸಿದ್ದಾರೆ. ಹಾಗೆಯೇ ಮಿಗ್ -21 ಜೆಟ್ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ರುಕ್ಮಣಿ ರಿಯಾರ್ ತಿಳಿಸಿದ್ದಾರೆ.

ವಾಯುಪಡೆಯಲ್ಲಿ ಈ MiG-21 ಜೆಟ್‌ಗೆ ಕೆಟ್ಟ ಹೆಸರು ದಾಖಲಾಗಿದೆ. ಏಕೆಂದರೆ ಭಾರತೀಯ ವಾಯುಪಡೆಯಲ್ಲಿ ಈವೆರೆಗೂ ಅತಿಹೆಚ್ಚು ಅಪಘಾತಗಳಿಗೆ ತುತ್ತಾದ ದಾಖಲೆ ಈ ವಿಮಾನದ ಮೇಲಿದೆ. ಮಾಹಿತಿಯ ಪ್ರಕಾರ ಈ ಹಿಂದೆಯೂ ಬರೋಬ್ಬರಿ 170 ಕ್ಕೂ ಹೆಚ್ಚು ಪೈಲಟ್‌ಗಳು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ. ಇದೀಗ ಈ ಅಪಘಾತವು ಮತ್ತೊಮ್ಮೆ ವಿಮಾನದ ಗುಣಮಟ್ಟಕ್ಕೆ ಸವಾಲಾಗಿ ಪರಿಣಮಿಸಿದೆ.

MiG-21 Crash

ಈ ವಿಮಾನಗಳ ಕಳಪೆ ಸುರಕ್ಷತಾ ದಾಖಲೆಯ ಆರೋಪಗಳ ನಡುವೆ ಅಪಘಾತಗಳ ಕುರಿತು ಅನೇಕ ವಿಚಾರಣೆಗಳು ನಡೆದಿವೆ, 2010 ರಿಂದ 20 ಕ್ಕೂ ಹೆಚ್ಚು ವಿಮಾನಗಳು ಮತ್ತು 2003 ಮತ್ತು 2013 ರ ನಡುವೆ ಹತ್ತು ವರ್ಷಗಳ ಅವಧಿಯಲ್ಲಿ 38 ವಿಮಾನಗಳು ಅಪಘಾತಕ್ಕೀಡಾಗಿವೆ ಎಂದು ಈ ಹಿಂದೆ ರಕ್ಷಣಾ ಸಚಿವಾಲಯವು ಅಧಿಕೃತವಾಗಿ ಪ್ರಕಟಿಸಿತ್ತು.

ಅಪಘಾತಗಳ ಪ್ರಮಾಣವು ಹೆಚ್ಚಾಗಿರುವ ಕಾರಣ ಈ ವಿಮಾನಕ್ಕೆ 'ಹಾರುವ ಶವಪೆಟ್ಟಿಗೆ' (ಫ್ಲೈಯಿಂಗ್ ಕಾಫಿನ್) ಎಂಬ ಅಡ್ಡಹೆಸರನ್ನು ತಂದುಕೊಟ್ಟಿದೆ. ಇದೀಗ ಸಂಭವಿಸಿರುವ ಅಪಘಾತಕ್ಕೆ ಕಾರಣ ತಿಳಿದು ಬರಬೇಕಿದ್ದು, ಉನ್ನತ ಅಧಿಕಾರಿಗಳು ಈ ಕುರಿತು ವಿಚಾರಣೆ ಮಾಡಲಿದ್ದಾರೆ. ಏನೇ ಆಗಲಿ ಈ ಅಪಘಾತದಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

MiG-21 Crash

MiG-21 ಬೈಸನ್: MiG-21 ಸೋವಿಯತ್ ಮೂಲದ ಫೈಟರ್ ಮತ್ತು ಇಂಟರ್‌ಸೆಪ್ಟರ್ ವಿಮಾನವಾಗಿದೆ. ಇದನ್ನು ಮೊದಲು 1959 ರಲ್ಲಿ ಪರಿಚಯಿಸಲಾಗಿದ್ದು, ಇಲ್ಲಿಯವರೆಗೆ ವಿಶ್ವದಾದ್ಯಂತ 11,496 ವಿಮಾನಗಳನ್ನು ನಿರ್ಮಿಸಲಾಗಿದೆ. MiG-21 ಅತ್ಯಂತ ಕೈಗೆಟುಕುವ ಬೆಲೆಯ ವಿಮಾನವಾಗಿದ್ದು, ಅನೇಕ ದೇಶಗಳಿಗೆ ರಫ್ತು ಮಾಡಲಾಗಿದೆ. ಸದ್ಯ ಭಾರತವು ಕೂಡ MiG-21 ಫೈಟರ್ ಜೆಟ್‌ಗಳ ಅತಿದೊಡ್ಡ ಸಂಗ್ರಹವನ್ನು ಹೊಂದಿದೆ.

ಭಾರತೀಯ ವಾಯುಪಡೆಗೆ ಈವರೆಗೆ 1,200 ಕ್ಕೂ ಹೆಚ್ಚು MiG-21 ಯುದ್ಧ ವಿಮಾನಗಳನ್ನು ಪರಿಚಯಿಸಲಾಗಿದೆ. ಆದರೆ ಸದ್ಯ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಮಾತ್ರ ಕೇವಲ 113 ಯುನಿಟ್‌ಗಳು, ಏಕೆಂದರೆ ವಿಮಾನದ ಹಿಂದಿನ ಆವೃತ್ತಿಗಳನ್ನು ಈಗಾಗಲೇ ಹಂತ ಹಂತವಾಗಿ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ವಿಮಾನದ ಕಳಪೆ ಗುಣಮಟ್ಟವೇ ಎಂದು ಸಹ ಹೇಳಲಾಗುತ್ತಿದೆ.

MiG-21 Crash

ಹೇಳುವುದಾದರೆ, ಭಾರತೀಯ ವಾಯುಪಡೆಯು ಪ್ರಸ್ತುತ ಸಕ್ರಿಯ ಫೈಟರ್ ಜೆಟ್‌ಗಳಾದ ಡಸಾಲ್ಟ್ ರಫೇಲ್, MiG-29UPG, HAL ತೇಜಸ್, ಸುಖೋಯ್ 30MKI, SEPECAT ಜಾಗ್ವಾರ್, ಮಿರಾಜ್ 2000 ಎಂಬ ಅತ್ಯಾಧುನಿಕ ಜೆಟ್‌ಗಳನ್ನು ಒಳಗೊಂಡಿದೆ. ಆದರೆ MiG-21 ಮಾತ್ರ ಭಾರತೀಯ ವಾಯುಪಡೆಯ ಮೊದಲ ಫೈಟರ್ ಜೆಟ್‌ ಆಗಿದೆ. MiG-21 ತುಂಬಾ ಹಳೆಯ ಮಾದರಿಯಾಗಿದ್ದರಿಂದ ಅಪ್‌ಡೇಟ್‌ ಭಾಗವಾಗಿ ಹಲವು ನವೀಕರಗಳನ್ನು ತರಲಾಯಿತು.

ನವೀರಣವಾದ ಬಳಿಕ MiG-21 ಬೈಸನ್ ಎಂದು ಕರೆಯಲಾಯಿತು. ಆದರೂ ಈ ವಿಮಾನಕ್ಕಿರುವ ಅಡ್ಡ ಹೆಸರು ಮಾತ್ರ ಬದಲಾಗಲಿಲ್ಲ. ಸಾಲು ಅಪಘಾತಗಳು MiG-21 ಬೈಸನ್ ಫೈಟರ್ ಜೆಟ್ ಅನ್ನು 'ಹಾರುವ ಶವಪೆಟ್ಟಿಗೆ' ಎಂಬ ಬಿರುದನ್ನು ತಂದುಕೊಟ್ಟವು. ಭಾರತೀಯ ವಾಯುಪಡೆಯು 2025 ರ ವೇಳೆಗೆ ಎಲ್ಲಾ MiG-21 ಗಳನ್ನು ಹಂತ ಹಂತವಾಗಿ ನಿಷ್ಕ್ರಿಯಗೊಳಿಸುವ ಯೋಜನೆಯಲ್ಲಿದೆ.

Article Published On: Monday, May 8, 2023, 12:01 [IST]
English summary
Mig 21 crash in rajasthan pilot safe two killed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+